ಮನೆ ಕಾನೂನು ತುಮಕೂರು: ರೈತನಿಂದ ಲಂಚ ಪಡೆಯುವಾಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಲೋಕಾಯುಕ್ತ...

ತುಮಕೂರು: ರೈತನಿಂದ ಲಂಚ ಪಡೆಯುವಾಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಲೋಕಾಯುಕ್ತ ಬಲೆಗೆ

0

ತುಮಕೂರು: ರೈತನಿಂದ 15 ಸಾವಿರ ರೂ. ಲಂಚ ಪಡೆಯುವ ವೇಳೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕಾಶಿ ವಿಶ್ವನಾಥ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.

ಲಕ್ಷ್ಮೀ ನಾರಾಯಣ್ ಅವರ 1 ಎಕರೆ 7ಗುಂಟೆ ಜಮೀನ ಪೈಕಿ 4 ಗುಂಟೆ ಒಳ ಚರಂಡಿ ಮಂಡಳಿ ಗೆ ಸೇರಿತ್ತು. ಜಮೀನು ಪೋಡಿ ಮಾಡಲು ಇಲಾಖೆಯಿಂದ ಪತ್ರ ನೀಡಬೇಕಿತ್ತು. ಪತ್ರ ನೀಡಲು ಕಾಶಿ ವಿಶ್ವನಾಥ್ 15 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಚೇರಿಯಲ್ಲಿ ಲಕ್ಷ್ಮಿ ನಾರಾಯಣ್ ಬಳಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತುಮಕೂರು ಲೋಕಾಯುಕ್ತ ಎಸ್ಪಿ ವಲ್ಲಿ ಭಾಷಾ ನೇತೃತ್ವದಲ್ಲಿ  ಡಿವೈಎಸ್ಪಿ ಗಳಾದ ಮಂಜುನಾಥ್, ಹರೀಶ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.