ಮನೆ ಆರೋಗ್ಯ ರಿಂಗ್ ಇಮ್ಯುನೈಜೇಷನ್ ಮಾಪ್ ಆಫ್ ರೌಂಡ್ಸ್

ರಿಂಗ್ ಇಮ್ಯುನೈಜೇಷನ್ ಮಾಪ್ ಆಫ್ ರೌಂಡ್ಸ್

0

ಸರ್ಕಾರ ನಿರ್ವಹಿಸುತ್ತಿರುವ ಪಲ್ಸ್ ಪೋಲಿಯೋ ಇಮ್ಯುನೈಜೇಷನ್ ನಿಂದಾಗಿ ಪೋಲಿಯೋ ಕಾಣಿಸಿಕೊಳ್ಳುವುದು ಸರಿ ಸುಮಾರು ಕಣ್ಮರೆಯಾಗಿದೆ. ಯಾವುದೇ ಪ್ರದೇಶದಲ್ಲಿ ಪೋಲಿಯೋ ಕಂಡು ಬಂದರೆ ಸಾಧಾರಣವಾಗಿ ಹಾಕುವ ಪಲ್ಸ್ ಪೋಲಿಯೋ ಹನಿಗಳೆ ಅಲ್ಲದೆ, ಪೋಲಿಯೋ ಕಂಡುಬಂದ ಪ್ರದೇಶದ 5 km ಸುತ್ತಳತೆಯಲ್ಲಿ ಮೂರು ವರ್ಷದೊಳಗಿನ ಮಕ್ಕಳ ಒಂದು ತಿಂಗಳ ಅವಧಿಯಲ್ಲಿ ಎರಡು ಬಾರಿ ಪೋಲಿಯೋ ಹನಿಗಳನ್ನು ಹಾಕಲಾಗುತ್ತದೆ.

ಪಟ್ಟಣ ಪ್ರದೇಶಗಳಲ್ಲಿ ಹೀಗಾದರೆ ಗ್ರಾಮೀಣ ಪ್ರದೇಶದಲ್ಲಿ ವೈಶಾಲ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೆ, ವಿವಿಧ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು 5,000 ಮಕ್ಕಳಿಗೆ ಕ್ರಮವಾಗಿ 2 ಬಾರಿ ಪೊಲಿಯೋ ಹನಿಗಳನ್ನು ಹಾಕುತ್ತಾರೆ. ಈ ರೀತಿಯ ಕಾರ್ಯಕ್ರಮವನ್ನು ರಿಂಗ್ ಇಮ್ಯುನೈಜೇಷನ್ ಎನ್ನುತ್ತಾರೆ.

ಮಳೆಗಾಲದಲ್ಲಿ ಆರಂಭದಲ್ಲಿ ಕೆಲವು ಪ್ರದೇಶಗಳಲ್ಲಿ ಪೋಲಿಯೋ ಕಾಣಿಸಿಕೊಳ್ಳುವ ಸಂಭವ ಇರುತ್ತದೆ. ಅಂತಹ ಭಾಗದಲ್ಲಿ ಎಂದಿನಂತೆ ಪೋಲಿಯೋ ಕಾರ್ಯಕ್ರಮವೇ ಅಲ್ಲದೆ ಮಳೆಗಾಲದ ಆರಂಭದಲ್ಲಿ ವಾಡಿಕೆಯಂತೆ ಪೋಲಿಯೋ ಹನಿಗಳನ್ನು ಹಾಕಲಾಗುತ್ತದೆ. ಮಳೆಗಾಲದ ಆರಂಭದಲ್ಲಿ ಈ ರೀತಿಯ ಪೋಲಿಯೋಹನಿಗಳನ್ನು ಹಾಕುವುದರಿಂದ ರೋಗದ ನಿರ್ಮೂಲನೆ ಸಾಧ್ಯವಾಗುತ್ತದೆ ಈ ರೀತಿ ಮಳೆಗಾಲಕ್ಕೆ ಮುಂಚೆ ಹಮ್ಮಿಕೊಳ್ಳುವ ಕಾರ್ಯಕ್ರಮವನ್ನು ಮಾಫ್ ಆಫ್ ರೌಂಡ್ಸ್ ಎನ್ನುತ್ತಾರೆ.

ಪ್ರತಿಯೊಂದು ಮಗುವಿಗೂ, ಹುಟ್ಟುತ್ತಿದ್ದಂತೆ ಮೊದಲ ಡೋಸ್ ಎಂದು, ಎರಡು ಪೋಲಿಯೋ ಹನಿಗಳನ್ನು ಅನಂತರ 6 ವಾರಕ್ಕೆ ಮತ್ತೆರಡು ಪೋಲಿಯೋ ಹನಿಗಳನ್ನು ಹಾಕಿಸಬೇಕು. ನಂತರ 10 ನೇ ವಾರದಲ್ಲಿ, 14ನೇ ವಾರದಲ್ಲಿ ಹಾಕಿಸಬೇಕು. ನಂತರ 6-9 ನೇ ತಿಂಗಳ ಒಳಗೆ 15-18 ತಿಂಗಳು ಒಳಗೆ ಪೋಲಿಯೋ ಹನಿಗಳನ್ನು ಹಾಕಿಸಬೇಕು ಆಮೇಲೆ ಐದು ವರ್ಷದಲ್ಲಿ ಮತ್ತೆ ಪೋಲಿಯೋ ಹನಿಗಳನ್ನು ಹಾಕಿಸಬೇಕು ಇದು ಸದ್ಯಕ್ಕೆ ರೂಢಿಯಲ್ಲಿರುವ ವಿಧಾನ.

ಹೀಗಲ್ಲದೆ 6ನೇ ವಾರದಲ್ಲಿ,10ನೇ ವಾರದಲ್ಲಿ,14ನೇ ವಾರದಲ್ಲಿ ಪೋಲಿಯೋ ಹನಿಗಳನ್ನು ಹಾಕಿಸಿ ಮತ್ತೆ 2 ವರ್ಷದಲ್ಲಿ ಮತ್ತು 5ನೇ ವರ್ಷದಲ್ಲಿ ಹಾಕಿಸುವ ವಿಧಾನವು ಜಾರಿಯಲ್ಲಿದೆ.

ಪಲ್ಸ್ ಪೋಲಿಯೋ ಕಾರ್ಯಕ್ರಮ ಜಾರಿಗೆ ಬಂದ ಮೇಲೆ ಮಾಮೂಲಿಯಾಗಿ ಹಾಕಿಸಿದ ಹನಿಗಳು ಗಣನೆಗೆ ತೆಗೆದುಕೊಳ್ಳದೆ, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಎರಡು ಬಾರಿ ಪೋಲಿಯೋ ಹನಿಗಳನ್ನು ಹಾಕುತ್ತಾರೆ. ಪಲ್ಸ್ ಪೋಲಿಯೋ ಕಾರ್ಯಕ್ರಮ ಇದ್ದೇ ಇದೆಯಲ್ಲ ಎಂದು ಮಾಮೂಲಿಯಾಗಿ ಹಾಕಿರುವ ಪೋಲಿಯೋ ಹನಿಗಳ ವಿಧಾನವನ್ನು ನಿಲ್ಲಿಸಬಾರದು.

ಪೋಲಿಯೋ ಹನಿಗಳನ್ನು ಎಷ್ಟು ಬಾರಿ ಹಾಕಿದರೂ ಏನು ತೊಂದರೆ ಇಲ್ಲ, ಬದಲಾಗಿ ಪೋಲಿಯೋ ನಿರೋಧಕ ಶಕ್ತಿ ಮತ್ತಷ್ಟು ಹೆಚ್ಚಾಗುತ್ತದೆ. ಮಕ್ಕಳಿಗೆ ಭೇದಿಯಾಗುತ್ತಿದ್ದರೂ, ಜ್ವರ ಬಂದಿದ್ದರು ಪೋಲಿಯೋ ಹನಿ ಹಾಕಿಸಬಹುದು.

ಐದು ವರ್ಷಗಳಷ್ಟು ಕಾಲದಲ್ಲಿ ಪೋಲಿಯೋ ಪ್ರಕರಣಗಳು ದೇಶದಲ್ಲಿ ದಾಖಲಾಗಿದ್ದರೆ ಪೋಲಿಯೋ ಸಂಪೂರ್ಣ ನಿರ್ಮೂಲನೆಯಾದಂತೆ ಆನಂತರ ಪೋಲಿಯೋ ಹಾಕಿಸಿಕೊಳ್ಳುವುದು ಐಚ್ಚಿಕ ವಿಷಯವಾಗುತ್ತದೆ.

* ಎಳೆಯ ಮಕ್ಕಳಲ್ಲಿ ಧನುರ್ವಾತ *

ಪೋಲಿಯೋ ಹನಿಗಳಿಂದ, ಪೋಲಿಯೋವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದಂತೆ. ಧನುರ್ವಾತವನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗುವುದಿಲ್ಲ. ಏಕೆಂದರೆ ಈ ರೋಗದ ರೋಗಾಣುಗಳು ಪ್ರಾಣಿಗಳ ಮಲದಲ್ಲಿ ಇರುತ್ತದೆ. ಅವು ನೆಲದ ಮೇಲೆ ಮಣ್ಣಿನಲ್ಲಿ ಬೆರೆತು ಅವು ಎಲ್ಲಾ ಕಡೆ ಹರಡುತ್ತದೆ ಆದ್ದರಿಂದ ಧನುರ್ವಾತ ನಿಯಂತ್ರಣಕ್ಕೆ ಟೆಟನ್ನಸ್ ಟಾಪ್ ಸೈಡ್ ಚುಚ್ಚುಮದ್ದನ್ನು ತಪ್ಪದೇ  ತೆಗೆದುಕೊಳ್ಳಬೇಕು.

ಗರ್ಭಿಣಿ ಮಹಿಳೆಯ ಎರಡು ಲೋಟಗಳಲ್ಲಿ ಟೆಟರಸ್ ಟಾಕ್ಸೈಡ್ ತೆಗೆದುಕೊಂಡಿದ್ದರೆ ಹುಟ್ಟುವ ಮಗುವಿಗೆ ಧನುರ್ವಾತ ಬರುವುದಿಲ್ಲ. ತಾಯಿ ತನ್ನ ನಿರ್ಲಕ್ಷ ವಹಿಸಿದ್ದರೆ, ಮಗು ಹುಟ್ಟಿದ ತಕ್ಷಣ ಧನುರ್ವಾತ ಬೆನ್ನು ಬೀಳುತ್ತದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ಎರಡು ಟಾಕ್ಸೈಡ್ ತೆಗೆದುಕೊಳ್ಳಬೇಕು, ಹೇಗೆ ಆಸ್ಪತ್ರೆಯ ಶುಭ್ರವಾದ ಪರಿಸರದಲ್ಲಿ ನಡೆಯಬೇಕು. ಮಗುವಿನ ಹೊಕ್ಕಳು ಬಳ್ಳಿ ಕತ್ತರಿಸುವಾಗ ಶುದ್ಧವಾದ ಆಯುಧವನ್ನು ಬಳಸಬೇಕು.

* ಮಿಜಿಲ್ಸ್ ನಿವಾರಣೆ *

ಈ ರೋಗ ಕೂಡ ಹೆಚ್ಚಾಗಿ ಬರುತ್ತದೆ. ಸಂಬಂಧಿಸಿದ ವೈರಸ್ ರೋಗಾಣುಗಳು ಮಗುವಿನ ಶರೀರವನ್ನು ಪ್ರವೇಶಿಸಿ 8-13 ದಿನಗಳಲ್ಲಿ ಮೈಯೆಲ್ಲಾದದ್ದು ಹೇಳುತ್ತದೆ. ಮಗುವಿಗೆ ಜ್ವರ, ಕೆಮ್ಮು, ಬೇದಿ ಕೂಡ ಆಗುತ್ತದೆ. ನಿಮೊನಿಯಾ ಬರಬಹುದು ಕಿವಿಯಿಂದ ಕಿವು ಸೋರಬಹುದು, ಸಾಮಾನ್ಯವಾಗಿ ಈ ರೋಗ ಬಂದ ಮಕ್ಕಳಿಗೆ ಜೀವನ ಪರ್ಯಂತ ರೋಗ ನಿರೋಧಕ ಶಕ್ತಿ ಇರುತ್ತದೆ. ವಿಜಿಲ್ಸ್ ನಿಂದಾಗಿ ಪ್ರಾಣಪಾಯವೂ ಇದೆ.

ಪ್ರತಿಯೊಂದು ಮಗುವಿಗೆ 9-12 ತಿಂಗಳ ಮಧ್ಯದಲ್ಲಿ ಮಿಜಿಲ್ಸ್ ವ್ಯಾಕ್ಸಿನ್ ಒಂದನ್ನು ಹಾಕಿಸಿದರೆ ಜೀವನಪರ್ಯಂತ ಈ ರೋಗದಿಂದ ರಕ್ಷಣೆ ಇರುತ್ತದೆ.

ಮುಂದುವರೆಯುತ್ತದೆ….