ಮನೆ ರಾಜ್ಯ ಮಂಡ್ಯ: ಕರ್ತವ್ಯಕ್ಕೆ ಬಾರದೇ 7 ವರ್ಷದಿಂದ ಸಂಬಳ ಪಡೆಯುತ್ತಿರುವ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹ

ಮಂಡ್ಯ: ಕರ್ತವ್ಯಕ್ಕೆ ಬಾರದೇ 7 ವರ್ಷದಿಂದ ಸಂಬಳ ಪಡೆಯುತ್ತಿರುವ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹ

0

ಮಂಡ್ಯ: ಕರ್ತವ್ಯಕ್ಕೆ ಬರದ ಶಿಕ್ಷಕನಿಗೆ 7 ವರ್ಷದಿಂದ ಶಿಕ್ಷಣ ಇಲಾಖೆ ಸಂಬಳ ಪಾವತಿಸುತ್ತಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಕಾಡಪ್ಪ ಬೋಳ ಎಂಬ ಶಿಕ್ಷಕ ಕಳೆದ 7 ವರ್ಷದಿಂದ ಶಾಲೆಗೆ ಬರದೇ ಕಳ್ಳಾಟವಾಡುತ್ತಿದ್ದಾನೆ.

ಎಸ್ ಡಿಎಂಸಿ ಸಭೆಯ ವೇಳೆ ಶಿಕ್ಷಕ ಶಾಲೆಗೆ ಬರದಿದ್ರು ಇಲಾಖೆಯಿಂದ ಸರ್ಕಾರಿ‌ ಸಂಬಳ ಪಾವತಿಯಾಗುತ್ತಿರುವುದು ಬೆಳಕಿಗೆ ಬಂದಿದೆ.

2014 ರಲ್ಲಿ ಈತ ಈ ಶಾಲೆಗೆ ಬಂದು 2 ವರ್ಷವಷ್ಟೇ ಕರ್ತವ್ಯ ನಿರ್ವಹಿಸಿದ್ದಾರೆ.  ಬಳಿಕ  ಈತ ಶಾಲೆಗೆ ಶಾಲೆಗೆ ಹಾಜರಾಗಿಲ್ಲ. ಆದರೆ ತಿಂಗಳ ಕೊನೆಗೆ ಹಾಜರಾತಿ ಪುಸ್ತಕಕ್ಕೆ ನಿತ್ಯ ಸಹಿ ಮಾಡಲಾಗಿದೆ.

ತನ್ನ ಪುಡಾರಿ ರಾಜಕೀಯದಿಂದ ಇಲಾಖೆ ಅಧಿಕಾರಿಗಳು ಮತ್ತು ಸಹಶಿ ಕ್ಷಕರ ಮೇಲೆ ಪ್ರಭಾವ ಬೀರಿದ್ದು, ತನ್ನ‌ ಬದಲು ಬೇರೊಬ್ಬಬ್ಬ ಅತಿಥಿ ಶಿಕ್ಷಕನನ್ನು ನೇಮಿಸಿ 5 ಸಾವಿರ ಸಂಬಳ ನೀಡುತ್ತಿರುವುದು ಗೊತ್ತಾಗಿದೆ.

ಪ್ರಕರಣ ಬೆಳಕಿಗೆ ಬರದಂತೆ ಸಹ ಶಿಕ್ಷಕರು ಹಾಜರಾತಿಯಲ್ಲಿ ಆತನಿಗೆ ಗಳಿಕೆ ರಜೆ ತೋರಿಸಿದ್ದರು.  ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸಂಬಳ ಪಡೆಯುತ್ತಿರುವ ಶಿಕ್ಷಕನ ವಿರುದ್ಧ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ.

ಗೈರು ಹಾಜರಾಗಿ ಸಂಬಳ ಪಡೆಯುತ್ತಿರೋ ಶಿಕ್ಷಕನ ವಿರುದ್ಧ  ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.