ರಾಮನಗರ: ಚನ್ನಪಟ್ಟಣ ತಾಲೂಕಿನ ಕುಂತೂರುದೊಡ್ಡಿ ಗ್ರಾಮದ ಬಳಿಯ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಟೈರ್ ಸ್ಪೋಟಗೊಂಡು ಸಿಮೆಂಟ್ ತುಂಬಿದ ಕಂಟೇನರ್ ಪಲ್ಟಿಯಾಗಿದ್ದು, ಕಂಟೇನರ್ ಅಡಿ ಸಿಲುಕಿ ಚಾಲಕ ನರಳಾಡಿದ್ದಾನೆ.
ಹೈವೆಯಿಂದ ಸರ್ವಿಸ್ ರಸ್ತೆಗೆ ಕಂಟೇನರ್ ಉರುಳಿದ್ದು ಸ್ಥಳೀಯರು, ಪೊಲೀಸರು ಚಾಲಕನನ್ನು ರಕ್ಷಿಸಲು ಹರಸಾಹಸಪಟ್ಟಿದ್ದಾರೆ. ಬಳಿಕ ಜೆಸಿಬಿ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿ ಚಾಲಕನನ್ನು ರಕ್ಷಿಸಲಾಗಿದೆ.
ಬೆಂಗಳೂರಿನಿಂದ ಮೈಸೂರಿಗೆ ಸಿಮೆಂಟ್ ಲೋಡ್ ತುಂಬಿಕೊಂಡು ಕಂಟೇನರ್ ಹೋಗ್ತಿತ್ತು. ಈ ವೇಳೆ ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಕಂಟೇನರ್ ಹೈವೆಯಿಂದ ಸರ್ವಿಸ್ ರಸ್ತೆಗೆ ಉರುಳಿದೆ. ಈ ಪರಿಣಾಮ ಲಾರಿ ಇಂಜಿನ್ ಮತ್ತು ಕಂಟೇನರ್ ಇಬ್ಬಾಗವಾಗಿದೆ.
ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Saval TV on YouTube