ಮನೆ ಕ್ರೀಡೆ ಏಷ್ಯಾಕಪ್ ನ 5ನೇ ಪಂದ್ಯ: ನೇಪಾಳ ವಿರುದ್ಧ ಭಾರತಕ್ಕೆ 10 ವಿಕೆಟ್ ಗಳ ಭರ್ಜರಿ ಜಯ

ಏಷ್ಯಾಕಪ್ ನ 5ನೇ ಪಂದ್ಯ: ನೇಪಾಳ ವಿರುದ್ಧ ಭಾರತಕ್ಕೆ 10 ವಿಕೆಟ್ ಗಳ ಭರ್ಜರಿ ಜಯ

0

ಪಲ್ಲಕೆಲೆ (ಶ್ರೀಲಂಕಾ): ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನೇಪಾಳ ವಿರುದ್ಧ 10 ವಿಕೆಟ್ ಗಳಿಂದ ಜಯಭೇರಿ ಬಾರಿಸಿತ್ತು.

ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು.

ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು ಉತ್ತಮ ಆರಂಭ ಪಡೆಯಿತು. ಕುಶಾಲ್ ಭುರ್ಟೆಲ್ ಹಾಗೂ ಆಸಿಫ್ ಶೇಖ್ ಮೊದಲ ವಿಕೆಟ್  ಗೆ 65 ರನ್ ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಶಾರ್ದೂಲ್ ಠಾಕೂರ್ ಕುಶಾಲ್ (38) ಗೆ ವಿಕೆಟ್ ಪಡೆದರು, ಮತ್ತೊಂದೆಡೆ ಆಸಿಫ್ ಶೇಖ್ 97 ಎಸೆತಗಳಲ್ಲಿ 8 ಫೋರ್ ಗಳೊಂದಿಗೆ 58 ರನ್ ಬಾರಿಸಿದರು. ಈ ಹಂತದಲ್ಲಿ ರವೀಂದ್ರ ಜಡೇಜಾ ಮೂರು ವಿಕೆಟ್ ಗಳನ್ನು ಪಡೆದು ನೇಪಾಳ ತಂಡಕ್ಕೆ ಶಾಕ್ ನೀಡಿದರು.

8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೋಂಪಾಲ್ ಕಮಿ 56 ಎಸೆತಗಳಲ್ಲಿ 48 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 200 ರ ಗಡಿದಾಟಿಸಿದರು. ಈ ವೇಳೆ ದಾಳಿಗಿಳಿದ ಮೊಹಮ್ಮದ್ ಶಮಿ ಸೋಂಪಾಲ್ ವಿಕೆಟ್ ಪಡೆದರು. ಅಲ್ಲದೆ 48.2 ಓವರ್ ಗಳಲ್ಲಿ ನೇಪಾಳ ತಂಡವನ್ನು 230 ರನ್ ಗಳಿಗೆ ಆಲೌಟ್ ಮಾಡಿದರು.

ಬ್ಯಾಟಿಂಗ್‌ ಆರಂಭಿಸಿದ ರೋಹಿತ್ ಹಾಗೂ ಗಿಲ್ ರನ್ ಗಳಿಸಲು ಕೊಂಚ ಸಮಯ ತೆಗೆದುಕೊಂಡರು. ನೇಪಾಳದ ಬೌಲರ್ ಗಳನ್ನು ದಂಡಿಸಿದ ರೋಹಿತ್ ಶರ್ಮಾ ಕೇವಲ 39 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಮತ್ತೊಂದೆಡೆ, ಗಿಲ್ ಸಹ ಉತ್ತಮ ಹೊಡೆತಗಳೊಂದಿಗೆ 47 ಬಾಲ್ ಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

ಮತ್ತೊಂದೆಡೆ, ನೇಪಾಳದ ವೇಗಿಗಳು ಹಾಗೂ ಸ್ಪಿನರ್ಗಳು ಈ ಜೋಡಿಯನ್ನು ಬೇರ್ಪಡಿಸಲು ತಮ್ಮ ಉತ್ತಮ ಎಸೆತಗಳೊಂದಿಗೆ ಸಾಕಷ್ಟು ಯತ್ನಿಸಿದರು. ರೋಹಿತ್ ಹಾಗೂ ಗಿಲ್ ಬ್ಯಾಟ್ ಬೀಸಿದರು. ಅಂತಿಮವಾಗಿ ರೋಹಿತ್ ಅಜೇಯ 74 ಹಾಗೂ ಗಿಲ್ ಅಜೇಯ 67 ರನ್ ಸಿಡಿಸಿದರು. ಈ ವೇಳೆ ಭಾರತ 20.1 ಓವರ್ಗಳಲ್ಲಿ  147/0  10 ವಿಕೆಟ್ ಗಳ ಇಂಡಿಯಾ ಭರ್ಜರಿ ಜಯ ಸಾಧಿಸಿತು.