ಮನೆ ಆರೋಗ್ಯ ಉಬ್ಬಸ (ಅಸ್ತಮಾ)

ಉಬ್ಬಸ (ಅಸ್ತಮಾ)

0

ಚಿಕ್ಕ ಮಕ್ಕಳಲ್ಲಿ ಉಬ್ಬಸ ಸಾಮಾನ್ಯವಾಗಿ ಕಂಡುಬರುವ ರೋಗ. ಉಬ್ಬಸಬಂದವರಿಗೆ ಶ್ವಾಸಕೋಶಗಳಲ್ಲಿ ಉರಿಯೂತವುಂಟಾಗುತ್ತದೆ. ಉರಿಯುತವಾದಾಗ ಶ್ವಾಸಕೋಶದ ನಾಳಗೋಳಗಿನ ಪೊರೆಗಳಲ್ಲಿ ನೀರು ತುಂಬಿ ಉಬ್ಬುತ್ತದೆ. ಇದರಿಂದಾಗಿ ಶ್ವಾಸಕೋಶ ನಾಳಗಳು ಬಹುಮಟ್ಟಿಗೆ ಮುಚ್ಚಿ ಹೋದಂತಾಗಿರುತ್ತದೆ. ಆದ್ದರಿಂದ ಸುಲಭವಾಗಿ ಉಸಿರಾಡಲಾಗುವುದಿಲ್ಲ. ಇಂತಹ ಸ್ಥಿತಿಯನ್ನು ಶ್ವಾಸಕೋಶ ನಾಳಗಳಲ್ಲಿ ಉರಿಯುತವೆನ್ನುತ್ತಾರೆ. ದೀರ್ಘಕಾಲ ಇರಬಹುದು, ಮಧ್ಯದಲ್ಲಿ ಸ್ವಲ್ಪ ಸಮಯ ಇಲ್ಲವಾಗಿ ಮತ್ತೆ ಬರಬಹುದು. ಶ್ವಾಸಕೋಶದಲ್ಲಿ ಉರಿಯುತವಾದಾಗಲಿಲ್ಲ ಒಬ್ಬಸದ ಸಮಸ್ಯೆ ಎದುರಿಸಬೇಕಾಗುತ್ತದೆ.

ಉಬ್ಬಸದ ತೊಂದರೆಗಳು :-

ಉಬ್ಬಸ ಬಂದವರ ಗಂಟಲಲ್ಲಿ ಬೆಕ್ಕಿನ ಶಬ್ದ ಬರುತ್ತಿರುತ್ತದೆ. ಉಸಿರಾಡಲು ಒದ್ದಾಡುತ್ತಿರುತ್ತಾರೆ. ಎದೆಗೆ ಬಿಗಿದಂತಾಗುತ್ತದೆ.ಕೆಮ್ಮು ಸಾಮಾನ್ಯ. ಕೆಮ್ಮಿನೊಂದಿಗೆ ಜಿಗುಟದ ಕಫ ಬರುತ್ತದೆ. ಉಬ್ಬಸದ ಕೆಮ್ಮು ಹಗಲಿಗಿಂತಲೂ, ರಾತ್ರಿ ಜಾಸ್ತಿ ಕೆಲವರಿಗೆ ಬೆಳಗಿನಜಾವವು ಇರುತ್ತದೆ….

ಉಬ್ಬಸ ಬಂದಾಗ ಮೇಲ್ಕಂಡ ತೊಂದರೆಗಳು ಕಾಡಿದರು, ಶೀಘ್ರವಾಗಿ ಕಡಿಮೆಯಾಗುತ್ತದೆ. ಒಬ್ಬ ಸದಾ ತೊಂದರೆಗಳು ಔಷಧಿ ಬಳಸುವುದರಿಂದ ಕಡಿಮೆಯಾದರೆ ಕೆಲವು ಸಂದರ್ಭಗಳಲ್ಲಿ ಔಷಧಿ ಬಳಸದಿದ್ದರೂ ಸಂಪೂರ್ಣವಾಗಿ ನಿಲ್ಲುತ್ತದೆ. ಔಷಧಿ ಬಳಸಿದರು ಮತ್ತೆ ಮತ್ತೆ ಮರುಕಳಿಸುತ್ತದೆ….

ಉಬ್ಬಸ ಯಾವ ಲಕ್ಷಣಗಳು ಇಲ್ಲದಿದ್ದರೂ, ಇದ್ದಕ್ಕಿದ್ದಂತೆ ಮರುಕಳಿಸಿದರೆ ಅದಕ್ಕೆ ಯಾವುದೇ ಅಲರ್ಜಿ ಕಾರಣವಾಗಿರುತ್ತದೆ.

20% ರಷ್ಟು ಮಕ್ಕಳಲ್ಲಿ ಉಬ್ಬಸ :-

ಚಿಕ್ಕ ಮಕ್ಕಳಿಗೆ ಉಬ್ಬಸ ಬರುವುದು ಸರ್ವೇ ಸಾಧಾರಣ ವಿಷಯ.  20% ರಷ್ಟು ಮಕ್ಕಳು ಯಾವುದಾದರೂ ಒಂದು ಸಮಯದಲ್ಲಿ ಉಬ್ಬಸದ ಬಾದೆಗೊಳಗಾಗುತ್ತಾರೆ. ಇವರಿಗೆ ಉಬ್ಬಸ ತೀವ್ರವಾಗಿ ಬರಬಹುದು, ಇಲ್ಲವೇ ಕಡಿಮೆ ಇರಬಹುದು. ಇಂತಹ ಬಹಳಷ್ಟು ಮಕ್ಕಳಿಗೆ ಸ್ವಲ್ಪ ವಯಸ್ಸಾದಂತೆ ಉಬ್ಬಸ ಇಲ್ಲವಾಗುತ್ತದೆ. ಕೆಲವರಿಗೆ ಆಗಾಗ ಉಬ್ಬಸ ಕಂಡು ಬರುತ್ತಿರುತ್ತದೆ.

ಉಬ್ಬಸ : ಏಕೆ? ಯಾವಾಗ? ಯಾರಿಗೆ?

ಉಬ್ಬಸಬರಲು ವಂಶಪಾರಂಪರ್ಯವು ಒಂದು ಕಾರಣ. ಅಲ್ಲದೆ ರೋಗನಿರೋಧಕ ಶಕ್ತಿ ಕಡಿಮೆ ಇರುವುದು, ಕೆಲವು ಪದಾರ್ಥಗಳಿಗೆ ಮತ್ತು ಕೆಲವು ಸನ್ನಿವೇಶಗಳಿಗೆ ಅಲರ್ಜಿ ಉಂಟಾಗುವುದರಿಂದ ಬರುತ್ತದೆ. ಶ್ವಾಸಕೋಶಗಳಲ್ಲಿನ ನಾಳಗಳು ಅಲರ್ಜಿಗೆ ಸೂಕ್ಷ್ಮವಾಗಿ ಸ್ಪಂದಿಸುತ್ತದೆ….

ಉಬ್ಬಸವಿಲ್ಲದವರಿಗೆ ಈ ಅಲರ್ಜಿಗಳು ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಆದರೆ ಉಬ್ಬಸವಿರುವವರಿಗೆ ಅಲರ್ಜಿ ಎಂಬುದು ಸ್ವಲ್ಪಮಟ್ಟಿಗೆ ಇದ್ದರೂ ಶಾಸನಾಳಗಳು ಅದಕ್ಕೆ ಸ್ಪಂದಿಸುತ್ತದೆ. ಕ್ಷಣಾರ್ಧದಲ್ಲಿ ಶ್ವಾಸನಾಳಗಳಲ್ಲಿ ಉರಿಯುತ ಬರುತ್ತದೆ.

ಉಬ್ಬಸವನ್ನುಂಟು ಮಾಡುವ ಅಂಶಗಳು :-

ವೈರಸ್ ಮತ್ತು ಬ್ಯಾಕ್ಟೀರಿಯಾ ಸೋಂಕು, ಅಲರ್ಜಿ, ದೂಳು, ಗಾಳಿ, ರಾಸಾಯನಿಕಗಳು ಔಷಧಿಗಳು, ಮಾನಸಿಕ ಪರಿಸ್ಥಿತಿಗಳು ಉಬ್ಬಸವನ್ನು ಕೆರಳಿಸುತ್ತದೆ……

ಸೋಂಕು :-

ಶ್ವಾಸಕೋಶವನ್ನು ಕೆರಳಿಸುವ ವೈರಸ್ ಸೋಂಕು ಉಬ್ಬಸ ಮರುಕಳಿಸಲು ಸಹಕರಿಸುತ್ತದೆ. ಇವುಗಳಲ್ಲಿ ಎಡಿನೋ ವೈರಸ್, ಇನ್ ಫ್ಲುಯೆಂಜಾ, ವೈರಸ್, ರೈನೋ ವೈರಸ್ ಪ್ರಮುಖವಾದವು. ಅದೇ ರೀತಿ ಶ್ವಾಸಕೋಶಗಳನ್ನು ರೋಗಗ್ರಸ್ತಗೊಳಿಸುವ ಬ್ಯಾಕ್ಟೀರಿಯ ರೋಗಾಣುಗಳ ಕೂಡ ಉಬ್ಬಸ ಮರುಕಳಿಸಲು ಸಹಕರಿಸುತ್ತದೆ. ಬ್ಯಾಕ್ಟೀರಿಯಲ್ ಬ್ರಾಂಖೈಟೀಸ್, ಬ್ಯಾಕ್ಟೀರಿಯಲ್ ನ್ಯುಮೋನಿಯಾ, ಮೈಕೋಪ್ಲಾಸ್ಮಾ ಉಬ್ಬಸಕ್ಕೆ ಕಾರಣವಾಗುತ್ತದೆ.

ಅಲರ್ಜಿ :-

ಉಬ್ಬಸದ ರೋಗಿಗಳಿಗೆ ಕೆಲವು ಪದಾರ್ಥಗಳು ಅಲರ್ಜಿ ಉಂಟು ಮಾಡುತ್ತದೆ. ಈ ಸ್ಥಿತಿ ಅಲರ್ಜಿ ರೋಗಿಗಳಲ್ಲಿ ಹೆಚ್ಚು ಉಬ್ಬಸವಿಲ್ಲದವರಿಗೆ ಇವುಗಳಿಂದ ಏನು ತೊಂದರೆಯಾಗುವುದಿಲ್ಲ. ಉಬ್ಬಸವಿರುವವರಿಗೆ ಮಾತ್ರ ಇನ್ನೂ ಉಬ್ಬಸವನ್ನುಂಟು ಮಾಡಲು ಕಾರಣವಾಗುತ್ತದೆ. ಹೂವಿನ ಪರಾಗ, ಗಿಡದ ಎಲೆಗಳು, ಸಗಣಿ, ಹುಲ್ಲು ಧ್ಯಾನ, ಫಂಗಸ್ ಮುಂತಾದವುಗಳು ಉಬ್ಬಸವನ್ನುಂಟು ಮಾಡುತ್ತದೆ.

ನಾಯಿ, ಬೆಕ್ಕು, ಕೋಳಿ, ಪಕ್ಷಿಗಳಿಂದ ಬರುವ ವಾಸನೆ, ಕೂದಲುಗಳು ಕೂಡ ಉಬ್ಬಸಕ್ಕೆ ಕಾರಣವಾಗುತ್ತದೆ.

ಹಳೆಯ ಬಟ್ಟೆಗಳು, ಪುಸ್ತಕಗಳಲ್ಲಿನ ಧೂಳು, ಸಣ್ಣ ಪುಟ್ಟ ಕ್ರಿಮಿಕೀಟಗಳು ಉಬ್ಬಸಕ್ಕೆ ಕಾರಣವಾಗುತ್ತದೆ.

ನೆಲಗಡಲೆ, ಬಾದಾಮಿ, ಗೋಡಂಬಿ, ಚಾಕ್ಲೇಟ್, ಮೊಟ್ಟೆ, ಮೀನು, ಹಣ್ಣುಗಳು, ಹಾಲು ಕೆನೆ, ಕೂಡ ಉಬ್ಬಸಬರಲು ಸಹಕರಿಸುತ್ತದೆ.

ಬಣ್ಣಗಳು ಮತ್ತು ರಾಸಾಯನಿಕಗಳು :-

ಬಣ್ಣ, ಪಾಲಿಶ್ ಮತ್ತು ಕೆಲಸಗಾರರಿಂದ ಬರುವ ವಾಸನೆ, ಪ್ರಸಾದನ ಸಾಮಗ್ರಿಗಳಿಂದ ಬರುವ ವಾಸನೆ ಉಬ್ಬಸವನ್ನು ಕೆರಳಿಸುತ್ತದೆ.

ಮಿಲ್ಲುಗಳು ಮತ್ತು ಕಾರ್ಖಾನೆಗಳ ಬಳಿಯ ಧೂಳು, ವಾಸನೆ ಮತ್ತು ಶೀತ ಗಾಳಿ, ಮಳೆ, ಮಂಜು ಕೂಡ ಒಬ್ಬಸಕ್ಕೆ ಕಾರಣವಾಗುತ್ತದೆ.