ಮನೆ ಯೋಗಾಸನ ಮುದ್ರೆಗಳು: ಭಾಗ-3

ಮುದ್ರೆಗಳು: ಭಾಗ-3

0

ಸೂರ್ಯ ಮುದ್ರೆ: ಉಂಗುರ ಬೆರಳಿನ ತುದಿಯನ್ನು ಹೆಬ್ಬೆರಳಿನ ಬುಡದಲ್ಲಿರಿಸಿ ಹೆಬ್ಬೆರಳಿನಿಂದ ಹಗುರವಾಗಿ ಒತ್ತಡ ನೀಡಿ. ಯಾವುದೇ ಅನುಕೂಲಕರ ಆಸನದಲ್ಲಿ ಕುಳಿತು ಎರಡು ಹೊತ್ತು 15-20 ನಿಮಿಷ ಮಾಡಬಹುದು. ಇದನ್ನು ಬೇಸಿಗೆಯಲ್ಲಿ ಹೆಚ್ಚು ಮಾಡಕೂಡದು. ದೇಹದ ಉಷ್ಣತೆಯಲ್ಲಿ ಹೆಚ್ಚಳ, ಉದ್ವೇಗ(anxiety), ಅಸ್ತಮಾ, ಅಲರ್ಜಿ, ಆಲಸ್ಯ, ಶೀತ, ಸೈನಸ್, ಕ್ಷಯ, ನ್ಯುಮೋನಿಯ ಗುಣವಾಗುತ್ತದೆ. ಮಾನಸಿಕ ಒತ್ತಡ, ಕಡಿಮೆ ಮಲಬದ್ಧತೆ ದೂರಾ, ಜೀರ್ಣಕ್ರಿಯೆ ಉತ್ತಮ, ಅತಿಯಾದ ಕೊಬ್ಬು ಕರಗುತ್ತದೆ (weight loss), ಬೆವರು ಬರಿಸುತ್ತದೆ, ಮಧುಮೇಹ, ಥೈರಾಯ್ಡ್, ಕಡಿಮೆ ರಕ್ತದೊತ್ತಡ (ಲೋ ಬಿಪಿ), ಆಕೃತಿಗಳು ಒತ್ತಡ ಶಮನ, ರಕ್ತದಲ್ಲಿ ಅನಪೇಕ್ಷಿತ ಕೊಲೆಸ್ಟ್ರಾಲ್ ನಿವಾರಣೆ.

ವಿಶೇಷ ಸೂಚನೆ :- ತೀರ ದುರ್ಬಲರು ಒಂದೆರಡು ನಿಮಿಷ ಮಾಡಿ ನೋಡಿ. ಬದಲಾವಣೆ ಗಮನಿಸಿ. ಸಾಧ್ಯ ಎನ್ನಿಸಿದರೆ ಮಾತ್ರ ಮಾಡಿ, ಇಲ್ಲದಿದ್ದರೆ ಬೇಡ.

ಪೃಥ್ವಿ ಮುದ್ರೆ :- ಅನಾಮಿಕ ಅಥವಾ ಉಂಗುರ ಬೆರಳ ತುದಿಯನ್ನು ಹೆಬ್ಬೆರಳಿನ ತುದಿಗೆ ಒತ್ತಡವಿಲ್ಲದೆ ತಾಕಿಸುವುದು, ಉಳಿದ ಬೆರಳುಗಳು ನೇರವಾಗಿರಲಿ, ಇದನ್ನು ಯಾವುದೇ ಅನುಕೂಲಕರ ಆಸನದಲ್ಲಿ ಕುಳಿತು ಎಲ್ಲಿ ಬೇಕಾದರೂ ಎಷ್ಟು ಹೊತ್ತುಬೇಕಾದರೂ, ಆಚರಿಸಬಹುದು. ಕನಿಷ್ಠ 40 ನಿಮಿಷ ಅಚರಿಸಬಹುದು. ಯೋಗ ವಿಧಾನದಲ್ಲಿ ತಿಳಿಸಿದಂತೆ ನಮ್ಮ ಭ್ರೂಮಧ್ಯದಲ್ಲಿ ಎರಡು ಹುಬ್ಬುಗಳ ನಡುವೆ ಅಜ್ಞಾಚಕ್ರ ಅಥವಾ ಪ್ರಜ್ಞಚಕ್ರವಿದೆ. ನಾವು ಅನಾಮಿಕ ಇಲ್ಲವೇ ಹೆಬ್ಬೆರಳಿನಿಂದ ಯಾರ ಹಣೆಯನ್ನು ಭ್ರೂಮಧ್ಯವನ್ನು ಸ್ಪರ್ಶಿಸಿ ಕುಂಕುಮ ಮತ್ತು ಗಂಧವನ್ನು ಇರಿಸಿದರೆ, ಅವರಲ್ಲಿ ಅದೃಶ್ಯ ಚೈತನ್ಯ ಶಕ್ತಿ ಪ್ರಜ್ವಲಿತವಾಗುತ್ತದೆ. ಮನೋದೈಹಿಕ, ದೌರ್ಬಲ್ಯಗಳನ್ನು ದೂರಗೊಳಿಸಿ, ಲವಲವಿಕೆ, ದೃಢತೆ (weight gain) ತೇಜಸ್ಸು ಮತ್ತು ಮಾನಸಿಕ ಶಾಂತಿ ನೀಡುತ್ತದೆ. ಅಭ್ಯಾಸ ಸಂಕುಚಿತ ಬುದ್ಧಿ ದೂರವಾಗಿ ನ್ಯಾಯ, ನೀತಿ, ಉದಾರತೆ, ಸೇವಾ ಭಾವನೆ ಬೆಳೆಯುತ್ತದೆ. A, B, C, D, E ಈ ಇತ್ಯಾದಿ ಜೀವ ಸತ್ವಗಳ ಕೊರತೆ ದೂರ, ಎಲುಬಿನ ಸಮಸ್ಯೆ, ಉರಿತದ ಅನುಭವ, ಗಾಯ, ಹುಣ್ಣು ಇತ್ಯಾದಿ ವಾಯುವಿಕೆ ಬೇಗ, ಜೀವಕೋಶಗಳ ಪುನರುಜ್ಜೀವನ, ಪೋಲಿಯೋ, ದೃಷ್ಟಿ ದೋಷವಾಸಿ.

ವರುಣಮುದ್ರೆ (ಭುದಿ ಮುದ್ರೆ) :- ಕಿರುಬೆರಳಗಳ ತುದಿಯನ್ನು ಹೆಬ್ಬೆರಳಿನ ತುದಿಗೆ ತಾಕಿಸುವುದು. ಈ ಮುದ್ರೆಯನ್ನು ಅವಶ್ಯಕವಿದ್ದಾಗ, ಅದು ಗರಿಷ್ಠ 20 ನಿಮಿಷಗಳ ಮಾತ್ರ ಮಾಡಬೇಕು. ಸಮಸ್ಯೆ ನಿವಾರಣೆ ಆಗುತ್ತಲೇ ಅಭ್ಯಾಸವನ್ನು ನಿಲ್ಲಿಸಬೇಕು. (ಕಫ ಪ್ರಾಕೃತಿಯವರೆಗೆ ಇದು ನಿಶಿದ್ಧ) ಈ ಮುದ್ರೆ ಅಭ್ಯಾಸದಿಂದ ದೇಹದ ಶುಷ್ಕ ತ್ವಚೆ ನಿವಾರಣೆಯಾಗುತ್ತದೆ. ರಕ್ತ ಶುದ್ದಿ ಚರ್ಮರೋಗ ವಾಸಿ, ಸೋರಿಯಾಸಿಸ್, ಗ್ಯಾಸ್ಟ್ರಿಕ್, ಉಷ್ಣತೆ ಮತ್ತು ನಿರ್ಜಲೀಕರಣ ತೊಂದರೆ ದೂರ, ಚರ್ಮದಲ್ಲಿ ತುರಿಕೆಯಾದರೆ ಈ ಮುದ್ರೆಯಿಂದ ವಾಸಿ.

ಚರ್ಮದ ಕಾಂತಿಯ ಹೆಚ್ಚುತ್ತದೆ. ಮಲಬದ್ಧತೆ ವಾಸಿ, ವಾಯು ಸೆಳೆತ(cramps)ಗಳಿಂದ ಉಂಟಾಗುವ ನೋವು ನಿವಾರಣೆ. ರಕ್ತಶುದ್ಧಿ ಮತ್ತು ರಕ್ತ ಸಂಚಾರ ಸುಗ̧ಮ ಅಯೋಡಿನ್ ಮತ್ತು ಪೊಟ್ಯಾಶಿಯಂ ಕೊರತೆ ದೂರಿ, ಕಣ್ಣು ಉರಿ, ಒಣ ಕೆಮ್ಮು, ತಕ್ಷಣ ನಿವಾರಣೆ, ಮೂರ್ಚಿತ ವ್ಯಕ್ತಿಯ ಹೆಬ್ಬೆರಳು ಮತ್ತು ಕಿರುಬೆರಳು ಸೇರಿಸಿ ಉಜ್ಜಿದರೆ ತಕ್ಷಣ ಪ್ರಜ್ಞೆ ಬರುತ್ತದೆ. ಶುಷ್ಕತ್ವಚೆ ನಿವಾರಣೆ. ಬಿಸಿಲಿನಲ್ಲಿ ಈ ಮುದ್ರೆಯಿಂದ ಬಾಯಾರಿಕೆ ಮತ್ತು ಆಯಸ್ಸು ನೀಡುತ್ತದೆ.

ಅಪಾನ ಮುದ್ರೆ :- ನಡುವೆರಡು ಮತ್ತು ಉಂಗುರ ಬೆರಳು ತುದಿಗಳನ್ನು ಹೆಬ್ಬೆರಳ ತುದಿಗೆ ತಾಕಿಸಿ, ಉಳಿದ ಬೆರಳು ನೇರವಾಗಿರಲಿ. ಅಗ್ನಿ, ಆಕಾಶ ಮತ್ತು ಭೂತತ್ವಗಳು ಸಂಲಗ್ನವಾಗಿ ಹೊಟ್ಟೆಯ ಸಮಸ್ತ ಅಂಗಾಂಗಗಳನ್ನು ಸಕ್ರಿಯಗೊಳಿಸುತ್ತದೆ. ಈ ಮುದ್ರಾ ಹೃದಯದ ದೃಷ್ಟಿಯಿಂದ ಮುಖ್ಯವಾಗಿದ್ದು, ಇಡೀ ದೇಹದ ನಿರ್ಮಲೀಕರಣಕ್ಕೆ ಸಹಾಯವಾಗುತ್ತದೆ. (ಮಲ, ಮೂತ್ರ, ಬೆವರುಗಳನ್ನು ಸುಲಭವಾಗಿ ಶುದ್ಧಿ ಮಾಡುತ್ತದೆ) ಸಾಧನೆ ಮಾಡುವಾಗ ಪ್ರಾಣ ಮುದ್ರೆ ಮತ್ತು ಅಪಾನ ಮುದ್ರೆಗಳನ್ನು ಸರಿ ಸಮಸ್ಯೆ ಮಾಡುವುದೇ ಒಂದು ಯೋಗವು. ಇದು ವಿಷ ವಸ್ತು(toxins)ಗಳನ್ನ ಹೊರಹಾಕುತ್ತದೆ. ಹೊಟ್ಟೆಗೆ ತುಂಬಾ ಉಪಯೋಗಿ ಹೃದಯರೋಗ ನಿತ್ಯ 40̲45 ನಿಮಿಷಗಳ ಅಭ್ಯಾಸ ಮಲಬದ್ಧ̧ತೆ ಮೂಲ್ಯವಾ̧ದಿ ಸಮಸ್ತ ವಾಯುವಿಕಾರ, ಮಧುಮೇಹ, ಮೂತ್ರವರೋಧ, ಮೂತ್ರಪಿಂಡಗಳ ದೋಷ ದಂತ ವಿಕಾರ ದೂರ, ( ಎಚ್ಚರಿಕೆ ಈ ಮುದ್ರೆಯಿಂದ ಮೂತ್ರಅಧಿಕ ) ಮೂತ್ರ ಕಟ್ಟಿದರೆ ಹಲವು ನಿಮಿಷಗಳ ಅಭ್ಯಾಸದಿಂದ ಸರಳ ಮೂತ್ರ ವಿಸರ್ಜನೆಗೆ ಸಾಧ್ಯ. ಗರ್ಭಿಣಿ ಸ್ತ್ರೀಯರು 8ನೇ ತಿಂಗಳಿನಿಂದ ನಿತ್ಯ 41-45 ನಿಮಿಷಗಳ ಅಭ್ಯಾಸ ಮಾಡಿದರೆ ಸಹಜ ಸುಲಭ ಹೆರಿಗೆ ಆಗುತ್ತದೆ. (ಇಂದಿನ ಅನಾವಶ್ಯಕ ಶಸ್ತ್ರಕ್ರಿಯೆ ತಪ್ಪಿಸಬಹುದು) ಸಕ್ಕರೆಕಾಯಿಲೆ ನಿಯಂತ್ರಣಕ್ಕೆ ಇದು ತುಂಬಾ ಸಹಾಯಕ. ಬೆಳಿಗ್ಗೆ 40-45 ನಿಮಿಷಗಳ ಮಾಡಿ ತಕ್ಷಣ ಪ್ರಾಣಮುದ್ರೆಯನ್ನು ಮಾಡಬೇಕು. ಸತತ ಅಭ್ಯಾಸದಿಂದ ಬಾಯಿ, ಮೂಗು, ಕಿವಿ, ಕಣ್ಣುಗಳ ಆರೋಗ್ಯಕ್ಕೆ ಸಹಾಯಕಾರಿ.

ಹಲವು ದಿನಗಳಿಂದ ಮೂತ್ರ ಕಟ್ಟಿದ್ದು ಔಷಧಿ, ಇಂಜೆಕ್ಷನ್ ಗಳು ಕೂಡ ಪರಿಣಾಮ ಬೀರದಿದ್ದಾಗ 45-60 ನಿಮಿಷಗಳ ಅಭ್ಯಾಸದಿಂದ ಮೂತ್ರ ವಿಸರ್ಜನೆಯಾದ ಉದಾಹರಣೆಗಳಿವೆ.