ಮನೆ ಆರೋಗ್ಯ ಉಬ್ಬಸದ ತೀವ್ರತೆಯಲ್ಲಿ ವ್ಯತ್ಯಾಸಗಳು

ಉಬ್ಬಸದ ತೀವ್ರತೆಯಲ್ಲಿ ವ್ಯತ್ಯಾಸಗಳು

0

ಒಬ್ಬಸ ಎಲ್ಲರನ್ನೂ ಒಂದೇ ರೀತಿ ಇರುವುದಿಲ್ಲ. ಹಾಗೆ ಉಬ್ಬಸ ಪ್ರತಿ ಬಾರಿಯೂ ತೀವ್ರವಾಗಿ ಬರುವುದಿಲ್ಲ. ಬಹಳ ಕಡಿಮೆ ಪ್ರಮಾಣದಲ್ಲಿ ಇರಬಹುದು. ಕೆಲವರಿಗೆ ಉಪವಾಸ ಆದಾಗ ಬಂದು ಹೋಗುತ್ತಿದ್ದರೆ, ಮತ್ತೆ ಕೆಲವರಿಗೆ ಅಷ್ಟೊಂದು ಇದ್ದೇ ಇರುತ್ತದೆ. ಹಾಗಾಗಿ ಒಬ್ಬ ಸಾವನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಲಾಗಿದೆ.

1.ಮೈಲ್ಡ್ ಇಂಟರ್ ಮಿಟೆoಟ್ ಅಸ್ತಮಾ :-

ಈ ಗುಂಪಿಗೆ ಸೇರಿದ ಉಬ್ಬಸದವರಿಗೆ ಉಸಿರಾಡುವಾಗ ಬೆಕ್ಕಿನ ಶಬ್ದವಿದ್ದು, ಆಯಾಸವಿರುತ್ತದೆ. ಇವರಿಗೆ 1-2 ಸಾರಿ ಉಬ್ಬಸದ ಲಕ್ಷಣಗಳು ಕಾಣಿಸಿಕೊಂಡು ಮರೆಯಾಗುತ್ತಿರುತ್ತದೆ. ಉಬ್ಬಸವಿರದ ಸಂದರ್ಭದಲ್ಲಿ ರೋಗಿಗೆ ಯಾವ ತೊಂದರೆಯೂ ಇರುವುದದಿಲ್ಲ. ಇವರಲ್ಲಿ ಪಿ.ಇ.ಎಫ್.ಆರ್ (ಪೀಕ್ ಎಕ್ಸಿಪಿರೇಟರಿ ಫ್ಲೋರೇಟ್) 80% ಗಿಂತಲೂ ಹೆಚ್ಚಾಗಿರುತ್ತದೆ. ಈ ಗುಂಪಿಗೆ ಸೇರಿದ ಉಬ್ಬಸಕ್ಕೆ ಸಾಲ್ ಬುಟ್ಟಮಾಲ್, ಟೆರಬುಟಲಿನ್ ನಂತಹ  ಬೀಟಾ ಎಗನಿಸ್ಟ್ ಔಷಧಗಳು ಬಳಸಬೇಕು.

ಈ ಔಷಧಿಗಳು ಸಂಕುಚಿತವಾದ ಶ್ವಾಸನಾಳಗಳನ್ನು ಸುಲಭವಾಗಿ ವಿಕಸಿಸುವಂತೆ ಮಾಡುತ್ತದೆ, ಸುಲಭವಾಗಿ ಉಸಿರಾಡಲು ಸಾಧ್ಯವಾಗುತ್ತದೆ. ಈ ಔಷಧಿಗಳನ್ನು ಬ್ರಾಂಖೋಡೈಲೆಟಾ(ರ್ಸrs) ಎನ್ನುತ್ತಾರೆ.

ಬ್ರಾಂಖೋಡೈಲೆಟಾ(ರ್ಸrs) (ಬೀಟಾ ಎಗನಿಸ್ಟ್) ಗುಂಪಿನಲ್ಲಿ ಸಾಲ್ ಬುಟಮಾಲ್, ಟೆರಿಬುಟಲಿನ್, ಇಸೋಪ್ರೆನಲಿನ್, ಸಾಲ್ಮಿಟರಾಲ್, ಮಿಥೈಲ್ ಜಾಂತಿಲ್ಸ್, ಥಿಯೋಫಿಲಸ್, ಅಡ್ರಿನಲಿನ್ ಔಷಧಿಗಳು ಬರುತ್ತದೆ. ಇವುಗಳಲ್ಲಿ ಬಹಳಷ್ಟು ಔಷಧಿಗಳು ಇನ್ ಹೇಲರ್ ಮತ್ತು ನೆಬ್ಯುಲೈಸರ್ ಔಷಧಿಗಳಾಗಿರುತ್ತದೆ. ಸಾಲ್ ಬುಟಮಾಲ್, ಐಸೋಪೆನಲಿನ್, ಥಿಯೋಫಿಲಿನ್ ಔಷಧಿಗಳು ಗುಳಿಗೆಗಳ ರೂಪದಲ್ಲಿ, ಸಿರಪ್ ರೂಪದಲ್ಲಿಯೂ ಲಭ್ಯ. ಆದರೆ ಬ್ರಾಂಖೋಡೈಲ(ರ್ಸre) ಅನ್ನು ಇನ್ ಹೇಲರ್ ಬಳಸುವುದು ಒಳ್ಳೆಯ ಕ್ರಮ.

2. ಮೈಲ್ಡ್ ಬಟ್ ಪೆರಸಿಸ್ಟೆಂಟ್ ಅಸ್ತಮಾ :-

ಈ ಗುಂಪಿಗೆ ಸೇರಿದ ಉಬ್ಬಸದಲ್ಲಿ ದಿನದಲ್ಲಿ ಯಾವಾಗಲಾದರೂ ಒಮ್ಮೆ ಉಬ್ಬಸ ಕಂಡುಬರುತ್ತದೆ. ಉಬ್ಬಸವಿದ್ದರೂ ನಿದ್ರೆಗೆ ಭಂಗ ಬರುವುದಿಲ್ಲ. ವ್ಯಾಯಾಮ ಮಾಡಿದರು ಸುಸ್ತಾಗುವುದಿಲ್ಲ. ಪಿ.ಇ.ಎಫ್.ಆರ್ 80%ರಷ್ಟು ಇರುತ್ತದೆ. ಈ ರೀತಿಯ ಉಬ್ಬಸಕ್ಕೆ ಸ್ಟಿರಾಯ್ಡ್ ರೂಪದ ದಿನಕ್ಕೆ ಎರಡುಬಾರಿ ಮತ್ತು  ಸಾಲ್ ಬುಟಮಾಲ್ ನಂತಹ ಬೀಟಾ ಎಗೆನಿಸ್ಟ್ ದಿನಕ್ಕೆ 2 ಬಾರಿ ತೆಗೆದುಕೊಳ್ಳಬೇಕು. ಸ್ಟಿರಾಯಿಡ್ಸ್ ಅಷ್ಟೊಂದು ಪರಿಣಾಮಕಾರಿಯಾಗದಿದ್ದಾರೆ, ಲ್ಯುಕೋಟ್ರಿಸ್ ಇನ್ ಹೇಲರ್ ಬಳಸಬಹುದು.

3. ಮೊಡರೇಟ್ ಬಟ್ ಪೆರ್ ಸಿಸ್ಟೆಂಟ್ ಅಸ್ತಮಾ :-

ಈ ಗುಂಪಿಗೆ ಸೇರಿದ ಉಬ್ಬಸದಲ್ಲಿ ಪ್ರತಿದಿನ ಅವರವರ ಕೆಲಸಗಳನ್ನು ಮಾಡಿಕೊಳ್ಳಲು ತೊಂದರೆಯಾಗುತ್ತದೆ. ರಾತ್ರಿ ವೇಳೆಯಲ್ಲಿ ನಿದ್ರೆಗೆ ಭಂಗ ಬರುತ್ತದೆ. ಪಿ.ಇ.ಎಫ್.ಆರ್ 60-80% ರಷ್ಟು ನಡುವೆ ಇರುತ್ತದೆ. ಇವರಿಗೆ ಇನ್ ಹಲೇಶನ್ ರೂಪದಲ್ಲಿ ಸ್ಟಿರಾಯಿಡ್ಸ್ ಲಾಂಗ್ ಆಕ್ಟಿಂಗ್ ಬೀಟಾ ಎಗೆನ್ ಸ್ಟಾರ್ ದಿನಕ್ಕೆ 2 ಬಾರಿ ಕೊಡಬೇಕು. ಲಾಂಗ್ ಆಕ್ಟಿಂಗ್ ಥಿಯೋಫಿಲಿನ್ ರಾತ್ರಿ ವೇಳೆಯಲ್ಲಿ ಕೊಡಲಾಗುತ್ತದೆ. ಅಗತ್ಯವಾದರೆ ಲ್ಯೂಕೋಟ್ರಿಸ್ ಇನ್ ಹಿಬಿಟಾರ್ಸ ಕೊಡುತ್ತಾರೆ.

4. ಸಿವಿಯರ್ ಪೆರಿಸಿಸ್ಟಂಟ್ ಅಸ್ತಮಾ :-

ಈ ಗುಂಪಿಗೆ ಸೇರಿದ ಅಸ್ತಮಾದಲ್ಲಿ ಉಬ್ಬಸದ ಸಮಸ್ಯೆಗಳು ಪ್ರತಿದಿನ ಇರುತ್ತದೆ. ರಾತ್ರಿ ನಿದ್ರೆಮಾಡಲು ಸಾಧ್ಯವಾಗುವುದಿಲ್ಲ. ಒಮ್ಮೊಮ್ಮೆ ಉಬ್ಬಸ ಅತಿರೇಕಕ್ಕೆ ಹೋಗುತ್ತದೆ. ಇವರಿಗೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಸ್ಟಿರಾಯಿಡ್ಸ್ ಇನ್ಹಲೇಷನ್, ಬ್ರಾಂಖೋಡೈಲೇಟ(ರ್ಸrs) ಡ್ರಗ್ಸ್ ಕೊಡಲಾಗುತ್ತದೆ.