ಮನೆ ಆರೋಗ್ಯ ಆಕಸ್ಮಿಕವಾಗಿ ಬರುವ ಗಂಟಲು ಮತ್ತು ಶ್ವಾಸಕೋಶದ ಸೋಂಕು

ಆಕಸ್ಮಿಕವಾಗಿ ಬರುವ ಗಂಟಲು ಮತ್ತು ಶ್ವಾಸಕೋಶದ ಸೋಂಕು

0

ಚಿಕ್ಕಮಕ್ಕಳಿಗೆ ನೆಗಡಿ, ಕೆಮ್ಮು ಮತ್ತು ಜ್ವರ ಬರುವುದು ಸಾಮಾನ್ಯ. ವೈದ್ಯರ ಬಳಿಗೆ ಕರೆದೊಯ್ದರೆ “ಇದೆಲ್ಲಾ ವೈರಲ್ ಫೀವರ್ ಏನು ಪರವಾಗಯಿಲ್ಲ” ಎಂದು ಔಷಧಿಗಳನ್ನು ಬರೆದುಕೊಡುವುದು, ಬೇಗ ಗುಣವಾಗುತ್ತದೆ ಎಂದು ಭರವಸೆ ಕೊಡುವುದು ಸಹಜವೇ. ಇಂಥ ನೆಗಡಿ ಮತ್ತು ಕೆಮ್ಮು ಜ್ವರಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ ಎಕ್ಯೂಟ್ ರೆಸ್ಪೀರೇಟರಿ ಇನ್ಫೆಕ್ಷನ್(ಎ.ಆರ್.ಐ) ಎನ್ನುತ್ತಾರೆ.

 ಏಕ್ಯೂಟ್ ರೆಸ್ಪಿರೇಟರಿ ಟ್ರ್ಯಾಕ್ಟ್ ಇನ್ಫೆಕ್ಷನ್ಸ್ (ಶ್ವಾಸನಾಳದ ಸೋಂಕು) ಚಳಿಗಾಲದಲ್ಲಿ ಜಾಸ್ತಿ ಭಾರತದಲ್ಲಿ ಪ್ರತಿಯೊಂದು ಮಗುವಿಗೂ ವರ್ಷದಲ್ಲಿ ಐದು-ಆರು ಸಾರಿ ಶ್ವಾಸಕೋಶದ ಸೋಂಕು ಬರುತ್ತದೆ.

ಮಕ್ಕಳ ವೈದ್ಯರ ಬಳಿಗೆ ಬರುವ ಜ್ವರಗಳಲ್ಲಿ 25-60% ರಷ್ಟು ಶ್ವಾಸಕೋಶದ ಸೋಂಕುಗಳೇ ಆಗಿರುತ್ತದೆ. ಆಸ್ಪತ್ರೆಯಲ್ಲಿ ದಾಖಲಾಗುವ ಮಕ್ಕಳಲ್ಲಿ 15-40% ರಷ್ಟು ಎಕ್ಯೂಟ್ ರೆಸ್ಪಿರೇಟರಿ ಇನ್ಫೆಕ್ಶನ್ (ಶ್ವಾಸಕೋಶದ ಸೋಂಕು) ಆಗಿರುತ್ತದೆ. ಶ್ವಾಸಕೋಸದ ಸೋಂಕುಗಳೆಂದು ಕರೆಯಲ್ಪಡುವ ನೆಗಡಿ, ಕೆಮ್ಮು, ಜ್ವರ ಅಭಿವೃದ್ಧಿ ಹೊಂದುತ್ತಿರುವ, ಹಿಂದುಳಿದ ದೇಶಗಳಲ್ಲಿ ಹೆಚ್ಚು ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿ ಪೌಷ್ಟಿಕ ಆಹಾರದ ಕೊರತೆ, ವಿಟಮಿನ್ ಗಳ ಕೊರತೆ, ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಿಗೆ ಈ ಸೋಂಕು ಹೆಚ್ಚಾಗಿ ಹರಡುತ್ತದೆ.

ಎ.ಆರ್.ಐ.ಎಲ್ ನಲ್ಲಿ ಎರಡು ವಿಧ:

1. ಅಪ್ಪರ್ ರೆಸ್ಪಿರೇಟರಿ ಟ್ರ್ಯಾಕ್ಟ್ ಇನ್ಸ್ಪೆಕ್ಷನ್ 2. ಲೋಯರ್ ರೆಸ್ಪಿರೇಟರಿ ಟ್ರಾಕ್ಟ್ ಇನ್ಫೆಕ್ಷನ್.

ಮೂಗು ಮತ್ತು ಗಂಟಲುಗಳಲ್ಲಿ ಬರುವ ಸೋಂಕುಗಳನ್ನು ಅಪ್ಪರ್ ರೆಸ್ಪಿರೇಟರಿ ಟ್ರಾಕಿಂಗ್ ಸೆಕ್ಷನ್ ಎನ್ನುತ್ತಾರೆ.

ಸ್ವರಪೆಟ್ಟಿಗೆ, ಟ್ರೇಕಿಯಾ, ಶ್ವಾಸಕೋಷ, ಪ್ಲೂರಾಗಳಲ್ಲಿ ಬರುವ ಸೋಂಕನ್ನು ಲೋಯರ್ ರೆಸ್ಪಿರೇಟರಿ ಟ್ರ್ಯಾಕ್ ಇನ್ಫೆಕ್ಷನ್ ಎನ್ನುತ್ತಾರೆ.

ಈ ಸೋಂಕಿನ ಲಕ್ಷಣಗಳೆಂದರೆ, ನೆಗಡಿ, ಕೆಮ್ಮು, ಮೂಗಿನಿಂದ ನೀರುಸುರಿಯುವುದು, ಜ್ವರ, ಉಸಿರಾಟ ಜಾಸ್ತಿ ಆಗುವುದು. ಕೆಲವರಿಗೆ ಅಪಾಯ ಎದೆಯಸ್ನಾಯುಗಳು ಬಿಗಿದುಕೊಳ್ಳುವುದು ಇದಕ್ಕಿದ್ದಂತೆ ಮುಂತಾದವು ಈ ಸೋಂಕಿರುವ ಮಕ್ಕಳು ತಾಯಿಯಹಾಲು ಕುಡಿಯುವುದು ಮತ್ತು ಆಹಾರ ಸೇವನೆ ಕಡಿಮೆ ಮಾಡುತ್ತಾರೆ.

ಅಪ್ಪರ್ ರೆಸ್ಪಿರೇಟರಿ ಟ್ರ್ಯಾಕ್ ಇನ್ಫೆಕ್ಷನ್ :

ಸಾಮಾನ್ಯವಾಗಿ ಬರುವ ನೆಗಡಿ, ಕೆಮ್ಮು, ಜ್ವರಗಳು ಅಪ್ಪರ್ ರೆಸ್ಪಿರೇಟರಿ ಟ್ರ್ಯಾಕ್ಟ್ ನ ಸೋಂಕುಗಳಾಗಿರುತ್ತದೆ. ಮೂಗಿನಿಂದ ಸಿಂಬಳ ಸುರಿಯುವುದು, ಗಂಟಲುನೋವು, ಕಣ್ಣು ಕೆಂಪಾಗುವುದು, ಮೂಗುಕಟ್ಟುವುದು ಇದರ ಲಕ್ಷಣಗಳು 75 % ಅಪ್ಪರ್  ಟ್ರ್ಯಾಕ್ಟ್ ಇನ್ಫೆಕ್ಷನ್ ಗಳು ವೈರಸ್ ಸೋಂಕಿನಿಂದ ಬರುತ್ತವೆ. ಈ ವೈರಸ್ ಗಳಲ್ಲಿ ಆರ್.ಎಸ್.ವಿ ವೈರಸ್, ರೈನೋ ವೈರಸ್, ಎಡಿನೋ ವೈರಸ್, ಟಾಕ್ಸಿಕ್ ವೈರಸ್, ಮುಂತಾದವುಗಳಿವೆ. ಸಾಮಾನ್ಯವಾಗಿ ಗುಂಪಿನ ವೈರಸ್ ಗಳು ಹಾನಿ ಉಂಟುಮಾಡುವುದಿಲ್ಲ ಸುಲಭವಾಗಿ ಮರೆಯಾಗಿ ಬಿಡುತ್ತದೆ. ಜ್ವರ, ಗಂಟಲುನೋವು, ನೆಗಡಿ, ಕಡಿಮೆಯಾಗಲು ಔಷಧಿ ಬಳಸಿದರೆ ಸಾಕಾಗುತ್ತೆ. ರೋಗನಿರೋಧಕ ಔಷಧಿಗಳ ಅಗತ್ಯವೂ ಅಷ್ಟಾಗಿ ಬರುವುದಿಲ್ಲ.

ಯು.ಆರ್.ಐ ಇಂಥವರಿಗೆ ಹೆಚ್ಚು ?

ಅಪ್ಪರ್ ರೆಸ್ಪಿರೇಟರಿ ಟ್ರ್ಯಾಕ್ಟ್ ಇನ್ಫೆಕ್ಷನ್ ಕಡಿಮೆ ತೂಕದೊಂದಿಗೆ ಹುಟ್ಟಿದ ಮಕ್ಕಳಿಗೂ ಅವಧಿಗೂ ಮುಂಚೆ ಹುಟ್ಟಿದ ಮಕ್ಕಳಿಗೂ ಹೆಚ್ಚಾಗಿ ಬರುತ್ತದೆ. ಪೌಷ್ಟಿಕಾಂಶಗಳ ಕೊರತೆ ಇರುವ ಮಕ್ಕಳಿಗೆ, ಹೊಗೆ ಸಂಪರ್ಕಕ್ಕೆ ಬಂದ ಮಕ್ಕಳಿಗೆ, ಕಲುಷಿತ ವಾತಾವರಣದಲ್ಲಿ ವಾಸಿಸುತ್ತಿರುವ ಮಕ್ಕಳಿಗೂ, ಈ ಸೋಂಕು ಹೆಚ್ಚಾಗಿಬರುತ್ತದೆ.

ವೈರಲ್-ಬ್ಯಾಕ್ಟೀರಿಯ ಸೋಂಕಿನ ಪ್ರಮಾಣ :

ಅಪ್ಪರ್ ರೆಸ್ಪಿರೇಟರಿ ಟ್ರಾಕ್ಟ್ ಇನ್ಫೆಕ್ಷನ್ ನಲ್ಲಿ 75% ವೈರಲ್ ಸೋಂಕಾದರೆ, 25% ಬ್ಯಾಕ್ಟೀರಿಯಾದ ಸೋಂಕಾಗಿರುತ್ತದೆ. ಬ್ಯಾಕ್ಟೀರಿಯಾ ಸೋಂಕಿನಿಂದ ಗಂಟಲು ನೋಯುವುದೇ ಅಲ್ಲದೆ ಗೊಗ್ಗರಾಗುತ್ತದೆ. ಹಾಗೆಯೇ ಟಾನ್ಸಿಲ್ನ ಉರಿಯೂತ, ಸೈನುಸೈಟಿಸ್ ಇರಬಹುದು.

ಮುಂದುವರೆಯುತ್ತದೆ……