ಮನೆ ಆರೋಗ್ಯ ಹೊಟ್ಟೆ ನೋವು

ಹೊಟ್ಟೆ ನೋವು

0

ಚಿಕ್ಕ ಮಕ್ಕಳಿಗೆ ಹೊಟ್ಟೆ ನೋವು ಬರುವುದು ಸಾಮಾನ್ಯ ವಿಷಯ. ಹೊಟ್ಟೆ ನೋವು ಕೆಲವರಿಗೆ ಹಾನಿಕಾರವಾದರೆ ಕೆಲವರಿಗೆ ಯಾವ ಹಾನಿಯನ್ನು ಮಾಡೋದಿಲ್ಲ̤ ಸುಮ್ಮನೆ ಬಂದು ಹೋಗುತ್ತಿರುತ್ತದೆ ಆದರೆ ಎರಡು ರೀತಿಯ ಹೊಟ್ಟೆ ನೋವಿನ ತೀವ್ರತೆ ಒಂದೇ ಸಮನಾಗಿರುತ್ತದೆ. ಆದ್ದರಿಂದ ಯಾವುದು ಹಾನಿಕರ, ಯಾವುದು ಅಲ್ಲ, ಯಾವುದಕ್ಕೆ ಶಸ್ತ್ರ ಚಿಕಿತ್ಸೆ ಆಗುತ್ತಿದೆ ಎಂಬುದು ಕಂಡುಕೊಳ್ಳಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಹೊಟ್ಟೆ ನೋವು ಎಂಬುದು ಹೊಟ್ಟೆಗೆ ಸಂಬಂಧಿಸಿದಂತೆ ಶ್ವಾಸಕೋಶ ಮತ್ತು ಎದೆಗೆ ಸಂಬಂಧಿಸಿದ ನೋವು. ಹೊಟ್ಟೆನೋವಾಗಿ ಕಂಡುಬರುತ್ತದೆ. ಹಾಗಾಗಿ ಅದು ಯಾವುದೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾಗುತ್ತದೆ.

ಎಕ್ಯೂಟ್ ಅಬ್ಢಾಮಿನ್ :

ಎಕ್ಯೂಟ್ ಅಬ್ದಾಮಿನ್ ಎಂಬುದು ತಪ್ಪದೆ ತಕ್ಷಣ ಚಿಕಿತ್ಸೆ ಮಾಡಬೇಕಾದಂತ ಹೊಟ್ಟೆನೋವು. ಇದನ್ನು ಗುರುತಿಸದಿದ್ದರೆ ಪ್ರಾಣಕ್ಕೆ ಅಪಾಯ ಎಕ್ಯೂಟ್ ಅಬ್ಡಾಮಿನ್ ಪರಿಸ್ಥಿತಿಯಾದ ಕೆಲವರಿಗೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಹೊಟ್ಟೆಯಲ್ಲಿ ಕರುಳುಗಳು ಹೆಣೆದುಕೊಂಡಿದ್ದರೆ, ಒಂದರೊಳಗೊಂದು ಸೇರಿಕೊಂಡಿದ್ದರೆ, ಹರ್ನಿಯದಿಂದ ಒತ್ತಲ್ಪಟ್ಟಿದ್ದರು, ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕು. ಮೈಕಲ್ಸ್ ಡೈವರ್ಟಿಕ್ಯುಲಮ್ ವಿಷಯದಲ್ಲಿಯೂ ತಕ್ಷಣ ಶಾಸ್ತ್ರ ಚಿಕಿತ್ಸೆ ಅಗತ್ಯವಿದೆ. ಟ್ಯಾಕ್ಸಿನ್ ಮೆಗಾಪೊಲಾನ್ ಡ್ಯುಯೊಡಿನಲ್ ಅಲ್ಸರ್, ಕೋಲಿಸಿಸ್ಟೈಟಿಸ್, ರಪ್ಚರ್ ಸ್ಲ್ಪೀನ್, ಅಬ್ಡಾಮಿನಲ್ ಟ್ರೋಮಿನಿಂದ ಹೊಟ್ಟೆನೋವು ಬರುವುದು, ಅದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವೂ ಇರುತ್ತದೆ.

ಎಕ್ಯೂಟ್ ಅಬ್ಡಾಮಿನ್ ನಲ್ಲಿ ವಾಂತಿ, ಹಸಿರು ವಾಂತಿ ಇರಬಹುದು. ಹೊಟ್ಟೆ ನೋಯುತ್ತಿದ್ದು ಕರುಳುಗಳ ಚಲನೆ ಇರುವುದಿಲ್ಲ. ಹೊಟ್ಟೆ ಸ್ನಾಯುಗಳು ಜಿಗಿಯುತ್ತದೆ. ಇಂತಹ ಲಕ್ಷಣಗಳಿಗನುಸಾರವಾಗಿ, ಹೊಟ್ಟೆನೋವಿನ ತೀವ್ರತೆಯನ್ನು ಅಂದಾಜು ಮಾಡಬಹುದು. ಹೊಟ್ಟೆನೋವು ತೀವ್ರವಾಗಿದ್ದಾಗ, ಅದು ಸರ್ಜಿಕಲ್ ಅಥವಾ ವೈದ್ಯಕೀಯ ಕಾರಣವೇ ಎಂಬುದು ಗುರುತಿಸಬೇಕು.

ವೈದ್ಯಕೀಯ ಕಾರಣಗಲಲ್ಲಿ ಹೊಟ್ಟೆನೋವು, ಮಲಬದ್ಧತೆ, ಲಿಚರ್ ನ ಉರಿಯೂತ, ಮೂತ್ರನಾಳದ ಸೋಂಕು ಮುಂತಾದವುಗಳಿವೆ.

ಸದಾ ಬರುವ ಹೊಟ್ಟೆನೋವು (ಐ.ಬಿ.ಎಸ್)

ಇರಿಟಬಲ್ ಬಫುಲ್ ಸಿಂಡ್ರೋಮ್(ಐ.ಬಿ.ಎಸ್)  ಸಾಮಾನ್ಯವಾಗಿ ಯಾವಾಗಲೂ ಕಂಡು ಬರುವ ಹೊಟ್ಟೆ ನೋವು, ಈ ಹೊಟ್ಟೆ ನೋವು ಕರುಳುಗಳು ಹಿಂಡಿದಂತೆ ಬರುತ್ತದೆ. ಸದಾ ಭೇದಿಯಾಗುತ್ತಿರುತ್ತದೆ. ಹೊಟ್ಟೆ ತೊಳಸುತ್ತದೆ. ತಲೆ ನೋಯುತ್ತದೆ. ಇದಕ್ಕಿಂತಲೂ ಹೆಚ್ಚಿನ ಲಕ್ಷಣಗಳೇನು ಕಂಡುಬರುವುದಿಲ್ಲ. ಇರಿಟಬಲ್ ಸಿಂಡ್ರೋಮ್ ಇರುವವರಿಗೆ ಗೊಂದಲಮಯ ಮನಸ್ಥಿತಿಯಿರುತ್ತದೆ. ಇದಕ್ಕೆ ಪ್ರತ್ಯೇಕವಾದ ಕಾರಣವೇನು ಕಂಡು ಬರೆದಿದ್ದಾಗ, ಆ ಕಾಯಿಲೆಯಿಂದ ಯಾವುದೇ ತೊಂದರೆಯಾಗಿಲ್ಲವೆಂದು ಭರವಸೆಯನ್ನು ರೋಗಿಗೆ ಕೊಡಬೇಕು. ನಾರಿನಾಂಶ ಹೆಚ್ಚಾಗಿರುವ ಆಹಾರವನ್ನು ಧಾರಾಳವಾಗಿ ಕೊಡಬೇಕು. ಆಂಟಿ ಕೊಲೆಸರ್ಜಿಕ್ ಔಷಧಿಗಳನ್ನು ಬಳಸಬೇಕು. ಸೈಕೋಥೆರಪಿ ಕೂಡಾ ಅಗತ್ಯವಾಗುತ್ತದೆ.