ಮನೆ ರಾಜ್ಯ ಎಚ್​ಡಿಕೆ: ರಾತ್ರಿ 2 ಗಂಟೆಗೆ ಆ ನಿರ್ಧಾರ ತೆಗೆದುಕೊಳ್ಳದೇ ಹೋಗಿದ್ದರೆ ಜೀವನಪೂರ್ತಿ ಹಾಸಿಗೆಯಲ್ಲೇ ಇರಬೇಕಾಗಿತ್ತು!

ಎಚ್​ಡಿಕೆ: ರಾತ್ರಿ 2 ಗಂಟೆಗೆ ಆ ನಿರ್ಧಾರ ತೆಗೆದುಕೊಳ್ಳದೇ ಹೋಗಿದ್ದರೆ ಜೀವನಪೂರ್ತಿ ಹಾಸಿಗೆಯಲ್ಲೇ ಇರಬೇಕಾಗಿತ್ತು!

0

ಬೆಂಗಳೂರು: ಅನಾರೋಗ್ಯದ ಕಾರಣ 4 ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಅವರು ಗುಣಮುಖರಾಗಿದ್ದು, ಇಂದು ಅಫೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಡಿಸ್ಚಾರ್ಜ್‌ ಆದ ಬಳಿಕ ತಮಗೆ ಚಿಕಿತ್ಸೆ ನೀಡಿದ್ದ ವೈದ್ಯರೊಂದಿಗೆ ಹೆಚ್‌ಡಿಕೆ ಸುದ್ದಿಗೋಷ್ಠಿ ನಡೆಸಿದರು. ಬಹೆಚ್‌ಡಿಕೆ ಮಾತನಾಡಿ ತಮ್ಮ ಆರೋಗ್ಯ ಕುರಿತು ಮಾಹಿತಿ ಹಂಚಿಕೊಂಡಿದ್ದು, ಕಳೆದ 5 ದಿನದಿಂದ ಸ್ನೇಹಿತರು ಆಘಾತದಲ್ಲಿ, ಭಯದ ವಾತಾವರಣದಲ್ಲಿ ಇದ್ದರು. ಮೊದಲಿಗೆ ಭಗವಂತನಿಗೆ, ಜನ್ಮ ಕೊಟ್ಟ ತಂದೆತಾಯಿಗೆ ನಮಿಸುತ್ತೇನೆ. ನನಗೆ ಪುನರ್ಜನ್ಮ ನೀಡಿದ ವೈದ್ಯರಿಗೆ ಆಭಾರಿಯಾಗಿದ್ದೇನೆ ಎಂದಿದ್ದಾರೆ.

ಇಂದು ರಾಜಕೀಯ ಹೊರತುಪಡಿಸಿ ಮಾತಾಡ್ತೀನಿ , ಮುಂದಿನ ತಿಂಗಳು ರಾಜಕೀಯದ ಬಗ್ಗೆ ಮಾತನಾಡೋಣ. ಅವತ್ತು ರಾತ್ರಿ ತೋಟದ ಮನೆಯಲ್ಲಿದ್ದೆ. ರಾತ್ರಿ 2 ಗಂಟೆಯಲ್ಲಿ ಎಚ್ಚರವಾಯ್ತು, ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದಾಗ ಸತೀಶ್ ಅವರಿಗೆ ತಿಳಿಸಿದೆ. ಆಗ ಕೂಡಲೇ ಅಸ್ಪತ್ರೆಗೆ ಬರಲು ತಿಳಿಸಿದರು. ಆ ನಂತರ ಕೇವಲ 20 ನಿಮಿಷದಲ್ಲಿ ಆಸ್ಪತ್ರೆಗೆ ಬಂದೆ. ನನಗೆ ಬಂದ ಜೀವನ್ಮರಣದ ಪ್ರಶ್ನೆ, ಅದನ್ನ ಹೇಳಲು ಆಗೊಲ್ಲ ಎಂದಿದ್ದಾರೆ.

ಬಡವ ಆಗಲಿ, ಶ್ರೀಮಂತ ಆಗಲಿ ಪಾರ್ಶ್ವವಾಯು ಆದ ತಕ್ಷಣ ಆಸ್ಪತ್ರೆಗೆ ಬರಬೇಕು. ಬೆಳಗ್ಗೆ ನೋಡೋಣ ಎಂದು ಸಮಯ ತಳ್ಳಬಾರದು. ಗೋಲ್ಡನ್ ಅವರ್​​ನಲ್ಲಿ ಆಸ್ಪತ್ರೆಗೆ ದಾಖಲಾಗಬೇಕು. ನನಗೆ ಇದು ಮೂರನೇ ಜನ್ಮ, 60 ವರ್ಷದಲ್ಲಿ ಇದು ನನಗೆ 3 ನೇ ಜನ್ಮವಾಗಿದೆ. ಇಂದು ನಾನು ಉಳಿದಿದ್ರೆ, ಅದು ವೈದ್ಯರಿಂದ. ಅವತ್ತು ನಾನು ಬೆಳಗ್ಗೆ ಆಸ್ಪತ್ರೆಗೆ ಹೋಗೋಣ ಎಂದು ಸುಮ್ಮನಿದಿದ್ರೆ ಇಂದು ಇಷ್ಟು ಸರಾಗವಾಗಿ ನಿಮ್ಮ ಮುಂದೆ ಮಾತನಾಡಲು ಆಗ್ತಿರಲಿಲ್ಲ ಎಂದು ಹೇಳಿದ್ದಾರೆ.

ಡಾ ಸತೀಶ್ ಚಂದ್ರ ಅವರು ಆಸ್ಪತ್ರೆಗೆ ಬಂದ ತಕ್ಷಣ ಚಿಕಿತ್ಸೆ ಶುರು ಮಾಡಿದ್ರು, ಅವರ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ನಾನು 1 ಗಂಟೆ ಅವಧಿಯಲ್ಲೆ ಸಹಜ ಸ್ಥಿತಿಗೆ ಬಂದೆ. ಹೀಗಾಗಿ ಅವರಿಗೆ ತುಂಬು ಹೃದಯದ ಧನ್ಯವಾದ.ಎರಡು ಬಾರಿ ಹೃದಯ ವಾಲ್ವ್ ಶಸ್ತ್ರ ಚಿಕಿತ್ಸೆ ಆಗಿತ್ತು. ನಾನು 2 ನೇ ಬಾರಿ ಸಿಎಂ ಆದಾಗ ವಾಲ್ಮೀಕಿ ಜಯಂತಿ ದಿನ ಮಾಧ್ಯಮ ವೊಂದರ ವರದಿ ನೋಡಿ, ನನ್ನ ಎಡಭಾಗದ ಸ್ವಾಧೀನ ಕಳೆದುಕೊಂಡತಾಯಿತು. ಆಗ ವೈದ್ಯರು ಕೂಡಲೇ ಬಂದು ಚಿಕಿತ್ಸೆ ಮಾಡಿದ್ರು, ಈಗ ಎರಡನೇ ಬಾರಿ ಪಾರ್ಶ್ವವಾಯು ಆಗಿದೆ. ನಾಲ್ಕು ಬಾರಿ ಆಸ್ಪತ್ರೆಗೆ ದಾಖಲಾಗಿ ಉಳಿದು ಬಂದಿದ್ದೇನೆ. ಪಾರ್ಶ್ವವಾಯು ಆದ ತಕ್ಷಣ ಆಸ್ಪತ್ರೆಗೆ ದಾಖಲಾಗಿ. ಬಡವರಾದವರು ಹಣದ ಬಗ್ಗೆ ಚಿಂತಿಸಬೇಡಿ, ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ. ನಾನೇನಾದ್ರು ರಾತ್ರಿ 2 ಗಂಟೆ ಬೆಳಗ್ಗೆ ಆಸ್ಪತ್ರೆಗೆ ಹೋಗೊಣ ಎಂದು ಸುಮ್ಮನೆ ಇದ್ದಿದ್ದರೆ ಜೀವನಪೂರ್ತಿ ಹಾಸಿಗೆ ಮೇಲೆಯೇ ಇರಬೇಕಾಗಿತ್ತು ಎಂದು ತಿಳಿಸಿದ್ದಾರೆ.

ಚಂದ್ರಯಾನ ಯಶಸ್ವಿಯಾಗಿರುವ ನಮ್ಮ ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲೂ ಸಾಕಷ್ಟು ಮುಂದಿದೆ.ಉತ್ತಮ ಸೇವಾ ಮನೋಭಾವ ಇರುವ ವೈದ್ಯರು ಇದ್ದಾರೆ. ವೈದ್ಯರು ನನ್ನ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇನ್ಮುಂದೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಹೇಳಿದ್ದಾರೆ.

ಹಿಂದಿನ ರೀತಿ ನನ್ನನ್ನ ಬಳಕೆ ಮಾಡಿಕೊಂಡಂತೆ, ನಾಡಿನ ಜನತೆ ಇನ್ನು ಮುಂದಿನ ದಿನದಲ್ಲಿ ಬಳಸಿಕೊಳ್ಳುವುದನ್ನ ಕಡಿಮೆ ಮಾಡಿ. ನನ್ನನ್ನ ಅವಲಂಬಿಸಿರುವವರು ಸ್ವಲ್ಪ ಯೋಚಿಸಿ, ಕಾಳಜಿ ವಹಿಸಿ. ಇನ್ನು ಮುಂದೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೇನೆ ಎಂದು ನುಡಿದಿದ್ದಾರೆ.