ಮನೆ ಯೋಗಾಸನ ಮುದ್ರೆಗಳು: ಭಾಗ -3

ಮುದ್ರೆಗಳು: ಭಾಗ -3

0

ಅಪಾನ ವಾಯುಮುದ್ರೆ (ಹೃದಯಮುದ್ರೆ ಅಥವಾ ಮೃತಸಂಜೀವಿನಿ ಮುದ್ರೆ )  :-

ಇದು ಅಪಾನ ಮುದ್ರೆ ಮತ್ತು ವಾಯು ಮುದ್ರೆಗಳ ಸಂಯುಕ್ತ ಕ್ರಿಯೆ ತೋರುಬೆರಳನ್ನು ಮಡಚಿ ಹೆಬ್ಬೆರಳಿನಿಂದ ಒತ್ತಿರುವಂತೆಯೇ, ನಡು ಬೆರಳು ಮತ್ತು ಉಂಗುರ ಬೆರಳುಗಳ ತುದಿಗಳನ್ನು ಹೆಬ್ಬೆರಳ ತುದಿಗೆ ತಾಕಿಸಿ, ಕಿರುಬೆರಳುಗಳನ್ನು ನೇರವಾಗಿ ಚಾಚುವುದು. ಇದು ಅತ್ಯಂತ ಸಂಕೀರ್ಣವಾದ ಮತ್ತು ಅಷ್ಟೇ ಪ್ರಬಲವಾದ ಮುದ್ರೆಯಾಗಿದೆ. ಜಠರದಲ್ಲಿ ಸೇರುವ ವಾಯುವಿನ ಏರುತಡದಿಂದಲೇ ಬಹುತೇಕ ಹೃದಯಘಾತಗಳು ಸಂಭವಿಸುತ್ತದೆ. ಎಂಬುದು ಕಠೋರ ಸತ್ಯ.

ಆದ ಕಾರಣ ಹೃದ್ರೋಗಿಗಳು ಕರೆದ ತಿಂಡಿ, ಎಣ್ಣೆ ಪದಾರ್ಥ, ಜಿಡ್ಡು, ಕೊಬ್ಬು ಇರುವ ಆಹಾರ ಪದಾರ್ಥಗಳಿಂದ ದೂರವಿರಬೇಕು. ಸ್ವತಃ ನೀವೇ ಪರೀಕ್ಷಿಸಿ ನೋಡಿ ಬೆಟ್ಟ ಅಥವಾ ಬಹು ಮಹಡಿಯ ಮೆಟ್ಟಿಲು ಹತ್ತುವ ಪೂರ್ವದಲ್ಲಿ 5 ರಿಂದ 10 ನಿಮಿಷ ಈ ಮುದ್ರೆ ಮಾಡಿ, ಆಗ ತೀವ್ರ ಹೃದಯ ಬಡಿತವಿಲ್ಲದೆ, ನಿರಾಸಾಯವಾಗಿ, ಏದುಸಿರು ಬಿಡದೆ ಹತ್ತಬಲ್ಲಿರಿ. ವಿಶೇಷತಃ ಈ ಮುದ್ರೆ ಹೃದಯದ ಕಾರ್ಯ ಚಟುವಟಿಕೆಗಳಿಗೆ ಪ್ರಬಲ ಚೈತನ್ಯ ನೀಡುತ್ತದೆ. ಹೃದಯಘಾತ ಸೂಚನೆ ಕಂಡಾಗ ಈ ಮುದ್ರೆಯನ್ನು ತಕ್ಷಣ ಇಂಜೆಕ್ಷನ್ ನೀಡಿದಂತೆ ಕೆಲಸ ಮಾಡಿ ವ್ಯಕ್ತಿ ಚೇತರಿಸಿಕೊಳ್ಳುತ್ತಾನೆ. ಈ ಮುದ್ರೆಯನ್ನು ಪ್ರತಿಸಲ 5 ನಿಮಿಷಗಳಂತೆ ಎಷ್ಟು ಬಾರಿ ಬೇಕಾದರೂ ಮಾಡಬಹುದು. ಹೃದ್ರೋಗಿಗಳು, ಹೆಚ್ಚು ರಕ್ತದೊತ್ತಡ ಇರುವವರು ಈಗಾಗಲೇ ಹೃದಯಘಾತವಾದರೂ ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ನಿಯಮಿತವಾಗಿ 20-25 ನಿಮಿಷ ಮಾಡುತ್ತಿದ್ದರೇ ಅವರು ಆ ರೋಗದಿಂದ ಮುಕ್ತರಾಗಬಹುದು. ಎದೆಯಲ್ಲಿ ಸ್ವಲ್ಪ ಚಳಕು ನೋವು, ಒತ್ತಡ, ಆಯಾಸ, ತೀವ್ರ ಬೆವರಿಕೆ ಇತ್ಯಾದಿ ಚಿಹ್ನೆಗಳು ತೋರಿದೊಡನೆ ಈ ಮುದ್ರೆಯನ್ನು ಮಾಡಿದರೆ, ತಕ್ಷಣ ಚೇತರಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಹೃದಯಾಘಾತವಾದಾಗ ಕೂಡ ತಕ್ಷಣ ಈ ಮುದ್ರೆ ಮಾಡಿದರೆ ಕೇವಲ 10-15 ನಿಮಿಷದಲ್ಲಿ ಇಂಜೆಕ್ಷನ್ ಮತ್ತು ಮಾತ್ರೆ ಕೊಟ್ಟಂತ ಕೆಲಸ ಮಾಡಿ ವ್ಯಕ್ತಿಯನ್ನು ಸಾವಿನ ದವಡೆಯಿಂದ ರಕ್ಷಿಸುತ್ತದೆ. ಆರೋಗ್ಯ ವೃದ್ಧಿ, ನಿದ್ರಾನಾಶ ಮತ್ತು ಮಾನಸಿಕ ಒತ್ತಡದಿಂದ ದೇಹಯಾಸದಿಂದ ಉಂಟಾದ ರಕ್ತನಾಳಗಳಲ್ಲಿ ತೊಂದರೆಯಾಗಿ ಬರುವ ತಲೆನೋವು, ಮೈಗ್ರೇನ್, ಹಲ್ಲುನೋವು ಮೂಲವ್ಯಾಧಿ, ಮಲಬದ್ಧತೆ, ಗ್ಯಾಸ್ಟ್ರಿಕ್ ತೊಂದರೆ ನಿವಾರಣೆ, ವಾತರೋಗ ದೂರ ಇರುವವರಿಗೆ ಕೂಡ ವಿಶೇಷ ಪ್ರಯೋಜನಕಾರಿ ಆಗುತ್ತದೆ.

ಸಂಧಿಮುದ್ರೆ :-ಇದು ಬಲಗೈನಿಂದ ಪೃಥ್ವಿ ಮುದ್ರೆ ಮತ್ತು ಎಡಗೈನಿಂದ ಆಕಾಶ ಮುದ್ರೆಗಳನ್ನು ಮಾಡುವ ಸಂಯುಕ್ತ ಕ್ರಿಯೆಯಾಗಿದ್ದು ಸಂಧಿವಾತದ ಕಾರಣಕ್ಕಾಗಿ ಬರುವ ಮಂಡಿನೋವು, ಕೀಲುನೋವು, ಬೆನ್ನು ನೋವು, ಕಂಪ್ಯೂಟರ್ ಮುಂದೆ ಕುಳಿತು ಸತತ ಕೆಲಸ ಮಾಡಿದ್ಯಾ ಸಮಸ್ಯೆ ಇತ್ಯಾದಿಗಳಿಗೆ ರಾಮಬಾಣವಾಗಿದೆ. ಸಂದುಗಳಲ್ಲಿ ಸ್ನಾಯುಗಳ ಕಾರ್ಯವನ್ನು ಬಲಗೊಳಿಸಿ ಶಕ್ತಿ ಹೆಚ್ಚಿಸುತ್ತದೆ. ದಿನ ಪ್ರತಿ 15 ನಿಮಿಷ ಕಾಲ ಮಾಡಿ ತಕ್ಷಣ 10 ನಿಮಿಷ ಪ್ರಾಣಮುದ್ರೆ ಮಾಡಬೇಕು. ಜೊತೆಯಲ್ಲಿ ದೀರ್ಘ ಶ್ವಾಸೋಛ್ವಾಸದೊಂದಿಗೆ ಪ್ರಾಣಾಯಾಮ ಅತ್ಯಂತ ಫಲಪ್ರದ. ಬಹಳ ದಿನಗಳ ಸಂಧಿವಾತದ ತೊಂದರೆಗೆ ಪ್ರಾರಂಭದಲ್ಲಿ ದಿನ ಪ್ರತಿ ಎರಡು ಹೊತ್ತು ಅಭ್ಯಾಸ ಮಾಡಿದರೆ ಶೀಘ್ರ ಪರಿಣಾಮಕಾರಿ .

ಲಿಂಗ ಮುದ್ರೆ (ಶಿವಮುದ್ರೆ) :- ಎರಡೂ ಕೈಗಳನ್ನು ಎಲ್ಲಾ ಹೆಬ್ಬೆರಳುಗಳನ್ನು ಪರಸ್ಪರ ಹೆಣೆದು ಸೇರಿಸಿ, ಎಡಗೈ ಹೆಬ್ಬೆರಳನ್ನು ನೇರವಾಗಿರಿಸಿ. ಬಲಗೈ ಹೆಬ್ಬೆರಳು ಮತ್ತು ತೋರುಬೆರಳುಗಳಿಂದ ಸುತ್ತುವಂತೆ ಇಳಿಸಿ ಇದೇ ರೀತಿಯ ಬಲಗೈ ಹೆಬ್ಬೆರಳಿನಿಂದ ಸಹ ಈ ಮುದ್ರೆ ಮಾಡಬೇಕು. ದೇಹದ ಶಾಖ ಬೇಕೆನಿಸಿದಾಗ ಮಾತ್ರ ಅದು ಗರಿಷ್ಠ 10-15 ನಿಮಿಷಗಳ ಮಾತ್ರ ಮಾಡಬೇಕು. ಇದನ್ನು ಮಾಡುವಾಗ ಉಂಟಾಗುವ ಹೆಚ್ಚಿನ ಉಷ್ಣತೆಯನ್ನು ಸಮತೋಲನಗೊಳಿಸಲು ನೀರು, ಹಣ್ಣು, ಅಥವಾ ಸೊಪ್ಪಿನ ರಸವನ್ನು ಹೆಚ್ಚು-ಹೆಚ್ಚಾಗಿ ಸೇವಿಸಿ ದೇಹದ ಉಷ್ಣತೆ ಹೆಚ್ಚಳ, ಶೀತ, ನೆಗಡಿ, ಸೈನಸ್ ಶ್ವಾಸಕೋಶಗಳ ಸಮಸ್ಯೆ, ಕಫ, ಕೊಬ್ಬು ಮತ್ತು ಬೊಜ್ಜನ್ನು ಕರಗಿಸುತ್ತದೆ. ಲಕ್ವಾ, ಕ್ಷಯ, ನ್ಯುಮೋನಿಯಾ, ಗಂಟಲು ಮತ್ತು ಕತ್ತಿನ ನೋವು ವಾಸಿ, ಅತ್ಯಂತ ಚಳಿಇದ್ದಾಗ ಈ ಮುದ್ರೆಯ ಕೇವಲ ಐದು ನಿಮಿಷದ ಅಭ್ಯಾಸ ಅದ್ಭುತ ಪರಿಣಾಮ ಮಾಡುವುದನ್ನು ಸ್ವತಃ ಪರೀಕ್ಷಿಸಬಹುದು ಹೊಕ್ಕಳಿನ ಭಟ್ಟಿ ಸರಿದಾಗ (displacing of solar plexes-ಸೌರ ಜಾಲ) ಈ ಮುದ್ರೆ ದಿನಕ್ಕೆ ಎರಡು ಮೂರು ಸಲ 5 ರಿಂದ 10 ನಿಮಿಷ ಮಾಡಿದರೆ ಖಂಡಿತ ವಾಸಿ.

ವಿಶೇಷ ಸೂಚನೆ :- ಅಲ್ಸರ್, ಅಸಿಡಿಟಿ, ತಲೆಸುತ್ತು ಮತ್ತು ಪಿತ್ತ ಪ್ರಕೃತಿಯವರಿಗೆ ಇದು ನಿಷಿದ್ಧ.