ಮನೆ ಮಾನಸಿಕ ಆರೋಗ್ಯ ಗೀಳು ಮನೋಭಾವ

ಗೀಳು ಮನೋಭಾವ

0

ಗೀಳು ಮನೋರೋಗ  ಒಂದು ವಿಚಿತ್ರ ಮನೋರೋಗ, ಅಸಂಬದ್ದವಾದ, ಅರ್ಥವಿಲ್ಲದ, ಅಪಾಯಕಾರಿಯಾದ ಅಥವಾ ವ್ಯಕ್ತಿಗೆ ಮುಜುಗರವನ್ನುಂಟು ಮಾಡುವ ವಿಚಾರ, ಚಿತ್ರ, ಅನುಮಾನ ಪದೇ ಪದೇಮನಸ್ಸಿನೊಳಕ್ಕೆ ಬರುತ್ತಿರುತ್ತದೆ.

ಉದಾಹರಣೆಗೆ ಕೈ ಕೊಳೆಯಾಗಿದೆ ಎಂಬ ವಿಚಾರ ಅಥವಾ ಆಯುದ ಅಥವಾ ಚೂಪಾದ ವಸ್ತುಗಳನ್ನು ಕಂಡಾಗ ಅದನ್ನು ತೆಗೆದುಕೊ೦ಡು ಇನ್ನೊಬ್ಬರಿಗೆ ಚುಚ್ಚಿದರೆ ಹೇಗೆ ಅಥವಾ ಅಸಹ್ಯವಾದ ಲೈಂಗಿಕ ದೃಶ್ಯಾ-ವಿಚಾರಗಳು,ಚಿಲಕ ಹಾಕಿದ್ದೇನೆಯೇ ಇಲ್ಲವೇ, ಹಣ ಸರಿಯಾಗಿ ಎಣಿಸಿದ್ದೇನೆತೋ ಇಲ್ಲವೋ, ದೇವರ ಪಟ ಅಥವಾ ಮೂರ್ತಿಯನ್ನು ಅಥವಾ ಪವಿತ್ರ ಗ್ರಂಥವನ್ನು ಕಾಲಿನಿಂದ ತುಳಿಯಬೇಕು ಅಥವಾ ಬಹು ಬೆಲೆಬಾಳುವ ಪದಾರ್ಥಗಳನ್ನು ಒಡೆದು ಹಾಳು ಮಾಡಬೇಕು.

ಇವು ಬೇಡವೆಂದರೂ ಪದೇ ಪದೇ ಮನಸ್ಸಿನೊಳಗೆ ಬರುತ್ತಿರುತ್ತದೆ. ಬರದಂತೆ ಹತೋಟಿ ಮಾಡಲು ವ್ಯಕ್ತಿ ಯತ್ನಿಸಿ ಸೋಲುತ್ತಾನೆ. ಅಸಾಧ್ಯಾ ಭಯ ಅತವಾ ಹಿಂಸೆ ಅಥವಾ ತಪ್ಪಿತಸ್ಥ ಭಾವನೆಯಿಂದ ತೊಳಲಾಡುತ್ತಾನೆ. ಈ ವಿಚಾರ ಅಥವಾ ಅನುಮಾನ  ಹೆಚ್ಚಿನ ಕಾಲ ಮನಸ್ಸನ್ನು ಆವರಿಸಿ, ಇತರ ದೈನಂದಿನ ಕೆಲಸಮಾಡಲು ಅಡ್ಡಿ ಮಾಡುತ್ತದೆ. ಎಲ್ಲಿ ಅಪಾಯಕಾರಿ ವರ್ತನೆಯನ್ನು ತಾನು ಪ್ರಕಟಿಸಿ ಬಿಟುತ್ತೇನೆಯೋ ಎಂದು ವ್ಯಕ್ತಿ ಹೆದರುತ್ತಾನೆ. ಕೆಲವು ಸಲ, ಮಾಡಿದ ಕೆಲಸವನ್ನೇ ಪುನಃ ಪುನಃ ಮಾಡತೊಡಗುತ್ತಾನೆ. ಉದಾಹರಣೆಗೆ ಗಂಟೆಗಟ್ಟಲೆ ಮೈ ಕೈ ತೊಳೆಯುವುದು, ಕೋಣೆ ಅಥವಾ ಮನೆಯನ್ನು ಚೊಕ್ಕಟ ಮಾಡುವುದು, ಹತ್ತಿಪ್ಪತ್ತು ಸಲ ಬೀಗವನ್ನು ಸ್ವಿಚ್ಚನ್ನು ಹಾಕಿದ್ದೇನೆಯೋ ಇಲ್ಲವೋ ಎಂದು ಪರೀಕ್ಷಿಸುವುದು.

ಇದರಿಂದಾಗಿ ವ್ಯಕ್ತಿಗೂ ಮತ್ತು ಆತನ/ಅಕೆಯು ಮನೆಯವರಿಗೂ ಸಹಿಸಲು ಸಾಧ್ಯಾವಾದ ನೋವು ತೊಂದರೆಗಳಾಗುತ್ತದೆ. ಕೆಲಸ ಕಳೆದುಕೊಳ್ಳಬಹುದು. ಮನೆಯಿಂದ ಹೊರಬರದೇ, ಒಳಗಡೆಯೇ ಉಳಿಯಬಹುದು. ದಾಂಪತ್ಯ ವಿರಸ ಕಾಣಿಸಿಕೊಂಡು, ವಿಛ್ಛೇಧನದ ಹಂತವನ್ನು ಮುಟ್ಟಬಹುದು. ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲಾಗದೇ ಕೋರ್ಸ್ ನ್ನು ಬಿಡಬಹುದು. ಗೀಳು ಮನೋರೋಗ ಕೂಡ ಹದಿಹರೆಯದವರಲ್ಲಿ, ವಯಸ್ಕರಲ್ಲಿ ಹೆಚ್ಚು ಸಾಮಾನ್ಯ. ಗಂಡಸರಿಗಿಂತ ಹೆಂಗಸರಲ್ಲಿ ಹೆಚ್ಚು, ಪ್ರತಿ ಒಂದು ಸಾವಿರ ಜನಸಂಖ್ಯೆಯಲ್ಲಿ ಇಬ್ಬರು ಮೂವರು ಈ ರೋಗದಿಂದ ಬಳಲಬಹುದು.

ಇತ್ತೀಚಿನ ಜೈವಿಕ-ರಾಸಾಯನಿಕ ಅಧ್ಯಾಯಾನಗಳಿಂದ ಗೀಳು ಮನೋರೋಗ ಒಂದು ಮಿದುಳಿನ ಕಾಯಿಲೆ ಎಂದು ಸಾಬೀತಾಗಿದೆ. ನರಕೋಶಗಳಲ್ಲಿ ಸೆರೋಟೊನಿನ್ ಎಂಬ ನರವಾಹಕ ವಸ್ತುವಿನ ಕೊರತೆ ಕಂಡುಬರುತ್ತದೆ ಎಂದು ತಿಳಿದುಬಂದಿದೆ.

ಗೀಳು ಮನೋರೋಗಕ್ಕೆ ಈಗ ಯಸಸ್ವಿ ಚಿಕಿತ್ಸೆ ಇದೆ. ಔಷದಿಯ ಜೊತೆ ಜೊತೆಗೇ ನಡವಳಿಕೆ ಚಿಕಿತ್ಸೆಯನ್ನು ಮನೋವೈದ್ಯರು ಸೂಚಿಸುತ್ತಾರೆ. ನರಕೋಶಗಳಲ್ಲಿ ಸೆರೋಟೊನಿನ್ ನರವಾಹಕದ ಲಭ್ಯಾತೆಯನ್ನು ಹೆಚ್ಚಿಸುವ ಹಲವಾರು ಔಷಧಗಳು ಈಗ ಬಳಕೆಯಲ್ಲಿದೆ. ಉದಾಹರಣೆಗೆ ಫ್ಲೊಯಾಕ್ಸೆಟಿನ್, ಸರ್ಟ್ರಾಲಿನ್, ಕ್ಲೋಮಿಪ್ರಮಿನ್,ಕ್ಲೋನಜೆಪಾಂ, ಎಸ್ಸಿಟಲೋಪ್ರಾಂ, ಫ್ಲೊಯಾಕ್ಸಮಿನ್ ಇತ್ಯಾದಿ. ಈ ಔಷಧಗಳು ಯಾರಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರಯೋಜನಕಾರಿ ಎಂಬುದನ್ನು ವೈದ್ಯರು ನಿರ್ದರಿಸುತ್ತಾರೆ. ಬಹಳ ವರ್ಷಗಳ ಕಾಲ ಔಷದ ಸೇವೆಯನ್ನು ಮುಂದುವರೆಯಬೇಕು. ಆಲೋಚನೆ/ವಿಚಾರ/ಮಾಡಲೇಬೇಕೆಂಬ ಪ್ರೇರಣೆಯು ಪದೇಪದೇ ಬರಲು ಬಿಟ್ಟು, ತತ್ಫಲ ವರ್ತನೆಯನ್ನು ತಡೆಯುವ ನಡವಳಿಕೆ ಚಿಕಿತ್ಸೆ ಪರಿಣಾಮಕಾರಿ ಇದನ್ನು exposure and response prevention ಎನ್ನುತ್ತಾರೆ. ಉದಾ : ಕೊಳಕಿನ ನಡುವೆ ರೋಗಿಯನ್ನು ಇರಿಸಿ ಆತ ಕೈ ತೊಳೆಯದಂತೆ ತಡೆಯುವುದು.

ಈ ರೋಗಿಗಳಿಗೆ ಚಿಕಿತ್ಸಾ ಅವಧಿಯಲ್ಲಿ ಮನೆಯವರ, ಸಂಬಂಧಪಟ್ಟವರೆಲ್ಲರ ಅಸರೆ, ಪ್ರೋತ್ಸಾಹ ಬೇಕು. ಔಷಧ ಸೇವನೆ ಮಾಡುವಾಗ ಕೆಲವು ಅಡ್ಡಪರಿಣಾಮಗಳು ಉದಾ : ಬಾಯಿ ಒಣಗುವುದು, ನಿದ್ರೆ ಹೆಚ್ಚುವುದು, ಹಗಲು ಹೊತ್ತಿನಲ್ಲಿ ತೂಕಡಿಕೆ ಬಂದರೆ ಗಾಬರಿಯಾದಗೆ ಔಷಧಿಯನ್ನು ಮುಂದುವರೆಸಬೇಕು. ಮನಸ್ಸಿಗೆ ಉಲ್ಲಾಸ ಕೊಡುವ ಚಟುವಟಿಕೆಗಳಾದ ಸಂಗೀತ, ಸಾಹಿತ್ಯ, ಧ್ಯಾನ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು.