ಕಪಾಲ ಎಂದರೆ ತಲೆ ಬುರುಡೆ. ಭಾತಿ ಎಂದರೆ ತೇಜಸ್ಸು ಮತ್ತು ಬಸ್ತಿಕ ಎಂದರೆ, ಕಮ್ಮರನ ತಿದಿ. ಮೇಲಿನಂತೆ ಯಾವುದೇ ಅನುಕೂಲವಾದ ಆಸನದಲ್ಲಿ ಕುಳಿತು ಕಣ್ಣು ಮುಚ್ಚಿಕೊಂಡು ಹೊಟ್ಟೆ ತುಂಬಾ ಉಸಿರು ತೆಗೆದುಕೊಂಡು ವಪೆಯನ್ನು ಸೇರಿಕೊಂಡು, ಹೊಕ್ಕಳಿನಿಂದ ಜೋರಾಗಿ ಬೆನ್ನಿನ ಬದಿಗೆ ತಿದಿಯ ತರಹ ಉಸಿರಿನಿಂದ ಗುದ್ಧಿಕೊಳ್ಳುತ್ತಾ, ತತ್ಕಾಲಕ್ಕೆ ಅದೇ ಉಸಿರನ್ನು ಸಾಧ್ಯವಿಲ್ಲ ಉಸಿರನ್ನು ತೆಗೆದುಕೊಳ್ಳುತ್ತಾ ಪುನಹ ಮೊದಲಿನ ತರಹ ಹೊರಕ್ಕೆ ರಭಸವಾಗಿ ಹೊರಕ್ಕೆ ಚಿಮ್ಮಿಸಬೇಕು. ಈ ಕ್ರಿಯೆಯನ್ನು ಪ್ರಾರಂಭದಲ್ಲಿ ಸೆಕೆಂಡಿಗೆ ಒಂದು ಸಲದಂತೆ 25 ರಿಂದ 30 ಸಲ ಮಾಡುತ್ತಾ, ಐದು ನಿಮಿಷಗಳವರೆಗೆ ಕ್ರಮೇಣ ಹೆಚ್ಚಿಸುತ್ತಾ ನಿರಂತರವಾಗಿ ಮಾಡಬಹುದು. ಇದನ್ನು ಕೂಡ ಧ್ಯಾನ ಮುದ್ರೆ ಅಥವಾ ಪ್ರಾಣ ಮುದ್ರೆಯಲ್ಲಿ ಕುಳಿತು ಮಾಡಿದರೆ ಉತ್ತಮ.
ಪ್ರಯೋಜನಗಳು :-
ಲೋ ಬಿಪಿ, ಹೈಬಿಪಿ, ಅಜೀರ್ಣ, ಸೈನಸ್, ನೆಗಡಿ, ಅಸ್ತಮಾ ಹೃದಯ ರೋಗಿಗಳಿಗೆ ಉತ್ತಮ ಶ್ವಾಶಕೋಶ, ಪಿತ್ತಕೋಶ, ಗುಲ್ಮ, ಜಠರಂಗಗಳಿಗೆ ಚೈತನ್ಯ ತುಂಬುತ್ತದೆ. ದೇಹ ಹಗುರ, ರೋಗ ನಿರೋಧಕ ಶಕ್ತಿ, ಜ್ಞಾಪಕ ಶಕ್ತಿ ವೃದ್ದೀ ಚುರುಕಾಗುತ್ತದೆ.
ಅತಿ ದುರ್ಬಲ ಶರೀರಗಳು, ಕಿವಿ ಕಣ್ಣು ರೋಗ ಪೀಡಿತರಿಗೆ ಇದು ನಿಶಿದ್ಧ. ಹೃದಯ, ರಕ್ತದೊತ್ತಡಇದ್ದವರು ಮತ್ತು ಹೆಂಗಸರು ಮುಟ್ಟಾದಾಗ ಗರ್ಭಿಣಿಯರಿಗೆ ಗರ್ಭಾಶಯ ತೊಂದರೆ ಇರುವವರಿಗೆ ಬೇಡ ಸ್ವಲ್ಪ ನಿಧಾನವಾಗಿ ತುಂಬಾ ಎಚ್ಚರಿಕೆಯಿಂದ ಮಾಡಬೇಕು.
ಬಸ್ತ್ರಿಕಾ :-
ಇದು ಕಪಾಲಭಾತಿಯಂತೆ ಆದರೆ ಕಪಾಲ ಬಾತಿಗಿಂತ ಸ್ವಲ್ಪ ವೇಗವಾಗಿ ಮಾಡುವಂಥದ್ದು ಹೆಸರೇ ಸೂಚಿಸುವಂತೆ.. ಕಮ್ಮಾರನ ತುದಿಯ ರೀತಿಯಲ್ಲಿ ರಭಸದಿಂದ ಉಸಿರನ್ನು ಮೇಲೆ ಕೆಳಗೆ ಅಪ್ಪಳಿಸಲಾಗುತ್ತದೆ. ದೃಢವಾದ ಹಸ್ವ ಪ್ರಮಾಣದ ಉಸಿರನ್ನು ತೆಗೆದುಕೊಂಡು ತಕ್ಷಣ ಬರದಿಂದ ಹೊರಕ್ಕೆ ಸಪ್ಪಳದೊಂದಿಗೆ ಚಿಮ್ಮಿಸಬೇಕು ಮತ್ತು ಅದು ತುಂಬಾ ವೇಗವಾಗಿ ಮಾಡುವುದರಿಂದ ಹೊಸಬರಿಗೆ ಬೇಡ, ಕಪಾಲಭಾತಿ ಮಾತ್ರ ಸಾಕು ಮತ್ತು ನಿಶಿದ್ದ ಕೂಡ. ಕಪಾಲಿಬಾತಿ ಅಂತಿಯೇ ಇದು ದುರ್ಬಲರು ಗರ್ಭಿಣಿಯರು ಮುಟ್ಟಾದವರಿಗೆ ಬೇಡ.
ಬಾಹ್ಯ ಪ್ರಾಣಾಯಾಮ :-
ಮೇಲಿನಂತೆ ಯಾವುದೇ ಅನುಕೂಲವಾದ ಆಸನದಲ್ಲಿ ಕುಳಿತು ಕಣ್ಣು ಮುಚ್ಚಿಕೊಂಡು ಉಸಿರನ್ನು ದೀರ್ಘವಾಗಿ ಹೊರ ಬಿಟ್ಟು (ಅಂದರೆ ಬಾಹ್ಯ ಕುಂಭಕದಲ್ಲಿ) ತಕ್ಷಣ ಇದೆ ಎನ್ನು ಮೇಲೆತ್ತಿ ಗದ್ದವನ್ನು ಅದರ ಮೇಲೆ ಇರಿಸಿ ಜಲಂಧರ ಬಂದವನ್ನು ಮಾಡಿ ಅದೇ ಸಮಯದಲ್ಲಿ ಇರುವುದು (ಉಡ್ಡಿಯಾನ ಬಂಧ) ಮತ್ತು ಮಲದ್ವಾರವನ್ನು ಕೂಡ ಒಳಕ್ಕೆ ಸೆಳೆದುಕೊಂಡಿರುವುದು (ಮೂಲಬಂಧ) ಸಾಧ್ಯವಾದಷ್ಟು ಸಮಯ ಈ ಸ್ಥಿತಿಯಲ್ಲಿದ್ದು ಬಂಧಗಳನ್ನು ಸಲ್ಲಿಸಿ ಉಸಿರನ್ನು ಒಳಗೆ ಎಳೆದುಕೊಳ್ಳಬೇಕು ಇದನ್ನು ಪ್ರತಿದಿನ ಏಳೆಂಟು ಸಲ ಪುನರಾವರ್ತಿಸಬೇಕು.
ಪ್ರಯೋಜನಗಳು :-
ಇದು ತುಂಬಾ ಶಕ್ತಿ ಮತ್ತು ಚೈತನ್ಯದಾಯಕ ಕ್ರಿಯೆ ಶರೀರವು ತುಂಬಾ ಹಗುರವಾದ ಅನುಭವ ದೊರೆಯುತ್ತದೆ.
ಅಗ್ನಿಸಾರ ಕ್ರಿಯೆ :-
ಈ ಪ್ರಾಣಾಯಾಮವಲ್ಲವಾದರೂ, ಬಾಹ್ಯ ಕುಂಭಕರ ಸ್ಥಿತಿಯಲ್ಲಿ ಮಾಡುವ ಕ್ರಿಯೆಯಾದ್ದರಿಂದ ಮತ್ತು ಹೊಟ್ಟೆ ಆರೋಗ್ಯದ ದೃಷ್ಟಿಯಿಂದ ತುಂಬಾ ಮುಖ್ಯವಾದ್ದರಿಂದ ಇದನ್ನು ಇಲ್ಲಿ ಸೇರಿಸಲಾಗಿದೆ. ಮಾಡುವ ವಿಧಾನವು ಮೇಲಿನಂತೆ ಯಾವುದೇ ಅನುಕೂಲಕರವಾದ ಆಸನದಲ್ಲಿ ಕುಳಿತು ಕಣ್ಣು ಮುಚ್ಚಿಕೊಂಡು ಹೊಟ್ಟೆ ತುಂಬ ಉಸಿರು ತೆಗೆದುಕೊಂಡು ಉಸಿರನ್ನು ಪೂರ್ತಿಯಾಗಿ ಹೊರಗೆ ಹಾಕಿದ ನಂತರ ಬಾಹ್ಯಾ ಕುಂಭಕದಲ್ಲಿ ಹೊಟ್ಟೆಯನ್ನು ಮೇಲೆ ಕೆಳಗೆ ಅಲ್ಲಾಡಿಸಬೇಕು ಪ್ರಾರಂಭದಲ್ಲಿ ಈ ಅಲ್ಲಾಟೂ ಐದಾರು ಸಲ ಮುಂದೆ ಹೆಚ್ಚಿಸುತ್ತಾ ಎಂಟು ಹತ್ತು ಸಲದವರೆಗೆ ಅಲ್ಲಾಡಿಸುವುದು. ನಂತರ ಹೊಟ್ಟೆಯ ಚಲನೆಯನ್ನು ನಿಲ್ಲಿಸಿ ನಿಧಾನವಾಗಿ ಉಸಿರನ್ನು ಒಳಗೆ ಎಳೆದುಕೊಳ್ಳಬೇಕು ಈ ಪ್ರಕ್ರಿಯೆಯನ್ನು ಪ್ರತಿದಿನ ಏಳೆಂಟು ಸಲ ಮಾಡಬೇಕು.
ಪ್ರಯೋಜನಗಳು :-
ಇದೊಂದು ರೀತಿಯ ಜಠರದ ವ್ಯಾಯಾಮವಾಗಿದ್ದು, ಅದರ ಎಲ್ಲಾ ಸಮಸ್ಯೆಗಳಿಗೂ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ಇದನ್ನು ದಿನಾಲು ಮಾಡುವುದು ಉತ್ತಮ.
ಉಜ್ಜಾಯೀ ಪ್ರಾಣಾಯಾಮ :-
ಯಾವುದೇ ಅನುಕೂಲಕರ ಆಸನದಲ್ಲಿ ಕುಳಿತು ಕಣ್ಣು ಮುಚ್ಚಿಕೊಂಡು ಮೂಗು ಗಂಟಲಿನ ಮೂಲಕ ಸಶಕ್ತವಾಗಿ ಉಸಿರು ತೆಗೆದುಕೊಂಡು ಜಾಲಂಧರ ಬಂಧದಲ್ಲಿ, ಸಾಧ್ಯವಾದಷ್ಟು ಹೊತ್ತು ಇದ್ದು ಹೆಬ್ಬೆರಳಿನಿಂದ ಬಲಹೊಳ್ಳೆ ಮುಚ್ಚಿ ಎಡಹೊಳ್ಳೆಯಿಂದ ಪೂರ್ತಿ ಉಸಿರುಬಿಡುವುದು. (ಏಳೆಂಟು ಸಲ).
ಪ್ರಯೋಜನಗಳು :-
ಥೈರಾಯ್ಡ್, ಡ್ಯಾನ್ಸಿಲ್ಸ್, ಗೊರಕೆ ಇತ್ಯಾದಿ ಗಂಟಲಿನ ಎಲ್ಲಾ ಸಮಸ್ಯೆಗಳಿಗೆ ಉತ್ತಮ ಪರಿಹಾರ.