ಪಾಂಡವಪುರ: ಆಲೆಮನೆಗೆ ಆಕಸ್ಮಿಕ ಬೆಂಕಿ ತಗುಲಿ ಟ್ರ್ಯಾಿಕ್ಟರ್, ಹಸು, ಎರಡು ಕರು, ಮೇಕೆ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ದೇವೇಗೌಡನಕೊಪ್ಪಲು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.ಗ್ರಾಮದ ನಿವಾಸಿ ಉಮೇಶ್ ಎಂಬುವರಿಗೆ ಸೇರಿದ ಆಲೆಮನೆಯೇ ಬೆಂಕಿಗೆ ಆಹುತಿಯಾಗಿರುವುದು.
ಭಾನುವಾರ ಮಧ್ಯರಾತ್ರಿ ಆಕಸ್ಮಿಕವಾಗಿ ಆಲೆಮನೆಗೆ ಬೆಂಕಿ ತಗುಲಿದ್ದು, ಹಬ್ಬಿನ ಸಿಪ್ಪೆ(ರಚ್ಚು)ಗೆ ಬೆಂಕಿ ಹತ್ತಿಕೊಂಡು ಸಂಪೂರ್ಣವಾಗಿ ಬೆಂಕಿ ಆಲೆಮನೆಗೆ ಆವರಿಸಿದೆ. ಬೆಂಕಿಗೆ ಆಲೆಮೆನೆಯ ಜತೆಗೆ ಆಲೆಮನೆಯ ಪಕ್ಕದಲ್ಲಿ ನಿಲ್ಲಿಸಿದ್ದ ಮಹೇಂದ್ರ ಟ್ರ್ಯಾಂಕ್ಟರ್ ಗೂ ಬೆಂಕಿ ತಲುಗಲಿ ಟ್ರ್ಯಾೆಕ್ಟರ್ ಸಂಪೂರ್ಣವಾಗಿ ಸುಟ್ಟಿಭಸ್ಮವಾಗಿದೆ. ಜತೆಗೆ ಆಲೆಮನೆಯ ಒಳಗಡೆ ಕಟ್ಟುಹಾಕಿದ್ದ ಒಂದು ಹಸು, ಎರಡು ಹಸುವಿನ ಕರುಗಳು, ಒಂದು ಮೇಕೆಯೂ ಸಹ ಬೆಂಕಿಗೆ ಸಿಲುಕಿ ಸುಟ್ಟು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಆಲೆಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕರು ಅಲೆಮನೆ ಪಕ್ಕದಲ್ಲಿ ಇರುವ ಪ್ರತ್ಯೇಕವಾದ ಮನೆಯಲ್ಲಿ ಮಲಗಿದ್ದರಿಂದ ಆ ಮನೆಗೆ ಬೆಂಕಿ ತಗುಲಿಲ್ಲ. ಮುಂಜಾನೆ ೩ ಗಂಟೆಯ ಸಮಯದಲ್ಲಿ ಕೂಲಿಕಾರ್ಮಿಕನೊರ್ವ ಕೆಲಸ ಮಾಡಲು ಎದ್ದು ಮನೆಯಿಂದ ಹೊರಗಡೆ ಬಂದಾಗ ಆಲೆಮನೆಗೆ ಬೆಂಕಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಆಲೆಮನೆ ಮಾಲೀಕ ಉಮೇಶ್ ಗೆ ದೂರವಾಣಿ ಕರೆ ಮಾಡಿ ಮಾಹಿತಿ ಮುಟ್ಟಿಸಿ ಸ್ಥಳಕ್ಕೆ ಬಂದ ಆಲೆಮನೆ ಮಾಲೀಕ ಉಮೇಶ್ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಒಂದು ಗಂಟೆಯ ಕಾಲ ಬೆಂಕಿಯನ್ನು ನಂದಿಸಿದರು.
ವಿಷಯ ತಿಳಿದ ಪೊಲೀಸರು, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಆಲೆಮನೆ ಮಾಲೀಕ ಉಮೇಶ್ ಅವರಿಗೆ ಸಾಂತ್ವಾನ ಹೇಳಿದರು.
ಮಾಲೀಕರ ಉಮೇಶ್ ಮಾತನಾಡಿ, ಆಲೆಮನೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣ ನಷ್ಟ ಉಂಟಾಗಿದೆ. ಆಲೆಮನೆ, ಟ್ರ್ಯಾುಕ್ಟರ್ ಭನ್ಮವಾಗಿವೆ. ಹಸು, ಹಸುವಿನ ಕರುಗಳು, ಮೇಕೆಗಳು ಸುಟ್ಟು ಸಾವನಪ್ಪಿವೆ. ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಸರಕಾರದಿಂದ ಸೂಕ್ತಪರಿಹಾರ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು. ಘಟನೆ ಸಂಬಂಧ ಪಾಂಡವಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.