ತೆಲುಗಿನ ಸ್ಟಾರ್ ನಟ ವಿಜಯ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ನಟಿಸಿರುವ “ಬೇಬಿ’ ಚಿತ್ರ ಆ.25ರಂದು ಓಟಿಟಿಗೆ ಲಗ್ಗೆ ಇಡಲಿದೆ.
ಸುಮಾರು 9 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಿಡುಗಡೆ ನಂತರ ಹಿಟ್ ಆಗಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ತ್ರಿಕೋನ ಪ್ರೇಮಕಥೆಯ ಈ ಚಿತ್ರ ಈಗ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಇದಲ್ಲದೇ ದುಲ್ಕರ್ ಸಲ್ಮಾನ್ ,ರಾಜ್‌ಕುಮಾರ್ ರಾವ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಗನ್ಸ್ ಅಂಡ್ ಗುಲಾಬ್ಸ್’ ವೆಬ್ ಸೀರಿಸ್ ಸೇರಿದಂತೆ ಅನೇಕ ಹೊಸ ಶೋಗಳು ಓಟಿಟಿಗೆ ಲಗ್ಗೆ ಇಟ್ಟಿವೆ.














