ಮನೆ ಯೋಗಾಸನ ಮುದ್ರೆಗಳು: ಭಾಗ-5

ಮುದ್ರೆಗಳು: ಭಾಗ-5

0

ವಜ್ರ ಮುದ್ರೆ :-ಬಲ ಹೆಬ್ಬೆರಳ ತುದಿಯನ್ನು ಮಧ್ಯದ ಬೆರಳ ಉಗುರಿನ ಬಲಪಕ್ಕೆಗೆ ಒತ್ತಿ ಹಿಡಿದು, ಉಂಗುರ ಬೆರಳಿನ ಬಲ ತುದಿಯನ್ನು, ಮಧ್ಯದ ಬೆರಳಿನ ಉಗುರಿನ ಎಳೆ ತುದಿಗೆ ಮತ್ತು ಕಿರುಬೆರಳಿನ ಊಗುರಿನ ಬಲ ತುದಿಯನ್ನು, ಉಂಗುರದ ಬೆರಳ ಎರಡ ತುದಿಗೆ ಒತ್ತಿಕೊಂಡು ತೋರುವ ಬೆರಳುಗಳನ್ನು ನೇರವಾಗಿ ಇರಿಸುವುದು (ಇದೇ ರೀತಿ ಎಡಗಯಿಂದ ಮಾಡಬೇಕು) ಭೂತತ್ವ ಕಡಿಮೆಯಾದಾಗ, ಕಡಿಮೆ ರಕ್ತದೊತ್ತಡ(low bp) ಉಂಟಾಗುತ್ತದೆ. ಜಠರ, ಗುಲ್ಮಾ, ಹೃದಯ, ಮೋದೋಜ್ಜೀರಕ ಗ್ರಂಥಿಗಳು ಸಹ, ಭೂತತ್ವಕ್ಕೆ ಸೇರಿವೆ. ಇವುಗಳಲ್ಲಿ ಸರಿಯಾಗಿ ರಕ್ತಪರಿಚಲನೆ ಆಗದಿದ್ದಾಗ ನಿರುತ್ಸಾಹ, ಆನಾಸಕ್ತಿ, ಆಯಾಸ, ತಲೆ ಸುತ್ತು, ಸ್ವಾಭಾವಿಕ ಈ ಮುದ್ರೆಯ ನಿಯಮಿತ ಅಭ್ಯಾಸವು ಅವೆಲ್ಲವೂ ನಿವಾರಿಸುತ್ತದೆ.

ಮೇರುದಂಡ ಮುದ್ರೆ :- ಬಲಗೈಯ ಮಧ್ಯದ ಮತ್ತು ಕಿರುಬೆರಳ ತುದಿಗಳನ್ನು, ಹೆಬ್ಬೆರಳ ತುದಿಗೆ ಸ್ಪರ್ಶಿಸಿ ಉಳಿದೆರಡು ಬೆರಳುಗಳು ನೇರವಾಗಿ ಚಾಚಿಕೊಂಡಿರಬೇಕು ಮತ್ತು ಕುಳಿತಾಗ ಎಡಗೈಯಿಂದ ಚಿನ್ಮುದ್ರೆ ಮಾಡಬೇಕು. ಬೆನ್ನಿಗೆ ದಣಿವು ಮತ್ತು ದೀರ್ಘಕಾಲ ಕುಳಿತಿರುವುದು ಅಲ್ಪನಿದ್ರೆ ಇವುಗಳಿಂದ ಬೆನ್ನು ನೋವು ಸ್ವಾಭಾವಿಕ. ಈ ಮುದ್ರೆಯಿಂದ ಬೆನ್ನುಹುರಿ ಬಲಗೊಳ್ಳುತ್ತದೆ. ಇದು ನಿತ್ಯ 30-35 ನಿಮಿಷ ಯಾವುದೇ ತರಹದ ಬೆನ್ನುನೋವು ನಿವಾರಣೆ ಆಗುತ್ತದೆ. ಅಥವಾ ಎರಡು ಹೊತ್ತು 15-20 ನಿಮಿಷ ಮಾಡಿರಿ ಜೊತೆಗೆ ಪ್ರಾಣಮುದ್ರೆಯನ್ನು ಅವಶ್ಯ ಮಾಡಬೇಕು.

ಸುರಭಿ ಮುದ್ರೆ :-ನಮಸ್ತೆ ಮಾಡುವಾಗ ಹಾಗೆ ಕೈಜೋಡಿಸಿ, ಹೆಬ್ಬೆರಳು ಬಿಟ್ಟು ಪರಸ್ಪರ ವಿರುದ್ಧ ಕೈಗಳ ತೋರುಬೆರಳು, ಮಧ್ಯದಬೆರಳು ತುದಿ ಜೋಡಿಸಬೇಕು. ಅದೇ ರೀತಿಯಲ್ಲಿ ವಿರುದ್ಧ ಕೈಗಳ ಉಂಗುರಬೆರಳು, ಕಿರುಬೆರಳುಗಳ ಪರಸ್ಪರ ತುದಿ ಜೋಡಿಸಿ ಕೆಳಗೆ ಅಂಗೈಗಳನ್ನು ಅಗಲಿಸಿ, ಹಿಡಿದುಕೊಳ್ಳಿ ದನದ ಕೆಚ್ಚಲಿನ ಹಾಗೆ ಕಾಣುತ್ತದೆ. ಸುರಭಿ ಅಂದರೆ ಬೇಡಿದ್ದನ್ನು ಕೊಡುವ ಕಾಮಧೇನು. ವಾತ, ಪಿತ್ತ, ಕಫ ಈ ತ್ರಿದೋಷಗಳನ್ನು ಸರಿಪಡಿಸುತ್ತದೆ. (8-10 ನಿಮಿಷ) ಅಸಿಡಿಟಿ ಮತ್ತು ಶರೀರದ ಅತಿ ಉಷ್ಣತೆಗೆ ಶಮನ, ಸೃಜನ ಶಕ್ತಿಸಿದ್ದಿ ತಾಯಿಯ ಎದೆಹಾಲು ವೃದ್ಧಿ, ಅಡ್ರಿನಲ್, ಪಿಟ್ಯುಟರಿ, ಪಿನಿಯಲ್ ಮತ್ತು ಥೈರಾಯ್ಡ್ ಗ್ರಂಥಿಗಳ ಕಾರ್ಯ ಸಮರ್ಪಕವಾಗುವುದು.

ಶೂನ್ಯ ವಾಯು :- ಇದು ಶೂನ್ಯ ಮುದ್ರೆ ಮತ್ತು ವಾಯುಮುದ್ರೆಗಳ ಸಂಯುಕ್ತ ಮುದ್ರೆಯಾಗಿದೆ. ಇದರಿಂದ ಆಕಾಶತತ್ವ ಮತ್ತು ವಾಯುತತ್ವಗಳು ಕಡಿಮೆಯಾಗಿ, ಸಕಲ ಪ್ರಕಾರದ ಅನಾರೋಗ್ಯ ದೂರವಾಗುತ್ತದೆ. ದಿನಂಪ್ರತಿ 15 ನಿಮಿಷ ಮಾಡಿ ತಲೆನೋವು, ಕಿವಿ ನೋವು, ಶರೀರ ಕಂಪನ, ಅನಿದ್ರೆ, ಚಲನೆಯ ಅಸ್ಥಿರತೆ, ಹಲ್ಲು, ಗಂಟಲು, ಬೆನ್ನು ಅಥವಾ ಹಿಮ್ಮಡಿ ನೋವುಗಳು ಸಂದಿ ನೋವುಗಳಲ್ಲ ವಾಸಿ. ಸ್ವರದ ದೊರಗುತನ, ಮಾಸಿಕಸ್ರಾವ ಸರಿಯಾಗುತ್ತದೆ. ಚರ್ಮ, ಉಗುರು ಮತ್ತು ಕೂದಲು ತುಂಡಾಗುವಿಕೆ ನಿಲ್ಲುತ್ತದೆ. ನಿಶಕ್ತಿ ಭಯ ನಿವಾರಣೆ.

ಆದಿಶೇಷ ಶಕ್ತಿ ಸ್ವರೂಪಿ. ವಿವೇಕ ಸೂಕ್ಷ್ಮದೃಷ್ಟಿ ಮತ್ತು ಬಲದ ಪ್ರತಿಕನಾಗಿದ್ದಾನೆ. ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಈ ಮುದ್ರೆಯಿಂದ ಪರಿಹಾರ ಸಿಗುವುದು. ಅಂತ ಪ್ರಜ್ಞಾಮುದ್ರ ಎಂದು ಹೇಳುತ್ತಾರೆ. ಎಡಗೈನ ನಾಲ್ಕು ಬೆರಳುಗಳ ಕೆಳಗೆ ಬಲಗೈ 4 ಬೆರಳುಗಳ ಮೇಲೆ ಹೆಬ್ಬೆರಳು ಇರಿಸಿ ಅದರ ಮೇಲೆ ಎಡಗೈ ಹೆಬ್ಬೆರಳು ಇರಿಸಿದಾಗ ನಾಗ ಮುದ್ರೆ ಆಗುತ್ತದೆ. ಅಗ್ನಿ, ವಾಯು, ಆಕಾಶ, ಪೃಥ್ವಿ, ಮತ್ತು ಜಲಗಳು ವೃದ್ಧಿಸುತ್ತದೆ. ಇದರಿಂದ  ಶಕ್ತಿ ಹೆಚ್ಚುತ್ತದೆ. ಬೆನ್ನುಹುರಿಗೆ ಬಲ ಈ ಮುದ್ರೆ ಇಡೀ ಶರೀರಕ್ಕೆ ಶಾಖನೀಡುತ್ತದೆ, ಮೆದುಳಿನ ಶಕ್ತಿ, ರಕ್ತಾಭಿಸರಣ, ಪಚನ ಕ್ರಿಯೆ, ಪ್ರಜ್ಞೆ ಬಳಿಯುತ್ತದೆ. ಮಾನಸಿಕ, ಶಾರೀರಿಕ ಕ್ರಿಯೆಗಳು ಸರಿಹೊಂದಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಗರ್ಭಾಶಯ ನೋವು ಸೆಳೆತ, ಪ್ರೋಸ್ಟೇಟ್ ಗ್ರಂಥಿಯ, ಕಿಬ್ಬೊಟ್ಟೆಯ ಸಮಸ್ಯೆಗಳು, ಮೂತ್ರ ನಿಧಾನತೆವಾಸಿ ಇಡೀ ಶರೀರವು ಪ್ರಭೆಯಿಂದ ಕಂಗೊಳಿಸುತ್ತದೆ. (30 ನಿಮಿಷ ಈ ಮುದ್ರೆ ಮಾಡಿ 10 ನಿಮಿಷ ಪ್ರಾಣ ಮುದ್ರೆ ಅವಶ್ಯ ಮಾಡಿರಿ).