ಮನೆ ರಾಜ್ಯ ಕಬಿನಿ ಕಾವೇರಿ ಹೋರಾಟ ಸಮಿತಿಯಿಂದ ಪ್ರತಿಭಟನೆ: ಬೇಜವಾಬ್ದಾರಿ ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಖಾತೆ...

ಕಬಿನಿ ಕಾವೇರಿ ಹೋರಾಟ ಸಮಿತಿಯಿಂದ ಪ್ರತಿಭಟನೆ: ಬೇಜವಾಬ್ದಾರಿ ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಖಾತೆ ಬದಲಾಯಿಸುವಂತೆ ಒತ್ತಾಯ

0

ಮೈಸೂರು: ಇಂದು ಟಿ ನರಸಿಪುರದಲ್ಲಿ ಕಬಿನಿ ಕಾವೇರಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಮಾನವ ಸರಪಳಿ ಮಾಡಿ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಲಾಯಿತು.

ಕಬಿನಿಯಿಂದ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಲಾಯಿತು.

ವಚನಭ್ರಷ್ಟ ಸರ್ಕಾರಕ್ಕೆ ದಿಕ್ಕಾರ, ನೀರಾವರಿ ಸಚಿವರು ಡಿಕೆ ಶಿವಕುಮಾರ್ ಬದಲಾಯಿಸಬೇಕು. ರೈತ ದ್ರೋಹಿ ಸರ್ಕಾರಕ್ಕೆ ದಿಕ್ಕಾರ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.

ಮೆರವಣಿಗೆ ನೇತೃತ್ವ ವಹಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ  ಕುರುಬೂರು ಶಾಂತಕುಮಾರ್ ಮಾತನಾಡಿ, ಕಬಿನಿ ಅಚ್ಚುಕಟ್ಟು ಭಾಗದ ರೈತರ ಬೆಳೆಗೆ ಭತ್ತ ಬೆಳೆಯಲು ನೀರು ಕೊಡದೆ ತಮಿಳುನಾಡಿಗೆ ಹರಿಸಿ ರೈತರ ಬಲಿ ಪಡೆದ ರಾಜ್ಯ ಸರ್ಕಾರ ಕೂಡಲೇ ಎಕ್ಕರೆಗೆ 25,000 ಪರಿಹಾರ ನೀಡಬೇಕು. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಜೊತೆ ನಿಕಟ ಬಾಂಧವ್ಯದ ನೀರಿನ ವ್ಯಾಪಾರ ಮಾಡುವ ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಸಚಿವ ಖಾತೆ ಕೂಡಲೇ  ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಒತ್ತಡದ ಕಾರಣ ರೈತರು ಜನಸಾಮಾನ್ಯರು ತೊಂದರೆಗೆ ಸಿಲುಕುತ್ತಿದ್ದಾರೆ ಆದ್ದರಿಂದ ಕಾವೇರಿ ನೀರು ಪ್ರಾಧಿಕಾರ ಹಾಗೂ ನೀರು ನಿರ್ವಹಣ ಪ್ರಾಧಿಕಾರ ಸ್ವತಂತ್ರ  ಸಂಸ್ಥೆಗಳಾಗಿ ಕಾರ್ಯನಿರ್ವಹಿಸಬೇಕು ವಿಶೇಷ ನೀತಿ ನಿಯಮಗಳ ರಚಿಸಬೇಕು, ಈ ಪ್ರಾಧಿಕಾರಕ್ಕೆ ಕಾವೇರಿ ಅಚ್ಚು ಕಟ್ಟು ಭಾಗದ ಎಲ್ಲ ರಾಜ್ಯಗಳ ಪರಿಣಿತರು ವಿಷಯ ಪರಿಣಿತರು ರೈತರು ಒಳಗೊಂಡಂತೆ ರಚನೆ ಆಗಬೇಕು ಎಂದು ತಿಳಿಸಿದರು.

ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಿಂತ ಹೆಚ್ಚು ಸಹಕಾರಿ ಶೇಕಡ 33 ಮಹಿಳಾ ಮೀಸಲಾತಿ ಮಸೂದೆ ಜಾರಿ ಸ್ವಾಗತ ಎಂದು ತಿಳಿಸಿದರು .

ಪ್ರತಿಭಟನೆಗೂ ಮೊದಲು ನಡೆದ ಸಭೆಯಲ್ಲಿ ಮುಖಂಡರುಗಳಾದ  ಕೆಎನ್ ಪ್ರಭುಸ್ವಾಮಿ , ಬನ್ನಳ್ಳಿಹುಂಡಿ  ಸೋಮಣ್ಣ, ಕಿರಗಸೂರು ಶಂಕರ್, ಕುರುಬೂರು ಸಿದ್ದೇಶ ಪ್ರಸಾದ್ ನಾಯಕ್ ಅಪ್ಪಣ್ಣ ಸಿದ್ದರಾಜು ಪರಶಿವಮೂರ್ತಿ, ಪ್ರದೀಪ್, ಬೆಳಕು ಸಂಸ್ಥೆಯ ಅರವಿಂದ ಚಂದ್ರಶೇಖರ್ ಭಾಗವಹಿಸಿದ್ದರು.