ಮನೆ ದೇವರ ನಾಮ ಹನುಮನ ನೋಡಿದಿರ

ಹನುಮನ ನೋಡಿದಿರ

0

ಹನುಮನ ನೋಡಿದಿರ, ನಮ್ಮ ಹನುಮನ ನೋಡಿದಿರ ||

ರಾಮಚಂದ್ರನಿಗೆ ಪ್ರೀತಿ ಪಾತ್ರನು |

ವಾಯು ದೇವರ ಪ್ರೇಮದ ಸುತನು |

ಹನುಮನ ನೋಡಿದಿರ ||

ಅವನ ಸಾಹಸ ಕೇಳಿದಿರ |

ನಾನು ಎಂಬುವ ಮಾತ ಅರಿಯದೆ,

ತನದು ಎನ್ನು  ನುಡಿಯನಾಡದೆ ||

ನೀನೆ ಎನ್ನುತ ಸೇವೆಮಾಡಿ |

ಶ್ರೀ ರಾಮನ ನಂಬಿ ಬಾಳಿನ ನಮ್ಮ || ಹನುಮನ ||

ಶಕ್ತನೆಂದು ತಾ ಸೊಕ್ಕಿ ಮೆರೆಯದೆ,

ಭಕ್ತನೆಂದು ತಾಡಂಬ ಮಾಡದೆ ||

ರಾಮ ಚಂದ್ರನ ಸೇವೆಗಾಗಿ |

ಶ್ರೀ ರಾಮಚಂದ್ರನ ಸೇನೆಗಾಗಿ |

ಈ ಬುನಿಯಲಿ ಜನ್ಮವನೆತ್ತಿದನಮ್ಮ || ಹನುಮನ ||

ಕಡಲ ಹಾರಿದನು ಸೀತೆಗಾಗಿ, ಸೇತುವೆ ಕಟ್ಟಿದ ರಾಮನಿಗಾಗಿ ||

ಬೆಟ್ಟಹೊತ್ತ ಲಕ್ಷಣನಿಗಾಗಿ ಪ್ರಭು ಚರಣದಿ ಶಿರ ಬಾಗಿದ ತನಗಾಗಿ || 2 ||

  || ಹನುಮನ ||