ಮನೆ ಅಪರಾಧ ಬಲವಂತವಾಗಿ ಗೋಮಾಂಸ ತಿನ್ನಿಸಿ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಬಲವಂತವಾಗಿ ಗೋಮಾಂಸ ತಿನ್ನಿಸಿ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

0

ಬರೇಲಿ (ಉತ್ತರ ಪ್ರದೇಶ): ಸಾಲ ಪಡೆದ ಹಣ ವಾಪಾಸ್ ನೀಡುವುದಾಗಿ ಹೇಳಿ ದಲಿತ ಯುವತಿಯನ್ನು ಹೋಟೆಲ್ ಕರೆಸಿಕೊಂಡ ದುರುಳರು ಆಕೆಗೆ ಬಲವಂತವಾಗಿ ಗೋಮಾಂಸ ತಿನ್ನಿಸಿದ್ದಲ್ಲದೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಘಟನೆಯ ಕುರಿತು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ಪ್ರೇಮ್ ನಗರದ ಪೊಲೀಸ್ ವೃತ್ತದ ಸಮೀಪದಲ್ಲಿ ವಾಸಿಸುತ್ತಿದ್ದ ಸಂತ್ರಸ್ತೆ ತನ್ನ ಸ್ನೇಹಿತನಿಗೆ 30 ಸಾವಿರ ರೂಪಾಯಿ ಸಾಲ ನೀಡಿದ್ದಳು. ಸೆಪ್ಟೆಂಬರ್​ 1 ರಂದು ಹಣ ಹಿಂದಿರುಗಿಸುತ್ತೇನೆ ಎಂದು ಹೇಳಿ ಯುವತಿಯನ್ನು ಸ್ನೇಹಿತ ಹೋಟೆಲ್​ ಗೆ ಕರೆಸಿಕೊಂಡಿದ್ದಾನೆ. ಹೋಟೆಲ್ ​ಗೆ ಬಂದಾಗ ರೂಮ್‌ನಲ್ಲಿ ಆಕೆಯ ಸ್ನೇಹಿತ ಶಿಫ್ತತ್ ಹಾಗು ಇನ್ನಿಬ್ಬರು ಗೆಳೆಯರಾದ ನದೀಮ್ ಮತ್ತು ಶೋಯೆಬ್ ಇದ್ದರು.

ಈ ಮೂವರು ಸೇರಿ ಆಕೆಗೆ ಒತ್ತಾಯವಾಗಿ ಗೋಮಾಂಸ ತಿನ್ನಿಸಿದ್ದಾರೆ. ಬಳಿಕ ಮತ್ತು ಬರುವ ಔಷಧ ಬೆರೆಸಿದ ಪಾನೀಯ ಕುಡಿಸಿದ್ದಾರೆ. ಯುವತಿ ಪ್ರಜ್ಞಾಹೀನಳಾಗಿದ್ದಾಳೆ. ನಂತರ ನದೀಮ್ ಮತ್ತು ಶೋಯೆಬ್ ಅತ್ಯಾಚಾರವೆಸಗಿದ್ದಾರೆ.

ಸ್ನೇಹಿತ ಶಿಫ್ತತ್ ಕೃತ್ಯದ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಇಟ್ಟುಕೊಂಡು ಆಕೆಯ ಬಳಿ 50 ಸಾವಿರ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಿದ್ದು, ವಿಡಿಯೋವನ್ನು ಆರೋಪಿ, ಸಂತ್ರಸ್ತೆಯ ಭಾವಿ ಪತಿಗೆ ಕಳುಹಿಸಿದ್ದಾನೆ.

ಬಳಿಕ ಈ ಘಟನೆ ಬೆಳಕಿಗೆ ಬಂದಿದ್ದು, ಆತ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾನೆ.

ತಕ್ಷಣ ಕಾನೂನು ಕ್ರಮ ತೆಗೆದುಕೊಂಡಿರುವ ಪೊಲೀಸರು, ಆರೋಪಿಗಳ ವಿರುದ್ಧ ದಲಿತ ಕಾಯ್ದೆಗಳು ಸೇರಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್‌ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೂವರನ್ನೂ ಬಂಧಿಸಲಾಗಿದೆ ಎಂದು ಬರೇಲಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ಹೇಳಿದರು.