ಮನೆ ರಾಜಕೀಯ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಚುನಾವಣೆ ಪೂರ್ವದಲ್ಲಿಯೇ ಹೇಳಿದ್ದೆವು, ಈಗ ಅದು ಸಾಬೀತಾಗಿದೆ: ತನ್ವೀರ್...

ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಚುನಾವಣೆ ಪೂರ್ವದಲ್ಲಿಯೇ ಹೇಳಿದ್ದೆವು, ಈಗ ಅದು ಸಾಬೀತಾಗಿದೆ: ತನ್ವೀರ್ ಸೇಠ್

0

ಚಿಕ್ಕಬಳ್ಳಾಪುರ: ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಅಂತ ನಾವು ಚುನಾವಣೆಯ ಪೂರ್ವದಲ್ಲಿಯೆ ಹೇಳಿದ್ದೆವು. ಈಗ ಅದು ನಿಜವಾಗಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ತನ್ವೀರ್ ಸೇಠ್ ಹೇಳಿದರು.

ಚಿಕ್ಕಬಳ್ಳಾಪುರ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾವೇರಿ ವಿವಾದ ಕುರಿತು ಪ್ರತಿಕ್ರಿಯೆ ನೀಡಿ,  ಇದು ಇಂದಿನ ವಿವಾದ ಅಲ್ಲ. ಎರಡು ರಾಜ್ಯಗಳ ಸಮಸ್ಯೆ ಇದು. ನೂರು ವರ್ಷಗಳ ಹಳೆಯದಾದ ಕಾವೇರಿ ವಿವಾದವನ್ನು ಎರಡು ರಾಜ್ಯಗಳು ಸಂಕಷ್ಟ ಸೂತ್ರದಡಿ ಕೂತು ಚರ್ಚೆ ಮೂಲಕ ಬಗೆಹರಿಸಿಕೊಳ್ಳಬೇಕಿದೆ. ಜಯಲಲಿತಾ ಇದ್ದಾಗಲೂ ನಮ್ಮ ಮೇಲೆ ಕೇಸ್ ಹಾಕಿದ್ದರೆಂದರು. ಈಗ ಸ್ಟಾಲಿನ್ ಸಹ ಕೇಸ್ ಹಾಕಿದ್ದಾರೆಂದರು.