ಮನೆ ರಾಜ್ಯ ಮಂಗಳೂರು ಕಸ್ಟಮ್ಸ್ ತಂಡ ವಶಪಡಿಸಿಕೊಂಡಿದ್ದ ರಕ್ತಚಂದನ28 ಕೋಟಿಗೆ ಆನ್ ಲೈನ್ ನಲ್ಲಿ ಹರಾಜು

ಮಂಗಳೂರು ಕಸ್ಟಮ್ಸ್ ತಂಡ ವಶಪಡಿಸಿಕೊಂಡಿದ್ದ ರಕ್ತಚಂದನ28 ಕೋಟಿಗೆ ಆನ್ ಲೈನ್ ನಲ್ಲಿ ಹರಾಜು

0

ಮಂಗಳೂರು: ಕಸ್ಟಮ್ಸ್ ತಂಡ ವಶಕ್ಕೆ ಪಡೆದಿದ್ದ ಅಮೂಲ್ಯ ರಕ್ತಚಂದನ 28 ಕೋಟಿ ರೂಪಾಯಿಗೆ ಆನ್‌ ಲೈನ್‌ ನಲ್ಲಿ ಹರಾಜು ಆಗಿದ್ದು, 3 ಪ್ರತಿಷ್ಠಿತ ಏಜೆನ್ಸಿಗಳು ಬರೋಬ್ಬರಿ 28 ಕೋಟಿ ರೂ.ಗೆ ಬಿಡ್ ಮಾಡಿವೆ.

ಮಂಗಳೂರಿನ ಪಣಂಬೂರು ಬಂದರಿನ ಕಸಮ್ಸ್‌ ಅಧಿಕಾರಿಗಳು 2008 ರಿಂದ 2023 ರವರೆಗೆ 4 ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ರಕ್ತ ಚಂದನ ಇದಾಗಿತ್ತು. ಸುಮಾರು 56.2 ಮೆಟ್ರಿಕ್ ಟನ್ ರಕ್ತಚಂದನವನ್ನು ಹರಾಜು ಹಾಕಲಾಗಿತ್ತು. ಮಂಗಳೂರು ಬಂದರಿನಿಂದ ಅಕ್ರಮವಾಗಿ ವಿದೇಶಕ್ಕೆ ಕಳ್ಳಸಾಗಾಟ ಮಾಡುತ್ತಿದ್ದ ರಕ್ತಚಂದನ ಮಾಲು ಇದಾಗಿತ್ತು.

ಸುಪ್ರೀಂಕೋರ್ಟ್‌ ನಿರ್ದೇಶನದಂತೆ ರಾಜ್ಯ ಅರಣ್ಯ ಇಲಾಖೆ ಆನ್‌ ಲೈನ್ ಮೂಲಕ ಹರಾಜು ಹಾಕಬೇಕು. ಅದರಂತೆ ಒಟ್ಟು 2,094 ದಿಮ್ಮಿಗಳನ್ನು ಒಳಗೊಂಡ 56.2 ಮೆಟ್ರಿಕ್ ಟನ್ ರಕ್ತಚಂದನವಿತ್ತು. ಎ ಕೆಟಗರಿ 3 ಲಾಟ್, ಬಿ ಕೆಟಗರಿ 6 ಲಾಟ್, ಸಿ ಕೆಟಗರಿ 6 ಲಾಟ್, ಡಿ ಕೆಟಗರಿ 3 ಲಾಟ್‌ ಗಳಾಗಿ ವಿಂಗಡಣೆ ಮಾಡಿ ಹರಾಜು ಹಾಕಲಾಗಿತ್ತು. ಒಟ್ಟು 18 ಲಾಟ್‌ ಗಳಲ್ಲಿ ನ್ಯಾಚುರಲ್ ಕನ್ನೊಜೆನ್ಸಿ ಏಜೆನ್ಸಿ 10 ಲಾಟ್‌ ಗೆ 14.5 ಕೋಟಿ ರೂ. ಬಿಡ್ ಮಾಡಿತ್ತು. ಯಮಾ ರಿಬನ್ಸ್ ಏಜೆನ್ಸಿ ಲಾಟ್‌ಗೆ 4.2ಕೋಟಿ ರೂ. ಬಿಡ್ ಮಾಡಿದೆ. ಅಕ್ಷಾ 3 ಲಾಟ್‌ ಗೆ 1.6 ಕೋಟಿ ರೂ.ಗೆ ಬಿಡ್ ಮಾಡಿದೆ. ಮೂರೂ ಬಿಡ್‌ ಗಳ ಒಟ್ಟು ಮೊತ್ತ, ತೆರಿಗೆ ಸೇರಿ 28 ಕೋಟಿ ರೂ. ನಷ್ಟಿದೆ.

ಚೀನಾ, ದುಬೈ, ಜಪಾನ್ ಸೇರಿದಂತೆ ಇತರ ದೇಶಗಳಲ್ಲಿ ರಕ್ತಚಂದನಕ್ಕೆ ಬಹು ಬೇಡಿಕೆ ಇದೆ. 2012 ಆಗಸ್ಟ್​​ 24ರಂದು ನವಮಂಗಳೂರು ಬಂದರು ಮೂಲಕ ಈ ಮಾಲು ದುಬೈಗೆ ಕಳ್ಳಸಾಗಾಟವಾಗುವುದಿತ್ತು. ಕಂಟೈನರ್‌ ನಲ್ಲಿ ತುಂಬಿಸಿಡಲಾಗಿದ್ದ 5,810 ಕೆ.ಜಿ. ತೂಕದ ರಕ್ತಚಂದನ ವಶಕ್ಕೆ ಪಡೆದಿದ್ದರು. 2014 ಆಗಸ್ಟ್​ 21ರಂದು ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 16.99 ಟನ್ ರಕ್ತಚಂದನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಇನ್ನು, 2020ರ ಜನವರಿ 10ರಂದು ಥಾಯ್ಲೆಂಡ್‌ ಗೆ ಸಾಗಿಸಲು ಯತ್ನಿಸುತ್ತಿದ್ದ 2.20 ಕೋಟಿ ರೂ. ಮೌಲ್ಯದ ರಕ್ತಚಂದನವನ್ನೂ ವಶ ಪಡಿಸಿಕೊಳ್ಳಲಾಗಿತ್ತು. 2022ರ ಜೂನ್ 3ರಂದು ಆಂಧ್ರಪ್ರದೇಶದ ತಿರುಪತಿಯಿಂದ ಮಂಗಳೂರು ಮೂಲಕ ಸಿಂಗಾಪುರಕ್ಕೆ ಸಾಗಿಸಲು ಯತ್ನಿಸುತ್ತಿದ್ದ 4.14 ಕೋಟಿ ರೂ. ಮೌಲ್ಯದ ರಕ್ತಚಂದನ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳ ವಶವಾಗಿತ್ತು.