ಗುರು ನೀನೊಬ್ಬ ಬೇಕು ಬಾಳು ಬೆಳಗಲು ಅಂಧಕಾರ ತೊಲಗಿ ಬೆಳಕು ತೋರಲು||ಪ
ಹಿತ ವಚನದಿಂದ ಜ್ಞಾನವನುಣಿಸಲು,
ತನು ಮನದಿಂದ ನಮ್ಮನ್ನು ಹರಸಲು,
ನಮ್ಮ ಸರಿ ತಪ್ಪುಗಳನ್ನು ತಿಳಿಸಲು,
ಗುರು ನೀನೊಬ್ಬ ಬೇಕು ಬಾಳು ಬೆಳಗಲು|| 1
ಅಜ್ಞಾನದ ಕತ್ತಲೆಯನ್ನು ಕಳೆಯಲು,
ಸುಜ್ಞಾನದ ಜ್ಯೋತಿ ಬೆಳಗಿಸಲು,
ಧರ್ಮ ಮಾರ್ಗ ದಿನ ನಮ್ಮನ್ನು ನಡೆಸಲು,
ಗುರು ನೀನೊಬ್ಬ ಬೇಕು ಬಾಳು ಬೆಳಗಲು||2
ಹೊಸತನದ ಹೊಸ ವಿಷಯವು, ಹೊಸದಾದ ದಾರಿಯಲ್ಲಿ ನಾವು,
ನೀ ನಡೆಸುವ ನಮ್ಮ ಗೆಲುವು,
ಗುರು ಜಹ್ನವಿ ವಿಠಲ ನೀನೊಬ್ಬ ಬೇಕು ಬಾಳು ಬೆಳಗಲು||3