ಮನೆ ರಾಜಕೀಯ ಡಿಎಂಕೆ ಪಕ್ಷವನ್ನು ತೃಪ್ತಿ ಪಡಿಸಲು ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ: ಮಾಜಿ ಸಿಎಂ ಬಿಎಸ್ ವೈ

ಡಿಎಂಕೆ ಪಕ್ಷವನ್ನು ತೃಪ್ತಿ ಪಡಿಸಲು ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ: ಮಾಜಿ ಸಿಎಂ ಬಿಎಸ್ ವೈ

0

ಬೆಂಗಳೂರು: ಡಿಎಂಕೆ ಪಕ್ಷವನ್ನು ತೃಪ್ತಿ ಪಡಿಸಲು ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನೀರಿಲ್ಲ, ಮೇವಿಲ್ಲ, ಜನರು ಕಷ್ಟದಲ್ಲಿ ಇದ್ದಾರೆ. ಕಾವೇರಿ ನೀರಿನ ವಿಚಾರದಲ್ಲೂ ಸರ್ಕಾರ ರಾಜಕೀಯ ಮಾಡುತ್ತಿದೆ. ಈ ಹಿನ್ನಲೆ ಇಂಡಿಯಾ ಮೈತ್ರಿಕೂಟ ಬಲಪಡಿಸಲು ಸರ್ಕಾರ ನೀರು ಹರಿಸುತ್ತಿದೆ. ಸುಪ್ರೀಂಕೋರ್ಟ್​​ ಗೆ ಮನವರಿಕೆ ಮಾಡಿಕೊಡಲು ಸರ್ಕಾರ ವಿಫಲವಾಗಿದೆ. ಇನ್ನಾದರೂ ಸುಪ್ರೀಂಕೋರ್ಟ್ ​ಗೆ ಸರ್ಕಾರ ಮನವರಿಕೆ ಮಾಡಲಿ, ರಾಜ್ಯ ಕಾಂಗ್ರೆಸ್​ ಸರ್ಕಾರ ಪರೋಕ್ಷವಾಗಿ ಡಿಎಂಕೆಗೆ ಸಹಕರಿಸುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಈ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ, ತಮಿಳುನಾಡಿಗೆ ನಿತ್ಯ 5000 ಕ್ಯೂಸೆಕ್ ನೀರು ಹರಿಸುವಂತೆ CWRC ಆದೇಶ ಮಾಡಿದೆ. ಕೇಂದ್ರ ಬಳಿ ಸರ್ವಪಕ್ಷ ನಿಯೋಗ ಹೋಗುವ ಅಗತ್ಯವಿಲ್ಲ. ಕಾವೇರಿ ನೀರು ವಿಚಾರದಲ್ಲಿ ಕೇಂದ್ರದ ಮಧ್ಯಸ್ಥಿಕೆಯ ಅಗತ್ಯವೇನಿದೆ? ಕೇಂದ್ರದ ಮೇಲೆ ಆರೋಪ ಮಾಡುವ ಮೂಲಕ ಕುಂಟು ನೆಪ ಹುಡುಕುತ್ತಿದೆ. ಕೇಂದ್ರದ ಬದಲು ಸ್ಟಾಲಿನ್ ಜತೆ ಈ ಸರ್ಕಾರ ಪತ್ರ ವ್ಯವಹಾರ ನಡೆಸಲಿ ಎಂದರು.

ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷ ಡಿಎಂಕೆ ಜೊತೆ ಪತ್ರ ವ್ಯವಹಾರ ನಡೆಸಲಿ, ಕಾವೇರಿ ವಿಚಾರಕ್ಕೆ ಸ್ಟಾಲಿನ್ ​​ಗೆ ಕಾಂಗ್ರೆಸ್​ ಪತ್ರ ಬರೆಯಲಿ ನೋಡೋಣ. ರಾಜ್ಯ ಸರ್ಕಾರ ನೀರು ಬಿಡದಿದ್ದರೆ ನಾವು ಜೊತೆ ನಿಲ್ಲುತ್ತೇವೆ. ಸರ್ಕಾರ ಕಾನೂನು ತಂಡದ ಜೊತೆ ಚರ್ಚೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ನಮಗೆ ಅನುಮಾನ ಹುಟ್ಟಿಸಿದೆ ಎಂದು ಹೇಳಿದರು.