ಮನೆ ಮನೆ ಮದ್ದು ಗೋಧಿ ಹುಲ್ಲಿನ ಜ್ಯೂಸ್ ಮತ್ತು ಜ್ಯೂಸ್ ಪೌಡರ್  

ಗೋಧಿ ಹುಲ್ಲಿನ ಜ್ಯೂಸ್ ಮತ್ತು ಜ್ಯೂಸ್ ಪೌಡರ್  

0

ಗೋದಿ ಹುಲ್ಲು ಸೂರ್ಯನ ಅಮೂಲ್ಯವಾದ ಶಕ್ತಿಯನ್ನು ಕ್ಲೋರೋಫಿಲ್ ರೂಪದಲ್ಲಿ ತನ್ನಲ್ಲಿ ಇಟ್ಟುಕೊಂಡಿರುತ್ತದೆ ಇದು ಹೃದಯದ ಕಾರ್ಯವನ್ನು ಸುಗಮಗೊಳಿಸುತ್ತದೆ ರಕ್ತನಾಳ ಗರ್ಭಶೆಯ ಅನ್ನನಾಳ ಮತ್ತು ಶ್ವಾಸಕೋಶದ ಚಟುವಟಿಕೆಗಳು ಸರಿಯಾದ ರೀತಿಯಲ್ಲಿ ಆಗುವಂತೆ ನೆರವೀಯುತ್ತದೆ.

ಗೋಧಿಹುಲ್ಲು ದೇಹವನ್ನು ಸ್ವಚ್ಛಗೊಳಿಸುತ್ತದೆ. ದೇಹದಲ್ಲಿ ಸಂಚನಗೊಂಡಿರುವ ನಂಜನ್ನು ಹೊರ ಹಾಕುತ್ತದೆ ಮತ್ತು ಧ್ವಂಸಗೊಂಡ ಅಂಗಾಂಗಗಳ ಅಂಗಾಂಶಗಳನ್ನು ಪುನರುಜ್ಜೀವಿತಗೊಳಿಸುತ್ತದೆ.

ನಮ್ಮ ಹಲವು ಸಮಸ್ಯೆಗಳಿಗೆ ನಮ್ಮ ಉಸಿರಾಟವೇ ಕಾರಣವಾಗಿರುತ್ತದೆ. ಸ್ವಚ್ಛವಾದ ಗಾಳಿಯನ್ನು ಚೆನ್ನಾಗಿ ಉಸಿರಾಡಿದಾಗ, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ಇಂದು ವಾಯುಮಾಲಿನ್ಯವು ಎಲ್ಲ ಸಾಮಾನ್ಯವಾಗಿದೆ. ವಾಹನ ಮತ್ತು ಕಾರ್ಖಾನೆಗಳನ್ನು ಹೊರ ಸೂಸುವ ಅಪಾಯಕಾರಿಯದ ಇಂಗಾಲದ ಮೊನಾಕ್ಸೈಡ್ ಅನ್ನು ನಾವು ಒಳಗೆ ತೆಗೆದುಕೊಂಡಾಗ ಶ್ವಾಶಕೋಶಗಳು ಹಾನಿಗೊಳಲಾಗುತ್ತದೆ. ಗೋಧಿ ಹುಲ್ಲಿನ ಬಳಕೆಯಿಂದ ಶ್ವಾಸಕೋಶವು ಆರೋಗ್ಯದಿಂದಿರುತ್ತದೆ. ಮಾಲಿನ್ಯಗೊಂಡ ಗಾಳಿಯು ಅತ್ಯಂತ ಕೋಮಲವಾದ ಶ್ವಾಸಕೋಶದ ಮೇಲೆ ಮಾಡುವ ಹಾನಿಯನ್ನು ಗೋಧಿಹುಲ್ಲಿನ ಜ್ಯೂಸ್ ತೊಡೆದು ಹಾಕುತ್ತದೆ.

ರಕ್ತದ ಆರೋಗ್ಯವನ್ನು ಗೋಧಿ ಹುಲ್ಲಿನ ಜ್ಯೂಸ್ ಸರಿಪಡಿಸುವುದರಿಂದ ರಕ್ತದ ಅಧಿಕ ಒತ್ತಡ ಶಮನಗೊಳ್ಳುತ್ತದೆ.

ಗೋಧಿ ಹುಲ್ಲಿನ ಜ್ಯೂಸ್ ಅನ್ನು ಸೇವಿಸುವುದರಿಂದ ರಕ್ತಕ್ಕೆ ಕಬ್ಬಿನಾಂಶವು ಸಿಗುತ್ತದೆ ಮತ್ತು ರಕ್ತವು ಪರಿಶುದ್ಧವಾಗಲು ಸಹಾಯವಾಗುತ್ತದೆ.

ಗೋಧಿ ಹುಲ್ಲಿನ ಜ್ಯೂಸ್ ಮಾರ್ಜಕದ ಡಿಟರ್ಜೆಂಟ್ ಹಾಗೆ ದೇಹದಲ್ಲಿ ಕೆಲಸ ಮಾಡಿ ದೇಹದ ಕಲ್ಮಶಗಳನ್ನು ಹೊರಹಾಕುತ್ತದೆ.

ಪರಿಸರ ಮಾಲಿನ್ಯ ತಪ್ಪಾದ ಜೀವನ ವಿಧಾನಗಳಿಂದಾಗಿ ಮತ್ತು ದೇಹಕ್ಕೆ ಹಾನಿಕಾರಕವಾದ ಆಹಾರ ವಸ್ತುಗಳನ್ನು ಸೇವಿಸುವುದರಿಂದ ತಲೆಯಲ್ಲಿ ಹೊಟ್ಟು ಕಂಡುಬರುತ್ತದೆ. ತಲೆಯ ಹೊಟ್ಟಿನ ಸಮಸ್ಯೆ ಜಾಗತಿಕವಾಗಿ ಕೋಟ್ಯಾಂತರ ಜನರನ್ನು ಕಾಡುತ್ತಿದೆ. ಗೋಧಿ ಹುಲ್ಲಿನ ಜ್ಯೂಸ್ ಅನ್ನು ಶಾಂಪೂ ತರಹ ಬಳಸಿ ತಲೆ ಹೊಟ್ಟಿನ ಸಮಸ್ಯೆಯಿಂದ ಮುಕ್ತರಾಗಬಹುದು.

ಮಹಿಳೆಯರು ಗೋಧಿ ಹುಲ್ಲಿನ ಜ್ಯೂಸನ್ನು ಬಳಸಿ ಮೂತ್ರ ಜನನ ಜನಕಾಂಗದ ಸೋಂಕುಗಳಿಂದ ಗುಣ ಹೊಂದಬಹುದು.

ದಂತಕ್ಷಯವನ್ನು ತಡೆಗಟ್ಟಲು ಗೋದಿ ಹುಲ್ಲನ್ನು ಬಳಸಬಹುದು.

ಹಲ್ಲು ನೋವಿನಿಂದ ಬಳಸುತ್ತಿರುವವರು ಗೋಧಿ ಹುಲ್ಲಿನ ಜ್ಯೂಸನ್ನು ಬಾಯಲ್ಲಿ ಐದಾರು ನಿಮಿಷಗಳ ಕಾಲ ಇಟ್ಟುಕೊಂಡರೆ ನೋವು ನಿವಾರಣೆಯಾಗುತ್ತದೆ.

ಗಂಟಲುನೋವು ಇರುವವರು ಗೋಧಿ ಹುಲ್ಲಿನ ಜ್ಯೂಸ್ ಬಳಸಿ ಸಮಸ್ಯೆಯಿಂದ ಹೊರ ಬರಬಹುದು.

ಪಯೋರಿಯದಂತಹ ವಸಡು ಸಮಸ್ಯೆಗಳಿಂದ ಬಳಸುತ್ತಿರುವ ಗೋಧಿಹುಲ್ಲಿನ ಜ್ಯೂಸನ್ನು ಕೆಲ ನಿಮಿಷಗಳವರೆಗೆ ಬಯಲಿಟ್ಟುಕೊಳ್ಳುವುದರಿಂದ ನೋವಿನಿಂದ ಹೊರಬಹದು. ಸ್ವಚ್ಛವಾದ ಗೋಧಿ ಹುಲ್ಲನ್ನು ಕೆಲ ನಿಮಿಷಗಳ ವರೆಗೆ ಬಾಯಲ್ಲಿಟ್ಟುಕೊಂಡು ಆಗಿಯುತ್ತಿರುವುದರಿಂದ ಈ ಸಮಸ್ಯೆ ಗುಣ ಹೊಂದಬಹುದು.

ನಿಮಗೆ ಬರುವ ಹಲವಾರು ಕಾಯಿಲೆಗಳಿಗೆ ಸೂಕ್ಷ್ಮಜೀವಿಗಳು ಕಾರಣವಾಗಿದೆ. ನಮ್ಮ ಬಾಹ್ಯ ಮುಖಾಂತರವೇ ಅತಿ ಹೆಚ್ಚಿನ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸುತ್ತದೆ. ಬಾಯಿಗೆ ಬಂದು ನೆಲೆಯುರುವ ಹಲವಾರು ಸೂಕ್ಷ್ಮಜೀವಿಗಳು ಬಾಯಿಯ ಹಲ್ಲು ಮತ್ತು ವಸಡುಗಳ ಎಡೆಯಲ್ಲಿ ಅಪಾರ ಪ್ರಮಾಣದಲ್ಲಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಗೋಧಿ ಹುಲ್ಲಿನ ಬಳಕೆಯಿಂದ ಬಾಯಿಯ ಈ ರೋಗಕಾರಕ ಜೀವಿಗಳು ಅಳೆಯುತ್ತದೆ. ಅಲ್ಲದೆ ಬಾಯಿಯ ವಿವಿಧಡೆ ಸಂಗ್ರಹವಾಗಿರುವ ನಂಜನ ತೊಡೆದುಹಾಕುತ್ತದೆ.

ಗೋಧಿ ಹುಲ್ಲಿನ ಬಳಕೆಯಿಂದ ಚರ್ಮದ ಸಮಸ್ಯೆಗಳು ದೂರವಾಗುತ್ತದೆ.

ಗೋಧಿ ಹುಲ್ಲಿನ ಜ್ಯೂಸನ್ನು ಜೀವಿ ರೋಧಕವಾಗಿ ಬಳಸಬಹುದು.

ಅಕಾಲದಲ್ಲಿ ತಲೆಕೂದಲು ಬೆಳ್ಳಗಾಗುವುದು ಗೋಧಿ ಹುಲ್ಲಿನ ಜ್ಯೂಸ್ ತಡೆಗಟ್ಟುತ್ತದೆ.

ನಮ್ಮ ದೇಹದ ಸಮಗ್ರ ಆರೋಗ್ಯಕ್ಕೆ ಬೇಕಿರುವ ಜೀವಸತ್ವಗಳು ತಾಜಾ ಮತ್ತು ಜೀವಂತ ರೂಪದಲ್ಲಿ ಗೋಧಿ ಹುಲ್ಲು ಒದಗಿಸುತ್ತದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಗೋದಿಹುಲ್ಲು ಬಳಸಬಹುದು.

ಗೋಧಿ ಹುಲ್ಲಿನ ಬಳಕೆಯಿಂದ ದೈಹಿಕ ಆರೋಗ್ಯ ವೃದ್ಧಿಸುತ್ತದೆ ಜೊತೆಗೆ ಮಾನಸಿಕ ಸ್ಥಿತಿಯು ಸುಧಾರಣೆ ಆಗುತ್ತದೆ. ಇದಕ್ಕೆ ಕಾರಣವೆಂದರೆ ಗೋಧಿ ಹುಲ್ಲು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ದೈಹಿಕವಾಗಿ ಸದೃಢವಾಗಿರುವವರಿಗೆ ಮಾನಸಿಕ ಚೈತನ್ಯವೂ ಸಹಜವಾಗಿಯೇ ಹೆಚ್ಚುತ್ತದೆ.

ಜೀರ್ಣಾಂಗ ವ್ಯೂಹವನ್ನು ಗೋದಿ ಹುಲ್ಲು ಸುಸ್ಥಿತಿಯಲ್ಲಿ ಇಡುವುದರಿಂದ ನಾವು ಸೇವಿಸುವ ಆಹಾರದಲ್ಲಿರುವ ಪೋಷಕಾಂಶಗಳೆಲ್ಲ ದೇಹಕ್ಕೆ ಸೇರುತ್ತದೆ.

ಗೋಧಿ ಹುಲ್ಲಿನ ಬಳಕೆಯಿಂದ ರಕ್ತದ ಆರೋಗ್ಯ ಸುಧಾರಿಸುತ್ತದೆ. ಆದ್ದರಿಂದ ರಕ್ತದ ಮೂಲಕ ನಮಗೆ ಬರಬಹುದಾದ ಕಾಯಿಲೆಗಳನ್ನು ನಿಯಂತ್ರಿಸಬಹುದು. ಗೋಧಿ ಹುಲ್ಲಿನ ಬಳಕೆಯಿಂದ ಅನೀಮಿಯ ಸಹ ಬರಲಾರದು.

ಗೋಧಿಹುಲ್ಲು ಆರೋಗ್ಯ ಸುಧಾರಣೆಗಾಗಿ ಬಳಸಿದಾಗ ರಕ್ತ ಮತ್ತು ಚರ್ಮದ ಕಾಂತಿ ಹೆಚ್ಚಿಸುತ್ತದೆ, ಗೋಧಿ ಹುಲ್ಲನ್ನು ವಾಸ್ತವವಾಗಿ ಸೌಂದರ್ಯವರ್ಧಕವಾಗಿಯೂ ಬಳಸಬಹುದು.

ಹೀಗೆ ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಇರುವ ಒಂದು ಸರಳ ಉಪಾಯವೆಂದರೆ ಗೋಧಿ ಹುಲ್ಲಿನ ರಸವನ್ನು ಇಡೀ ದೇಹಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ನಂತರ ಸ್ನಾನಮಾಡಬೇಕು.

ಜೀರ್ಣಾಂಗ ವ್ಯೂಹದಲ್ಲಿ ತುಂಬಿಕೊಂಡಿರುವ ಮಲೀನ ವಸ್ತುಗಳಿಂದಾಗಿ ದೇಹದ ಆರೋಗ್ಯ ಹದಗೆಡುತ್ತದೆ. ಇದನ್ನು ಹೋಗಲಾಡಿಸಲು ಪ್ರಕೃತಿಯ ಚಿಕಿತ್ಸೆಯಲ್ಲಿ ʼಎನಿಮಾʼ ಕೊಡುತ್ತಾರೆ. ಎನಿಮಾದ ನಂತರ ಗೋಧಿಹುಲ್ಲಿನ ರಸವನ್ನು ಬಳಸುವುದರಿಂದ ಜೀರ್ಣಾಂಗವ್ಯೂಹವನ್ನು ಸ್ವಚ್ಛಗೊಳಿಸಿದಂತಾಗುತ್ತದೆ.

ಮಲಬದ್ಧತೆಯನ್ನು ಹೋಗಲಾಡಿಸಲು ಗೋಧಿ ಹುಲ್ಲಿನ ಜ್ಯೂಸನ್ನು ಬಳಸಬಹುದು.

ದೇಹದ ಯಾವುದಾದರೂ ಭಾಗದಲ್ಲಿ ಬ್ಯಾಕ್ಟೀರಿಯ ಅಥವಾ ವೈರಸ್ ನಂತಹ ಸೂಕ್ಷ್ಮಜೀವಿಗಳು ಹಾನಿ ಉಂಟು ಮಾಡುವಂತಿದ್ದರೆ ಅಂತಹ ಕಡೆಗಳಲ್ಲಿ ಜೀವ ವಿರೋಧಕವಾಗಿ ಗೋದಿಹುಲ್ಲಿನ ರಸವನ್ನು ಬಳಸಬಹುದು.

ದೇಹದಾದ್ಯಂತ ಹರಡಿರುವ ರಕ್ತನಾಳಗಳಲ್ಲಿ ಇರಬಹುದಾದ ಸಮಸ್ಯೆಗಳನ್ನು ಗೋಧಿಹುಲ್ಲಿನ ಬಳಕೆಯಿಂದ ದೂರ ಬಿಡಬಹುದು.

ಕಾಲ ಸರಿದಂತೆ ದೇಹವು ವೃದ್ಧಾಪ್ಯದ ಲಕ್ಷಣಗಳನ್ನು ತೋರಿಸಲಾರಂಭಿಸುತ್ತದೆ. ಗೋಧಿ ಹುಲ್ಲಿನ ಬಳಕೆಯಿಂದ ಇಂತಹ ಲಕ್ಷಣಗಳನ್ನು ನಿಧಾನಗೊಳಿಸಬಹುದು.

ಆಧುನಿಕ ಮನುಷ್ಯನಿಗೆ ಹಲವಾರು ಬಗೆ ಮಾಲಿನ್ಯಗಳು ಶಾಪದಂತೆ ಕಾಡುತ್ತಿದೆ. ಕಂಪ್ಯೂಟರ್ ಮತ್ತು ಟೆಲಿವಿಷನ್ ನಿಂದ ಹೊರಹೊಮ್ಮುವ ವಿಕಿರಣಗಳು ಮನುಷ್ಯನ ದೇಹದ ಮೇಲೆ ವಿಷಮ ಪ್ರಭಾವಬೀರುವ ಹಾಗೆಯೇ ಮನೆಮನೆಗಳಲ್ಲಿ ಉತ್ಪನ್ನ ವಾಗುವ ಹೊಗೆ ಮತ್ತು ಇತರ ಮಾಲಿನ್ಯಗಳು ಸಹ ಅಪಾಯಕಾರಿಯೇ ಆಗಿವೆ. ಗೋಧಿ ಹುಲ್ಲಿನ ಬಳಕೆಯಿಂದ ಇಂತಹ ಮಾಲಿನ್ಯಗಳ ಪರಿಣಾಮವನ್ನು ತಗ್ಗಿಸಬಹುದು .

ಕೃಷಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ರಾಸಾಯನಿಕಗಳಿಂದ ಹಲವು ಬಗೆಯ ಹಾನಿಯಾಗಬಹುದು ಆದರೆ ಗೋಧಿ ಹುಲ್ಲಿನ ರಸದಿಂದ ಇಂತಹ ಕೃಷಿ ಉತ್ಪನ್ನಗಳನ್ನು ಅಂದರೆ ಹಣ್ಣು ತರಕಾರಿಗಳನ್ನು ತೊಳೆದು ನಂತರ ನೀರಿನಲ್ಲಿ ತೊಳೆದರೆ ಅವುಗಳನ್ನು ಅಪಾಯ ನಿವಾರಣೆ ಆಗುತ್ತದೆ.

ನಾವು ಸೇವಿಸುವ ಆಹಾರ ಮತ್ತು ಪಾನೀಯಗಳ ಮುಖಾಂತರ ಸೀಸ ಕ್ಯಾಡ್ಮಿಯಂ ಅಲುಮಿನಿಯಂ ಪಾದರಸ ಮತ್ತು ಇನ್ನಿತರ ಅಪಾಯಕಾರಿ ಲೋಹ ಅಂಶಗಳು ನಮ್ಮ ದೇಹವನ್ನು ಸೇರಬಹುದು. ಕಾಲಂತರದಲ್ಲಿ ನಮ್ಮದೇಹಕ್ಕೆ ಅಪಾರ ಹಾನಿ ಉಂಟು ಮಾಡಬಹುದು. ಗೋಧಿ ಹುಲ್ಲಿನ ಬಳಕೆಯಿಂದ ಇಂತಹ ಅಪಾಯಕಾರಿ ಲೋಹ ಅಂಶಗಳ ಪ್ರಭಾವತಗ್ಗಿಸಬಹುದು.

ಗೋಧಿ ಹುಲ್ಲಿನಲ್ಲಿ ಎ ಮತ್ತು ಸಿ ಜೀವ ಸತ್ವಗಳು ಹೆಚ್ಚಾಗಿವೆ, ಇದರೊಂದಿಗೆ ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಮೆಗ್ನೇಷಿಯಂ, ಪೊಟ್ಯಾಶಿಯಂ, ಸೋಡಿಯಂ, ಗಂಧಕ, ಕೊಬ್ಬಾಟ್, ಸತು ಮತ್ತು ಪ್ರೋಟೀನ್ ಅಂಶಗಳು ಇವೆ. ಈ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಸುಲಭವಾಗಿ ಸೇರ್ಪಡೆಯಾಗಬಲ್ಲ ಪ್ರಾಕೃತಿಕ ರೂಪದಲ್ಲಿ ಗೋಧಿ ಹುಲ್ಲಿನಲ್ಲಿರುತ್ತದೆ.

ಕೃಷಿ ಸಂಶೋಧನಾ ಪೈಫರ್ (pfeiffer) ಹೇಳಿರುವಂತೆ ನಿರ್ಜಲೀಕರಿಸಿದ ಗೋಧಿಹುಲ್ಲಿನ ರಾಸದಲ್ಲಿ ಪ್ರೋಟಿನಿನ ಅಂಶವು 47.7% ಇರುತ್ತದೆ. ಇದು ದನದ ಮಾಂಸದಲ್ಲಿರುವ ಪ್ರೊಟೀನ್ ಗಿಂತ ಮೂರುಪಟ್ಟು ಹೆಚ್ಚು. ಈದು ದೇಹಕ್ಕೆ ಅಪಾಯಕಾರಿ ಮಾಂಸದ ಸೇವನೆಯಿಂದ ಮಲಬದ್ಧತೆಯಂತಹ ಹಲವಾರು ಸಮಸ್ಯೆಗಳು ಉದ್ಭವಿಸಬಹುದು. ಆದ್ದರಿಂದ ಮಾಂಸಾಹಾರವನ್ನು ತ್ಯಜಿಸಿ ಗೋಧಿ ಹುಲ್ಲಿನ ರಸ ಸೇವಿಸುವುದು ಉತ್ತಮ.

ನಮ್ಮ ದೇಹದ ಬಿಳಿಯ ರಕ್ತಕಣಗಳು ರೋಗ ನಿವಾರಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಯಾರ ದೇಹದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆ ಇದೆಯೋ ಅಂತವರಲ್ಲಿ ಆರೋಗ್ಯ ಸರಿ ಇರುವುದಿಲ್ಲ. ಗೋಧಿ ಹುಲ್ಲನ್ನು ಬಳಸುವವರ ದೇಹದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಾಗಿರುತ್ತದೆ.

ಗೋಧಿ ಹುಲ್ಲು ನೀರನ್ನು ಸ್ವಚ್ಛಗೊಳಿಸುವ ಶಕ್ತಿಯನ್ನು ಹೊಂದಿದೆ. ಅಕ್ವೇರಿಯಂಗಳಲ್ಲಿ ಇರುವ ಮೀನುಗಳ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ನೀಡಲು ನೀರಿನಲ್ಲಿ ಗೋಧಿ ಹುಲ್ಲಿನ ಕಟ್ಟನ್ನು ಇಡಬಹುದು. ಕುಡಿಯುವ ನೀರಿನ ಪಾತ್ರೆ ಅಥವಾ ಟ್ಯಾಂಕಗಳಲ್ಲಿ ನೀರು ಪರಿಶುದ್ಧವಾಗುತ್ತದೆ. ಹೀಗೆ ಮತ್ತು ಹಲವು ಬಗೆಯ ನಮಗೆ ಪ್ರಯೋಜನಕಾರಿಯಾದ ಗೋಧಿ ಹುಲ್ಲಿನ ಜ್ಯೂಸ್ ಮತ್ತು ಜ್ಯೂಸ್ ಪೌಡರ್ ಸಿದ್ಧ ರೂಪದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತದೆ.

 ಬಳಸುವ ವಿಧಾನ :

ಆರು ಚಮಚದಷ್ಟು ರಸವನ್ನು 30 ಮಿ.ಲಿ. ಆಹಾರಕ್ಕೆ ಮೊದಲು, ದಿನದಲ್ಲಿ ಎರಡು ಸಲದಂತೆ ಕುಡಿಯಬೇಕು. ಪೌಡರ್ ಆದರೆ ಒಂದು ಚಮಚ ಪೌಡರ್ ಅನ್ನು ನೀರು ಅಥವಾ ಹಣ್ಣಿನ ರಸಕ್ಕೆ ಸೇರಿ ಕುಡಿಯಬೇಕು.