ಮನೆ ಮನೆ ಮದ್ದು ಮಂಜಿಷ್ಠ

ಮಂಜಿಷ್ಠ

0

ಮಳೆ, ಬೇಲಿ ಪೊದರುಗಳ ಮೇಲೆ ಚಾಚಿ ಮೀಡರ್ ಗಟ್ಟಲೇ ಹಬ್ಬುವ ಬಳ್ಳಿಗೆ ಯೋಜನವಲ್ಲೀ ಎಂಬ ಅನ್ವರ್ಥ ಹೆಸರು. ಚೌಕಾಕಾರದ ಕಾಂಡ, ಗಿಣ್ಣುಗಳಲ್ಲಿ ಕಿರಿದಾದ ಮತ್ತು ಹೃದಯಾಕಾರದ ಉದ್ದದಂಟಿನ ನಾಲ್ಕು ಎಲೆಗಳು. ಗಿಣ್ಣುಗಳಲ್ಲಿ ಅಂಕುರಿಸುವ ಉಪ-ಕವಲುಗಳು. ಗಿಣ್ಣುಗಳಲ್ಲಿ ಪುಟ್ಟ ಬಿಳಿಯ ಹೂಗಲ ಗೊಂಚಲು, ಕರಿಯ ಕಾಯಿ ಓಳಗೆ ಸಣ್ನ ಬೀಜ. ಮಂಜಿಷ್ಟ ಎಂದು ಬಳಸುವ ಭಾಗವು ವಾಸ್ತವಾಗಿ ನೆಲದಡಿಯ ಬೆರಲ್ಲ. ಆಂಗ್ಲ ಭಾಷೇಯ ರನ್ನರ್. ನೆಲದ ಮೇಲೆ ಹರಡಿಕೊಳ್ಳುವ ಉಪ ಬೇರು. ಅದಕ್ಕೂ ಸಹ ಅಲ್ಲಲ್ಲಿ ನೆಲದಡಿ ಹುಗಿಯುವ ನಿಜ ಬೇರು. ಹಬ್ಬು ಬೇರು ಅಥವಾ ರನ್ನರ್ ಹಸಿದಿದ್ದಾಗ ಹಳದಿ ಕೆಂಪು ಬಣ್ಣದಾಗಿರುತ್ತದೆ.

Join Our Whatsapp Group

ಒಣಗಿದರೆ ಕೊಂಚ ಸಪೂರವಾಗುತ್ತದೆ. ಕರಿ, ಹಳದಿ, ಕೆಂಪಿಗೆ ತಿರುಗುತ್ತದೆ. ತಟಕ್ಕನೆ ಮುರಿಯುವ ಸ್ವಭಾವ, ಬಾಯಿಗಿರಿಸಿದರೆ ಸಿಹಿ, ಅನಂತರ ಕಹಿ,ಒಗರು ಸ್ವಾದ, ಬಜಾರಿನಲ್ಲಿ ಹಿಂದೆ ನೇಪಾಲಿ, ಇರಾನಿ, ಅಫಘಾನಿ ಮತ್ತು ಹಿಂದುಸ್ತಾನಿ ಮಂಜಿಷ್ಟ ಸಿಗುತ್ತಿತ್ತು. ಪಶ್ಚಿಮೋತ್ತರ ಹಿಮಾಲಯ, ನೀಲಗಿರಿ, ಪಶ್ಚಿಮಘಟ್ಟ, ಶ್ರೀ ಲಂಕೆ,  ಮಲಯಾ ಮತ್ತು ನೇಪಾಲ ಗುಡ್ಡಗಾಡು ಪ್ರದೇಶಗಳು ಮಂಜಿಷ್ಠೆಯ ಮೂಲ ನೆಲೆಯಾಗಿತ್ತು. ಇಂದಿ ಅಷ್ಟೊಂದು ಯಥೇಚ್ಛವಾಗಿ ಸಿಗುತ್ತಿಲ್ಲ. ಪ್ರಾಯಶಃ ಹಿಂದಿನ ಕಾಲದಲ್ಲಿ ಅತಿಯಾದ ಬಳಕೆಯಿಂದ ಮೂಲ ನೆಲೆಯಾಲ್ಲಿಯೇ ಇದು ವಿನಾಶದಂಚಿಗೆ ಸರಿದಿರುವ ಸಾಧ್ಯತೆಗಳಿವೆ.

ಮಂಜಿಷ್ಠಕ್ಕೆ ವಸ್ತ್ರರಂಜಿನಿ ಎಂಬ ಹೆಸರಿದೆ. ಪ್ರಾಯಶಃ ಹಿಂದಿನ ಶತಮಾನಗಲ್ಲಿ ಬಟ್ಟೆಗೆ ಬನ್ಣ ಕೊಡಲು ಮತ್ತು ಇತರ ಬಣ್ಣದ ಬಳಕೆ ಮಂಜಿಷ್ಟದಸ್ಥಾನ ಮಹತ್ವದಾಗಿರಬೇಕು. ರಸಾಯನಿ, ಅರುಣ , ಕಾಲಾ, ರಕ್ತಾಂಗಿ, ರಕ್ತಯಷ್ಠಿಕ, ಭಂಡೀರೀ ಎಂಬ ಸಂಸ್ಕೃತ ಹೆಸರುಗಳಿವೆ. ಸಿಹಿ ರುಚಿಯ ಈ ಸಸ್ಯ ಕಾಂಡ (ಉಪಬೇರು) ಪ್ರಾಯಶಃ  ಹಿಂದೆ ಜೇಷ್ಟ ಮಧುವಿನಂತೆ ಯಜ್ಞ ಯಾಗದ ಸಮಿಧೆಯಾಗಿತ್ತು.ಹಾಗಾಹಿ ರಕ್ತಯಷ್ಠಿಕಾ ಎಂಬ ಹೆಸರಿತ್ತು.

ಇಷ್ಟ ಮಧುಕ ಎಂಬ ಹೆಸರು ಸಹ ಇದೆ. ಇಷ್ಟವೆನಿಸುವ ಮಂಜಲ್ (ಮಂಗಲ) ಅಥವಾ ಹಳದಿ ಬಣ್ಣದ ದೆಸೆಯಿಂದ ಮಂಜಿಷ್ಟಹೆಸರು ಬಂದಿರುವ ಸಾಧ್ಯತೆಗಳಿವೆ.ಉಪಬೇರು ಭಾಗವು ಅಂಟು, ರಾಳ, ಸಕ್ಕರೆ ಅಂಶ ಹೊಂದಿದೆ. ಪರ್ಪ್ಯುರಿನ್, ಹಳದಿ ಗ್ಲುಕೊಸೈಡುಗಳಿವೆ. ಗೆರೆನ್ನಿನ್, ಅಲ್ಸಾರಿನ್ ಗಳಿವೆ.

ಔಷಧಿಯ ಗುಣಗಳು :-

*ಮೂತ್ರ ಮಾರ್ಗದಲ್ಲಿ ಕಲ್ಲು ಪರಿಹಾರಕ್ಕೆ ಮಂಜಿಷ್ಠ ಕಷಾಯ ಸಮರ್ಥವಾಗಿದೆ. ಬಾರ್ಲಿ ನೀರಿನ ಸಂಗಡ ಬೇರಿನ ಪುಡಿ ಸೇವಿಸಬಹುದು. ದೊಡ್ಡವರು ಅರ್ಧ ಚಮಚ ಪುಡಿ ದಿನಾಲೂ ಸೇವಿಸಬಹುದು.

*ಕ್ಷಯರೋಗ ಭೇಧಿ ನಿಲ್ಲಿಸಲು ಮಂಜಿಷ್ಠ ಬಹಲ ಪರಿಣಾಮಕಾರಿಯಾಗಿದೆ.

* ಗರ್ಭಾಶಯ ಸಂಕೋಚ, ಬಾವು ಪರಿಹಾರ, ಚರ್ಮದ ರೋಗಗಳಿಗೆ ಮಂಜಿಷ್ಠ ಸಂಜೀವಿನಿಯಾಗಿದೆ.

*ಎದೆಯಲ್ಲಿ ಸೇರಿದ ನೀರಿನಾಂಶವನ್ನು ಪರಿಹರಿಸಲು ಮಂಜಿಷಠ ಕಷಾಯ, ಚೂರ್ಣ ಸೇವಿಸುವುದರಿಂದ ಬಹಳ ಪರಿಣಾಮಕಾರಿ ಪರಿಣಾಮವಾಗುತ್ತದೆ.

*ಮೂಖದಲ್ಲಿ ಬಂಗು, ನೀಲಿ ಬಣ್ನ, ಕರಿ, ಸುಕ್ಕುಗಟ್ಟಿದ ಚರ್ಮ, ಸಹಜವಾಗಲೂಬೇರನ್ನು ಅರೆದು ಜೇನು, ಹಾಲು ಲೇಪಿಸಿದರೆ ಇದರಿಂದ ತುರಿಗಜ್ಜಿ, ಚರ್ಮ, ನವೆ, ಮೊಡವೆ, ತೊನ್ನಿನ ಕಲೆ ವಾಶವಾಗುತ್ತದೆ.

*ಅತಿ ಮೂತ್ರ ಮತ್ತು ಹಳದಿ ಮೂತ್ರ ರೋಗದವರು ಶ್ರೀ ಗಂಧದ ಜೊತೆ ಸೇವಿಸಿದರೆ ಪರಿಹಾರ.

*ಮಕ್ಕಳಲ್ಲಿರುವ ಅಪೌಷ್ಠಿಕತೆಯನ್ನು ನಿವಾರಿಸಲು ಇದು ತುಂಬಾ ಉಪಕಾರಿಯಾಗಿದೆ. ಜೇನಿನ ಸಂಗಡ ಇದರ ಚೂರ್ಣವನ್ನು ಸೇವಿಸಬೇಕು.

*ಪ್ರಸವೋತ್ತರಸಂದರ್ಭದಲ್ಲಿ ಹಿಗ್ಗಿದ ಗರ್ಭಾಶಯ ಮತ್ತೆ ಕುಗ್ಗುವುದು ಅತ್ಯಗತ್ಯ. ಗರ್ಭಾಶಯ ಸಂಕೋಚಕ್ಕೆ ಮಂಜಿಷ್ಠ ಕಷಾಯ ಅತಿ ಉಪಕಾರಿ. ಈಶ್ವರಿ ಬೇರು ಮತ್ತು ಹಿಪ್ಪಲಿಬೇರು ಸಂಗಡ ಕಷಾಯ ತಯಾರಿಸಿ ಕುಡಿಸಬೇಕು.

*ಸರ್ಪಸುತ್ತಿನ ಗುಳ್ಳೆಗಳಿಗೆ ಶ್ರೀ ಗಂಧ ಲೋಧ್ರ ಚಕ್ಕೆ ಹಾಗೂ ಮಂಜಿಷ್ಟ ಅರೆದು ಲೇಪಿಸಿದರೆ ಗುಳ್ಳೆಗಳು ಗುಣವಾಗುತ್ತದೆ.

*ಮುರಿದ ಮೂಳೆ ಬೇಗ ಕೂಡಿಕೊಳ್ಳಲು ಬೇರಿನ ಸೇವನೆಯಿಂದ ಹಿತಕರವಾಗಿದೆ. ಉರಿಯೂತವುಳ್ಳ ಕುರ, ಬಾವು, ಪರಿಹಾರಕ್ಕೆ ಮಂಜಿಷ್ಠ ಬೇರಿನ ಲೇಪನ ಮಾಡುವುದರಿಂದ ಹಿತಕರ.

*ಸುಟ್ಟಗುಳ್ಳೆ, ಗಾಯ, ಕಲೆ ಪರಿಹರಿಸಲು ಮಂಜಿಷ್ಟ ತೇದು ಹಚ್ಚುವುದರಿಂದ ಗುಣಕಾರಿ.\