ಮನೆ ರಾಜ್ಯ 196 ತಾಲೂಕು ಬರ ಪೀಡಿತ ಎಂದು ಘೋಷಿಸಲು ನಿರ್ಧಾರ: ಸಚಿವ ಎನ್.ಚಲುವರಾಯಸ್ವಾಮಿ

196 ತಾಲೂಕು ಬರ ಪೀಡಿತ ಎಂದು ಘೋಷಿಸಲು ನಿರ್ಧಾರ: ಸಚಿವ ಎನ್.ಚಲುವರಾಯಸ್ವಾಮಿ

0

ಮಂಡ್ಯ: ಒಟ್ಟು 196 ತಾಲೂಕುಗಳು ಬರಗಾಲಕ್ಕೆ ತುತ್ತಾಗಿದೆ ಅಂತಾ ನಾವು ನಿರ್ಣಯ ಮಾಡಿದ್ದೇವೆ. ಅದರ ಗ್ರೌಂಡ್ ರಿಪೋರ್ಟ್ ಪಡೆದು ನಾಳೆಯ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ಪಡೆದು ಘೋಷಣೆ ಮಾಡಲಾಗುತ್ತದೆ  ಎಂದು  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಇಂದು ಮಂಡ್ಯದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ 100 ದಿನ ಯಶಸ್ವಿಯಾಗಿ ಮುಗಿಸಿದ್ದೇವೆ.  ವಾಡಿಕೆಗಿಂತ 30-35% ಮಳೆ ಕೊರತೆ ಆಗಿದೆ. ಮಳೆ ಯೂನಿಫಾರಂ ಆಗಿ ಬಿದ್ದಾಗ ಮಾತ್ರ ರೈತರಿಗೆ ಉಪಯೋಗವಾಗಿದೆ.

113 ತಾಲೂಕುಗಳನ್ನು ಪಟ್ಟಿ ಮಾಡಿ ಸಭೆ ಮಾಡಿದ್ದೆವು. ಆದರೆ ಕೇಂದ್ರ ಸರ್ಕಾರದ ಗೈಡ್ ಲೈನ್ ಪ್ರಕಾರ 62 ಎಲಿಜಬಲ್ ಬಂತು. ಉಳಿದವು ಎಲಿಜಬಲ್ ಬರಲಿಲ್ಲ.  ನಿನ್ನೆ ಮತ್ತೆ ಗ್ರೌಂಡ್ ರಿಪೋರ್ಟ್ ಗೆ ಉಳಿದ ತಾಲೂಕುಗಳ ಬರ ಅಧ್ಯಯನಕ್ಕೆ ಕಳಿಸಿದ್ದೇವೆ. ಬರಗಾಲದ ಗೈಡ್ ಲೈನ್ ಸಡಿಲಿಕೆಗೆ ಈಗಾಗಲೇ ಪತ್ರ ಬರೆಯಲಾಗಿದೆ. ಮತ್ತೊಮ್ಮೆ ಕೇಂದ್ರಕ್ಕೆ ಮನವಿ ಮಾಡ್ತೇವೆ. ನಿನ್ನೆ ನಡೆದ ಸಬ್ ಕಮಿಟಿ ಸಭೆಯಲ್ಲಿ ಒಟ್ಟು 196 ತಾಲೂಕುಗಳನ್ನ ಬರ ಪೀಡಿತ ಎಂದು ಘೋಷಿಸಲು ನಿರ್ಧಾರ ಮಾಡಲಾಗಿದೆ ಎಂದರು.

ಕಾವೇರಿ ವಿಚಾರವನ್ನ ಬಹುತೇಕ ಸರ್ಕಾರ, ಸಿಎಂ ಎದುರಿಸಿದೆ. ಕಾವೇರಿ ವಿಚಾರವಾಗಿ ಕಾಂಗ್ರೆಸ್‌ ಗಟ್ಟಿಯಾಗಿ ನಿಂತಿದೆ. ಮೊದಲ ಬಾರಿಗೆ 25 ಸಾವಿರ ಕ್ಯೂಸೆಕ್ ಗೆ ಬೇಡಿಕೆ ಇಟ್ಟಿದ್ದರು. ನಾವು ಅಷ್ಟು ಬಿಡೋಕೆ ಆಗಲ್ಲ ಅಂತಾ ಹೇಳಿದೆವು. ಆಗ 15 ಸಾವಿರಕ್ಕೆ ಪ್ರಾಧಿಕಾರ ತೀರ್ಮಾನ ಮಾಡ್ತು. ಅದಕ್ಕೆ ಒಪ್ಪದ ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆ ವೇಳೆ 10 ಸಾವಿರ ಕ್ಯೂಸೆಕ್ ಬಿಡುಗಡೆಗೆ ಆದೇಶ ಮಾಡಿತು. ಅದರಂತೆ ನೀರು ಬಿಟ್ಟಿದ್ದೇವೆ. ವಿಪಕ್ಷಗಳ ಆರೋಪ ಸುಳ್ಳು ಎಂದು ಹೇಳಿದರು.

ಪ್ರಾಧಿಕಾರ ರಚನೆಯಾದ 6 ವರ್ಷದಿಂದ ಸಂಕಷ್ಟ ಸೂತ್ರಕ್ಕೆ ರಾಜ್ಯ ಡಿಮ್ಯಾಂಡ್ ಮಾಡಲಿಲ್ಲ. ಸಂಕಷ್ಟ ಸೂತ್ರದ ಬಗ್ಗೆ ಒತ್ತಡ ತಂದಿದ್ದರೇ ಇಷ್ಟೊತ್ತಿಗೆ ಪರಿಹಾರ ಸಿಗುತ್ತಿತ್ತು.  ಇದೇ ಮೊದಲ ಬಾರಿಗೆ ನಮ್ಮ ಸರ್ಕಾರ ಸಂಕಷ್ಟ ಸೂತ್ರಕ್ಕೆ ಮನವಿ ಮಾಡಿದೆ. ಪ್ರಧಾನಿ ಭೇಟಿಗೆ ಅನುಮತಿ ಕೋರಿದ್ದೇವೆ.  ನಾವು ನೀರು ಬಿಡೋಕ್ಕೆ ಆಗಲ್ಲ ಅಂತಾ ಕಟ್ಟು ನಿಟ್ಟಾಗಿ ಹೇಳಿದ್ದೇವೆ. ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಬಾರದು ಅನ್ನೋ  ದ್ದೇಶದಿಂದ ಪ್ರಾಧಿಕಾರದ ಆದೇಶದಂತೆ ನೀರು ಬಿಡುಗಡೆ ಮಾಡಲಾಗಿದೆ. ನಾಳೆ ನಮ್ಮ ಪರ ವಾದ ಬಂದರೆ ಧನ್ಯವಾದ ಹೇಳ್ತೇವೆ.  ಇಲ್ಲವಾದರೆ  ಕಟ್ಟುನಿಟ್ಟಿನ ದೃಢ ನಿರ್ಧಾರ ಕೈಗೊಳ್ತೇವೆ ಎಂದರು.

ಸಂಸದರು ಪ್ರಾಧಿಕಾರ, ಪಿಎಂ, ಕೇಂದ್ರ ಸರ್ಕಾರದ ಮುಂದೆ ಹೋಗ್ತಿಲ್ಲ. ನಮ್ಮ ಜವಾಬ್ದಾರಿ ಅಷ್ಟೇ ಪ್ರಶ್ನೆ ಮಾಡಿದರೆ ಸಾಲದು. ಸಂಸದರು ಕೂಡ ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಬೇಕು. ನಾಳೆ ಕೋರ್ಟ್ ತೀರ್ಪು ಆಧರಿಸಿ ಮುಂದಿನ ನಿರ್ಧಾರ. ಈಗಾಗಲೇ ನಾವು ನೀರು ಬಿಡಲು ಆಗಲ್ಲ ಅಂತಾ ಹೇಳಿದ್ದೇವೆ ಎಂದರು.