ಮನೆ ಕ್ರೀಡೆ ಏಕದಿನ ವಿಶ್ವಕಪ್ ​ಗೆ ಪಂದ್ಯದ ಅಧಿಕಾರಿಗಳನ್ನು ಪ್ರಕಟಿಸಿದ ಐಸಿಸಿ; ಭಾರತದಿಂದ ಇಬ್ಬರಿಗೆ ಅವಕಾಶ

ಏಕದಿನ ವಿಶ್ವಕಪ್ ​ಗೆ ಪಂದ್ಯದ ಅಧಿಕಾರಿಗಳನ್ನು ಪ್ರಕಟಿಸಿದ ಐಸಿಸಿ; ಭಾರತದಿಂದ ಇಬ್ಬರಿಗೆ ಅವಕಾಶ

0

ಅಕ್ಟೋಬರ್ 5 ರಿಂದ ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್‌ ಗೆ ಇನ್ನು ಕೆಲವೇ ದಿನ ಬಾಕಿ ಉಳಿದಿವೆ. ಹೀಗಾಗಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಎಲ್ಲಾ 10 ದೇಶಗಳು ತಮ್ಮ ತಮ್ಮ ತಂಡವನ್ನು ಪ್ರಕಟಗೊಳಿಸುತ್ತಿವೆ. ಈ ನಡುವೆ ಐಸಿಸಿ ಕೂಡ 20 ಸದಸ್ಯರ ತನ್ನ ತಂಡವನ್ನು ಪ್ರಕಟಿಸಿದೆ.

ಐಸಿಸಿ ಪ್ರಕಟಿಸಿದ  20 ಪಂದ್ಯದ ಅಧಿಕಾರಿಗಳ ಪಟ್ಟಿಯಲ್ಲಿ ಭಾರತದಿಂದ ಕೇವಲ ಇಬ್ಬರು ಆಯ್ಕೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು 16 ಅಂಪೈರ್‌ ಗಳು ಮತ್ತು 4 ರೆಫರಿಗಳನ್ನು ಸೇರಿಸಲಾಗಿದೆ.

ಇನ್ನು ಅಕ್ಟೋಬರ್ 5 ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಆರಂಭಿಕ ಪಂದ್ಯಾವಳಿಗೆ ಅಧಿಕಾರಿಗಳನ್ನು ಹೆಸರಿಸಲಾಗಿದ್ದು, ಮೆನನ್ ಮತ್ತು ಧರ್ಮಸೇನಾ ಆನ್ ಫೀಲ್ಡ್ ಅಂಪೈರ್‌ ಗಳಾಗಿ ಕಾರ್ಯನಿರ್ವಹಿಸಲಿದ್ದರೆ, ಟಿವಿ ಅಂಪೈರ್ ಆಗಿ ಪಾಲ್ ವಿಲ್ಸನ್, ನಾಲ್ಕನೇ ಅಂಪೈರ್ ಆಗಿ ಶರ್ಫುದ್ದೌಲಾ ಕಾರ್ಯನಿರ್ವಹಿಸಲಿದ್ದಾರೆ. ಪೈಕ್ರಾಫ್ಟ್ ಮ್ಯಾಚ್ ರೆಫರಿಯಾಗಿರುತ್ತಾರೆ.

ಪಂದ್ಯದ ಅಧಿಕಾರಿಗಳ ಪಟ್ಟಿ ಹೀಗಿದೆ.

ಅಂಪೈರ್‌ ಗಳು

ನಿತಿನ್ ಮೆನನ್ (ಭಾರತ)

ಕ್ರಿಸ್ಟೋಫರ್ ಗಫ್ನಿ (ನ್ಯೂಜಿಲೆಂಡ್)

ಕುಮಾರ್ ಧರ್ಮಸೇನಾ (ಶ್ರೀಲಂಕಾ)

ಮರೈಸ್ ಎರಾಸ್ಮಸ್ (ದಕ್ಷಿಣ ಆಫ್ರಿಕಾ)

ಮೈಕೆಲ್ ಗಾಫ್ (ಇಂಗ್ಲೆಂಡ್)

ಪಾಲ್ ರೈಫಲ್ (ಆಸ್ಟ್ರೇಲಿಯಾ)

ರಿಚರ್ಡ್ ಇಲ್ಲಿಂಗ್ವರ್ತ್ (ಇಂಗ್ಲೆಂಡ್)

ರಾಡ್ ಟಕರ್ (ಆಸ್ಟ್ರೇಲಿಯಾ)

ಜೋಯಲ್ ವಿಲ್ಸನ್ (ವೆಸ್ಟ್ ಇಂಡೀಸ್)

ಅಹ್ಸನ್ ರಜಾ (ಪಾಕಿಸ್ತಾನ)

ಆಡ್ರಿಯನ್ ಹೋಲ್ಡ್‌ಸ್ಟಾಕ್ (ದಕ್ಷಿಣ ಆಫ್ರಿಕಾ)

ಪಾಲ್ ವಿಲ್ಸನ್ (ಆಸ್ಟ್ರೇಲಿಯಾ)

ಶರ್ಫುದ್ದೌಲಾ ಇಬ್ನೆ ಶಾಹಿದ್ (ಬಾಂಗ್ಲಾದೇಶ)

ಕ್ರಿಸ್ ಬ್ರೌನ್ (ನ್ಯೂಜಿಲೆಂಡ್)

ಅಲೆಕ್ಸ್ ವಾರ್ಫ್ (ಇಂಗ್ಲೆಂಡ್)

ಮ್ಯಾಚ್ ರೆಫರಿ

ಜಾವಗಲ್ ಶ್ರೀನಾಥ್ (ಭಾರತ)

ಆಂಡಿ ಪೈಕ್ರಾಫ್ಟ್ (ಜಿಂಬಾಬ್ವೆ)

ರಿಚಿ ರಿಚರ್ಡ್ಸನ್ (ವೆಸ್ಟ್ ಇಂಡೀಸ್)

ಜೆಫ್ ಕ್ರೋವ್ (ನ್ಯೂಜಿಲೆಂಡ್)

ಯಾವ ದೇಶದಿಂದ ಎಷ್ಟು ಜನ?

ಇನ್ನು ಈ ಪಟ್ಟಿಯಲ್ಲಿ ಯಾವ ದೇಶದಿಂದ ಎಷ್ಟು ಸದಸ್ಯರು ಆಯ್ಕೆಯಾಗಿದ್ದಾರೆ ಎಂಬುದನ್ನು ನೋಡುವುದಾದರೆ.. ನ್ಯೂಜಿಲೆಂಡ್‌ ನಿಂದ ಮೂವರು, ಶ್ರೀಲಂಕಾದಿಂದ ಒಬ್ಬರು, ದಕ್ಷಿಣ ಆಫ್ರಿಕಾದಿಂದ ಇಬ್ಬರು, ಇಂಗ್ಲೆಂಡ್‌ನಿಂದ ಮೂವರು, ಆಸ್ಟ್ರೇಲಿಯಾದಿಂದ ಮೂವರು, ವೆಸ್ಟ್ ಇಂಡೀಸ್‌ ನಿಂದ ಇಬ್ಬರು, ಪಾಕಿಸ್ತಾನದಿಂದ ಒಬ್ಬರು, ಬಾಂಗ್ಲಾದೇಶದಿಂದ ಒಬ್ಬರು ಮತ್ತು ಜಿಂಬಾಬ್ವೆಯಿಂದ ಒಬ್ಬ ಸದಸ್ಯರ ವಿಶ್ವಕಪ್‌ ಗೆ ಮ್ಯಾಚ್ ಆಫೀಸರ್‌ ಗಳಾಗಿ ಆಯ್ಕೆಯಾಗಿದ್ದಾರೆ.