ಮನೆ ಯೋಗ ಪತಂಜಲಿ ಯೋಗದ ವಿವರಣೆ      

ಪತಂಜಲಿ ಯೋಗದ ವಿವರಣೆ      

0

ಯುಜ್  (ಸಂಸ್ಕೃತ ಪದ) ಎಂದರೆ ಜೋಡಿಸುವುದು, ಸೇರುವುದು ಅಥವಾ ಕೂಡಿಕೊಳ್ಳುವುದು ಮನುಷ್ಯ ತನ್ನ ಆತ್ಮವನ್ನು ದಿವ್ಯಾತ್ಮನಲ್ಲಿ ಐಕ್ಯ ಗೊಳಿಸುವ ಸಾಧನವಿದು. ಇದು, ಪತಂಜಲಿ ಮಹರ್ಷಿಯಿಂದ ವಿರಚಿತವಾದ ಅಷ್ಟಾಂಗ ಯೋಗದ ಸಾರ. ಇಂದು, ಇದು, ಇಡೀ ಜಗತ್ತಿನಾದ್ಯಂತ ಪಸರಿಸಿ, ಮಾನವ ಕುಲಕ್ಕೆ ಅಮೃತ ಸಮಾನವಾದ ದಿವ್ಯೌಷಧಿಯಾಗಿ ಕೆಲಸ ಮಾಡುತ್ತಿದೆ ಎಂದರೆ ತಪ್ಪಿಲ್ಲ.

Join Our Whatsapp Group

ಹಿಂದಿನ ಮತ್ತು ಹಿಂದಿನ ಗಣ್ಯತಿಗಣ್ಯರಾದ ಎಲ್ಲಾ ಮಹಾನ್ ಯೋಗಪಟುಗಳೆಲ್ಲರಿಗೂ ದಾರಿದೀಪವಾಗಿರುವುದೇ ಈ ಪತಂಜಲಿ ಯೋಗಾಭ್ಯಾಸ.   ಅದಕ್ಕಾಗಿ ಯೋಗದರ್ಶನವೊoದೇ ಅಲ್ಲ,ಜೊತೆಗೆ ಸಂಸ್ಕೃತ ವ್ಯಾಕರಣ ಮಹಾ ಭಾಷ್ಯ ಮತ್ತು ಆಯುರ್ವೇದ ವೈದ್ಯಶಾಸ್ತ್ರಗಳ ರಚನೆಗಳ ಮೂಲಕ, ಇಡೀ ಮನುಕುಲಕ್ಕೆ,ತನ್ನ ಅಪೂರ್ವ ಕಾಣಿಕೆಗಳನ್ನು ಕೊಟ್ಟು, ಅಮರನಾದ ಆ ಮಹಾನ್ ಋಷಿಯ ಪಾದರವಿಂದಗಳಿಗೆ ಗೌರವ ಮತ್ತು ಆದರಪೂರ್ವಕವಾಗಿ ನಮಸ್ಕರಿಸಿ, ಮುಂದುವರಿಸೋಣ ಮತ್ತು ಸಾವಿರ ವರ್ಷಗಳ ಇತಿಹಾಸವಿರುವ ಈ ಯೋಗಭ್ಯಾಸವು ಸಂಪೂರ್ಣ ವೈಜ್ಞಾನಿಕವಾದುದಾಗಿದೆ. ಆದರೆ, ಅದಕ್ಕೆ ಕೇವಲ ಐದಾರು ನೂರು ವರ್ಷಗಳಲ್ಲಿ ಅರ್ಧಂಬರ್ಧ ಅಭಿವೃದ್ಧಿ ಹೊಂದಿರುವ ಆಧುನಿಕ ವಿಜ್ಞಾನದಲ್ಲಿ ನಿಮಗೆ ಉತ್ತರ ಸಿಗಬಹುದು ಅಥವಾ ಸಿಗಲಿಕ್ಕಿಲ್ಲ!? ಆ ಮಾತು ಬೇರೆ.

 ಯೋಗದ ಮೆಟ್ಟಿಲುಗಳು (ಅಷ್ಟಾಂಗ ಯೋಗ )       

ಅಷ್ಟ ಅಂಗಗಳು ಕ್ರಮವಾಗಿ ಹೀಗಿವೆ.

೧)ಯಮ

೨)ನಿಯಮ

 ೩)ಆಸನ 

೪)ಪ್ರಾಣಾಯಾಮ

೫)ಪ್ರತ್ಯಾಹಾರ

೬)ಧಾರಣ

೭)ಧ್ಯಾನ

೮)ಸಮಾಧಿ

ಇವುಗಳನ್ನು ಮೆಟ್ಟಿಲು ಮೆಟ್ಟಿಲಾಗಿ ಸಾಧಿಸುತ್ತಾ ಮೇಲೇರುತ್ತ ಮುಂದುವರಿಯಬೇಕು. ಈಗ ಅವುಗಳನ್ನು ಕುರಿತು ಸಂಕ್ಷಿಪ್ತವಾಗಿ ಅರಿತುಕೊಳ್ಳೋಣ.

1.         ಯಮ :-

ಇವು ಸಾಮಾಜಿಕವಾಗಿ ಅಥವಾ ಸಾರ್ವತ್ರಿಕವಾಗಿ ಸಾಧಕ ವ್ಯಕ್ತಿಯೊಬ್ಬ ಅತ್ಯವಶ್ಯಕವಾಗಿ ಪಾಲಿಸಬೇಕಾದ ನೈತಿಕ ನಿಯಮಗಳು.       

 ೧)ಅಹಿಂಸೆ : ಹಿಂಸೆಯನ್ನು ಮಾಡದಿರುವುದು

೨)ಸತ್ಯ : ಸದಾ ಸತ್ಯವನ್ನು ನುಡಿಯುವುದು, ಸುಳ್ಳು ಹೇಳದಿರುವುದು

೩)ಅಸ್ತೇಯ : ಕಳ್ಳತನ ಮಾಡದಿರುವುದು ಅಥವಾ ಕದಿಯದೆ ಇರುವುದು.

೪) ಬ್ರಹ್ಮಚರ್ಯ : ನಡತೆಯಲ್ಲಿ ಶುದ್ಧತೆ ಮತ್ತು ಶುಚಿತ್ವವನ್ನು ಪಾಲಿಸುವುದು

೫)ಅಪರಿಗ್ರಹ : ಅನಗತ್ಯ ವಸ್ತುಗಳ ಸಂಗ್ರಹವನ್ನು ಮಾಡದಿರುವುದು

  2.  ನಿಯಮ :-

ವೈಯುಕ್ತಿಕವಾಗಿ ಸಾಧಕನು ಪಾಲಿಸಬೇಕಾದ ಆತ್ಮ ಶುದ್ಧಿಯ ಸೂತ್ರಗಳು.      

೧) ಶೌಚ (ಶುದ್ಧತೆ) :- ಶುಚಿಯಾಗಿರುವುದು ಅದರಲ್ಲಿ ಎರಡು ವಿಧ, ಆಂತರಿಂಕ ಶುದ್ದಿ ಮತ್ತು ಬಾಹ್ಯ ಶುದ್ದಿ ಎಂದು. ಬಾಹ್ಯ ಶುದ್ದಿಯು ಆಂತರಿಕ ಶುದ್ದಿಗೆ ದಾರಿ ಕೊಡುತ್ತದೆ

೨)ಸಂತೋಷ (ಸಂತ್ರಪ್ತಿ) :- ಕೈಗೊಂಡ ಕಾರ್ಯದಲ್ಲಿ ಮತ್ತು ಲಭ್ಯವಿರುವದರಲ್ಲಿ ಸದಾ ಸಂತೋಷ ಪಡೆಯಬೇಕು.

೩) ತಪಃ :-ತಪಸ್ಸು ದೃಢ ಸಂಕಲ್ಪ ಮತ್ತು ಸಂಯಮದಿಂದ ಕಾರ್ಯ ಸಾಧಿಸುತ್ತಾ ಗುರಿಮುಟ್ಟುವುದು.  

೪) ಸ್ವಾಧ್ಯಾಯ :- ಸ್ವಯಂ ತನ್ನನ್ನು ತಾನು ಅರಿಯುವುದು ಅಥವಾ ಅಧ್ಯಯನ ಕ್ಕೊಳಪಡುವುದು, ಸದ್- ಗ್ರಂಥಗಳ ಅಧ್ಯಯನ, ಸದ್ವಿಚಾರ ಹಾಗೂ ಸದ್ಭಾವನೆಗಳನ್ನು ಮೆಲುಕು ಹಾಕುತ್ತಿರುವುದು.

೫) ಈಶ್ವರ ಪ್ರಣಿಧಾನ :- ನಮ್ಮ ಎಲ್ಲಾ ಆಗು ಹೋಗುಗಳನ್ನು ಭಗವಂತನಿಗೆ ಸಮರ್ಪಿಸುವುದು.

  3. ಆಸನ :- 

ಆಸನವು ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿರಿಸಿ ಪ್ರಕೃತಿಯೊಡನೆ ಸಾಮರಸವಾಗಿರುವಂತೆ ಮಾಡುತ್ತದೆ. ಉಸಿರಾಟ ಮತ್ತು ದೇಹದ ಸಂಯೋಜನೆಗೆ ಮನಸ್ಸನ್ನು ತೊಡಗಿಸಿ ಸ್ಥಿರವಾದ ಮತ್ತು ಸುಖವಾದ ಸ್ಥಿತಿಯಲ್ಲಿರುವುದು. “ಸ್ಥಿರಸುಖಮಾಸನಂ” ಎಂದು ಮಹರ್ಷಿ ಪತಂಜಲಿ ಯೋಗ ಸೂತ್ರದಲ್ಲಿ ಹೇಳಿದ್ದಾರೆ. ಅಂತಿಮವಾಗಿ ಯೋಗಿಯು ದೇಹ ಭಾವದಿಂದ ಮುಕ್ತನಾಗುತ್ತಾನೆ.           .

ಗೀತೆಯಲ್ಲಿ “ಶ್ರೀಕೃಷ್ಣನು ಅರ್ಜುನನನ್ನು” ಕುರಿತು ಹೇಳಿದ್ದು (ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋs ಪರಾಣಿ | ತಥಾ ಶರೀರಾಣಿ ವಿಹಾಯ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ || )         

ಯೋಗಿಯು ಸಾವಿಗೆ ಅಂಜುವುದಿಲ್ಲ ಅವನಿಗೆ ಗೊತ್ತು ಜನನ ಮತ್ತು ಮರಣಗಳು ಸಹಜ ಸ್ಥಿತಿಗಳು ಆದರೆ ಆತ್ಮಕ್ಕೆ ಮಾತ್ರ ಅವೆರಡೂ ಇಲ್ಲ ಅಂದರೆ ನಾವು ಹೇಗೆ ಹಳೆಯ ಬಟ್ಟೆಗಳನ್ನು ತೆಗೆದು ಹೊಸ ಉಡುಪುಗಳನ್ನು ಹಳೆಯ ದೇಹವನ್ನು ತೊರೆದು ಹೊಸ ದೇಹವನ್ನು ಧರಿಸುತ್ತದೆ.     

ಆಸನಗಳಲ್ಲಿ ಬಹಳ ವಿಧಗಳಿದ್ದು ಬೇರೆ ಬೇರೆ ಆಸನಗಳಿಂದ ನಮ್ಮ ದೇಹಕ್ಕೆ ಬೇರೆ ಬೇರೆ ರೀತಿಯ ಪ್ರಯೋಜನಗಳು ದೊರೆಯುತ್ತದೆ. ಅದರಲ್ಲಿ ನಮ್ಮ ಶರೀರ ಮತ್ತು ಪ್ರಕೃತಿಗೆ ಯೋಗ್ಯವಾದ ಆಸನಗಳು ನಾವು ಅಳವಡಿಸಿಕೊಂಡು ಅವುಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಬೇಕು.

ಸಾಮಾನ್ಯವಾಗಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಗಳುಳ್ಳ ಆಸನಗಳಲ್ಲಿ, ಶಿರಸಾಸನ, ಸರ್ವಾಂಗಾಸನ, ಭುಜಂಗಾಸನ, ಉತ್ತನಪಾದಾಸನ, ಹಲಾಸನ, ಪವನಮುಕ್ತಾಸನ, ನೌಕಾಸನ, ಪಶ್ಚಿಮೋತ್ತಾನಾಸನ, ಮರ್ಕಟಾಸನ, ಧನುರಾಸನ, ಚಕ್ರಾಸನ, ವಜ್ರಾಸನ, ಪದ್ಮಾಸನ, ಸಿದ್ದಾಸನ ಮತ್ತು ಶವಾಸನಗಳನ್ನು ಹೆಸರಿಸಬಹುದು.   ಹಾಸನಗಳ ನಿರಂತರ ಅಭ್ಯಾಸದಿಂದ ಶರೀರ ಮತ್ತು ಸ್ವಲ್ಪಮಟ್ಟಿಗೆ ಮನಸ್ಸು ಕೂಡ ಶುದ್ದಿಯಾಗುತ್ತದೆ, ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ.