ಮನೆ ವ್ಯಾಯಾಮ ನಾಗರಿಕರಿಗೆ “ದಿನಚರಿ”

ನಾಗರಿಕರಿಗೆ “ದಿನಚರಿ”

0

1.ಬೆಳಗೆದ್ದ ತಕ್ಷಣವೇ ದೇವರು, ನಂತರ ತಾಯಿ, ತಂದೆ, ಗುರುಗಳು ಮತ್ತು ಹಿರಿಯರನ್ನು ನೆನೆದು ಪ್ರಾರ್ಥನೆಯೊಂದಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸುವ ದಿನದ ಕಾರ್ಯಕ್ರಮವನ್ನು ಪ್ರಾರಂಭಿಸಬೇಕು

2. ದೇವರಲ್ಲಿ ನಂಬಿಕೆ ಇಟ್ಟು ಅನನ್ಯ ಭಕ್ತಿಯಿಂದ ಮಾಡುವ ಪ್ರಾರ್ಥನೆಗಿಂತ ಮಿಗಿಲಾದ ಚಿಕಿತ್ಸೆ ಬೇರಿಲ್ಲ. ಸದಾ ಅವನಿಗೆ ಕೃತಜ್ಞರಾಗಿರಿ ಅವನನ್ನೇ ನೆನೆಯುತ್ತಿರಿ, ಧ್ಯಾನಿಸುತ್ತಿರಿ. ಮತ್ತೆ ಮತ್ತೆ “ಚಿಂತನೆ ಮಾಡಿರಿ, ಅದರ ಚಿಂತೆ ಬೇಡ”.

3. ಎದ್ದ ಕೂಡಲೇ ಮೊದಲು ನಿಂಬೆರಸದೊಂದಿಗೆ (ಅದು ಒಗ್ಗದವರು ಹಾಗೆಯೇ) ಸಾಕಷ್ಟು (ಕನಿಷ್ಠ ಅರ್ಧ ಲೀಟರ್) ಬಿಸಿನೀರು ಸೇವಿಸಿರಿ. ದಿನಾಲು ಯಥೇಚ್ಛವಾಗಿ ನೀರು ಕುಡಿಯಬೇಕು. ಗಾಯಬರ ಕಾಯಬಾರದು. ಮುಂಜಾನೆಗೆ ಹೆಚ್ಚು ರಾತ್ರಿಗೆ ಕಡಿಮೆ ಇರಲಿ. ದಿನಕ್ಕೆ ಕನಿಷ್ಠ ಎರಡು ವರೆ ಮೂರು ಲೀಟರ್ ನೀರು ಕುಡಿಯಬೇಕು.

ಯಾವಾಗಲೂ ನೀರನ್ನು ಕುಳಿತು ಕುಡಿಯಬೇಕು. ನಿಂತುಕೊಂಡು ಕುಡಿಯಕೂಡದು

4. ಲಘುವ್ಯಾಯಾಮಗಳು, ಯೋಗಾಸನಗಳು, ಮುದ್ರೆಗಳೊಂದಿಗೆ, ಪ್ರಾಣಾಯಾಮ, ಸೂರ್ಯಸ್ನಾನ, ಶವಾಸನ ಇವುಗಳ ದಿನಾಲು ತಪ್ಪದೆ ಮಾಡಬೇಕು. ಅವಸರವಿದ್ದಾಗ ಅವುಗಳನ್ನು ಸಂಕ್ಷೇಪಗೊಳಿಸಬಹುದು. ಕನಿಷ್ಠಪಕ್ಷ  ಹತ್ತುನಿಮಿಷಗಳ ಲಘುವ್ಯಾಯಾಮ, 10 ನಿಮಿಷಗಳ ಸಾಮಾನ್ಯ ಪ್ರಾಣಾಯಾಮ, ಐದು ನಿಮಿಷಗಳ ಕಪಾಲಭಾತಿ, 15 ನಿಮಿಷಗಳ ನಾಡಿಶೋಧನಾ ಪ್ರಾಣಾಯಾಮಗಳಂತು ಬೇಕು. ಸಾಧ್ಯವಿದ್ದಾಗಲೇ ಎರಡು ಸಲ (ಬೆಳಗ್ಗೆ ಮತ್ತು ಸಂಜೆಗೆ) ಪ್ರಾಣಾಯಾಮವನ್ನು ಮತ್ತು ಶವಾಸನವನ್ನು ಮಾಡುವುದು ಇನ್ನೂ ಉತ್ತಮ.

5. ಸದಾ ಅರಿವಿನಲ್ಲಿರಿ. ಅರಿವು ಮತ್ತು ಗಮನ ನಿಮ್ಮ ದೇಹದಲ್ಲಿಯೇ ಪಯಣಿಸುತ್ತಿರಲಿ.

6. ಸಾದಾ ಸಹನೆಯಿಂದಿರಬೇಕು. “ಏನೇ ಬರಲಿ ದೇವರ ದಯವಿರಲಿ” ಎಂಬುದು ನಿಮ್ಮ ವೇದ ಮಂತ್ರವಾಗಲಿ.

7. ದಿನಾಲು ಕನಿಷ್ಠಪಕ್ಷ ಮೂರೂ ಕಿಲೋಮೀಟರ್ ನಷ್ಟು ವಾಕಿಂಗ್ ಬೇಕು. ಬ್ರಿಸ್ಕ್ ವಾಕಿಂಗ್ ಅತ್ಯುತ್ತಮ.

8. ಹಣ್ಣು-ಹಂಪಲು ಸಹಿತ ಮತ್ತು ಪೌಷ್ಟಿಕಾಂಶದ ಬೆಳಗಿನ ಉಪಹಾರಗಳನ್ನು ಆದಷ್ಟು ಬೇಗನೆಸೇವಿಸಬೇಕು.

9. ರಾತ್ರಿವೇಳೆ ಬೇಗನೆ ಮಲಗಿಕೊಳ್ಳಬೇಕು. ಬೆಳಗಿನ ನಿದ್ರೆ ಬೇಡವೇ ಬೇಡ. ಅಂದರೆ ಬೆಳಗೆ ಬೇಗನೆ ಏಳಬೇಕು

10. ರಾತ್ರಿ ಮಲಗುವ ಮುನ್ನ ಕನಿಷ್ಠ 10 ನಿಮಿಷಗಳ ಕಾಲ ತಪ್ಪದೆ ವಜ್ರಾಸನ ಮಾಡಬೇಕು. ಅದರ ಜೊತೆಗೆ ಭ್ರಾಮರಿ ಪ್ರಾಣಯಾಮ ಮಾಡಬೇಕು.

11. ಸಕ್ಕರೆಸೇವನೆಯನ್ನು ಆದಷ್ಟು ಬಿಟ್ಟುಬಿಡಬೇಕು. ಪರ್ಯಾಯವಾಗಿ ಬೆಲ್ಲವನ್ನು ಮಿತವಾಗಿ ಸೇವಿಸಬಹುದು.

12. ಟಿವಿ ಮತ್ತು ಕಂಪ್ಯೂಟರ್ ರಕ್ಷಣೆ ಮಾಡುತ್ತಾ ಆಹಾರ ಸೇವನೆ ಕೂಡದು……

13. ಮಲಗುವಾಗ ಮುಖ ಮತ್ತು ತಲೆ ಮುಚ್ಚಕೂಡದು ಕಾರಣವಿಷ್ಟೆ ಆಗ ಉಸಿರಾಟದಲ್ಲಿ ಪ್ರಾಣವಾಯುವಿನ ಕೊರತೆಯಾಗಬಹುದು. ಅದರಿಂದ ಮಲಗುವಾಗ ಸೊಳ್ಳೆಪರದೆ ಉಪಯೋಗಿಸುವುದು ಹೆಚ್ಚು ಸುರಕ್ಷಿತ.

14. ಮೂತ್ರವನ್ನು ತಡೆಹಿಡಿಯ ಅದು ಬಹಳ ಸಮಸ್ಯೆಗಳಿಗೆ ಕಾರಣವಾಗುತ್ತದೆ.

15ಮಧ್ಯಾಹ್ನದ ಊಟವನ್ನು ಬೇಗನೆ (ಮಧ್ಯಾಹ್ನ12 ಗಂಟೆಯೊಳಗೆ) ಮಾಡಬೇಕು…

16. ಏನನ್ನಾದರೂ ತಿನ್ನಿ ಸರಿಯಾಗಿ ನುರಿಸಿ ತಿನ್ನಿ. ಗೊತ್ತಲ್ಲ ? ನೀರನ್ನು ತಿನ್ನಬೇಕು. ಅನ್ನವನ್ನು ಕುಡಿಯಬೇಕು!?  (ಬಾಯಿಯಲ್ಲಿಯೇ ಅನ್ನುವು ನುರಿತು ನೀರಾಗಬೇಕು!!)

17. ವಾರಕ್ಕೊಂದು ದಿನ, ಒಂದು ಹೊತ್ತಾದರೂ ನಿಜವಾದ ಉಪವಾಸ ಮಾಡಬೇಕು.

18.  ಸಂಜೆ ವೇಳೆಯೂ ಅಷ್ಟೇ ಹೊತ್ತು ಮುಳುಗು ಅದರೊಳಗೆ ಊಟ ಮುಗಿಸಿದರೆ ಅತ್ಯುತ್ತಮ. ಕಡೆಯ ಪಕ್ಷ ರಾತ್ರಿ 8 ಗಂಟೆ ಒಳಗೆ ಊಟ ಮುಗಿಸಿ. (ರಾತ್ರಿಯೂಟಕ್ಕೂ, ನಿದ್ರೆಗು ಮಧ್ಯ ಕನಿಷ್ಠ ಎರಡು ಗಂಟೆಗಳ ಸಮಯವಿರಲಿ)

19. “ನಾನು” ಅನ್ನುವುದು (ಅಹಂಕಾರ) ಬಿಡಬೇಕು.

20. ಕ್ಷಮಾ ಗುಣವನ್ನು ಬೆಳೆಸಿಕೊಳ್ಳಬೇಕು.

21.  ಕೊಡುವುದರಲ್ಲಿರುವ ಸುಖ ಪಡೆಯುವುದರಲ್ಲಿಲ್ಲ.

22. “ಆಗುವುದೆಲ್ಲ ಒಳ್ಳೆಯದಕ್ಕೆ” ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.

23. ಸಾಧ್ಯವಿದ್ದಷ್ಟು ನಿಮ್ಮ ಕೆಲಸಗಳನ್ನು ನೀವೇ ಮಾಡಿಕೊಳ್ಳುವುದು ರೂಡಿಸಿಕೊಳ್ಳಬೇಕು.

24. “ಧೈರ್ಯಂ ಸರ್ವತ್ರ ಸಾಧನಂ” ಎಂಬುದನ್ನು ತಿಳಿದು, ಯಾವುದಕ್ಕೂ ಭಯಪಡಕೂಡದು.