ಬೆಂಗಳೂರು: 545 ಪಿಎಸ್ ಐ ನೇಮಕಾತಿಯ ಅಕ್ರಮದಲ್ಲಿ ಸರ್ಕಾರವೇ ಭಾಗಿಯಾಗಿದ್ದು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಇದರ ವಿರುದ್ಧ ಯುವಕರು ದೊಡ್ಡ ಹೋರಾಟ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದರು.
ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ರಾಜ್ಯದಲ್ಲಿ ಈ ಹಿಂದೆ ಇಂತಹ ನೇಮಕಾತಿ ನಾನು ನೋಡಿಲ್ಲ. ಅಕ್ರಮದಲ್ಲಿ ಇಡೀ ರಾಜ್ಯ ಸರ್ಕಾರವೇ ಶಾಮೀಲಾಗಿದೆ ಗೃಹ ಸಚಿವರು ಅಕ್ರಮ ಆಗಿಲ್ಲ ಎಂದಿದ್ದಾರೆ. ಸಿಎಂ ಬೊಮ್ಮಾಯಿ ತನಿಖೆ ಮಾಡುತ್ತಾರೆ ಅಂಧಿದ್ದರು. ಅಕ್ರಮದ ಬಗ್ಗೆ ಈಗ ಸಿಐಡಿ ತನಿಖೆಗೆ ಸರ್ಕಾರ ವಹಿಸಿದೆ. ಅಕ್ರಮದಲ್ಲಿ ಬಿಜೆಪಿ ನಾಯಕರೇ ಶಾಮೀಲಾಗಿದ್ದು ನೇಮಕಾತಿಯಲ್ಲಿ ಅಕ್ರಮ ಮಾಡಿದ ಬಿಜೆಪಿ ನಾಯಕಿ ಮನೆಗೆ ಅರಗ ಜ್ಞಾನೇಂದ್ರ ಹೋಗಿ ಅರತಿ ಎತ್ತಿಸಿಕೊಂಡಿದ್ದಾರೆ.
ಪಿಎಸ್ ಐ ಹುದ್ದೆ ನೇಮಕಾತಿಯಲ್ಲಿ ಯೊಡ್ಡ ಅನ್ಯಾಯ ಇದರ ವಿರುದ್ಧ ಯುವಕರು ದೊಡ್ಡ ಹೋರಾಟ ಮಾಡಬೇಕು ಎಂದು ಡಿ.ಕೆ ಶಿವಕುಮಾರ್ ಕರೆ ನೀಡಿದರು.