ಮನೆ ರಾಜ್ಯ ವಾಣಿಜ್ಯ ಬಳಕೆಯ ಎಲ್ ​ಪಿಜಿ ಸಿಲಿಂಡರ್ ಬೆಲೆ ಇಳಿಕೆ

ವಾಣಿಜ್ಯ ಬಳಕೆಯ ಎಲ್ ​ಪಿಜಿ ಸಿಲಿಂಡರ್ ಬೆಲೆ ಇಳಿಕೆ

0

ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಎಲ್‌ ಪಿಜಿ ಗ್ರಾಹಕರಿಗೆ ಪ್ರಮುಖ ಪರಿಹಾರವಾಗಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಗಳ ಬೆಲೆಯನ್ನು 158ರೂ.ನಷ್ಟು ಕಡಿತಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.

ಹೊಸ ಬೆಲೆಗಳು ಇಂದಿನಿಂದ ಜಾರಿಗೆ ಬರಲಿದ್ದು, ದೆಹಲಿಯ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ನ ಚಿಲ್ಲರೆ ಮಾರಾಟದ ಬೆಲೆ 1,522ರೂ. ಆಗಿರುತ್ತದೆ.

ವಾಣಿಜ್ಯ ಮತ್ತು ಗೃಹಬಳಕೆಯ LPG  ಸಿಲಿಂಡರ್‌ ಗಳ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ಹೊಸ ದರಗಳು ಸೆಪ್ಟೆಂಬರ್ 1 ರಿಂದ ಜಾರಿಗೆ ಬರುತ್ತವೆ. ಆಗಸ್ಟ್‌ನಲ್ಲಿ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಒಎಂಸಿಗಳು 99.75 ರೂ.ನಷ್ಟು ಕಡಿತಗೊಳಿಸಿದ್ದವು. ಜುಲೈನಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ತಲಾ 7ರೂ. ಹೆಚ್ಚಿಸಲಾಗಿತ್ತು .

ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಈ ವರ್ಷ ಮಾರ್ಚ್ 1 ರಂದು ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್‌ ಗಳ ಬೆಲೆಯನ್ನು ಪ್ರತಿ ಯೂನಿಟ್‌ ಗೆ 350.50ರೂ. ಮತ್ತು ಗೃಹಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಗಳ ಬೆಲೆಯನ್ನು ಪ್ರತಿ ಯೂನಿಟ್‌ ಗೆ 50ರೂ. ಹೆಚ್ಚಿಸಿದ್ದವು.