ಮನೆ ರಾಜ್ಯ ತಮಿಳುನಾಡಿಗೆ ನೀರು: 98 ಅಡಿಗೆ ಇಳಿದ ಕೆಆರ್ ಎಸ್ ನೀರಿನ ಮಟ್ಟ

ತಮಿಳುನಾಡಿಗೆ ನೀರು: 98 ಅಡಿಗೆ ಇಳಿದ ಕೆಆರ್ ಎಸ್ ನೀರಿನ ಮಟ್ಟ

0

ಮಂಡ್ಯ: ತಮಿಳುನಾಡಿಗೆ ನಿರಂತರವಾಗಿ ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆ ಕೆಆರ್ ಎಸ್ ನೀರಿನ ಮಟ್ಟ 98 ಅಡಿಗೆ ಇಳಿದಿದೆ.

22 ರಿಂದ 21 ಟಿಎಂಸಿ‌ಗೆ ನೀರಿನ ಸಂಗ್ರಹ ಕುಸಿತವಾಗಿದ್ದು, ಎಂದಿನಂತೆ ತಮಿಳುನಾಡಿಗೆ 5 ಸಾವಿಕ್ಕೂ ಕ್ಯೂಸೆಕ್ ನೀರು ಹರಿಯುತ್ತಿದೆ.

ಕುಡಿಯುವ ನೀರು ಸೇರಿ ಡ್ಯಾಂನಿಂದ 6302 ಕ್ಯೂಸೆಕ್ ಬಿಡುಗಡೆ ಮಾಡಲಾಗುತ್ತಿದೆ. 8 ದಿನಗಳಲ್ಲಿ ತಮಿಳುನಾಡಿಗೆ  3 ಟಿಎಂಸಿ ನೀರು ಹರಿದಿದೆ.

124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಕೇವಲ 98.60 ಅಡಿ ನೀರು ಸಂಗ್ರಹವಿದೆ. 21 ಟಿಎಂಸಿಯಲ್ಲಿ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಡ್ಯಾಂನಲ್ಲಿ ಕೇವಲ 16 ಟಿಎಂಸಿ ನೀರು ಮಾತ್ರ ಬಳಕೆಗೆ ಉಳಿದಿದೆ.

ಮುಂದಿನ 7 ದಿನ ತಮಿಳುನಾಡಿಗೆ ನೀರು ಹೋದ್ರೆ ಕನಿಷ್ಠ 3 ಟಿಎಂಸಿ ನೀರು ಖಾಲಿಯಾಗಲಿದೆ. ಅಲ್ಲಿಗೆ ಬಳಕೆಗೆ ಸಿಗೋದು ಕೇವಲ 13 ಟಿಎಂಸಿ ನೀರು ಮಾತ್ರ. 13 ಟಿಎಂಸಿ ನೀರು ಕುಡಿಯಲು ಸಾಲಲ್ಲ. ಮಳೆ ಬೀಳದಿದ್ರೆ ಕಾವೇರಿ ನೀರು ಕುಡಿಯೋ ಜನರು ಸಂಕಷ್ಟ ಎದುರಿಸಬೇಕಾಗಲಿದೆ.

KRS ಅಣೆಕಟ್ಟೆಯ ಇಂದಿನ ನೀರಿನ ಮಟ್ಟ

ಗರಿಷ್ಟ ಮಟ್ಟ : 124.80 ಅಡಿಗಳು

ಇಂದಿನ ಮಟ್ಟ : 98.80 ಅಡಿಗಳು

ಗರಿಷ್ಠ ಸಂಗ್ರಹ : 49.452

ಇಂದಿನ ಸಂಗ್ರಹ  : 21.734

ಒಳಹರಿವು    : 3,201 ಕ್ಯೂಸೆಕ್

ಹೊರಹರಿವು : 6,295 ಕ್ಯೂಸೆಕ್