ಮನೆ ಯೋಗಾಸನ ಮುದ್ರೆಗಳು: ಭಾಗ -4

ಮುದ್ರೆಗಳು: ಭಾಗ -4

0

ಯೋನಿ ಮುದ್ರೆ (ಸ್ತ್ರೀಯರಿಗಾಗಿ) :- ಎರಡು ಕೈಗಳ ಹೆಬ್ಬೆರಳುಗಳು ಮತ್ತು ತೋರುಬೆರಳುಗಳನ್ನು ಒಂದಕ್ಕೊಂದು ಸ್ಪರ್ಶಿಸಿ, ಮಿಕ್ಕ ಬೆರಳುಗಳನ್ನು ಒಂದರೊಳಗೆ ಒಂದು ಪರಸ್ಪರ ಸೇರಿಸಿ ಇಟ್ಟುಕೊಳ್ಳಬೇಕು ಮತ್ತು ಹೆಬ್ಬೆರಳು ಮೇಲ್ಮುಖವಾಗಿ ತೋರುಬೆರಳವನ್ನು ಬೆರಳು ಕೆಳಮುಖವಾಗಿರಲಿ, ಜೊತೆಗೆ ಕಿರುಬೆರಳು ಕಿಬ್ಬೊಟ್ಟೆಯ ಕೆಳಗೆ ಯೋನಿಗೆತಾಕಿರಬೇಕು. 15-20 ನಿಮಿಷ 10 ನಿಮಿಷ ಪ್ರಾಣ ಮುದ್ರೆ ಮಾಡಿ ಗರ್ಭಾಶಯದ ಸಮಸ್ತ ತೊಂದರೆಗಳನ್ನು ವಾಸಿಯಾಗುವವು. ಜೊತೆಗೆ ಶ್ವಾಸಕೋಶ ಮತ್ತು ದೊಡ್ಡಕರುಳಿನ ದೋಷಪರಿಹಾರ ಮಾನಸಿಕ ಒತ್ತಡ ಹೆಚ್ಚಾಗಿ ಮಾಸಿಕಸ್ರಾವ ಜಾಸ್ತಿಯಾಗಿ ತನ್ಮೂಲಕ ಆಯಾಸ, ಶರೀರಿಕ ನೋವುಂಟಾಗುತ್ತದೆ. ಕೆಲವರಿಗೆ ಮಾಸಿಕ ಸ್ರಾವಕ್ಕೆ ಮುನ್ನವೇ ಹೊಟ್ಟೆ ನೋವು, ಸೆಳೆತ ಆರಂಭವಾಗುವುದು. ಆಗ ತಕ್ಷಣ ಏಕಾಂತದಲ್ಲಿ ಕುಳಿತು ಈ ಮುದ್ರೆ ಮಾಡಿದರೆ ಶೀಘ್ರ ಪರಿಹಾರ ಸಿಗುವುದು. ಇನ್ನೂ ಕೆಲವರಿಗೆ ಮುಟ್ಟು ನಿಲ್ಲುವ ಹಂತದಲ್ಲಿ ತೀವ್ರ ತೊಂದರೆ ಸಹಜವಾಗಲು ಕೂಡ ಇದು ಮುದ್ರೆ ಎಲ್ಲಾ ತೊಂದರೆಗಳನ್ನು ಶಮನ ಮಾಡುತ್ತದೆ. ನಿತ್ಯ ಯಾವುದೇ ಸಮಸ್ಯೆ 10 ನಿಮಿಷ ಈ ಮುದ್ರೆ ಮಾಡುತ್ತಿದ್ದರೆ, ಅಂತವರಿಗೆ ಯಾವುದೇ ಬಾದೆಯ ಹತ್ತಿರಬಾರದೆ, ದೈಹಿಕ ಹಾಗು ಮಾನಸಿಕ ಆರೋಗ್ಯ ಸಿಗುವುದು.

ಶಂಖ ಮುದ್ರೆ :- ಎಡಗೈ ಹೆಬ್ಬೆರಳನ್ನು ಬಲ ಅಂಗೈ ಮಧ್ಯದಲ್ಲಿ ಇರಿಸಿ ಅದರ ಸುತ್ತ ಬಲಗೈ 4 ಬೆರಳುಗಳನ್ನು ಮಡಿಸಿ, ಮೃದುವಾಗಿ ಅದುಮಿ, ಎಡಗೈ ತೋರು ಬೆರಳುವನ್ನು ಬಲ ಹೆಬ್ಬಟ್ಟಿಗೆ ತುದಿಗೆ ಸ್ಪರ್ಶಿಸಿ, ಉಳಿದ ಮೂರು ಬೆರಳುಗಳನ್ನು ಬಲಗೈ ಮಡಿಸಿದ ಬೆರಳುಗಳ ಮೇಲಿಟ್ಟು ಮೃದುವಾಗಿ ಅಮುಕಬೇಕು (ಇದೇ ರೀತಿ ಎಡಗೈನಿಂದ ಸಹ ಈ ಮುದ್ರೆ ಮಾಡಬೇಕು.) ಹೃದಯದ ಒತ್ತಡ, ಲಿವರ್, ಮೂತ್ರಪಿಂಡಗಳು, ಥೈರಾಯ್ಡ್ ಗ್ರಂಥಿಗಳ ಬಿಂದುಗಳಿಗೆ ಒತ್ತಡ ಬಿದ್ದು, ಬೊಜ್ಜು ಕರಗುತ್ತದೆ(weight loss). ಆರೋಗ್ಯ ವೃದ್ಧಿಯಾಗುತ್ತದೆ. ನಾಡಿ ಶುದ್ದಿಯಾಗುತ್ತದೆ. (ಶರೀರದ ಒಟ್ಟು 72,000 ನಾಡಿಗಳು) ಈ ಕಾರಣ ಈ ಮುದ್ರೆಯನ್ನು ಪ್ರಾರ್ಥನೆ ಮತ್ತು ಧ್ಯಾನ ಮಾಡುವಾಗ ಮಾಡುತ್ತಾರೆ. ಇದನ್ನು ಯಾವುದೇ ಸಮಯದಲ್ಲಿ 20 ರಿಂದ 25 ನಿಮಿಷ ಮಾಡಬಹುದು.

ಶಕ್ತಿ ಮುದ್ರೆ :- ಇದು ಶರೀರ ಗಟ್ಟಿಮುಟ್ಟಾಗಿಟ್ಟು, ಶಕ್ತಿ ಸಂಚಾರ ಮಾಡುವ ಮುದ್ರೆ. ಹೆಬ್ಬೆರಳನ್ನು ಅಂಗೈಯಲ್ಲಿಟ್ಟು ಅದರ ಮೇಲೆ ತೋರುಬೆರಳು ಮತ್ತು ಮಧ್ಯದಬೆರಳು ಮಡಿಸಿ ಕಿರುಬೆರಳು ಮತ್ತು ಉಂಗುರದ ಬೆರಳು ಪರಸ್ಪರ ಜೋಡಿಸಿ, ಇದರಲ್ಲಿ ಅಗ್ನಿ,ವಾಯು, ಆಕಾಶಗಳ ಪ್ರಭಾವ ಕಡಿಮೆ ಮತ್ತು ಪೃಥ್ವಿತತ್ವ, ಜಲತತ್ವಗಳ ಶಕ್ತಿ ಹೆಚ್ಚು. ಅದರಿಂದಾಗಿ ಪರಿಣಾಮ ಗರ್ಭಾಶಯ ಸಣ್ಣಕರುಳು ಮಾಸಿಕಸ್ರಾವ ಮೂತ್ರದ ನಿಧಾನತೆ, ರೋಸ್ಟೇಜ್, ಗ್ರಂಥಿಯತೊಂದರೆ ಶಮನ, ಸುಖನಿದ್ರೆ 30 ನಿಮಿಷ ಮಾಡಿ 10 ನಿಮಿಷ ಪ್ರಾಣ ಮುದ್ರೆ ಮಾಡಿರಿ.

ಭ್ರಮರ ಮುದ್ರೆ :- ತೋರುಬೆರಳನ್ನು ಹೆಬ್ಬೆರಳಿನ ಮೂಲಕ್ಕೆ ಇಟ್ಟು ಮಧ್ಯದಬೆರಳು ಹೆಬ್ಬೆರಳ ತುದಿಯನ್ನು ಸ್ಪರ್ಶಿಸಿ, ಉಳಿದೆರಡು ಬೆರಳುಗಳನ್ನು ನೇರವಾಗಿ ಚಾಚುವುದು. ಎರಡು ಕೈಗಳಿಂದ ಯಾವುದೇ ವಿಧವಾದ ಅಲರ್ಜಿ ನಿವಾರಣೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ತುಂಬಾ ಪ್ರಯೋಜನಕಾರಿ ದಿನಕ್ಕೆ 30-35 ನಿಮಿಷಗಳ ಅಭ್ಯಾಸ ಅಥವಾ ಎರಡು ಹೊತ್ತು 15-20 ನಿಮಿಷಗಳಂತೆ ಮಾಡಿದರೂ ಸರಿ. ಜೊತೆಗೆ ಪ್ರಾಣಮುದ್ರೆ ಅವಶ್ಯ.