ಮನೆ ಮನೆ ಮದ್ದು ದಾಸವಾಳ

ದಾಸವಾಳ

0

ಮಧ್ಯಕಾಲೀನ ದಾಸರೇಣ್ಯರು ಕುತ್ತಿಗೆಗೆ ಈ ಹೂಗಳನ್ನು ಮಾಲೆಯಾಗಿ ಧರಿಸುತ್ತಿದ್ದರು. ಮನಸ್ಸಿಗೆ ಮತ್ತು ದೇಹಕ್ಕೆ ತಂಪು ಎಂಬ ಸಂಗತಿ ದಾಸರಿಗೆ ತಿಳಿದಿತ್ತು. ಜಪ ಎಂಬ ಸಂಸ್ಕೃತಿ. ಹೆಸರು ಕೂಡ ದಾಸವಾಳದ ಹೆಸರಿಗಿರುವ ಜಪ ತಪಸ್ಸಿನ ಸಂಬಂಧ ಅರುಹುತ್ತದೆ. ಚರ್ಮದ ಬೂಟುಗಳು, ಮಿರಮಿರನೆ ಮಿಂಚಲು ಹೂದಳಗಳನ್ನು ಹಿಂದೆ ಉಜ್ಜುತ್ತಿದ್ದವರು. ಹಾಗಾಗಿ ಶೂ ಫ್ಲವರ್ ಎಂಬ ಆಂಗ್ಲ ಹೆಸರಿದೆ. ರೆಂಬೆ ನೆಟ್ಟು ಚಿಗುರುವ ದಾಸವಾಳದ ಹತ್ತಾರು ಬಣ್ಣದ ಹೂಗಳು, ನೂರಾರು ವಿಶೇಷ ಪ್ರಭೆಧಗಳು ನಮಗಿಂದು ಪರಿಚಿತವಾಗಿದೆ. ಆದರೆ ಮದ್ದಿಗೆ ಒದಗುವ ದಾಸವಾಳದ ಬಿಳಿಯದಾಗಿದ್ದರೆ ಅತಿ ಶ್ರೇಷ್ಠ. ಆದಷ್ಟು ನಾಟಿ ತಳಿಗಳಿಗೆ ಪ್ರಾಶಸ್ತ್ಯ. ಹೈಬ್ರಿಡ್ ಗಿಂತ ದೇಸಿ ಹೂಗಳು ಪ್ರಮುಖವಾಗಿದೆ.

Join Our Whatsapp Group

ಔಷದಿಯ ಗುಣಗಳು :-

*ಬಾಯಿ ಹುಣ್ಣು ರೋಗಿಗಳಿಗೆ ಇದನ್ನು ತಿನ್ನಲು ಕೊಟ್ಟರೆ ಬಾಯಿಹುಣ್ಣು ವಾಸಿಯಾಗುತ್ತದೆ. 

*ಹೂಗಳನ್ನು ಕುದಿಯುವ ನೀರಿಗೆ ಹಾಕಿರಿ, ಅದನ್ನು ತಣಿದ ಮೇಲೆ ನಿಂಬೆರಸ ಹಿಂಡಿರಿ, ಸಕ್ಕರೆ ಸೇರಿಸಿ ಕುಡಿಯಿರಿ. ಇದರಿಂದ ಪಿತ್ತ, ಹೊಟ್ಟೆಯುರಿ ಶಮನವಾಗುತ್ತದೆ.

* ಆದರೆ ಹೂಗಳನ್ನು ಹಾಲಿನೊಂದಿಗೆ ಕುಡಿಸಿದರೆ ಬಿಳಿ ಮುಟ್ಟು ನಿಲ್ಲುತ್ತದೆ.

*ಎಲೆ ಹೂ ಕಿವುಚಿ ಲೋಳೆ ತಯಾರಿಸಿ ತಲೆಗೆ ಹಚ್ಚಿದರೆ ತಲೆ ಕೂದಲಿಗೆ ಆರೋಗ್ಯ ನೀಡುತ್ತದೆ.

* ಕಣ್ಣಿನ, ಕೂದಲಿನ, ಚರ್ಮದ ಆರೋಗ್ಯಕ್ಕೆ ಸಹಾಯಕಾರಿ ತತ್ವ ಕೆರೋಟಿನ್ ಎಲೆಗಳಲ್ಲಿವೆ. ಹೂಗಳಲ್ಲಿ ಬಿ ಅನ್ನಾಂಗ ಸತ್ವಗಳಿವೆ. ಹಾಗಾಗಿ ಹೂ ಎಲೆ ಬಳಸಿರಿ ಆಹಾರ ರೂಪದಲ್ಲಿ ಬಳಸಿದರೆ ಉತ್ತಮ. ಹೂವಿನ ತುಂಬುಗಳು ಬಹಳ ಉಪಕಾರಿ ಎಲೆ ಹಾಕಿಸಿದ ಮಾಡಿದ ಅಕ್ಕಿಯ ಹಸಿರು ದೋಸೆ ತಿಂದರೆ ಕುರಗಳು ಮಾಯವಾಗುತ್ತದೆ.