ಮನೆ ಅಪರಾಧ ನಿಧಿ ಆಸೆಗೆ ವಾಣಿಭದ್ರೇಶ್ವರ ಲಿಂಗವನ್ನು ಧ್ವಂಸ ಮಾಡಿದ ದುಷ್ಕರ್ಮಿಗಳು

ನಿಧಿ ಆಸೆಗೆ ವಾಣಿಭದ್ರೇಶ್ವರ ಲಿಂಗವನ್ನು ಧ್ವಂಸ ಮಾಡಿದ ದುಷ್ಕರ್ಮಿಗಳು

0

ಗಂಗಾವತಿ: ನಿಧಿ ಆಸೆಗಾಗಿ ದುಷ್ಕರ್ಮಿಗಳು ತಾಲೂಕಿನ ಸಿದ್ದಿಕೇರಿ ಮಲ್ಲಾಪುರ ಮಧ್ಯೆಯಿರುವ ವಾಣಿಭದ್ರೇಶ್ವರ ಬೆಟ್ಟದ ಇತಿಹಾಸ ಪ್ರಸಿದ್ಧ ವಾಣಿಭದ್ರೇಶ್ವರ ಲಿಂಗವನ್ನು ಧ್ವಂಸ ಮಾಡಿದ ಪ್ರಕರಣ ಗುರುವಾರ ಬೆಳಗಿನ ಜಾವ ನಡೆದಿದೆ.

ದೇವಸ್ಥಾನದ ಅರ್ಚಕರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ದೂರು ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿದೆ.

ಏಳು ಗುಡ್ಡ ಪ್ರದೇಶದಲ್ಲಿರುವ ವಾಣಿಭದ್ರೇಶ್ವರ ದೇವಸ್ಥಾನ ದಟ್ಟ ಕಾಡಾರಣ್ಯದಲ್ಲಿದ್ದು ಇಲ್ಲಿ ಹಂಪಿಯಲ್ಲಿ ಶ್ರೀ ಪಂಪಾವಿರೂಪಾಕ್ಷೇಶ್ವರ ಮೂರ್ತಿ ಸ್ಥಾಪನೆಯ ಸಂದರ್ಭದಲ್ಲಿ ಹಂಪಿಯ ಎಂಟು ದಿಕ್ಕುಗಳಲ್ಲಿ ಶಿವಲಿಂಗ ದೇವಾಲಯಗಳನ್ನು ನಿರ್ಮಿಸಲಾಗಿದೆ.

ಗಂಗಾವತಿ ತಾಲೂಕಿನ ವಾಣಿಭದ್ರೇಶ್ವರ ದೇವಾಲಯಗಳನ್ನು ಸ್ಥಾಪಿಸಿರುವ ಕುರಿತು ಶಿವಪುರಾಣ, ಸ್ಕಂಧಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಎರಡು  ಭಾರಿ ಲಿಂಗವನ್ನು ಧ್ವಂಸಗೊಳಿದ ಪ್ರಕರಣ ನಡೆದಿತ್ತು.

ಈಗ ಪುನಃ ಲಿಂಗವನ್ನು ಧ್ವಂಸಗೊಳಿಸಿ ತೆಗೆದುಕೊಂಡು ಹೋಗಲಾಗಿದ್ದು ನಿಧಿಗಳ್ಳರ ಕೃತ್ಯ ಎನ್ನಲಾಗಿದೆ.

ಪುರಾತತ್ವ ಇಲಾಖೆ ಮತ್ತು ಜಿಲ್ಲಾಡಳಿತ ವಾಣಿಭದ್ರೇಶ್ವರ ಸಂರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ.