ಮನೆ Uncategorized ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

0

ಮೈಸೂರು:  ನೀರಾವರಿ ಯೋಜನೆಗಳ ಶೀಘ್ರವೇ ಜಾರಿಗೆ ಆಗ್ರಹಿಸಿ ಖಾಲಿ ಕೊಡಗಳನ್ನು ಹಿಡಿದು ಕನ್ನಡ ಪರ ಹೋರಾಟಗಾರ  ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರಿನ  ಹಾರ್ಡಿಂಗ್ ವೃತ್ತದ ಬಳಿ ವಾಟಾಳ್ ನಾಗರಾಜ್ ಖಾಲಿ ಕೊಡಗಳ ಹಿಡಿದು ಮೇಕೆದಾಟು ಕಳಸಾ- ಬಂಡೂರಿ ಮಹದಾಯಿ ಸೇರಿದಂತೆ ನೀರಾವರಿ ಯೋಜನೆಗಳು ಜಾರಿ ಮಾಡುವಂತೆ ಆಗ್ರಹಿಸಿದರು.

ನೀರಾವರಿ ಯೋಜನೆ ವಿಚಾರದಲ್ಲಿ ರಾಜಕೀಯ ಮೆರವಣಿ, ಪಾದಯಾತ್ರೆ ನಿಲ್ಲಿಸುವಂತೆ ಆಗ್ರಹಿಸಿದ ವಾಟಾಳ್ ನಾಗರಾಜ್ ಶೀಘ್ರವೇ ನೀರಾವರಿ ಯೋಜನೆಗಳನ್ನು  ಜಾರಿಗೊಳಿಸಿ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ನೀರಾವರಿ ಯೋಜನೆ ವಿಚಾರದಲ್ಲಿ ಮೂರು ಪಕ್ಷಗಳಿಂದಲೂ ನಾಟಕ. ಅಧಿಕಾರ ಇದ್ದಾಗ ನೆನಪಾಗದ ನೀರಾವರಿ ಯೋಜನೆಗಳು ಈಗ ನೆನಪಾಗಿವೆ. ಇವರು ಅಧಿಕಾರದಲ್ಲಿದ್ದಾಗ ಮೇಕೆದಾಟು ಮಾಡಬೇಡಿ ಅಂದವರು ಯಾರು? ನೀರು ನಮ್ಮ ಹಕ್ಕು ಎನ್ನುವುದು ಮೊದಲು ಗೊತ್ತಿರಲಿಲ್ವ.  ನಿಮ್ಮ ಕೈಯಲ್ಲಿ ರಾಜ್ಯ ಇದ್ದಾಗ ಸುಮ್ಮನಿದ್ದು ಈಗ ನಾಟಕ ಆಡ್ತಿದ್ದೀರಾ.? ಎಂದು ಕಿಡಿಕಾರಿದರು.

ರಾಜಕೀಯ ಪಕ್ಷಗಳು ರಾಜ್ಯದ ಜನತೆಗೆ ಅನ್ಯಾಯ ಮಾಡ್ತಿವೆ. ಜೆಡಿಎಸ್ ನವರು ಜಲಾಧಾರೆ ಮಾಡ್ತಿರೋದು ರಾಜಕೀಯ ಲಾಭಕ್ಕಾಗಿ. ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯೂ ರಾಜಕಾರಣ. ಪ್ರಾಮಾಣಿಕವಾಗಿ ನೀರು ಕೊಡುವ ಪ್ರಯತ್ನ ಯಾರೂ ಮಾಡ್ತಿಲ್ಲ ಎಂದು  ರಾಜಕೀಯ ಪಕ್ಷಗಳ ವಿರುದ್ಧ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಬಂದಾಗ ಯಾಕೆ ಮೇಕೆದಾಟು ಯೋಜನೆಗೆ ಅನುಮತಿ ಕೇಳಲಿಲ್ಲ.  ಮತಗಳಿಸುವುದನ್ನ ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ರಾ.? ನಡ್ಡಾಗೆ ತಮಿಳುನಾಡಿಗೆ‌ ಬೆಂಬಲ ಕೊಡಬೇಡಿ ಅಂತ ಹೇಳಿದ್ರಾ.? ಕಾವೇರಿ ವಿಚಾರ ಬಿಟ್ಟು ಮೆಕೆದಾಟಿಗೆ ಸ್ಟಾಲಿನ್ ಏಕೆ ಕೈ ಹಾಕಿದ್ರು.? ಗೋವಾದಲ್ಲಿ ಚುನಾವಣಾ ಸಮಯದಲ್ಲಿ ಕಳಸಾ ಬಂಡೂರಿ, ಮಹಾದಾಯಿ‌ ಬಗ್ಗೆ ಸಿಟಿ ರವಿ ಮಾತಾಡಿದ್ರಾ.? ತಮಿಳುನಾಡಿಗೆ‌ ಮೇಕೆದಾಟು, ಗೋವಾಕ್ಕೆ ಮಹಾದಾಯಿ ಆದ್ರೆ ನಮ್ಮ ಗತಿ ಏನು.? ಹಾಗಾಗಿ ಹೋರಾಟ ಅನಿವಾರ್ಯವಾಗಿದೆ. ನೀರಾವರಿ ಯೋಜನೆಗಳ ಬಗ್ಗೆ ಬೀದಿಗಿಳಿದು ಹೋರಾಟ ಮಾಡ್ತೇವೆ ಎಂದು ವಾಟಾಳ್ ನಾಗರಾಜ್  ತಿಳಿಸಿದರು.