ಮನೆ ಸ್ಥಳೀಯ ದಿಗ್ವಿಜಯ್ ರಾಜ್ಯ ಮಟ್ಟದ ಭಾಷಣ ಸ್ಪರ್ಧೆ: ಪಾಲ್ಕಿಯ ಖಾನ್ ಪ್ರಥಮ

ದಿಗ್ವಿಜಯ್ ರಾಜ್ಯ ಮಟ್ಟದ ಭಾಷಣ ಸ್ಪರ್ಧೆ: ಪಾಲ್ಕಿಯ ಖಾನ್ ಪ್ರಥಮ

0

ಮೈಸೂರು: ರಾಷ್ಟ್ರಭಾರತಿ ಚಾರಿಟಬಲ್ ಟ್ರಸ್ಟ್ (ರಿ.) ಸಿಡಿಲ ಸಂತ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು 1893ರ ಸೆಪ್ಟೆಂಬರ್‌ 11 ರಂದು ಅಮೆರಿಕಾದಲ್ಲಿ ನಡೆದ ವಿಶ್ವಸರ್ವಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಷಣ ಮಾಡಿ ಹಿಂದೂ ಧರ್ಮದ ಕೀರ್ತಿಯನ್ನು ವಿಶ್ವದಾದ್ಯಂತ ಪರಿಚಯಿಸಿದ ದಿನದ ಅಂಗವಾಗಿ ದಿಗ್ವಿಜಯ್ ಶೀರ್ಷಿಕೆ ಅಡಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಭಾಷಣಸ್ಪರ್ಧೆಯಲ್ಲಿ ಕುಮಾರಿ ಪಾಲ್ಕಿಯ ಖಾನ್ ಪ್ರಥಮ ಸ್ಥಾನ ಪಡೆದಿದ್ದಾರೆ.


 ಹರ್ಷಿತ (ದ್ವಿತೀಯ) ಹಾಗು ತೃತೀಯ ಬಹುಮಾನವನ್ನು ಕುಮಾರಿ ಹಂಸ ಪಡೆದಿದ್ದರೆ. ಸಮಾಧಾನಕರ ಬಹುಮಾನಗಳಿಗೆ ಶಶಾಂಕ್ ಹಾಗೂ ಲಜೀತ್ ಬಿ ರಾಜ್ ಆಯ್ಕೆಯಾದರು. ಶ್ರೀ ಪ್ರವೀಣ್ ( ಸಹಾಯಕ ಪ್ರಾಧ್ಯಾಪಕರು ಸಾರ್ವಜನಿಕ ಆಡಳಿತ ವಿಭಾಗ ಮಾನಸಂಗೋತ್ರಿ) ಇವರುತೀರ್ಪುಗಾರಾಗಿದ್ದರು. 65 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು
ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಟ್ರಸ್ಟಿಗಳು ಅದ ಶ್ರೀ ರುದ್ರಮೂರ್ತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಮನೋಜ್ ಮಂದಪ್ಪ (ವೈದ್ಯರು ಬೃಂದಾವನ ಆಸ್ಪತ್ರೆ), ಶ್ರೀ ಸತೀಶ್ ಪಾಂಡುರಂಗ (ಪಂಚವಟಿ ಹೋಟೆಲ್ ಮಾಲೀಕರು) ಪಾಲ್ಗೊಂಡು, ಬಹುಮಾನ ವಿತರಿಸಿದರು.