ಬೆಂಗಳೂರು: ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನಲೆ ಕೆ ಆರ್ ಪುರಂ ತಾಲ್ಲೂಕು ಕಚೇರಿಯ ಸರ್ವೆ ಸೂಪರ್ ವೈಸರ್ ಕೆ ಟಿ ಶ್ರೀನಿವಾಸ ಮೂರ್ತಿಯವರ ಹಲವು ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ.
ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಕೇಸನ್ನು ಕೆ ಟಿ ಶ್ರೀನಿವಾಸ ಮೂರ್ತಿಯವರ ದಾಖಲಿಸಲಾಗಿದ್ದು, ಇವರು 5 ಲಿಕ್ಕರ್ ಪರವಾನಗಿ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಶ್ರೀನಿವಾಸ ಮೂರ್ತಿಗೆ ಸಂಬಂಧಪಟ್ಟ ಆಸ್ತಿ ಮತ್ತು ಮನೆಗಳನ್ನು ಒಳಗೊಂಡ 14 ಕಡೆಗಳಲ್ಲಿ ಬೆಂಗಳೂರು ಮತ್ತು ತುಮಕೂರುಗಳಲ್ಲಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.
ಹೆಣ್ಣೂರು ಗ್ರಾಮದಲ್ಲಿ 2,000 ಚದರ ಅಡಿ ನಿವೇಶನವಿದ್ದು, ಇದರ ಮೌಲ್ಯ 83,45 ಲಕ್ಷ ರೂ, 60 ಲಕ್ಷ ಮೌಲ್ಯದ ಆ ನಿವೇಶನದಲ್ಲಿ ನೆಲಮಹಡಿ ಮತ್ತು 2 ಮಹಡಿಯಲ್ಲಿ, ಕೊತ್ತನೂರು ಗ್ರಾಮದಲ್ಲಿ 1,142 ಚದರ ಅಡಿ ನಿವೇಶನ 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ನೆಲಮಂಗಲ ತಾಲ್ಲೂಕಿನ ಲಕ್ಕೇನಹಳ್ಳಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾದ ಮನೆಯನ್ನು ಕೂಡ ಶೋಧ ಮಾಡಲಾಗುತ್ತಿದ್ದು ಅದು ಅವರ ಅಕ್ಕನ ಗಂಡನ ಹೆಸರಿನಲ್ಲಿದೆ.