ಮನೆ ಪೌರಾಣಿಕ ಪರಾಶರರ ಪೂರ್ವ ವೃತ್ತಾಂತ

ಪರಾಶರರ ಪೂರ್ವ ವೃತ್ತಾಂತ

0

ಪರಾಕ್ಷರರು “ಮೈತ್ರೇಯ! ನೀನು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಹೇಳುತ್ತೇನೆ ಕೇಳು!  ನಾನು ಶಿಶುವಾಗಿದ್ದಾಗಲೇ ತ್ರಿಲೋಕಗಳಿಗೂ ಅಧಿಪತಿಯಾದ, ಆರಾಧ್ಯನಾದ ಪುಲಸ್ತ್ಯ ಬ್ರಹ್ಮನು ಸಾಕ್ಷಾತ್ಕರಿಸಿ, ಸಂತೋಷದಿಂದ ಮಾತನಾಡಿಸಿ, ಬ್ರಹ್ಮವಿದ್ಯೆಯನ್ನು ಕಥಾ ರೂಪದಲ್ಲಿ ನಿರೂಪಿಸುವ 18 ಪುರಾಣಗಳಿಗೆ ಕರ್ತನಾಗುತ್ತೀಯಾ” ಎಂದು ನನ್ನನ್ನು ಆಶೀರ್ವದಿಸಿದನು.

ಅಂದಿನಿಂದ ನನಗೆ ಅಪರೂಪವಾದ ಕಥಾಸಂಕಲನ ಕೌಶಲ್ಯತೆ, ಸರ್ಗಮ, ಪ್ರತಿಸರ್ಗಮಾ, ವಂಶ, ಮನ್ವಂತರ, ವಂಶನುಚರಿತೆ ಎಂಬ 5 ಲಕ್ಷಣಗಳೊಂದಿಗೆ ಕುಡಿದ ಪುರಾಣವನ್ನು ಸುಲಭವಾಗಿ ಪ್ರಸಂಗ ಧೋರಣೆಯಲ್ಲಿ ಹೇಳುವಂತಹ ಜಾಣ್ಮೆಯು ರೂಢಿಯಾಯಿತು. ಈಗ ನಾನು, ನೀನು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಸಮಾಧಾನಕರವಾದ ಉತ್ತರಗಳನ್ನು ಹೇಳುತ್ತೇನೆ. ಅದರ ವೃತ್ತಗಳನ್ನು ಕೇಳು” ಎಂದನು.      

ಆಗ ಮೈತ್ರೆಯನು ಮಧ್ಯಪ್ರವೇಶಿಸಿ, “ಮುನಿಂದ್ರದೇ! ಬ್ರಹ್ಮಸುತನಾದ ಪುಲಸ್ತ್ಯನು ಏತಕ್ಕಾಗಿ ನಿಮಗೆ ವರವನ್ನು ಪ್ರಸಾದಿಸಿದರು” ಎಂದು ಕುತೂಹಲದಿಂದ ಕೇಳಿದನು. ಆಗ ಪರಾಶರರು ಮಗು ತ್ರಿಲೋಕಗಳಿಗೂ ಗುರುಗಳಾದ ವಸಿಷ್ಠ ಮಹರ್ಷಿಯು ನನಗೆ ಪಿತಾಮಹರಾಗುತ್ತಾರೆ. ಆಕೆಯ ಧರ್ಮಪತ್ನಿ ಅರುಂಧತಿ. ಆ ಪುಣ್ಯ ದಂಪತಿಗಳಿಗೆ ನೂರು ಜನ ಗಂಡು ಮಕ್ಕಳು ಜನಿಸಿದರು. ಅವರಲ್ಲಿ ನನ್ನ ತಂದೆಯಾದ ಶಕ್ತಿಮಹರ್ಷಿಯೇ ಅಗ್ರಜರು. ನಾನು ಆತನಿಗೆ ಅದೃಶ್ಯಂತಿಯ ಗರ್ಭದಲ್ಲಿ ಜನಿಸಿದದೆನು.

ಅದೇ ಸಮಯದಲ್ಲಿ ವಿಶ್ವಾಮಿತ್ರ ಮಹರ್ಷಿಯು ಬ್ರಹ್ಮರ್ಷಿ ಪದವಿಯನ್ನು ಬಯಸಿ ತಮ್ಮ ತಾತನೊಂದಿಗೆ ವೈರವನ್ನು ಹೊಂದಿ ಅವಕಾಶ ಸಿಕ್ಕದಾಗಲೆಲ್ಲ ಆತನಿಗೆ ಅಪಕಾರವನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದನು. ಹೀಗಿರಲು ಒಮ್ಮೆ ಇಕ್ಷ್ವಾಕು ವಂಶದ  ಕಲ್ಮಷಪಾದನು ಬೇಟೆಗೆಂದು ಬಂದು ವಸಿಷ್ಟ ಮಹರ್ಷಿಯ ಆಶ್ರಮದ ಬಳಿಗೆ ಬರುತ್ತಿರಲು ಮಾರ್ಗ ಮಧ್ಯದಲ್ಲಿ ನಡೆದು ಬರುತ್ತಿದ್ದ ನನ್ನ ತಂದೆಯವರು ತನ್ನ ರಥಕ್ಕೆ ದಾರಿ ಬಿಡಲಿಲ್ಲವೆಂದು ಆಗ್ರಹಿಸಿ ಮಹಾರಾಜನೆಂಬ ದರ್ಪನಿಂದ ಕ್ಲಮಷಪಾದನು ಹೀಯಾಳಿಸಿದನು. ಆಗ ನನ್ನ ತಂದೆ “ಪ್ರಭುವೆಂಬ ಗರ್ಭದಿಂದ ನಿರ್ದೋಷಿಯಾದ ನನ್ನನ್ನು ಅವಮಾನ ಪಡಿಸಿ ಧರ್ಮವಿರುದ್ಧವಾಗಿ ನಡೆದುಕೊಳ್ಳುತ್ತೀಯಾ. ನೀನು ರಾಕ್ಷಸನಾಗಿ ನರಮಾಂಸ ಭಕ್ಷಕನಾಗು ಎಂದು ಕಲ್ಮಷಪಾದನನ್ನು ಶಪಿಸಿದರು.

ಅದನ್ನು ಉಪಯೋಗಿಸಿಕೊಂಡು ಶಾಪಗ್ರಸ್ತನಾದ ಮಹಾರಾಜನ ಮೂಲಕ ರಾಕ್ಷಸ ಶಕ್ತಿಯನ್ನು ಪ್ರಯೋಗಿಸಿ ವಿಶ್ವಾಮಿತ್ರ ಮಹರ್ಷಿಯು ವಸಿಷ್ಠನ ಪುತ್ರರೆಲ್ಲರನ್ನು ಸಾಯಿಸಿದನು. ಆಗಿನ್ನೂ ನಾನು ನಮ್ಮ ತಾಯಿಯ ಗರ್ಭದಲ್ಲಿದ್ದೆನು. ನಾನು ಆಕೆಯ ಗರ್ಭದಲ್ಲಿದ್ದಾಗಲೇ ವೇದಶಾಸ್ತ್ರಗಳನ್ನು ಪೂರ್ವಕಲ್ಪಗಳಲ್ಲಿನ ಪುರಾಣಗಳನ್ನು ಕೂಲಂಕುಷವಾಗಿ ಗ್ರಹಿಸಿದೆನು. ನಾನು ಹುಟ್ಟಿದ ಕೂಡಲೇ ತಪೋದೀಕ್ಷೆಗೆ ಹೋಗಿ ತಪಸ್ಸಿನಲ್ಲಿ ನಿಮಗ್ನನಾಗಿರಲು, ಒಮ್ಮೆ ನಮ್ಮ ತಾಯಿ ನನ್ನ ಬಳಿಗೆ ಬಂದು ರಾಕ್ಷಸರು ನನ್ನ ತಂದೆಯನ್ನು ನಿಷ್ಕಾರಣವಾಗಿ ಸಾಯಿಸಿದ ವಿಷಯವನ್ನು ಹೇಳಿ ಅದಕ್ಕೆ ಪ್ರತಿಕಾರವನ್ನು ಉಪದೇಶಿಸಿದಳು. ಅಲ್ಲಿಯವರೆಗೆ ಯಾರಲ್ಲಿಯೂ ಹೇಳಿಕೊಳ್ಳದ ಆ ವೇದನೆಯನ್ನು ಅನುಭವಿಸುತ್ತಿದ್ದ ಆಕೆಯ ದಿನಸ್ಥಿತಿಯನ್ನು ಕಂಡು ನನಗೆ ತೀವ್ರವಾದ ಕೋಪ ಉಂಟಾಯಿತು. ಆಗ ನಾನು ಕುಲಕ್ರಮಾಗತವಾದ ತಾಳ್ಮೆಯನ್ನು ಕಳೆದುಕೊಂಡು ಶತ್ರು ಸಂಹಾರ ಕಾರಣವಾದ ಅಥರ್ವಣ ಮಂತ್ರಗಳನ್ನು ಉಪಯೋಗಿಸುತ್ತ ರಾಕ್ಷಸಲೋಕ ಸತ್ರಯಾಗವನ್ನು ಮಾಡಿದೆನು. ಅವರಲ್ಲಿ ಸಾಯದೆ ತಪ್ಪಿಸಿಕೊಂಡು ಉಳಿದಿರುವ ದೈತ್ಯರು ವಶಿಷ್ಠ ಮಹರ್ಷಿಗಳ ಪಾದಗಳನ್ನು ಆಶ್ರಯಿಸಿ ವಂಶ ನಾಶವಾಗದಂತೆ ರಕ್ಷಿಸುವಂತೆ ದೀನವಧನರಾಗಿ ಪ್ರಾರ್ಥಿಸಿದರು.

ಪರಮ ದಯ ಸ್ವಭಾವನಾದ ಆತನು ರಾಕ್ಷಸ ಮೊರೆಯನ್ನು ಆಲಿಸಿ ಪುತ್ರ ಶೋಕವನ್ನು ನುಂಗಿ ಕರ್ತವ್ಯೋಪದೇಶವನ್ನು ಮಾಡುತ್ತಾ ನನ್ನೊಂದಿಗೆ ಈ ರೀತಿಯಾಗಿ ಹೇಳಿದನು. “ಮಗು! ಏತಕ್ಕಾಗಿ ನಿನಗಿಷ್ಟ ಆಗ್ರಹವುಂಟಾಗಿದೆ ? ನೀನು ಮಾಡುತ್ತಿರುವುದು ಕ್ಷತ್ರಿಯೋಚಿತ ವಾದಂತಹ ಕೃತ್ಯ ಅದು ಮುನೀಶ್ವಾರರ ಧರ್ಮವಲ್ಲ. ಜೀವಹಿಂಸೆಗೆ ಪಾಲ್ಪಟ್ಟವರು ಎಂತಹ ಮಹಾತ್ಮರಾದರು ಸರಿ ಅವರಿಗೆ ಸದ್ಗತಿಗಳಿರುವುದಿಲ್ಲ. ಕೋಪ ಇರುವ ಕಡೆ ಪಾಪವೂ ಇರುತ್ತದೆ. ಪಾಪಾತ್ಮರಿಗೆ ಕೋಪ ತಾಪಗಳೇ ಗೋಚರಿಸುತ್ತವೆ ತುಂಬಾ ಕಾಲ ತಪಸ್ಸು ಮಾಡಿ ಸಂಪಾದಿಸಿದ ಪುಣ್ಯಫಲವು ಸಹ ಕ್ರೋಧದಿಂದ ನಾಶವಾಗಿ ಅಪಕೀರ್ತಿಯುಂಟಾಗುತ್ತದೆ. ನಿನ್ನ ತಂದೆಯ ಮರಣಕ್ಕಾಗಿ ಪ್ರತಿಕಾರವನ್ನು ಮಾಡಲು ಹೊರಟಿತ್ತಿದ್ದೀಯೇ ಹೊರತು ಆತನ ಕರ್ಮಫಲವನ್ನು ಆ ರೀತಿಯಾಗಿ ಅನುಭವಿಸುತ್ತಿದ್ದಾನೆಂದು  ನಿನಗೆ ಗೊತ್ತಿಲ್ಲವೇ? ಎಂದು ಸಮಚಿತ್ತದೊಂದಿಗೆ ಹೇಳಿದ ವಸಿಷ್ಠ ಮಹರ್ಷಿಗಳ ವಚನಗಳನ್ನು ಕೇಳಿದ ನಾನು ರಾಕ್ಷಸ ಸತ್ರ ಯಾಗವನ್ನು ಉಪಸಂಹರಿಸಿದೆನು.     ಆಗ ಫುಲಸ್ತ್ಯ ಬ್ರಹ್ಮನು ಮುನಿಗುಣ ಸಮೇತನಾಗಿ ನನ್ನ ಮುಂದೆ ಸಾಕ್ಷಾತ್ಕರಿಸಿ, ನನ್ನನ್ನು ಪ್ರೀತಿ ಅನುರಾಗಗಳಿಂದ ಕಂಡು “ನನ್ನ ವಂಶಸ್ಥರಾದ ದೈತ್ಯೇಯರ ಮೇಲಿನ ಆಗ್ರಹವನ್ನು ಬಿಟ್ಟು ಲೋಕಾಭಿನಂದನೀಯವಾದ ನಿರ್ಮಲ  ಶಾಂತಿ ಯನ್ನು ವಹಿಸಿದೆ. ನಿನ್ನ ಮನೋರತವನ್ನು ಹೇಳು” ಎಂದು ಹೇಳಿದನು. ಆಗ ನಾನು ಪೂರ್ವಕಲ್ಪಗಳಲ್ಲಿನ ಪುರಾಣ ಇತಿಹಾಸಗಳ ರಚನೆಗಾಗಿ ತಡವರಿಸುತ್ತಿದೆ. “ಶಬ್ದ ಬ್ರಹ್ಮ ವೈದ್ಯನಾದ ಲೋಕೇಶ್ವರನ ಮಹಿಮೆಯನ್ನು ಗುರುತಿಸಬಲ್ಲ ದಿವ್ಯ ಜ್ಞಾನವನ್ನು, ಅಮೃತೋಪಮಾನವಾದ ವಾಜ್ಞಾ ಮಾಧುರ್ಯವನ್ನು, ಲೋಕೋತರ ಪ್ರತಿಭಾ ಪಾಂಡಿತ್ಯಗಳನ್ನು ಅನುಗ್ರಹಿಸಿರಿ” ಎಂದು ಬೇಡಿದೆನು ಆ ರೀತಿಯಾಗಿ ಅಂದಿನಿಂದ ನನಗೆ ಸರ್ವ ವಿದ್ಯಾ ರಹಸ್ಯಗಳು ಕರಾತಲಮಲಕವಾದವು.

ಮೈತ್ರೇಯ್ಯ! ನೀನು ಬೇಡಿದ ಸರ್ವಾರ್ಥಗಳನ್ನು ಪುರಾಣ ರೂಪದಲ್ಲಿ ವಿಶದೀಕರಿಸುತ್ತೇನೆ. ಈ ರಹಸ್ಯ ಪುರಾಣಗಳನ್ನು ಮೊದಲಿಗೆ ಬ್ರಹ್ಮದೇವನು ದಕ್ಷ ಪ್ರಜಾಪತಿಗೂ, ಆತನು ನರ್ಮದಾ ನದಿ ತೀರದಲ್ಲಿ ಚಕ್ರವರ್ತಿ ಪದವಿಗಾಗಿ ತಪೋದೀಕ್ಷೀತನಾಗಿದ್ದ ಪುರುಕುತ್ಸುವಿಗೂ, ಆತನು ಸಾರಸತ್ವನಿಗೂ, ಆತನ ದಯೆಯಿಂದ ನನಗೂ ಬೋಧಿಸಿದ ಪುರಾಣವಿದು. “ಮಗು! ಸ್ವಸ್ವರೂಪನು ಸಂಧಾನ ಮಾಡಿಕೊಂಡು ಇಷ್ಟು ಕಾಲ ನನ್ನಲ್ಲಿಯೇ ಉಳಿದುಕೊಂಡಿರುವ ವಿಷ್ಣುಭಕ್ತಿಯನ್ನು ಮತ್ತೆ ಆ ಶುಭ ಸಮಯದಲ್ಲಿ ಸಮುದ್ದೀಪನ ಮಾಡಿದೆ. ನಿರ್ವಿಕಾರನು, ಲೋಕೇಶ್ವರನೂ, ಪರಾತ್ಪರನೂ, ಪರಮ ಕಾರುಣಿಕ ಸ್ವಭಾವನೂ, ದುಷ್ಟ ಶಿಕ್ಷಣ, ಶಿಷ್ಟರಕ್ಷಣನು, ಆರ್ತ ತ್ರಾಣ ಪಾರಾಯಣನು, ಪರಮಾನಂದ ಸ್ವರೂಪನು, ಜಗದ್ವಂದ್ಯನೂ, ಭಕ್ತಾದೀನ ಮಾನಸನು ಆದ ಶ್ರೀ ಮಹಾವಿಷ್ಣುವಿನ ದಿವ್ಯ ಚರಿತೆಯನ್ನು ವರ್ಣಿಸುವ ಮಹಾಭಾಗ್ಯವು ಸಂಪ್ರಾಪ್ತಿಯಾಗಿ ನನ್ನ ಜನ್ಮ ಧನ್ಯವಾಯಿತು” ಎಂದು ಧ್ಯಾನಪೂರ್ವಕವಾಗಿ ಭಗವಂತನಾದ ವಸುದೇವನಿಗೆ ನಮಸ್ಕರಿಸಿ, ವಸಿಷ್ಠ, ಪುಲ್ಯಸ್ತ್ಯ ಬ್ರಹ್ಮರನ್ನು ಸ್ಮರಿಸಿ ಭಕ್ತಿಲೋಚನನಾಗಿ, ಭೂತ, ಭವಿಷ್ಯ, ವರ್ತಮಾನಗಳು ತನಗೆ ಜ್ಞಾನ ಗೋಚರವಾಗಲು ಪ್ರಸನ್ನ ಹೃದಯದಾಗಿ ಪರಾಶರ ಮಹರ್ಷಿಯು ಶ್ರೀ ವಿಷ್ಣು ಪುರಾಣವನ್ನು ಹೇಳಲು ಆರಂಭಿಸಿದರು.