ಮನೆ ಆರೋಗ್ಯ ಶೀತ /ನೆಗಡಿ

ಶೀತ /ನೆಗಡಿ

0

ಜೀವನದಲ್ಲಿ ನೆಗಡಿ ಇರುವವರು ಯಾರು ಇಲ್ಲವೇನೋ!  ಚಿಕ್ಕ ಮಕ್ಕಳಿಂದ ವೃದ್ಧರ ತನಕ, ದಾರಿ ಬದಿಯಲ್ಲಿ ಮಲಗುವ ನಿರ್ಗತಿಕರಿಂದ ಹಿಡಿದು ಆಗರ್ಬ ಶ್ರೀಮಂತರವರೆಗೂ, ಧೈರ್ಯಶಾಲಿಗಳು, ಹೇಡಿಗಳು, ಬಲಶಾಲಿಗಳು, ಬಲಹೀನರು, ಮಕ್ಕಳು ಹೀಗೆ ಎಲ್ಲರೂ ನೆಗಡಿಗೆ ತುತ್ತಾಗುತ್ತಾರೆ.

ಇಂಗ್ಲಿಷ್ ನಲ್ಲಿ ಅತಿ ದೊಡ್ಡ ಪದ ಯಾವುದು ಗೊತ್ತೇ? Peneumououltramicroscopicsilicovalcanocolinosis!

ಇದರ ಅರ್ಥ ಏನು ಗೊತ್ತೇ? ನೆಗಡಿ

ನೆಗಡಿ ಮನುಷ್ಯನಿಗೆ, ಸಹಜವೋ ಸರ್ವೇಸಾಧಾರಣವಾದ ರೋಗ ನೆಗಡಿ ವರ್ಷಕ್ಕೆ ಎರಡು ಬಾರಿ ತಪ್ಪಿದ್ದಲ್ಲ ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನವರ ಪ್ರಕಾರ ಸುಮಾರು ಮಿಲಿಯನ್ ಅಮೇರಿಕಾ ಪ್ರತಿಗಳು ನೆಗಡಿಯಿಂದ ಬಳಲುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ನೆಗಡಿಗೆ ಇನ್ನೊಂದು ಹೆಸರು Acute Coryza.

ಮೂಗಿನಲ್ಲಿ ಗಂಟಲಿನಲ್ಲಿ ಶ್ಲೇಷ್ಮ ಉಂಟು ಮಾಡಿ, ಸೀನುಗಳನ್ನು ಬರಿಸಿ, ತಲೆನೋವು ಉಂಟು ಮಾಡಿ ಮನುಷ್ಯನಿಗೆ ನಾನಾ ಯಾತನೆಗಳನ್ನು ಕೊಡುತ್ತದೆ ಈ ನೆಗಡಿ. ’ನೆಗಡಿಗಿಂತ ರೋಗವಿಲ್ಲ ಬುಗುಡಿಗಿಂತ ಒಡವೆ ಇಲ್ಲ’ ಎಂಬ ಗಾದೆ ಇದೆ.

200ಕ್ಕೂ  ಹೆಚ್ಚು ವೈರಸ್ ಗಳಿಂದ ನೆಗಡಿ ಉಂಟಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಈ ವೈರಸ್ಗಳ ಜೆನೆಟಿಕ್ ನಿರ್ಮಾಣದಲ್ಲಿ ಬದಲಾವಣೆ ಉಂಟಾಗುತ್ತದೆ. ಅಂದರೆ ನಿಮ್ಮಾಕೆಯಿಂದ ನಿಮಗೆ ನೆಗಡಿ ಆದರೆ ನಿಮ್ಮಿಬ್ಬರ ನೆಗಡಿ ಒಂದೇ ಎಂದು ಹೇಳಲಾಗದು. ಆದರೆ ಮೂಗಿನಲ್ಲಿ ಸುರಿಯುವುದು, ಕೆಮ್ಮುವುದು, ಸೀನುವುದು ಇತ್ಯಾದಿ ಇಬ್ಬರಲ್ಲೂ ಒಂದೇ ವಿಧವಾಗಿರುತ್ತದೆ. ಇದೇ ನೆಗಡಿಯ ವಿಶಿಷ್ಟತೆ!

ಹೇಗೆ ಹರಡುತ್ತದೆ

•       ನೆಗಡಿಯಾದ ವ್ಯಕ್ತಿ ಸೀನಿದರೆ, ಕೆಮ್ಮಿದರೆ ಸಾವಿರಾರು ವೈರಸ್ ಇರುವ ಹಾನಿಗಳು ಗಾಳಿಯಲ್ಲಿ ಹರಡುತ್ತವೆ. ಆ ಗಾಳಿಯನ್ನು ಆರೋಗ್ಯವಂತ ವ್ಯಕ್ತಿ ಉಸಿರಾಡಿದರೆ, ಗಾಳಿಯಲ್ಲಿರುವ ವೈರಸ್ ಗಳು ಆ ವ್ಯಕ್ತಿಯ ಮೂಗಿನ ಮೂಲಕ ಪ್ರವೇಶಿಸಿ ನೆಗಡಿಯಾಗುತ್ತದೆ. ಜನನಿಬಿಡ ಪ್ರದೇಶಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ಸಿನಿಮಾಹಾಲ್, ಕ್ಲಾಸ್ ರೂಮ್, ಸಭೆ ಸಮಾರಂಭಗಳು ಇಂತಹ ಜಾಗಗಳಲ್ಲಿ ನೆಗಡಿ ಹರಡುವ ಸಾಧ್ಯತೆಗಳು ಅಧಿಕ.

•       ನೆಗಡಿ ಇರುವ ವ್ಯಕ್ತಿ ಉಪಯೋಗಿಸಿದ ಟವಲ್ ನ್ನು ನೀವು ಉಪಯೋಗಿಸಿದರೆ, ನೆಗಡಿಯನ್ನು ಮೂಗಿನಿಂದ ಹೊರ ಹಾಕುವ (ಸೀದುವ) ಕ್ರಿಯೆಯಲ್ಲಿ ಕೈಯಲ್ಲಿ ಸಿಂಬಳ ಮೆತ್ತಿ ಕೊಂಡಿದ್ದು, ಆತ ನಿಮಗೆ ಶೇಕ್ ಹ್ಯಾಂಡ್ ಮಾಡಿದರೆ ನಂತರ ನೀವು ಕೈ ತೊಳೆಯದೆ ಕಣ್ಣನ್ನು, ಮೂಗನ್ನು ಒರೆಸಿಕೊಂಡರೆ ನಿಮಗೆ ನೆಗಡಿ ಆಯಾಗುವುದು ಗ್ಯಾರಂಟಿ!

•       ನಗಡಿಗೆ ಉಳ್ಳ ಮನುಷ್ಯನು ಉಪಯೋಗಿಸಿದ ಪೆನ್ನು, ಟೆಲಿಫೋನ್ ನಿಂದ ಕೂಡ ನೆಗಡಿ ಹರಡುವ ಸಾಧ್ಯತೆ ಇದೆ ಎಚ್ಚರಿಕೆ ಇರಲಿ.

ನೆಗಡಿ ವೈರಸ್ ಕೆಲಸ ಮಾಡುವ ರೀತಿ

ಸುಮಾರು 20೦ಕ್ಕೂ ಹೆಚ್ಚು ನೆಗಡಿಯ ವೈರಸ್ ಗಳಿವೆ. ಇವುಗಳಲ್ಲಿ ಮುಖ್ಯವಾದವು ರೈನೋವೈರಸ್ ಶೇಕಡ 40 ರಿಂದ 50ರಷ್ಟು ನೆಗಡಿಕೆ ಈ ವೈರಸ್ ಕಾರಣ. ಈ ನೆಗಡಿಯ ವೈರಸ್ ಉಸಿರಾಡಿವಾಗ, ಬಾಯಿ,ಗಂಟಳೊಳಗಿನಿಂದ ಮೂಗನ್ನು ಪ್ರವೇಶಿಸುತ್ತದೆ. ನೆಗಡಿಯ ವೈರಸ್ ನ ಮಧ್ಯಭಾಗದಲ್ಲಿ ಒಂದು ಚಿಕ್ಕ ಕುಂಡಿಯಂತಹ ಭಾಗವಿರುತ್ತದೆ. ಈ ಕಣಗಳು ನಮ್ಮ ಮೂಗಿನ ಕಣವನ್ನು Lock and Key ಸೇರಿ ಹೋಗುತ್ತದೆ.

ನಿಧಾನವಾಗಿ ವೈರಸ್ ಕಣ ಒಳಗೆ ಪ್ರವೇಶಿಸಿ ತನ್ನ ಹೊರ ರೂಪವನ್ನು ಬಿಟ್ಟುಬಿಡುತ್ತದೆ. ಆಗ ಅಣುವಿನೊಳಗೆ ಇರುವ ವೈರಸ್ ಒಂದು ಫ್ಯಾಕ್ಟರಿಯಂತೆ ಕೆಲಸ ಮಾಡಿ, ವೈರಸ್ ಗಳನ್ನು ಉತ್ಪತ್ತಿ ಮಾಡಲಾಗುತ್ತದೆ. ಹೀಗೆ ಉತ್ಪತ್ತಿಯಾದ ವೈರಸ್ ಗಳು ಇತರ ಜೀವಕೋಶಗಳು ಪ್ರವೇಶಿಸುತ್ತವೆ.

ಒಂದು ಕಡೆ ದೇಹದಲ್ಲಿ ವೈರಸ್ ಗಳು ಅಭಿವೃದ್ಧಿ ಹೊಂದುತ್ತಿರಲು, ಮತ್ತೊಂದು ಕಡೆ ಈ ವೈರಸಿಗೆ ಪ್ರತಿಸ್ಪರ್ಧಿಯಾಗಿ ರೋಗ ನಿರೋಧಕ ಶಕ್ತಿ ಹೋರಾಡಲು ಪ್ರಾರಂಭಿಸುತ್ತವೆ. ಇದರ ಪರಿಣಾಮವೇ ಮೂಗುಗಂಟಲ್ಲಿನಲ್ಲಿ ಶ್ಲೇಷ್ಮ, ಸೀನು, ನೆಗಡಿ ಉಂಟಾಗುವುದು.

ಹೀಗೆ ಸೀನಿದಾಗ, ಮೂಗು ಸೀದಿದಾಗ, ಒರೆಸಿಕೊಂಡಾಗ ಎಷ್ಟು ವೈರಸ್ಗಳು ಹೊರ ಬರುತ್ತವೆ. ಉಳಿದಿರುವ ವೈರಸ್ ಗಳು ನಮ್ಮನ್ನು ಹಿಂಸೆ ಮಾಡುತ್ತವೆ.

ನೀವು ಯಾವ ರೀತಿಯಲ್ಲಿ ನರಳುತ್ತಿರೋ, ಅದು ನಿಮಗೆ ಎಂತಹ ವೈರಸ್ ನಿಂದ ನೆಗಡಿಯಾಗಿದೆ ಎಂಬುದನ್ನು ಅವಲಂಬಿಸಿರುತ್ತದೆ.

ಮೂಗಿನಿಂದ ಶ್ಲೇಷ್ಮ ಸುರಿಯುವುದು, ರೈನೋ ವೈರಸ್ ನ ಚಿನ್ಹೆ. ಆ ಶ್ಲೇಷ್ಮ ವನ್ನು ರೈನೂರಿಯ ಎನ್ನುತ್ತಾರೆ. ಬಹುಶಹ ಇದು ರೈನೋ ವೈರಸ್ ಪದದ ನಿಷ್ಪತ್ತಿ ಇರಬಹುದು.

ಯಾರಿಗೆ ಉಂಟಾಗುತ್ತದೆ?

•       ನೆಗಡಿ ಎಲ್ಲರಿಗೂ ಬರುತ್ತದೆ ಸ್ಕೂಲಿಗೆ ಹೋಗುವ ಮಕ್ಕಳು ಇದಕ್ಕೆ ಮೊದಲು ಗುರಿಯಾಗುತ್ತಾರೆ ವರ್ಷಕ್ಕೆ 10 ಬಾರಿಯಾದರೂ ನೆಗಡಿ ಉಂಟಾಗಬಹುದು ವಯಸ್ಸಾದ ನಂತರ ವರ್ಷಕ್ಕೆ ಎರಡು ಬಾರಿ ನಗಡಿಗೆ ತುತ್ತಾಗಬಹುದು.

•       ಸ್ಕೂಲಿನಲ್ಲಿ ಮಕ್ಕಳು ಹಲವು ತರಹದ ವೈರಸ್ಗಳಿಗೆ ಬಲಿಯಾಗುವುದರಿಂದ ಅವರಿಗೆ ನೆಗಡಿ ಬರುವ ಸಾಧ್ಯತೆ ಜಾಸ್ತಿ. ಏಕೆಂದರೆ ಅವರಲ್ಲಿ ರೋಗನಿರೋಧಕ ಶಕ್ತಿ ಬೆಳದಿರುವುದಿಲ್ಲ. ರೋಗನಿರೋಧಕ ಶಕ್ತಿ ವೃದ್ಧಿಯಾಗದಂತೆ ರೋಗಗಳನ್ನು ತಡೆಯುವ ಶಕ್ತಿಯವರಲ್ಲಿ ಬಲಗೊಳ್ಳುತ್ತದೆ.

ಸಾಮಾನ್ಯವಾಗಿ ನೆಗಡಿಯಿಂದ ನರಳುವವರು:

•       ಮಧ್ಯಪಾನ ವ್ಯಸನಿಗಳು

•       ಸಿಗರೇಟು, ಬಿಡಿ ಸೇದುವವರು ವೃದ್ಧರು, ದುರ್ಬಲರು,

•       ಅಸ್ತಮಾ, ಉಬ್ಬಸ, ಬ್ರಾಂಕೈಟಿಸ್ ರೋಗ ಪೀಡಿತರು ಮೊದಲಾದವರು

ಎಷ್ಟು ಸಮಯವಿರುತ್ತದೆ?

•       ನೆಗಡಿ ಎಷ್ಟು ದಿನಗಳ ಕಾಲ ಇರುತ್ತದೆ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಅಂಟಿದ ವೈರಸ್ ಹಾಗೂ ಆ ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಅವಲಂಬಿಸಿರುತ್ತದೆ.

•       ಸಾಮಾನ್ಯವಾಗಿ ನೆಗಡಿಯ ಹಲವು ಗಂಟೆಗಳಿಂದ ಹಲವು ದಿವಸಗಳ ವರೆಗೆ ಇರಬಹುದು ಗಂಭೀರವಾಗಿದ್ದರೆ ಒಂದರಿಂದ ಎರಡು ವಾರಗಳು ಕೂಡ ಇರಬಹುದು.

ಲಕ್ಷಣಗಳು:

•       ನಮಗಾಗುವ ನೆಗಡಿಗಳಲ್ಲಿ ಹೆಚ್ಚಾಗಿ Head Cold  ಎಂದರೆ ಮೂಗಿಗೆ ಗಂಟಲಿಗೆ ಸೋಂಕು ಇಂತಹವು.

•       ಇದರ ಚಿಹ್ನೆಗಳೆಂದರೆ ಮೂಗಿನಲ್ಲಿ ಗಂಟಲಲ್ಲಿ ಕೆರೆತ ಉಂಟಾಗುವುದು ನಂತರ ಒಂದಾದ ನಂತರ ಒಂದರಂತೆ ಸೀನುವಿಕೆ, ಮೂಗಿನಲ್ಲಿ ನೀರು ಸುರಿಯುವುದು ಇತ್ಯಾದಿ.

•       ಸಾಧಾರಣವಾಗಿ ನಮಗೆ ವೈರಸ್ ಸೋಂಕಿದಾಗ ಒಂದೆರಡು ದಿನಗಳಲ್ಲಿ ನೆಗಡಿ ಪ್ರಾರಂಭವಾಗುತ್ತದೆ ಸೀನು ಬರುವಂತಹ  irritation ಆಗುವುದು.  ಮೂಗಿನ ಮೂಲಕ ಶ್ಲೇಷ್ಮ (ಸಿಂಬಳ) ಸುರಿಯುವುದು ಇತ್ಯಾದಿ ಇದರ ಚಿಹ್ನೆಗಳು. ಮೂಗಿನೊಳಗೆ ಬ್ಯಾಕ್ಟೀರಿಯಾ ಪ್ರವೇಶಿಸಿದ್ದಲ್ಲಿ ಶ್ಲೇಷ್ಮ ತಿಳಿ ಹಸಿರು ಬಣ್ಣದಾಗಿರುತ್ತದೆ.

•       ಆನಂತರ ಮೈ ಕೈ ನೋವು, ಶರೀರ ಬಿಸಿಯಾಗುವುದು, ತಲೆನೋವು ಕಾಣಿಸಿಕೊಳ್ಳುತ್ತದೆ. ಜ್ವರವು ಬರಬಹುದು. ಗಂಟಲಿಗೆ ಸೋಂಕಾದಾಗ ಗಂಟಲು, ಎದೆನೋಯುವುದು, ತಲೆಭಾರವಾಗುವುದು, ಗಂಟಲು ಕಟ್ಟುವುದು, ಕೆಮ್ಮು ಮೊದಲಾದ ಲಕ್ಷಣಗಳು ಕಾಣಿಸುತ್ತವೆ.

•       ಪ್ರಾರಂಭದಲ್ಲಿ ಕೆಮ್ಮು ಕಡಿಮೆ ಇದ್ದು ರಾತ್ರಿ ನಿದ್ದೆ ಮಾಡಲಾಗದಷ್ಟು ಹೆಚ್ಚಾಗುತ್ತದೆ .ಆಗ ರುಚಿ, ವಾಸನೆ ಏನೂ ತಿಳಿಯುವುದಿಲ್ಲ.

•       ಒಮ್ಮೊಮ್ಮೆ ನೆಗಡಿಯಿಂದ ಮಧ್ಯ ಕಿವಿ ಸೋಂಕು(Middle ear infecton), ಸೈನೋಸೈಟಿಸ್(Sinusitis), ಬ್ರಾಂಕೈಟಿಸ್(Bronchitis), Layrngitis, Tracheitis ಮೊದಲಾದ ಖಾಯಿಲೆ ಬರಬಹುದು.

•       ಅಸ್ತಮಾ ಬ್ರಾಂಕೈಟಿಸ್, ಕಿವಿ ನೋವುಗಳಿಂದ ಬಳಲುವವರಿಗೆ ನೆಗಡಿ ಆದರೆ, ಇಂತಹ ರೋಗವು ತೀವ್ರತೆ ಹೆಚ್ಚುತ್ತದೆ.

•       ವಿಶೇಷವಾಗಿ ನೆಗಡಿಯಾದಾಗ ಮಧ್ಯ ಕಿವಿ ಇನ್ಫೆಕ್ಷನ್ ಆದಾಗ ಅದುEncephelitisಗೆ  ತಿರುಗಿ ಗಂಭೀರ ಅಥವಾ ಕ್ಲಿಷ್ಟ ಆಗುವ ಸಾಧ್ಯತೆಗಳಿರುತ್ತದೆ. ಕೆಲವು ಸಂದರ್ಭಗಳಲ್ಲಿ ಮೆದುಳಿನ ಅಕ್ಕಪಕ್ಕದ ಭಾಗಗಳಿಗೂ ಆವರಿಸಿ ತಲೆನೋವು, ವಾಂತಿ, ಕುತ್ತಿಗೆ / ಗಂಟಲು ನೋವು ಉಂಟಾಗುತ್ತದೆ.