ಮನೆ ಮನೆ ಮದ್ದು ಬೇವಿನ ಔಷಧಿ ಗುಣಗಳು

ಬೇವಿನ ಔಷಧಿ ಗುಣಗಳು

0

ಭಾರತದ ಮೂಲದ ಬಹು ಉಪಯೋಗಿ ಮರ ಬೇವು. ದಕ್ಷಿಣ ಭಾರತದ ಒಳ ಪ್ರದೇಶದ ಕಾಡುಗಳು ಬೇವಿನ ಮರದ ಮೂಲ ನೆಲೆಯಾಗಿದೆ. ಮಯನ್ಮಾರ್ ಕಾರ್ಡುಗಳಲ್ಲಿಯೂ ಬೇವಿನ ಮರಗಳಿವೆ. ಹಾಗೆಂದರೆ ಸದಾ ಹರಿದ್ವರ್ಣ ದಲ್ಲಿ ಮಳೆಕಾಡುಗಳಲ್ಲಿ ಬೇವು ಮರ ಬೆಳೆಯುದು. ಹೆಚ್ಚು ಬೇವು, ತುರುಕ ಬೇವು ಎಂಬ ಮತ್ತೊಂದು ಜಾತಿ ಮಾತ್ರ ಅಂತಹ ಕಾಡುಗಳಲ್ಲಿ ಬೆಳೆಯುತ್ತದೆ.. ಅಚ್ಚಬೇವು ಇಂಡಿಯನ್ ಲಿಲಿಯಾಕ್. ತುರುಕ ಬೇವು ಮರ ಪರ್ಷಿಯನ್ ಲಲಿಯಾಕ್, ಬೀಜಗಳಿಂದಲೇ ಹೊಸ ಸಸಿ ಹುಟ್ಟುತ್ತದೆ. ಬಯಲು ಸೀಮೆ, ಉತ್ತರ ಕರ್ನಾಟಕದಲ್ಲಿ ಬೇವಿನ ಬೆಳೆ ಬಹಳ ಸಮೃದ್ಧವಾಗಿದೆ.

Join Our Whatsapp Group

ದಂತುರು ಎಲೆಗಳು ಸಂಯುಕ್ತ ಜೋಡಣೆಯವು. ಮರದ ಗಾತ್ರ ತುಂಬಾ ಹಿರಿಯದಾಗಿರುತ್ತದೆ. ಇದು ಸುಮಾರು 50 ಅಡಿ ಮೀರಿ ಬೆಳೆಯುತ್ತದೆ. ತೋರಕಾಂಡದ ತೊಗಟೆ ಎಂಬ ದೊರಗು, ದಪ್ಪ ಕೂಡ. ಬಿಳಿ ಹೂಗೊಂಚಲದಲ್ಲಿ ಪುಟಾಣಿ ನಕ್ಷತ್ರಕಾರದ ಹೂಗಳು. ಕೊಂಚ ಸುಗಂಧ. ವಸಂತ ಋತುವಿನಲ್ಲಿ ಹಳೆ ಎಲೆ ಉದುರಿ, ಹೊಸ ಎಲೆ ಚಿಗುರು ಮರ ತುಂಬಾ ಸೊಗಸಿರುತ್ತದೆ. ಯುಗಾದಿ ವೇಳೆಗೆ ಚಿಗುರಲೆ, ಹೂಗಳು ಮೇಳೈಸುವಿಕೆ, ಬೇವುಬೆಲ್ಲದ ಹಬ್ಬವೆಂದೇ ಯುಗಾದಿ ಹಬ್ಬ ಜನಪದದಲ್ಲಿ ಪ್ರಖ್ಯಾತಿಯಾಗಿದೆ. ವಾಸ್ತವವಾಗಿ ವಸಂತ  ಋತುವು ಆಯುರ್ವೇದದ ಪ್ರಕಾರ ಕಫದ ಉತ್ಪತ್ತಿಯ ಕಾಲ. ಹಾಗಾಗಿ ಕಹಿ ರಸ ಸೇವನೆ ನಿರ್ದೇಶನವಿದೆ. ಆದ್ದರಿಂದಲೇ ಯುಗಾದಿ ದಿನದಂದು ಆರಂಭವಾಗಿ ಅನಂತರ ಮಾಸ ಪರ್ಯಂತ ಕಹಿರಸ ಸೇವಿಸಬೇಕೆಂಬ ಸೂಚ್ಯಾರ್ಥ ಯುಗಾದಿಯ ಬೇವು ಬೆಲ್ಲದಲ್ಲಿದೆ.

ಬೇವಿನ ದುಂಡನೆ ಕಾಯಿಗೆ ಹೊರಸಿಪ್ಪೆ ತೆಳುವಾಗಿರುತ್ತವೆ, ಒಳಗೆ ಎರಡು ಬೇಳೆ ಅದರಲ್ಲಿ ಹೇರಳವಾಗಿ ತೈಲ ಅಂಶವಿರುತ್ತದೆ. ಎಲೆ, ತೊಗಟೆ, ಹೂವು, ಅಂಟು, ಕಾಯಿ, ಎಣ್ಣೆಯನ್ನು ಮದ್ದಿಗಾಗಿ ಮತ್ತು ಇತರ ಉದ್ದೇಶಕ್ಕಾಗಿ ಬಳಸುತ್ತಾರೆ. ಎಣ್ಣೆಯಲ್ಲಿ ಗಂಧಕಾಂಶ ಸುಮಾರು 0.427 ಶೇ. ಪ್ರಮಾಣದಷ್ಟು ಇರುತ್ತದೆ. ಹಾಗಾಗಿ ಅದರಲ್ಲಿ ಬಹಳ ಉಗ್ರವಾದ ವಾಸನೆ ಇರುತ್ತದೆ. ಚರ್ಮರೋಗಗಳಿಗೆ ಇದು ರಾಮಬಾಣವಾಗಿದೆ. ಜಂತು, ಮಧುಮೇಹ ಮತ್ತು ಮೂಲ್ಯವಾದಿಯಲ್ಲಿನ ಬೇವಿನಬಳಕೆ ವ್ಯಾಪಕವಾಗಿದೆ. ಕೆಮ್ಮು, ಕಫ, ಜ್ವರ, ಅರುಚಿ, ಹಳೆಯ ಗಾಯ, ವಾಂತಿ, ತಲೆ ಹೊಟ್ಟು, ಎಲ್ಲ ಬಗೆ ಚರ್ಮದ ಕಾಯಿಲೆಗಳಿಗೆ ಬೇವಿನ ಬಳಕೆಯಿಂದ ಉತ್ತಮ ಪರಿಣಾಮವಿದೆ. ಕಣ್ಣಿನ ತೊಂದರೆ, ಕೂದಲು ಸಮಸ್ಯೆ, ಹಲ್ಲು, ವಸಡಿನ ಕಾಯಿಲೆಗೂ ಬೇವು ಪರಿಹಾರವಾಗಿದೆ.

ಔಷಧೀಯ ಗುಣಗಳು :-

*ಮಲೇರಿಯಾ ಜ್ವರದಲ್ಲಿ ಭಾರತೀಯ ಸಿಂಕೋನಾ ಎಂಬ ಪ್ರಸಿದ್ಧಿ ಪಡೆದ ಬೇವಿನ ಹೊರತೋಗಟಿ ಪುಡಿ ಕಷಾಯ ಅಥವಾ ಹಾಲು ಕಷಾಯ ರೂಪದಲ್ಲಿ ಸೇವಿಸಲು ಸಾಧ್ಯ. ಬೆವರುತರಿಸುತ್ತದೆ. ಜ್ವರ ಬಿಟ್ಟ ಅನಂತರ ಬರುವ ದೌರ್ಬಲ್ಯಕ್ಕೆ ಉತ್ತಮ ಮದ್ದಾಗಿದೆ.

* ಬಿಳಿ ಸೆರಗು ತೊಂದರೆ ಪರಿಹಾರಕ್ಕೆ ಬೇವಿನ ತೊಗಟೆ ಹಾಲು ಕಷಾಯ ಅಥವಾ ಮಜ್ಜಿಗೆಯನ್ನು ಪಾತದಲ್ಲಿ ಸೇವಿಸುವುದರಿಂದ ಉತ್ತಮ ಲಾಭವಿದೆ.

*ಎಲೆಯ ತಾಜಾ ರಸ ಅಥವಾ ಅರೆದ ಎಲೆಯ ಲೇಪನದಿಂದ ಎಲ್ಲಾ ಬಗೆಯ ಚರ್ಮದ ಗಾದರಿ, ಗುಳ್ಳೆ, ದದ್ದು, ನವೆ, ಉರಿ, ಕಿವು, ಸುರಿತ, ರಸವನ್ನು ಜೇನು, ಕಲ್ಲುಸಕ್ಕರೆ ಸಹಿತ ಕುಡಿಸಬಹುದು…

*ಅಳಲೇ, ನೆಲ್ಲಿ ಮತ್ತು ಎಲೆ ಪುಡಿಯನ್ನು ಕೂಡಿಸಿ ಸೇವಿಸಿದರೆ ಚರ್ಮರೋಗ ವಾಸಿಯಾಗುತ್ತದೆ.

*ಜಂತು ಹುಳ ತೊಂದರೆಗೆ ಎಲೆರಸ, ಪುಡಿ ಸೇವನೆಯಿಂದ ಪರಿಣಾಮಕಾರಿ ಲಾಭವಿದೆ.

*ಕಾಮಾಲೆ ರೋಗಿಗೆ ಬೇವಿನ ಎಲೆ ರಸ ಮತ್ತು ಶುಂಠಿ ಪುಡಿ ಸೇವನೆಯಿಂದ ಹಿತಕಾರಿ

*ದಡಾರ, ಮೈಲಿಬೇನೆ, ಕೋರಾದಂತಹ ವೈರಾಣು ಜನಿತ ಕಾಯಿಲೆ ಪ್ರತಿಬಂದಕ ಉಪಾಯವಾಗಿ ಬೇವಿನ ಟೊಂಗೆ ಕಟ್ಟುವ ಸಂಪ್ರದಾಯ ಮೊದಲಿನಿಂದಲೇ ರೂಢಿಯಲ್ಲಿದೆ. ವಾಸ್ತವವಾಗಿ ಇದರಲ್ಲಿ ವೈಜ್ಞಾನಿಕ ಸತ್ಯ ಅಡಗಿದೆ. ಹಳ್ಳಿಹಳ್ಳಿಯಲ್ಲಿ ನಡೆಯುವ ಮಾರಮ್ಮನ ಜಾತ್ರೆಗಳು, ಪಿಳ್ಳೇಕಮ್ಮ(ಪ್ಲೇಗ್),  ಶೀತಲಾ ಮಾತಾ (ಕೋರ) ಪೂಜೆಗಳು ಬೇವಿನಎಲೆ, ಟೊಂಗೆ ಇಲ್ಲದೆ ನಡೆಯವು. ಬೇವಿನಎಲೆಯ ಸಿಂಗಾರ, ಬೇವಿನ ಎಣ್ಣೆಯ ದೀಪ ಉರಿಯುವುದು, ಎಲೆ ಅರೆದು ಹಚ್ಚುವುದು, ಒಣಎಲೆ ಧೂಪಹಾಕುವುದು, ಬೀಜದ ಪುಡಿ ಹೊಗೆ ಹಾಕುವುದೆಲ್ಲ ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ.

*ಪುಸ್ತಕ, ಬಟ್ಟೆ, ಧ್ಯಾನಚೀಲ, ಕಣಜಗಳಲ್ಲಿ ಹುಳಕಾಟ ತಪ್ಪಿಸಲು ಮತ್ತು ಬಿತ್ತನೆ ಬೀಜ ದಾಸ್ತಾನಿ ಇಡಲು ಬೇವಿನ ಎಲೆ ಟೊಂಗೆ ಬಳಸುವುದರಿಂದ ಹುಳುಗಳ ಕಾಟದಿಂದ ಪರಿಹಾರ ಸಿಗುತ್ತದೆ.

*ಬೇವಿನಎಣ್ಣೆ ಹಚ್ಚಿದರೆ ಗುದಭಾಗದ ಜರಡಿ ಹುಣ್ಣು, ಗಂಡಮಾಲೆ, ಆನೆಕಾಲು ಹುಣ್ಣು, ಕೀಲೂರಿಯೂತ, ಗಂಟಲು ಬಾವು, ನೋವು, ಚರ್ಮ ಕಾಯಿಲೆಯಿಂದ ಮುಕ್ತಿ

* ಮಲಬದ್ಧತೆ, ಮೂಲವ್ಯಾಧಿಯ ನವೆ, ಉರಿ, ನೋವಿಗೆ ಬೀಜದ ಪುಡಿಯ ಸಂಗಡ ಬೆಲ್ಲವನ್ನು ಕುಡಿಸಿ ಸೇವಿಸಿದರೆ ಮಲಬದ್ಧತೆ ಗುಣವಾಗುತ್ತದೆ.

*ತಲೆನೋವಿನಲ್ಲಿ ಹಣೆಗೆ ಬೇವಿನ ಎಣ್ಣೆ ಹಚ್ಚಿದರೆ ನೋವಿನಿಂದ ಪರಿಹಾರ ಸಿಗುತ್ತದೆ.

*ಬೇವಿನ ಬೀಜದ ಪುಡಿಯನ್ನು ನೀರಿನಲ್ಲಿ ಕಲಸಿ ತಲೆಕೂದಲನ್ನು ತೊಳೆದರೆ ಕೇಶಗಳು ವೃದ್ಧಿಯಾಗುತ್ತದೆ. ಹೊಟ್ಟು, ತಲೆಯ ಗಾಯ, ನವೆಯಿಂದ ಪರಿಹಾರ.