ಮನೆ ದೇವಸ್ಥಾನ ಶ್ರೀ ಗುರುಗಿರಿ ಸಿದ್ದೇಶ್ವರ ಸ್ವಾಮಿ ಕ್ಷೇತ್ರ

ಶ್ರೀ ಗುರುಗಿರಿ ಸಿದ್ದೇಶ್ವರ ಸ್ವಾಮಿ ಕ್ಷೇತ್ರ

0

ಶ್ರೀ ಗುರುಗಿರಿ ಸಿದ್ದೇಶ್ವರ ಸ್ವಾಮಿ ಕ್ಷೇತ್ರ

ಹಂದನಕೆರೆ, ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕು.

ರತ್ನ ಕಲ್ಪಿತ ಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ

ನಾನಾರತ್ನ ವಿಭೂಷಿತಂ ಮೃಗಮದಾ ಮೋದಾಂಕಿತಂ ಚಂದನಂ|

ಜಾತೀ ಚಂಪಕ ಬಿಲ್ವಪತ್ರ ರಚಿತಂ ಪುಷ್ಪಂ ಚ ಧೂಪಂ ತಥಾ

ದೀಪಂ ದೇವ ದಯಾನಿಧೇ ಪಶುಪತೆ ಹೃತ್ಕಲ್ಪಿತಂ ಗೃಹ್ಯತಾಂ||

ಶ್ರೀ ಗುರುಸಿದ್ದೇಶ್ವರ ಮಹಾ ಸ್ವಾಮಿಯವರ ಶ್ರೀಮಠ ಸಾವಿರ ವರ್ಷ ಇತಿಹಾಸ ಇರುವದ್ದಾಗಿದೆ. ಇಂತಹ ಪುಣ್ಯ ಕ್ಷೇತ್ರ, ಇದು ರಾಜ ಶೈಲೇಶ ಮಹಾರಾಜನಿಂದ ಆಡಲ್ಪಟ್ಟಿತು. ಶೈಲೇಶನಿಗೆ ಸಂತಾನ ಕೊರಗು ಸದಾ ಕಾಡುತ್ತಿರುತ್ತಿತ್ತು. ಶಿವಭಕ್ತನಾಗಿ ಪುತ್ರ ಚಿಂತನೆಯಲ್ಲಿ ಕಾಲ ಕಳೆಯುತ್ತಿರುವಂತಹ ಸಂದರ್ಭದಲ್ಲಿ, ಪರಮೇಶ್ವರನು ಅವನಿಗೆ ಯಜ್ಞ ಕಲ್ಪದಿಂದ ಅಗ್ನಿ ದೇವತೆಯ ಒಂದು ಹಸ್ತದಿಂದ ಒಂದು ಶಿಶುವನ್ನು ಮಹಾರಾಜನಿಗೆ ನೀಡುತ್ತಾನೆ.

ಆ ಶಿಸು ಯಾವುದೆಂದರೆ ಇಂದ್ರ ಲೋಕದಿಂದ ವಸಂತೋತ್ಸವ ನಡೆಯುತ್ತಿರುತ್ತದೆ. ಆ ಸಂದರ್ಭದಲ್ಲಿ ಗಂಧರ್ವರು ಕೆಚೇರ ಮಾರ್ಗದಲ್ಲಿ ಸಂಚರಿಸುತ್ತಿರುವಾಗ, ಅವರ ಪತ್ನಿಯರ ಒಡಗೂಡಿ ಆ ಲಿಂಗನ ಸುಖವನ್ನು ಅನುಭವಿಸುತ್ತಾರೆ. ಒಂದು ಸಂದರ್ಭದಲ್ಲಿ ಭೂಲೋಕದಲ್ಲಿ ಯಜ್ಞ ಯಾಗಾದಿಗಳು ನಡೆಯುತ್ತಿರುತ್ತದೆ ಆ ಯಜ್ಞ ಕುಂಡಕ್ಕೆ ಗಂಧರ್ವರ ಬಿಂದು ಬೀಳುತ್ತದೆ. ಆ ಯಜ್ಞವು ಅಪವಿತ್ರವಾಗುತ್ತದೆ.

ಅಗಾ ಋಷಿಗಳು ಗಂಧರ್ವರಿಗೆ ಶಪಿಸುತ್ತಾರೆ. ಭೂಲೋಕದಲ್ಲಿ ಜನಿಸಿ ಅನ್ನ ಆಹಾರವಿಲ್ಲದೆ, ಸಕಲ ಕಷ್ಟ ಅನುಭವಿಸಿ ಶಿವ ಚಿಂತನೆಯಿಂದ ಬಿಚ್ಚಾಟನೆಯನ್ನು ಮಾಡಿ, ನೀವು ಮಾನವ ರೂಪವನ್ನು ತಾಳಿ ಎಂದು ಅವರು ಶಾಪ ಕೊಡುತ್ತಾರೆ. ಮತ್ತು ಆ ಋಷಿಗಳೆಲ್ಲರೂ ಕೂಡಿ ಆ ಯಜ್ಞ ದೇವತೆಯನ್ನು ಪ್ರಾರ್ಥಿಸುತ್ತಾರೆ. ಈ ಯಜ್ಞ ಭಂಗವಾಯಿತು ಮುಂದೇನು ಮಾಡಬೇಕು ಎಂದು ಕೇಳಿದಾಗ, ಯಜ್ಞ ದೇವತೆ ಅನುಗ್ರಹಿಸುತ್ತಾಳೆ. ಗಂಧರ್ವರ ಬಿಂದುವಿನಲ್ಲಿ ಬಿದ್ದಿರುವಂತಹ ಶಿಶುವನ್ನು ರಾಜ ಶೈಲೇಶ ಮಹಾರಾಜನಿಗೆ ಆಶೀರ್ವದಿಸುತ್ತಾಳೆ.

ಮುಂದೆ ಯಜ್ಞ ಪೂರ್ಣವಾದಾಗ ಯಜ್ಞದೇವತೆಯ ಆಶೀರ್ವಾದವೂ ಪೂರ್ಣವಾಗುತ್ತದೆ. ಆ ಶಿಶುವು ಶೈಲೇಶ ಮಹಾರಾಜನ ಆಸ್ಥಾನದಲ್ಲಿ ರಾಜ್ಯ ಸುಖದಿಂದ ಬೆಳೆಯುತ್ತದೆ. ಆದರೆ ಆ ಯಜ್ಞದೇವತೆ ಒಂದು ಸೂಚನೆ ಕೊಟ್ಟಿರುತ್ತಾಳೆ. ಮಹಾರಾಜರಿಗೆ ಹೇಳುತ್ತಾಳೆ, ಈ ಶಿಶುವು ಪ್ರಾಪ್ತ ವಯಸ್ಸಿಗೆ ಬಂದಾಗ ಯಾವುದೇ ಕಾರಣಕ್ಕೂ ಕಾಡಿನತ್ತ ಈತನನ್ನು ಬೇಟೆಗಾಗಿ ಕಳಿಸಬೇಡಿ ಎಂದು ಈತನನ್ನು ಬೇಟೆಗಾಗಿ ಕಳಿಸಿದರೆ ಈತನಿಗೆ ರಾಕ್ಷಸ ಪ್ರವೃತ್ತಿ ಉಂಟಾಗುತ್ತದೆ ಎಂದು ಸೂಚನೆ ನೀಡುತ್ತಾಳೆ.

ಅದರಂತೆ ಮಹಾರಾಜನು ಹಾಗೂ ಸನ್ನು ಲಾಲನೆ ಪಾಲನೆ ಮಾಡಿ, ಜೋಪಾನವಾಗಿ ನೋಡಿಕೊಳ್ಳುತ್ತಾನೆ. ಒಂದು ದಿನ ಆ ಸಾಕು ಪುತ್ರನಾದ ಮಯನು, ತನ್ನ ತಂದೆಗೆ ತಿಳಿಯದ ಹಾಗೆ ತನ್ನ ಸ್ನೇಹಿತನೊಡನೆ ಅರಣ್ಯಕ್ಕೆ ಬೇಟೆಗೆ ಹೋಗುತ್ತಾನೆ. ಅಲ್ಲಿ ವನವಿಹಾರ ಮಾಡುವಾಗ ಅಲ್ಲಿಗೆ ಒಬ್ಬ ಋಷಿಗಳು ಅಲ್ಲಿಯ ಸರೋವರದಲ್ಲಿ ಜಲಪಾನ ಮಾಡಲು ಕುಳಿತಿರುತ್ತಾರೆ.

ಅವರು ಜಲಪಾನ ಮಾಡುವ ಸಂದರ್ಭದಲ್ಲಿ ಯಾವುದೋ ಪ್ರಾಣಿ ಬಂದಿರಬೇಕೆಂದು ತಿಳಿದು, ಇವರ ಧನುರ್ ಬಾಣ ಪ್ರಯೋಗಿಸಿದಾಗ ಋಷಿಗಳ ಎದೆಗೆ ನೇರವಾಗಿ ತಗುಲಿದಾಗ. ಅವರು ತಕ್ಷಣ ಕೂಗುತ್ತಾರೆ/ ಕೂಗಿನ ಸದ್ದಿಗೆ ಇಬ್ಬರು ಆ ಸ್ಥಳಕ್ಕೆ ಬರುತ್ತಾರೆ. ಅವರನ್ನು ನೋಡಿ ಋಷಿಗಳು ನಾನು ಯಾರೆಂಬುದನ್ನು ತಿಳಿಯದೆ ನೀನು ನನ್ನ ಮೇಲೆ ಬಾಣ ಪ್ರಯೋಗಿಸಿದ್ದರಿಂದ ಈ ಭೂಲೋಕದಲ್ಲಿ ರಾಕ್ಷಸನಾಗಿ ಜನಿಸು ಎಂದು ಶಾಪವನ್ನು ಕೊಡುತ್ತಾರೆ.

ಆಗಿನಿಂದ ಅವನು ಮಾಯಾ ಎಂಬ ರಾಕ್ಷಸನಾಗಿ ಪರಿವರ್ತನೆಗೊಳ್ಳುತ್ತಾನೆ. ಅಂದಿನಿಂದ ಅವನು ದೇವಾನುದೇವತೆಗಳನ್ನು ಬಹಳ ಕಿರುಕುಳದಿಂದ ಹಿಂಸೆ ಮಾಡಿ ಯಜ್ಞಾಘಾತಕನಾಗಿ ಸಂಚರಿಸುತ್ತಿರುತ್ತಾನೆ. ಮುಕ್ಕೋಟಿ ದೇವತೆಗಳು ಎಲ್ಲರೂ ಕೂಡಿ ಮೂರ್ತಿಗಳ ದರ್ಶನವನ್ನು ಮಾಡುತ್ತಾರೆ. ಅವರೆಲ್ಲರೂ ಕೂಡ ಕೈಲಾಸ ದತ್ತ ಪ್ರಯಾಣ ಬೆಳೆಸುತ್ತಾರೆ. ಆಗ ಪರಮೇಶ್ವರನು ಶಿಶುವಾಗಿ ಜನಿಸಿ ಗ್ರಾಮದಿಂದ ಆತನನ್ನು ಸಂಹರಿಸುತ್ತೇನೆ. ಎಂದು ಹೇಳಿ ನೀವೆಲ್ಲ ನಿಶ್ಚಿಂತೆಯಿಂದ ಇರಿ ಎಂದು ಆಶೀರ್ವಾದವನ್ನು ಮಾಡುತ್ತಾನೆ.

ಅಂತೆಯೇ ಆ ರಾಕ್ಷಸನನ್ನು ಪರಮೇಶ್ವರನು ಸಿದ್ದೇಶ್ವರ ಅನ್ನ ತಕ್ಕಂತಹ ಹೆಸರಿನಿಂದ ಅವತರಿಸಿ ಬಾಲ ಶಿಶುವಾಗಿ ಆತನನ್ನು ಭೂ ಸಾಲಿಗ್ರಾಮದಿಂದ ಸಂಹರಿಸುತ್ತಾನೆ. ಈ ಕ್ಷೇತ್ರದಲ್ಲಿ ಈಗಲೂ ಕೂಡ ಭೂಸಾಲಿ ಗ್ರಾಮ ಮೂರ್ತಿಯೇ ಇಲ್ಲಿ ನೆಲೆಗೊಂಡಿದೆ ಸಂಹಾರ ಮಾಡಿರುವಂತಹ ಆಯುಧವಾಗಿದೆ ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರವನ್ನು ಶ್ರೀ ಗಿರಿ ಸಿದ್ದೇಶ್ವರ ಕ್ಷೇತ್ರ ಎಂದು ಕರೆಯುತ್ತಾರೆ.

ಆ ಪರಮೇಶ್ವರನು ಈ ಕ್ಷೇತ್ರದಿಂದ 3 ಕಿ.ಮೀ ದೂರದಲ್ಲಿ ಇರುವಂತಹ ಗಿರಿಯಲ್ಲಿ ಶಿಶುವಾಗಿ ಅವತರಿಸುತ್ತಾನೆ. ಆ ಶಿಶುವಾಗಿ ಅವತರಿಸಿ, ಆ ರಾಕ್ಷಸನನ್ನು ಸಂಹರಿಸುತ್ತಾನೆ. ಈಗಲೂ ಆ ಗಿರಿ ಸಿದ್ದೇಶ್ವರ ಕ್ಷೇತ್ರಕ್ಕೆ ದ್ವಿತೀಯ ಕೇದಾರ ಎಂದು ಹೇಳಲ್ಪಡುತ್ತದೆ. ಯಾರು ಕೇದಾರಕ್ಕೆ ಹೋಗಿ ಕೇದಾರನಾಥನ ದರ್ಶನ ಮಾಡಲು ಸಾಧ್ಯವಾಗುವುದಿಲ್ಲವೋ ಅವರು ಈ ಗಿರಿಯ ಸಿದ್ದೇಶ್ವರ ಕ್ಷೇತ್ರದಲ್ಲಿ ಅವನ ಸಾನಿಧ್ಯವನ್ನು ದರ್ಶನ ಮಾಡಿದರೆ ಕೇದರನಾಥನ ದರ್ಶನ ಮಾಡಿದಂತಹ ಪುಣ್ಯ ಲಭಿಸುತ್ತದೆ.

ಹಾಗೂ ಈ ಬೆಟ್ಟವನ್ನು ಹತ್ತಿದರೆ ಇಷ್ಟಾರ್ಥಗಳು ಲಭಿಸುತ್ತದೆ. ಸರ್ಪದೋಷ, ಕಾಳ ಸರ್ಪದೋಷ, ಇತ್ಯಾದಿ ಅನೇಕ ಜಾತಕ ದೋಷಗಳು, ನಿವಾರಣೆಯಾಗುತ್ತದೆ. ಅಂತೆಯೇ ಈ ರಾಕ್ಷಸರ ಸಂಹಾರವಾದ ತಕ್ಷಣ ರಾಕ್ಷಸನ ಅವಸಾನ ಕಾಲದಲ್ಲಿ ಪರಶಿವನ ಬಳಿ ಒಂದು ಕೋರಿಕೆಯನ್ನು ಕೇಳುತ್ತಾನೆ. ನನ್ನ ಒಂದು ಅಂಶವಾದರೂ ಈ ಗ್ರಾಮದಲ್ಲಿ ಉಳಿಯುವಂತೆ ಆಶೀರ್ವದಿಸು ಎಂದು ಆಗ ಪರಶಿವನ ಮುಂದೆ ನೀನು ಮಂತ್ರವಾದಿಯಾಗಿ ಜನಿಸಿ ನಾನು ಭೃಂಗಯ್ಯ ಮಂಗಳಾದೇವಿ ಎಂಬ ಮಡಿಲಲ್ಲಿ ಶಿಶುವಾಗಿ ಜನಿಸುವೆ ಎಂದು ಆಶೀರ್ವದಿಸುತ್ತಾನೆ.

ಹಾಗೆ ಭೃಂಗಯ್ಯ ಮಂಗಳಾದೇವಿಯ ಮಡಿಲಲ್ಲಿ ಸಿದ್ದೇಶ್ವರರು ಹುಟ್ಟಿ, ಕಾಲ ನಂತರ ನಾರದರ ಇಚ್ಛೆಯಂತೆ ಆ ಶಿವನೂ ತನ್ನ ಬಾಲ ಲೀಲೆಗಳನ್ನು ತೋರಿಸಿ, ವರುಣಾಶ್ರಮ, ಗೃಹಸ್ಥಾಶ್ರಮ, ಸನ್ಯಾಶ್ರಾಶ್ರಮದ, ಧರ್ಮವನ್ನು ಬೋಧಿಸಿ ಭೂಲೋಕದಲ್ಲಿ ಬಿತ್ತರಿಸಿ ಈ ಕ್ಷೇತ್ರದಲ್ಲಿ ನೆಲೆಸಿದ್ದಾನೆ ಎಂಬ ಪ್ರತೀತ ಇದೆ.

ರಾಜ್ಯ ತಿಮ್ಮಪ್ಪ ನಾಯಕ ಎರಡನೆಯ ರಾಜನಾಗಿ ಇಲ್ಲಿ ರಾಜ್ಯವನ್ನು ಆಳುತ್ತಾನೆ. ಅವನ ಆಸ್ಥಾನದಲ್ಲಿ ಇರುವಂತಹ ರಾಜ ನರ್ತಕಿಗೆ ಸಿದ್ದೇಶ್ವರರು ಒಲಿಯುತ್ತಾರೆ. ಕಟ್ಟಿಸಿದ 12 ಸೋಪಾನದ ಬಾವಿಗೆ ಬಾವಿಯಲ್ಲಿ ಅವರು ಮಜ್ಜನಗೈದು ಆಕೆಗೂ ಕೂಡ ನೀನು ನಿರ್ಮಾಣ ಮಾಡಿದ ಬಾವಿಯನ್ನು ಯಾರು ಪೂಜಿಸಿದವರಿಗೆ ಸಂತಾನ ಭಾಗ್ಯ ಲಭಿಸಲಿ ಎಂದು ಆಶೀರ್ವಾದ ಮಾಡುತ್ತಾರೆ.

ಹಾಗೆಯೇ ತುಂಗಲಿ ಗ್ರಾಮದಿಂದ ಬಂದಂತಹ ಉಪ್ಪಾರಯ್ಯ ಹನುಮಂತ ದೇವಿ ಎಂಬ ಅವರ ಗರ್ಭ ಸಂಜಾತನಾಗಿ ಬೆಳೆದ ಬಾಲ ನಿರ್ವಾಣನು ಕೂಡ, ಸಿದ್ದೇಶ್ವರನಿಗೆ ಶಿಷ್ಯನಾಗುತ್ತಾನೆ. ಆ ಸಿದ್ದೇಶ್ವರನನ್ನು ನಿಜ ರೂಪದಲ್ಲಿ ಕಾಣಬೇಕೆಂಬ ಹಂಬಲದಿಂದ ಈ ಕಾಡಿನಲ್ಲಿ ಸಂಚರಿಸುತ್ತಿರುತ್ತಾನೆ. ಆದರೆ ಸಿದ್ದೇಶ್ವರರು ದರ್ಶನ ಕೊಡುವುದಿಲ್ಲ, ಆತನು ರಾಜನ ಮನೆಯಲ್ಲಿ ಗೋವುಗಳನ್ನು ಕಾಯುತ್ತಿರುತ್ತಾನೆ. ಹೀಗೆ ಕಾಲ ಕಳೆಯುವಾಗ, ಅವನಿಗೆ ಸಿದ್ದೇಶ್ವರರನ್ನು ನೋಡುವ ಹಂಬಲ ಹೆಚ್ಚಾಗಿ, ಉಪವಾಸದಿಂದ ಆತನನ್ನು ಧ್ಯಾನಿಸುತ್ತಾನೆ. ಎಷ್ಟು ದಿವಸವಾದರೂ ಸಿದ್ದೇಶ್ವರ ದರ್ಶನ ನೀಡುವುದಿಲ್ಲ.

ಒಂದು ದಿನ ಆತನು ತನ್ನ ಜೀವನದ ಅಂತ್ಯವಾಗಲಿ ನನ್ನ ಪ್ರಾಣವನ್ನು ನಿನ್ನ ಪಾದಕ್ಕೆ ಅರ್ಪಿಸುತ್ತೇನೆ ಎಂದು ಬಹಳ ಯಾತನೆಯಿಂದ ಕುಳಿತಿರುತ್ತಾನೆ. ಆ ಸಮಯದಲ್ಲಿ ಒಂದು ಸರ್ಪ ದಾರಿ ಮಾರ್ಗದಲ್ಲಿ ಬರುತ್ತದೆ. ಅದನ್ನು ನೋಡಿದ ಸಿದ್ದೇಶ್ವರನ ಶಿಷ್ಯನು ಅದನ್ನು ಹಿಡಿದರೆ ನನ್ನನ್ನು ಕಚ್ಚಬಹುದಲ್ಲವೇ ಎಂದು ಅದನ್ನು ಹಿಡಿಯಲು ಹೋಗುತ್ತಾನೆ. ಆ ಸರ್ಪವು ಒಂದು ಸುರಂಗ ಮಾರ್ಗದ ಹತ್ತಿರ ಒಂದು ಗೂಡಿನಲ್ಲಿ ಸೇರುತ್ತದೆ. ಆಗ ಅವನು ಅದರ ಒಳಗೆ ಕೈ ಇಟ್ಟು ತನ್ನ ಜೀವವನ್ನು ತೆಗೆದುಕೊಂಡು ನನ್ನನ್ನು ಕಚ್ಚು ಎಂದು ಹೇಳುತ್ತಾನೆ. ನನಗೆ ಸಿದ್ದೇಶ್ವರರು ದರ್ಶನ ಕೊಡುವುದಿಲ್ಲ ಎಂದು ಹೇಳಿದಾಗ ಆ ಸರ್ಪವು ಮೇಲೆ ಬಂದು ಆತನಿಗೆ ಕ್ಷೀರವನ್ನು ಉಣಿಸುತ್ತದೆ.

ಆತನ ದಣಿವನ್ನು ಹಸಿವನ್ನು ನಿವಾರಣೆ ಮಾಡುತ್ತದೆ. ಆಗ ತಕ್ಷಣವೇ ಜ್ಞಾನೋದಯವಾಗಿ ಸಿದ್ದೇಶ್ವರರ ಮೇಲೆ ವಚನ ನುಡಿದು, ಆತನ ಕಥೆಗಳನ್ನು ಸ್ಮರಣೆ ಮಾಡಿ, ಆತನ ಚರಿತ್ರೆಯನ್ನು ವಚನದ ಮೂಲಕ ಹಾಡುತ್ತಾನೆ. ಆತನು ಕೂಡ ಶ್ರೀ ಸ್ವಾಮಿಯ ಕ್ಷೇತ್ರದಲ್ಲಿ ನಿರ್ವಾಣ ಎನ್ನುವಂತ ಹೆಸರಿನಿಂದ ಇಲ್ಲಿ ಕತೃಗದ್ವಿಜಯ ಗದ್ದುಗೆಯ ಪಕ್ಕದಲ್ಲಿ ನೆಲೆಸಿದ್ದಾರೆ ಮುಂದೆ ಸಿದ್ದೇಶ್ವರರು ಕಾಡು ಮಧ್ಯ ಶಿಷ್ಯರೊಡನೆ ಪ್ರಯಾಣ ಬೆಳೆಸುತ್ತಾರೆ.

ಒಂದು ಹಸು ಏಳು ಕರುಗಳಿಗೆ ಜನನ ನೀಡಿರುತ್ತದೆ. ಆ ಹಸು ರಾಜ ತಿಮ್ಮಪ್ಪನ ನಾಯಕನ ಅರಮನೆಗೆ ಬಂದಂತಹ ಅತಿಥಿಗಳಿಗೆ, ಗುರು ಜಂಗಮರಿಗೆ, ಹಾಲನ್ನುಣಿಸುವಂಥದ್ದು ಆಗಿರುತ್ತದೆ. ಆ ಹಸುವನ್ನು ನೋಡಿ ರಾಕ್ಷಸ ಮಂತ್ರವಾದಿಯಾಗಿ ಜನ್ಮ ಎತ್ತಿದವನು ತನಗೆ ಕೊಡಲೆಂದು ಕೇಳುತ್ತಾನೆ. ಆದರೆ ಹಸುವಿನ ಮಾಲೀಕ ಕೊಡಲುಪುವುದಿಲ್ಲ. ಆದಕಾರಣ ಒಂದು ಹುಲಿಯನ್ನು ಸೃಷ್ಟಿಸಿ ಆ ಹಸುವನ್ನು ಹತ್ಯೆ ಮಾಡಿರುತ್ತಾನೆ. ಆ ಹಸುವಿನ ಗರ್ಭದಲ್ಲಿ ಅಡಗಿರುವಂತೆ ಆ ಏಳು ಕರುಗಳ ಚರ್ಮವನ್ನು ತೆಗೆದು ಯಾರು ಒಬ್ಬ ಶರಣರು ಅದರ ತೊಗಲನ್ನು ಮಾಡುತ್ತಾರೆ. ಯಾರಾದರೂ ಗುರುವರ್ಯರಿಗೆ ಇದನ್ನು ಸಮರ್ಪಿಸಬೇಕು ಎಂದು ಕಾಡಿನಲ್ಲಿ ಕಾಯುತ್ತಿರುತ್ತಾರೆ.

ಅಂತಯೇ ಸಿದ್ದೇಶ್ವರರೂ ಆ ಹಾದಿ ಮಾರ್ಗದಲ್ಲಿ ಹೋಗುವಾಗ ಅವರಿಗೆ ಹೊದಿಕೆಯಾಗಿ ನೀಡುತ್ತಾರೆ. ಆ ಸಂದರ್ಭದಲ್ಲಿ ಈ ರಾಜ್ಯದಲ್ಲಿ ಕ್ಷೇತ್ರದಲ್ಲಿ ಹೊನ್ನಿನ ಮಳೆಗೆರೆಯುತ್ತದೆ. ಅದಕ್ಕೆ ಗ್ರಾಮಕ್ಕೆ ಹುನ್ನಿನ ಕೆರೆ ಎಂದೂ ಕರೆಯುತ್ತಾರೆ. ಯಾವ ಕಾಲದಲ್ಲಿ ಈ ಗ್ರಾಮಕ್ಕೆ ಕ್ಷಾಮ ಬಂದು ಒದಗುತ್ತದೆಯೋ ಅಂದು ಈ ತೊಗಲನ್ನು ಹೊರಗೆ ತೆಗೆದು ಸಕಲ ಬಿರುದಾವಳಿಗಳಿಂದ, ವಿಧಿ ವಿಧಾನದಿಂದ, ಪೂಜಾ ಕೈಂಕರ್ಯ ನೆರವೇರಿಸಿ, ಗ್ರಾಮದೆಲ್ಲೆಡೆ ಇದನ್ನು ಸಂಚರಿಸಿ, ಯಥಾ ಸ್ಥಾನಕ್ಕೆ ಸೇರಿಸಿದರೆ ಮಳೆ ಬೆಳೆ ಸಮೃದ್ಧಿಯಾಗಿ ಆಗುತ್ತದೆ ಎಂದು ಹೇಳಿ ವರದಾನ ಕೊಡುತ್ತಾರೆ.

ಅದೇ ಪದ್ಧತಿಯನ್ನು ಇಂದಿಗೂ ನೆರವೇರಿಸಿಕೊಂಡು ಬಂದಿದ್ದಾರೆ ಆದ್ದರಿಂದ ಇಲ್ಲಿ ಯಾವ ರೋಗ ರುಜಿನಗಳ ಭೀತಿಗಳಿಲ್ಲ, ಕ್ಷೇತ್ರಕ್ಕೆ ಬರುವಂತಹ ಅನೇಕ ಭಕ್ತಾದಿಗಳು, ರಾಜಕೀಯ ವ್ಯಕ್ತಿಗಳು, ತಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಂಡಿದ್ದಾರೆ. ಇತ್ತೀಚೆಗೆ ಕ್ಷೇತ್ರಕ್ಕೆ ರಾಜಕೀಯ ಗುರು ಎಂಬ ಬಿರುದನ್ನು ನೀಡಿದ್ದಾರೆ. ಈ ಗುರು ಗಿರಿ ಸಿದ್ದೇಶ್ವರ ವಿಜೈಕ್ಯ ಕ್ಷೇತ್ರ ಶ್ರೀಮಠ ಎಂದರೆ ಸಾಕ್ಷಾತ್ ಪರಮೇಶ್ವರನೇ ತಾನು ತಾನಾಗಿ ಅವತರಿಸಿ, ತುಂಟ ಮಾಯ ರಾಕ್ಷಸನ ಸಂಹಾರ ಮಾಡಿರುವಂತಹ ಆಯುಧವನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿರುವಂತಹ ಕ್ಷೇತ್ರವಾದ್ದರಿಂದ ಇದಕ್ಕೆ ಶ್ರೀ ಗುರು ಸಿದ್ದೇಶ್ವರ ಸ್ವಾಮಿಯವರ ನಿಜೈಕ್ಯ ಕ್ಷೇತ್ರ ಶ್ರೀಮಠ ಎಂದು ಅವಿದಾನದಿಂದ ಸಾವಿರ ವರ್ಷಗಳ ಹಿಂದೆ ಈ ಕ್ಷೇತ್ರ ನೆಲೆ ನಿಂತಿದೆ. ತಾನು ತಾನಾಗಿಯೇ ಸೃಷ್ಟಿಯಾದ ಸ್ವಾಮಿ ಭೂಸಾಲಿ ಗ್ರಾಮ ಸ್ವಾಮಿಯು ಈ ಕ್ಷೇತ್ರ ಪಾಲಕನಾಗಿ ಇಲ್ಲಿ ರಾರಾಜಿಸುತ್ತಾನೆ.

ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾ, ನೆಲೆ ನಿಂತಿದ್ದಾನೆ. ಹುಣ್ಣಿಮೆಯ ದಿನದಂದು ಬಂದು ಬೆಟ್ಟವನ್ನು ಹತ್ತಿ ಸ್ವಾಮಿಯ ಕೃಪಾ ಕಟಾಕ್ಷವನ್ನು ಪಡೆದರೆ ಸಕಲ ದೋಷ ನಿವಾರಣೆಯಾಗುತ್ತದೆ. ಕೇದಾರನಾಥನ ದರ್ಶನ ಪಡೆದ ಪುಣ್ಯ ಲಭಿಸುತ್ತದೆ ಎನ್ನುವಂತಹ ಪ್ರತಿತಿಯಿದೆ. ಈ ಕ್ಷೇತ್ರದಲ್ಲಿ ಮಾಯ ರಾಕ್ಷಸನ ಸಂಹರಿಸಿದ ದಿನ ಎಂದರೆ ದವನದ ಹುಣ್ಣಿಮೆ ಅಥವಾ ಕಾಮನ ಹುಣ್ಣಿಮೆ ಅನ್ನ ತಕ್ಕಂತಹ ಶ್ರೀ ಶಿವರಾತ್ರಿ ಹಬ್ಬ ಆದಂತಹ ಹುಣ್ಣಿಮೆಯ ದಿನದಂದು ರಾಕ್ಷಸನ ಸಂಹಾರ ಆದಂತಹ ದಿನ.

ಶ್ರೀ ಸ್ವಾಮಿಯ ಮಹಾ ರಥೋತ್ಸವ ಬಹು ವಿಜೃಂಭಣೆಯಿಂದ ಲೋಕ ವಿಕ್ಯಾತವಾಗಿ ನಡೆಯುವಂತಹ ವಿಚಾರ ಮತ್ತು ಕಾರ್ತಿಕ ಮಾಸದಲ್ಲಿ ಶೈಲೇಶ ಮಹಾರಾಜ ಮತ್ತು ಅವನ ಧರ್ಮ ಪತ್ನಿಗೆ ಆಶೀರ್ವಾದ ಮಾಡಿದ ದಿನವಾದ್ದರಿಂದ ಕಾರ್ತಿಕ ಮಾಸದ ಕೊನೆಯ ದಿನ ಇಲ್ಲಿ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನದಾಸೋಹ ವಿಶೇಷ ರೀತಿಯಲ್ಲಿ ನಡೆಯುತ್ತದೆ.

ಎಲ್ಲಾ ರಾಜ್ಯಗಳಿಂದ ಭಕ್ತಾದಿಗಳು ಬಂದು ಸ್ವಾಮಿಗೆ ಸೇವೆ ಸಲ್ಲಿಸಿ ಅವನ ಕೃಪೆಗೆ ಪಾತ್ರರಾಗುತ್ತಾರೆ ಹುಣ್ಣಿಮೆಯ ದಿನ ಇಲ್ಲಿ ಸರ್ಪದೋಷ ಕಾಳಿ ಸರ್ಪದೋಷ ವಿವಾಹ ಆಗದೆ ಇರುವಂತಹ ಅವರಿಗೆ ಶಾಂತಿ ಕರ್ಮಗಳನ್ನು ಯಜ್ಞಗಳನ್ನು ಅಭಿಷೇಕ ಪೂಜೆ ಬಹು ವಿಶೇಷ ರೀತಿಯಲ್ಲಿ ನಡೆಯುತ್ತದೆ.

ಶ್ರೀ ಸ್ವಾಮಿಯವರ ಆಶೀರ್ವಾದ ಹೀಗೆಂದರೆ ಶ್ರೀ ಸ್ವಾಮಿಯವರು ಇಲ್ಲಿ ನೆಲೆಸಿದ ನಂತರ ನಾಡಿನಲ್ಲಿ ಪ್ರಥಮ ಬಾರಿಗೆ ಮೈಸೂರಿನ ಅರಸರಿಗೆ ಶ್ರೀ ಪೀಠದಲ್ಲಿ ಶ್ರೀ ಸ್ವಾಮಿಯವರು ಮುಂದೆ ಹೋಗುವುದನ್ನು ಬರವಣಿಗೆಯ ಮೂಲಕ ಹೇಳಿದಂತ ಕ್ಷೇತ್ರ ಇತ್ತೀಚಿಗೆ ಇದು ರೀತಿಯ ಬರವಣಿಗೆಯ ಮೂಲಕ ಜಾತಕ ಹೇಳುವುದು ನಾನಾ ಕಡೆ ಅನೇಕ ಪೀಠಗಳು ಉದ್ಭವಿಸಿವೆ. ಮೈಸೂರಿನ ಅರಸರು ಜ್ಯೋತಿಷ್ಯ ಹೇಳಿದ ಸವಿ ನೆನಪಿಗಾಗಿ ಈ ಕ್ಷೇತ್ರಕ್ಕೆ ನಂದಿದ್ವಜವನ್ನು ಸುವರ್ಣ ಶಲ್ಯವನ್ನು ಧ್ಯಾನವಾಗಿ ನೀಡಿದ್ದಾರೆ ಎಂಬ ದಾಖಲೆ ಈಗಲೂ ಕೂಡ ಇದೆ.

ಅನಾದಿ ಕಾಲದಿಂದಲೂ ಬರವಣಿಗೆಯ ಮುಖಾಂತರ ಜ್ಯೋತಿಷ್ಯವನ್ನು ಹೇಳುತ್ತಾರೆ ಎನ್ನುವಂಥದ್ದು ಈ ಕ್ಷೇತ್ರದ ಮಹತ್ವ.