ಮನೆ ಅಪರಾಧ ಸಾಧ್ವಿ ರಿತಂಬರ ಅವರ ಆಶ್ರಮ ಶಾಲೆಯ ನಾಲ್ವರು ಬಾಲಕಿಯರ ಸಾವು

ಸಾಧ್ವಿ ರಿತಂಬರ ಅವರ ಆಶ್ರಮ ಶಾಲೆಯ ನಾಲ್ವರು ಬಾಲಕಿಯರ ಸಾವು

0

ಖಾಂಡವಾ: ಮಧ್ಯಪ್ರದೇಶದ ಖಾಂಡವಾ ಜಿಲ್ಲೆಯಲ್ಲಿ ಸಾಧ್ವಿ ರಿತಂಬರ ಅವರು ನಡೆಸುವ ಆಶ್ರಮದ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ನಾಲ್ವರು ಬಾಲಕಿಯರು ಬುಧವಾರ ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮಾಂಧಾತಾ(ಓಂಕಾರೇಶ್ವರ) ಪೊಲೀಸ್‌ ಠಾಣಾ ವ್ಯಪ್ತಿಯ ಕೋಠಿ ಎಂಬ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಅವಘಡ ಸಂಭವಿಸಿದೆ. ಮೃತಪಟ್ಟ ಬಾಲಲಕಿಯರು 10-11 ವರ್ಷದವರಾಗಿದ್ದು, 5ನೇ ತರಗತಿ ವಿದ್ಯಾರ್ಥಿಗಳು. ಸ್ನಾನಕ್ಕೆಂದು ಕಾಲುವೆಗೆ ತೆರಳಿದ್ದ ಸಂದರ್ಭ ಓರ್ವ ಬಾಲಕಿ ಮುಳುಗಿದ್ದು, ರಕ್ಷಿಸಲು ಪ್ರಯತ್ನಿಸಿದ ಉಳಿದು ಮೂವರು ನೀರು ಪಾಲಾಗಿದ್ದಾರೆ.

‘ಮೃತ ಬಾಲಕಿಯರು ಖರಗೋನ ಜಿಲ್ಲೆಗೆ ಸೇರಿದವರಾಗಿದ್ದಾರೆ. ಶವಗಳನ್ನು ಕಾಲುವೆಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಬಲರಾಮ್‌ ಸಿಂಗ್‌ ತಿಳಿಸಿದ್ದಾರೆ.