ಮನೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಐದನೇ ಪ್ರಕರಣ ಪತ್ತೆ: ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ

ಕೇರಳದಲ್ಲಿ ನಿಫಾ ವೈರಸ್ ಐದನೇ ಪ್ರಕರಣ ಪತ್ತೆ: ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ

0

ಕೇರಳ: ಕೇರಳದಲ್ಲಿ ನಿಪಾ ಹಾವಳಿ ಹೆಚ್ಚಾಗುತ್ತಿದ್ದು, ಐದನೇ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ಕೋಝಿಕೋಡ್‌ನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಕೋಝಿಕ್ಕೋಡ್ ಜಿಲ್ಲಾಧಿಕಾರಿ ಎ ಗೀತಾ ಅವರು ರಜೆ ಘೋಷಿಸಿದ್ದು, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಎರಡು ದಿನಗಳಲ್ಲಿ ಆನ್‌ ಲೈನ್ ತರಗತಿಗಳನ್ನು ಏರ್ಪಡಿಸಬಹುದು ಎಂದು ಹೇಳಿದ ಅವರು ವಿಶ್ವವಿದ್ಯಾನಿಲಯದ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ಹೇಳಿದರು.

ಬುಧವಾರ ಕೇರಳದಲ್ಲಿ ಐದನೇ ಪ್ರಕರಣ ಬೆಳಕಿಗೆ ಬಂದಿದ್ದು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸರಕಾರ ಸೂಚಿಸಿದೆ.

ಕೋಝಿಕ್ಕೋಡ್‌ನಲ್ಲಿ ನಿಪಾಹ್ ಹರಡಿದ ಹಿನ್ನೆಲೆಯಲ್ಲಿ ನೆರೆಯ ಜಿಲ್ಲೆಯ ವಯನಾಡಿನಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.

ವಯನಾಡ್ ಜಿಲ್ಲಾಡಳಿತವು ನಿಪಾ ಪ್ರಕರಣದ ನಿಯಂತ್ರಣಕ್ಕೆ 15 ಕೋರ್ ಕಮಿಟಿಗಳನ್ನು ಸಹ ರಚಿಸಿದ್ದು ರಾಜ್ಯದಲ್ಲಿ ಕಂಡುಬರುವ ವೈರಸ್ ಸ್ಟ್ರೈನ್ ಬಾಂಗ್ಲಾದೇಶದ ರೂಪಾಂತರವಾಗಿದ್ದು ಅದು ಮನುಷ್ಯರಿಂದ ಮನುಷ್ಯನಿಗೆ ಹರಡುತ್ತದೆ ಮತ್ತು ಮಾರಕವಾಗಿದೆ ಎಂದು ಸರ್ಕಾರ ಹೇಳಿದೆ.

ಈಗಾಗಲೇ ಸೋಂಕಿತರ ಸಂಪರ್ಕದಲ್ಲಿರುವ ಎಲ್ಲಾ 76 ಜನರ ಸ್ಥಿತಿ ಸ್ಥಿರವಾಗಿದೆ. ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ಇತರ 13 ಜನರನ್ನು ಈಗ ಆಸ್ಪತ್ರೆಯಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಸೋಂಕಿತರಲ್ಲಿ 9 ವರ್ಷದ ಮಗು ಮಾತ್ರ – ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದೆ ಎಂದು ಸರ್ಕಾರ ಹೇಳಿದೆ.