ಮನೆ ಮನರಂಜನೆ ದಳಪತಿ ವಿಜಯ್ ನಟನೆಯ ‘ಲಿಯೋ’ ಚಿತ್ರದ ಕನ್ನಡ ಪೋಸ್ಟರ್ ರಿಲೀಸ್

ದಳಪತಿ ವಿಜಯ್ ನಟನೆಯ ‘ಲಿಯೋ’ ಚಿತ್ರದ ಕನ್ನಡ ಪೋಸ್ಟರ್ ರಿಲೀಸ್

0

ಇತ್ತೀಚಿನ ವರ್ಷಗಳಲ್ಲಿ ಹಲವು ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿವೆ. ಆದರೆ, ಈ ರೀತಿ ರಿಲೀಸ್ ಆಗುವ ಸಿನಿಮಾಗಳು ಕನ್ನಡ ಹಾಗೂ ಮಲಯಾಳಂ ಭಾಷೆಯನ್ನು ಕಡೆಗಣಿಸುತ್ತವೆ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಇದೆ. ಆದರೆ ಲಿಯೋ’ ತಂಡದವರು ಆ ರೀತಿ ಅಲ್ಲ. ಈ ಚಿತ್ರವನ್ನು ಕನ್ನಡದಲ್ಲೂ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲಾಗುತ್ತಿದ್ದು, ಇದಕ್ಕೆ ವಿಶೇಷ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ.

Join Our Whatsapp Group

ನೆನ್ನೆ (ಸೆಪ್ಟಂಬರ್ 18) ಗಣೇಶ ಚತುರ್ಥಿ ಸಂದರ್ಭದಲ್ಲಿ ದಳಪತಿ ವಿಜಯ್ ನಟಿಸಿರುವ ‘ಲಿಯೋ’ ಸಿನಿಮಾದ  ಕನ್ನಡ ಪೋಸ್ಟರ್ ರಿಲೀಸ್ ಮಾಡಲಾಗಿದೆ. ‘ಪೋಸ್ಟರ್ ನಲ್ಲಿ ‘ಶಾಂತವಾಗಿರಿ ಮತ್ತು ನಿಮ್ಮನ್ನು ನೀವು ಪಾರುಮಾಡಿಕೊಳ್ಳಲು ಸಂಚು ರೂಪಿಸಿ’ ಎಂಬ ಹೊಸ ಅಡಿಬರಹ ನೀಡಿದೆ. ಈ ಮೂಲಕ ಚಿತ್ರತಂಡ ಕುತೂಹಲ ಹೆಚ್ಚಿಸಿದೆ. ಕ್ರೈಂ ಸೀನ್ ನಂತೆ ಕಾಣುವ ರೀತಿ ದಳಪತಿ ವಿಜಯ್ ಕುಳಿತಿದ್ದಾರೆ. ಗನ್ ವೊಂದರ ಒಳಗೆ ಈ ಚಿತ್ರ ಕಾಣುತ್ತದೆ. 

ಲೋಕೇಶ್ ಕನಕರಾಜ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಲಿಯೋ ಚಿತ್ರದಲ್ಲಿ ವಿಜಯ್ ಜೊತೆಗೆ ತ್ರಿಶಾ, ಮಿಸ್ಕಿನ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ದತ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಅನಿರುದ್ಧ ರವಿಚಂದರ್ ಅವರ ಸಂಗೀತವಿದೆ.

‘ಲಿಯೋ’ ಚಿತ್ರವು ಅಕ್ಟೋಬರ್ 19ರಂದು ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದ್ದು ಚಿತ್ರವನ್ನು ಕಣ್ತುಂಬಿಕೊಳ್ಳಲು ದಳಪತಿ ವಿಜಯ್ ಅಭಿಮಾನಿಗಳು ಕಾಯುತ್ತಿದ್ದಾರೆ.