ಮನೆ ಕ್ರೀಡೆ ಏಷ್ಯಾಕಪ್: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ, ಇಂದು ಪಂದ್ಯ ಆರಂಭವಾಗುವ  ಸಾಧ್ಯತೆ

ಏಷ್ಯಾಕಪ್: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ, ಇಂದು ಪಂದ್ಯ ಆರಂಭವಾಗುವ  ಸಾಧ್ಯತೆ

0

ಕೊಲಂಬೊ (ಶ್ರೀಲಂಕಾ): ನೀಲಾಕಾಶದ ಅಡಿಯಲ್ಲಿ ಆರಂಭವಾದ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಒಮ್ಮೆಗೆ ಮಳೆ ಕಾಡಿದೆ. 24.1ನೇ ಓವರ್ ವೇಳೆ ಜೋರಾಗಿ ಆರಂಭವಾದ ಮಳೆ ಸುಮಾರು ಎರಡು ಗಂಟೆಗಳ ಕಾಲ ಎಡೆಬಿಡದೇ ಸುರಿದಿದೆ.

ಇದರಿಂದ ಮೈದಾನ ಇನ್ನೂ ತೇವಾಂಶದಿಂದ ಕೂಡಿದ್ದು, ಪಂದ್ಯವನ್ನು ಇಂದಿನ ದಿನಕ್ಕೆ(ಸೋಮವಾರ) ಮುಂದೂಡಲಾಗಿದೆ.

ಭಾರತ ಮಳೆ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ (56) ಮತ್ತು ಶುಭಮನ್ ಗಿಲ್ (58), ಎರಡು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ. ವಿರಾಟ್ 8 ಮತ್ತು ಕೆ.ಎಲ್ ರಾಹುಲ್ 17 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಪಾಕಿಸ್ತಾನದ ಶಾಬಾದ್ ಖಾನ್ ಮತ್ತು ಶಾಹೀನ್ ಅಫ್ರಿದಿ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಇದೇ ಹಂತದಿಂದ ಪಂದ್ಯ ಆರಂಭವಾಗಲಿದ್ದು, ಭಾರತ ಬಾಕಿ 25 ಓವರ್ ಬ್ಯಾಟಿಂಗ್ ಮಾಡಬೇಕಿದೆ.