ಇದು ನಮ್ಮ ದೇಹಕ್ಕೆ ಬೇಕಾಗುವ “ಡಿ” ಜೀವಸತ್ವ ಅಥವಾ ವಿಟಮಿನ್ ಅನ್ನು ಒದಗಿಸುವುದು. ಇದು ಪ್ರಕೃತಿಯ ಚಿಕಿತ್ಸೆ ಒಂದು ಭಾಗವಾಗಿದೆ.
ಬೆಳಗಿನ 7-30 ರಿಂದ 9-00 ಅವಧಿ ಒಳಗೆ ಅಥವಾ ಸಂಜೆ 5-00 ಗಂಟೆಗಳ ನಂತರ ಸುಮಾರು 20 ರಿಂದ 30 ನಿಮಿಷಗಳಷ್ಟು ಸಮಯ, ಮೈ ಮೇಲಿನ ಬಟ್ಟೆಗಳನ್ನು ಕಳಚಿ, (ಚಡ್ಡಿ ಅಥವಾ ನಿಕ್ಕರ್ ಹೊರತುಪಡಿಸಿ) ಬರಿಮೈಯ್ಯಲ್ಲಿ ಸೂರ್ಯನ ಕಿರಣಗಳಿಗೆ ನೇರವಾಗಿ ಮಾಧ್ಯಮಗಳ ಮೂಲಕವಲ್ಲದೆ ಸೂರ್ಯರಶ್ಮಿಗೆ ನೇರವಾಗಿ ಮಯೋಡ್ಡಿ ಕುಳಿತುಕೊಳ್ಳುವುದು ಅವಶ್ಯ. (ದಿನಾಲು ಮಾಡಲೇಬೇಕು. ಒಂದು ವೇಳೆ ಆಗದಿದ್ದರೆ ವಾರದಲ್ಲಿ ನಾಲ್ಕೈದು ದಿನಗಳಾದರೂ ಸರಿ ಮಾಡಬಹುದು.) ಯಾಕೆಂದರೆ ಸೂರ್ಯನ ಕಿರಣಗಳಲ್ಲಿ ಇರುವ ಏಳು ಬಣ್ಣಗಳಾದೆ, ಅಗೋಚರ ಇನ್ನೆರಡು ಅಲ್ಟ್ರಾ ವೈಯೋಲೆಟ್ (ಅತಿ ನೇರಳೆ) ಮತ್ತು ಇನ್ಫ್ರಾರೆಡ್ (ಅತಿ ಕೆಂಪು) ಎಂಬ ವರ್ಣಗಳಿದ್ದು, ಈ “ಡಿ” ಜೀವ ಸತ್ವ ದೊರೆಯುವುದು.
ಮಾತ್ರವಂತೆ ಮತ್ತು ಗ್ಲಾಸ್ ಇತ್ಯಾದಿ ಬೇರೆ ಮಾಧ್ಯಮಗಳ ಮೂಲಕ ಅವು ತಡೆ ಹಿಡಿಯಲ್ಪಡುವುದರಿಂದ “ಡಿ” ವಿಟಮಿನ್ ದೊರೆಯುವುದಿಲ್ಲ. (ಮನೆ ಮಾಳಿಗೆ, ಟೆರೇಸ್, ಗೋಡೆಗಳ ಆಸರೆಯಲ್ಲಿ ಅಥವಾ ಪೂರ್ವಾಭಿಮುಖವಾಗಿ ಬಾಗಿಲು ಅಥವಾ ಕಿಟಕಿ ಇದ್ದಲ್ಲಿ ತೆರೆದು ಮೈಯೊಡ್ಡಿ ಕುಳಿತುಕೊಳ್ಳಬಹುದು ಮತ್ತು ಆ ಸಮಯದಲ್ಲಿ ಸೂರ್ಯನನ್ನು ದಿಟ್ಟಿಸಿ ನೋಡಬಾರದು. ಕಣ್ಣುಗಳಿಗೆ ಹಾನಿಯಾಗಬಹುದು. ಇದು ತುಂಬಾ ಮುಖ್ಯ. ಬೆಳಗಿನ ಬಿಸಿಲಿನಲ್ಲಿ ಆರಾಮ ಕುರ್ಚಿಯ ಮೇಲೆ ಪೂರ್ವಾಭಿಮುಖವಾಗಿ, ಕಣ್ಣು ಮುಚ್ಚಿ ಕುಳಿತು ನಿಮಗೆ ಅವಶ್ಯಕತೆಗಳು ಮತ್ತು ಪ್ರಾಣಾಯಾಮದೊಂದಿಗೆ ಕೂಡ ಸೂರ್ಯ ಸ್ನಾನ ಮಾಡಬಹುದು ನಮ್ಮ ದೇಹದಲ್ಲಿ ಕ್ಯಾಲ್ಷಿಯಂ ಮತ್ತು ಪೊಟ್ಯಾಷಿಯಂ ಸತ್ವಗಳು ಸಮ್ಮೇಳೀತಗೊಳ್ಳಲು ಈ “ಡಿ”ಜೀವಸತ್ವ ವಿಟಮಿನ್ ಅತ್ಯವಶ್ಯಕವಾಗಿದೆ. ಆಹಾರ ಮತ್ತು ಗುಳಿಗೆ ಅಥವಾ ಮಾತ್ರೆ ಗಳಿಂದ “ಡಿ” ವಿಟಮಿನ್ ಅತ್ಯಲ್ಪ ಪ್ರಮಾಣದಲ್ಲಿ ದೊರೆಯುವುದೆಂದು ಹೇಳುತ್ತಾರೆ. ಎದೆಗೂಡಿನ ಎಲುವಿನ ನೋವಿಗೆ “ಡಿ” ವಿಟಮಿನ್ ಕೊರತೆಯೇ ಕಾರಣವೆಂದು ಕೂಡ ಹೇಳಲಾಗಿದೆ
ಸೂರ್ಯ ಸ್ನಾನದ ಪ್ರಯೋಜನಗಳು :-
*ಎಲುಬುಗಳು ಮತ್ತು ಹಲ್ಲುಗಳು ಗಟ್ಟಿಯಾಗುವುದು
*ನರಗಳು ಶಕ್ತಿಶಾಲಿಯಾಗುವವು
*ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುವುದು
*ರಕ್ತಶುದ್ಧಿಯಾಗುವುದು
*ಚರ್ಮರೋಗ ವಾಸಿಯಾಗುವುದು
*ಕೂದಲು ಉದುರುವುದು ಕಡಿಮೆಯಾಗುವುದು
* ಮೊಡವೆಗಳು ಮಾಯವಾಗುವವು
* ರೋಗನಿರೋಧಕ ಶಕ್ತಿ (total immunity -ಟೋಟಲ್ ಇಮ್ಯುನಿಟಿ) ಹೆಚ್ಚಾಗುವುದು.
* ಲಿವರ್ ಅಥವಾ ಯಾತ್ರಿ ಬಲವಾಗುವುದು
*ಸಕ್ಕರೆ ಕಾಯಿಲೆ (ಶುಗರ್) ಕಡಿಮೆಯಾಗುವುದು
*ಮೂತ್ರಪಿಂಡಗಳ (ಕಿಡ್ನಿಯ) ಕಾರ್ಯಕ್ಷಮತೆ ಹೆಚ್ಚುವುದು
*ಪ್ರೋಸ್ಟೇಟ್ ಗ್ರಂಥಿಯ ಸಮಸ್ಯೆಗಳು ದೂರವಾಗುವವು
* ರಕ್ತದೊತ್ತಡ ವಾಸಿಯಾಗುವುದು
* ಕ್ಯಾನ್ಸರ್ ಸಂಭಾವ್ಯತೆ ಕಡಿಮೆಯಾಗುವುದು.
* ಸ್ಕಿಝೊಫ್ರೀನಿಯಾ, ಖಿನ್ನತೆ ಅಥವಾ ಡಿಪ್ರೆಶನ್ ವಾಸಿಯಾಗುವುದು.