ಮನೆ ಆರೋಗ್ಯ ಏಡ್ಸ್

ಏಡ್ಸ್

0

ಒಂದು ಕಥೆ ಇದೆ,

ಒಮ್ಮೆ ದೇವರು ಎಲ್ಲ ಜೀವ ರಾಶಿಗಳನ್ನು ಕರೆದು ಅವುಗಳ ಜೀವನದಲ್ಲಿ ಏನೇನು ಆಗುತ್ತಿದೆ ಎಂದು ಯೋಗ ಕ್ಷೇಮ ವಿಚಾರಿಸಿದಾಗ, ಅವು ಮಾನವನು ತಮಗೆ ಮಾಡುತ್ತಿರುವ ಅನ್ಯಾಯಗಳನ್ನು, ಅವನ ಸ್ವಾರ್ಥಕ್ಕಾಗಿ ದೇವರು ಸೃಷ್ಟಿಸಿ ಕೊಟ್ಟ ಅಮೂಲ್ಯವಾದ ಪ್ರಕೃತಿ ಸೌಂದರ್ಯವನ್ನು ಹಾಳು ಮಾಡುತ್ತಿರುವುದರ ಬಗ್ಗೆ ಒಕ್ಕೊರಳಿನಿಂದನಿಂದ ಗೋಳಿಟ್ಟವಂತೆ.

ದೇವರಿಗೆ ಬೇರೆ ಜೀವಿಗಳಿಗಿಂತ ಮಾನವನ ಮೇಲೆ ಅತ್ಯಂತ ಪ್ರೀತಿ. ಇದು ಸತ್ಯ. ಆದರೂ, ಅವುಗಳು ದೂರಿದ್ದ ಮೇಲೆ ದೇವರಿಗೆ ಯೋಚನೆಯಾಯಿತು. ಸಭೆಯಲ್ಲಿದ್ದ ಪ್ರಾಣಿಗಳು ಮಾನವನಿಗೆ ಸರಿಯಾದ ಪಾಠ ಕಲಿಸಬೇಕೆಂದು ಒಮ್ಮತದಿಂದ ತೀರ್ಮಾನ ಕೈಗೊಂಡವು. ಇನ್ನು ತೀರ್ಮಾನವನ್ನು ಜಾರಿಗೊಳಿಸುವುದು ಅನುಷ್ಠಾನಕ್ಕೆ ತರುವುದೊಂದೇ ಬಾಕಿ.

ಚತುರನಾದ ಬುದ್ಧಿವಂತಿಕೆಯಿಂದ, ಚಾಣಾಕ್ಷತನದಿಂದ ಪ್ರಕೃತಿಯನ್ನು ಹಾಳು ಮಾಡುತ್ತಿರುವ ಈ ಹುಳು ಮಾನವನಿಗೆ ಬುದ್ಧಿ ಕಲಿಸುವುದು ಸುಲಭವೇ?

ಅಲ್ಲಿದ್ದ ಜೀವರಾಶಿಗಳಿಗೆ ಯೋಚಿಸುವಂತಹ ಸಮಸ್ಯೆ ಇದಾಗಿತ್ತು. ಈ ಕಾರ್ಯಕ್ರಮವನ್ನು ಮಾಡತಕ್ಕವರು ಯಾರೆಂದು ಪ್ರಾಣಿಗಳು ಪರಸ್ಪರ ಮುಖ ನೋಡಿಕೊಂಡವು.

ಪ್ರಭು ನನಗೊಂದು ಅವಕಾಶ ಕೊಡಿ ನಾನು ಮಾನವನಿಗೆ ಸರಿಯಾದ ಬುದ್ಧಿ ಕಲಿಸುತ್ತೇನೆ, ಎಂದಿತು ಒಂದು ಸೂಕ್ಷ್ಮಜೀವಿ.

ಭಗವಂತನಿಗೆ ಆಶ್ಚರ್ಯ, ಅನುಮಾನ ಎರಡು ಆಯಿತು. ನೋಡು ಮಾನವರು ಇತ್ತೀಚೆಗೆ ನನಗೆ ಗೌರವವನ್ನು ಕೊಡುತ್ತಿಲ್ಲ ನನ್ನಿಂದ ನಿನಗೆ ಯಾವ ಸಹಾಯವು ಲಭಿಸದು.

ಪರ್ವಾಗಿಲ್ಲ ಪ್ರಭು, ಮಾನವರಲ್ಲಿ ಒಂದು ಬಲಹೀನತೆ ಇದೆ. ಅದನ್ನು ಉಪಯೋಗಿಸಿಕೊಂಡು ನಾನು ಅವನನ್ನು ಸೋಲಿಸುತ್ತೇನೆ ಎಂದಿತು ಆ ಸೂಕ್ಷ್ಮಜೀವಿ.

“ಯಾವ ಬಲಹೀನತೆ ?” ದೇವರು ಕೇಳಿದರು. ಆಗ

 “ಸೆಕ್ಸ್” ಒಡೆಯ ಆ ಲೈಂಗಿಕತೆ ಅದೇ ಅವನ ದೊಡ್ಡ ದೌರ್ಬಲ್ಯ.

ಅಲ್ಲದೆ ಅವನಿಗೆ ಲೈಂಗಿಕತೆಯ ವಿಷಯದಲ್ಲಿ ನೀತಿ ನಿಯಮವೇನು ಇಲ್ಲ. ಈ ಅಸ್ತ್ರವನ್ನು ಉಪಯೋಗಿಸಿಕೊಂಡು ನಾನು ಅವನಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಧೈರ್ಯದಿಂದ ಕ್ರೋಧದಿಂದ ಹೇಳಿತು.

ದೇವರು ಅದರ ದ್ವೇಷ ಮತ್ತು ಆತ್ಮ ವಿಶ್ವಾಸಕ್ಕೆ ತಲೆ ತೂಗದೇ ಬೇರೆ ದಾರಿ ಇರಲಿಲ್ಲ.

ಆಜೀವಿ ಯಾವುದು ಗೊತ್ತೇ?

“ಹೆಚ್ ಐವಿ” “ಇಮ್ಯೂನೊ ಡಿಫಿಷಿಯನ್ಸಿ ವೈರಸ್”.  ಈ ಎಚ್ಐವಿ ಅಂಟಿದಾಗ ಬರುವ ಕಾಯಿಲೆ ಅಕ್ವಯರ್ಡ್ ಇಮ್ಯೂನೊ ಡಿಫಿಷಿಯನ್ಸಿ ಸಿಂಡ್ರೋಮ್ಸ್  (ಏಡ್ಸ್) ಎಂಬ ಭಯಾನಕ ರೋಗ.

ಇತ್ತೀಚಿನ ದಿನಗಳಲ್ಲಿ ಏಡ್ಸ್ ಬಗ್ಗೆ ಸಾಕಷ್ಟು ಪ್ರಚಾರ ಸಾಹಿತ್ಯವನ್ನು ಪ್ರಕಟಣೆಗಳನ್ನು ಓದುತ್ತಿರುತ್ತೇವೆ. ಇಷ್ಟೊಂದು ಪ್ರಚಾರ ಗಿಟ್ಟಿಸಿಕೊಳ್ಳುವ ಅತಿ ಶೀಘ್ರವಾಗಿ ಹರಡುವ ಸೋಂಕಿನಿಂದ ಮಾನವನಿಗೆ ಆಗುತ್ತಿರುವ ಆಗಬಹುದಾದ ತೊಂದರೆಗಳನ್ನು ಊಹಿಸಬಹುದು.

ಒಂದು ಅಂದಾಜಿನ ಪ್ರಕಾರ ಪ್ರಪಂಚದಲ್ಲಿ ಪ್ರತಿದಿನ 500 ಮಂದಿಯರು ಏಡ್ಸ್ ಸೋಂಕಿಗೆ ಒಳಗಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯೂ.ಎಚ್.ಓ ಯಾ ಅಂದಾಜಿನ ಪ್ರಕಾರ ಈಗಾಗಲೇ 12 ಮಿಲಿಯನ್ ಜನರು ಏಡ್ಸ್ ರೋಗಕ್ಕೆ ತುತ್ತಾಗಿದ್ದಾರೆ. ಅವರಲ್ಲಿ ಒಂದು ಮಿಲಿಯನ್ ಚಿಕ್ಕ ಮಕ್ಕಳು ಎಂದರೆ ಆಶ್ಚರ್ಯ ಮತ್ತು ವಿಷಾದಕರ ಸಂಗತಿ.

ಮುಂಬೈನ ಮೂರು ಲಕ್ಷ ವೇಶ್ಯೆಯರಲ್ಲಿ ಶೇಕಡ 20ರಷ್ಟು ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಪ್ರತಿದಿನವೂ ಇವರು ಎಷ್ಟು ಅಮಾಯಕರಿಗೆ ಈ ಭಯಂಕರ ಸೋಂಕನ್ನು ಅಂಟಿಸುತ್ತಾರೆ ಎಂಬುದನ್ನು ಊಹಿಸಿಕೊಂಡರೆ ಭಯವಾಗುತ್ತದೆ. ಕೆಲವೇ ವರ್ಷಗಳಲ್ಲಿ ಇಡೀ ಭಾರತವೇ ಈ ಭಯಂಕರ ಮಾರಿಯ ಕಬಂಧ ಬಾಹುವಿನಲ್ಲಿ ಸಿಲುಕುತ್ತದೆಯೇ? ಆ ದೇವರೇ ಬಲ್ಲ!

 ಏಡ್ಸ್ ಎಂದರೆ ಏನು?

ಇದರ ಬಗ್ಗೆ ಯಾವ ಅತಿಶಯವಾದ ವಿವರಣೆ ಬೇಕಿಲ್ಲ. ಮೇಲೆ ಹೆಸರಿಸಿದಂತೆ ವೈರಸ್ ಎನ್ನುವ ರೋಗಾಣು ನಮ್ಮ ಶರೀರದಲ್ಲಿ ಪ್ರವೇಶಿಸಿದಾಗ ನಮ್ಮಲ್ಲಿ ಸಹಜವಾಗಿಯೇ ಇರುವ ರೋಗ ನಿರೋಧಕ ಶಕ್ತಿ ನಶಿಸಿ ಹಲವು ವಿಧದ ರೋಗಗಳಿಗೆ ತುತ್ತಾಗುತ್ತೆವೆ.

ಎಚ್ಐವಿ ವೈರಾಣು ಮನುಷ್ಯನನ್ನು ತಾನೇ ಕೊಲ್ಲದೆ ಆತನ ಶರೀರವನ್ನು ಹಲವಾರು ರೋಗಗಳ ಗೂಡನ್ನಾಗಿ ಮಾಡುತ್ತದೆ. ಕ್ಯಾನ್ಸರ್, ಟಿಬಿ, ನಿಮೋನಿಯಾ ಇತ್ಯಾದಿ ಒಬ್ಬ ಮನುಷ್ಯನಿಗೆ ಏಡ್ಸ್ ನ ವೈರಸ್ ಗಳು ತನ್ನಲ್ಲಿದೆ ಎಂದು ಬಹಳ ಕಾಲದವರೆಗೆ ಸುಮಾರು 10 ವರ್ಷಗಳ ಕಾಲ ತಿಳಿಯುವುದೇ ಇಲ್ಲ. ಈ ಸಮಯದಲ್ಲಿ ಆತ ಆರೋಗ್ಯವಂತನಾಗಿಯೇ ಕಾಣಿಸುತ್ತಾನೆ. ಹಾಗೆ ಭಾವಿಸುತ್ತಾನೆ. ಆದರೆ ಈ ಸಮಯದಲ್ಲಿ ಆತ ಬೇರೆಯವರಿಗೆ ಸೋಂಕು  ಹರಡಬಹುದು.

ಆತನಲ್ಲಿ ಈ ವ್ಯಾದಿಯ ಚಿಹ್ನೆಗಳು ಮೂಡಲು ಪ್ರಾರಂಭಿಸಿದಾಗ ಹಿಂತಿರುಗಿ ನೋಡದ ಪರಿಸ್ಥಿತಿಯಲ್ಲಿದ್ದು ಮೃತ್ಯುವಿನಡೆಗೆ ದಾಪುಗಾಲು ಹಾಕುತ್ತಿರುತ್ತಾನೆ.  ಆನಂತರ ಅವನಲ್ಲಿ ಆಗುವ ಬದಲಾವಣೆಗಳು ಈ ಕೆಳಕಂಡಂತೆ ಇರುತ್ತವೆ.

•       ಅತಿ ಶೀಘ್ರವಾಗಿ ದೇಹದ ತೂಕ ಕಡಿಮೆಯಾಗುತ್ತದೆ

•       ಲಿಂಫ್ ಗ್ರಂಥಿಗಳು ಊದಿಕೊಳ್ಳುತ್ತವೆ

•       ಜ್ವರ ಮತ್ತು ಭೇದಿ ಆಗುತ್ತದೆ

•       ಹಸಿವೆಯಾಗದಿರುವುದು

•       ಎಂತಹ ಶಕ್ತಿಯುತ ಔಷಧಿಗಳನ್ನು ಸೇವಿಸಿದರು ಪ್ರಯೋಜನವಾಗುವುದಿಲ್ಲ, ಕಾರಣ ಶರೀರದಲ್ಲಿ ಔಷಧಕ್ಕೆ ಸ್ಪಂದಿಸುವ ರೋಗನಿರೋಧಕ ಶಕ್ತಿಯೇ ನಶಿಸಿ ಹೋಗುವುದು.

•       ತನ್ನ ಮರಣ ಸಮೀಪವಿರುವುದೆಂದು ವ್ಯಕ್ತಿಗೆ ತಿಳಿಯುತ್ತದೆ. ದಿನಕ್ಕೂ ಮೃತ್ಯುವಿನ ಬಾಗಿಲಿಗೆ ಹತ್ತಿರವಾಗುತ್ತಿದ್ದೇನೆಂಬ ಭಯ ಆವರಿಸುತ್ತದೆ.

•       ಏಡ್ಸ್ ರೋಗ ಒಂದೊಂದು ದೇಶದಲ್ಲಿ ಒಂದೊಂದು ವಿಧವಾದ ರೋಗವನ್ನು ಪ್ರಚೋದಿಸುತ್ತವೆ ವ್ಯಕ್ತಿಯನ್ನು ಮರಣದೆಡೆಗೆ ಒಯ್ಯುತ್ತದೆ ಅಮೆರಿಕದಲ್ಲಿ ನ್ಯೂಮೋನಿಯ ಆಫ್ರಿಕಾದಲ್ಲಿ ಅತಿಸಾರ ಬೇಧಿ ನಮ್ಮ ದೇಶದಲ್ಲಿ ಕ್ಷಯ ಮತ್ತು ಭೇದಿ ಇಂತಹ ರೋಗಗಳಿಂದ ಮರಣ ಸಂಭವಿಸುತ್ತದೆ.

 ಏಡ್ಸ್ ಬರಬಹುದೆಂದು ಯಾರು ಭಯಪಡಬೇಕು

•       ವ್ಯಭಿಚಾರಿ ಪುರುಷರು

•       ಗುಪ್ತ ವ್ಯಾಧಿಗಳುಳ್ಳವರು

•       ಏಡ್ಸ್ ರೋಗಿಗೆ ಹುಟ್ಟಿದ ಮಕ್ಕಳು

•       ಸಲಿಂಗ ಕಾಮಿಗಳು

•       ಆಗಾಗ ರಕ್ತ ತೆಗೆದುಕೊಳ್ಳುವವರು

•       ಮಾದಕ ವ್ಯಸನಿಗಳು, ಮಾದಕ ದ್ರವ್ಯಗಳನ್ನು ಸಿರಂಜಿನ ಮೂಲಕ ಇಂಜೆಕ್ಟ್ ಮಾಡಿಕೊಳ್ಳುವವರು

•       ಗಾಯಗಳಿಗೆ ಕಟ್ಟು ಹಾಕುವವರು

•       ಶಸ್ತ್ರಚಿಕಿತ್ಸೆ ಮತ್ತು ಮರಣೋತ್ತರ ಪರೀಕ್ಷೆ ಮಾಡುವ ಹೆಲ್ತ್ ಕೇರ್ ವರ್ಕರ್ಸ್

ಮೊದಲಾದವರಿಗೆ ಏಡ್ಸ್ ಸೋಂಕು ತಗಲುವ ಸಾಧ್ಯತೆ ಇದೆ ಇಂತಹವರು ಬಹಳ ಎಚ್ಚರಿಕೆ ವಹಿಸಬೇಕು.

ನಿಜ ಸ್ಥಿತಿಯೇನು ?

ಸಾಮಾನ್ಯವಾಗಿ ದೇಹದ ಬಿಳಿ ರಕ್ತ ಕಣಗಳು ಅಪರಿಚಿತ ವಸ್ತುಗಳನ್ನು ಗುರುತಿಸಿ ನಾಶಪಡಿಸುತ್ತವೆ. ದೇಹದಲ್ಲಿ ವೈರಸ್ಗಳ ಪ್ರವೇಶವು ಲಿಂಪೋ ಸೈಟ್ ಗಳಿಂದ ಬಿಳಿ ರಕ್ತ ಕಣಗಳ ಉತ್ಪಾದನೆಗೆ ಕಾರಣವಾಗುತ್ತದೆ ’ಬಿ’ ಮತ್ತು ’ಟಿ’ ಎಂಬ ಲಿಂಪೋ ಸೈಟ್ ಗಳು ಸೋಂಕಿನ ವಿರುದ್ಧ ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತವೆ.

ಶರೀರದೊಳಗೆ ಯಾವುದಾದರು ರೋಗಾಣುಗಳು ಪ್ರವೇಶಿಸಿದಾಗ ಬಿಳಿ ರಕ್ತ ಕಣಗಳು ಅವುಗಳ ಮೇಲೆ ದಾಳಿ ಮಾಡಿ ನಾಶಪಡಿಸುತ್ತವೆ. ಆದರೆ ಎಚ್ಐವಿ ದೇಹವನ್ನು ಪ್ರವೇಶಿಸಿದಾಗ ದೇಹವು ಆ ವೈರಸ್ ಅನ್ನು ಗುರುತಿಸಲು ಅಸಮರ್ಥವಾಗುವುದರಿಂದ ವೈರಸ್ ಗಳ ವಿರುದ್ಧ ಹೋರಾಡುವ ಲಿಂಪೋಸೈಡ್, ಉತ್ಪಾದನೆಗೆ ಪ್ರಚೋದನೆ ದೊರೆಯುವುದಿಲ್ಲ. ಜೊತೆಗೆ ಪ್ರಾರಂಭಿಕ ಹಂತದಲ್ಲಿ ಎಚ್ಐವಿಯು ’ಟಿ’ ಲಿಂಪೋ ಸೈಟ್ ಗಳನ್ನೇ ನಾಶಪಡಿಸುವುದರಿಂದ ದೇಹದ ರಕ್ಷಣಾ ವ್ಯವಸ್ಥೆ ಕುಸಿಯುತ್ತದೆ. ರೋಗಿಗೆ ಸಾವು ಬರುವ ತನಕ ಸೋಂಕಿಗೆ ತುತ್ತಾಗುತ್ತಲ್ಲೇ ಇರುತ್ತಾನೆ.

ಏಡ್ಸ್ ವೈರಾಣು ಬಹಳ ಶಕ್ತಿಯುತವಾದದ್ದು. ದೇಹದ ಬಿಳಿ ರಕ್ತ ಕಣಗಳನ್ನು ನಾಶಮಾಡುತ್ತದೆ. ಹಾಗಾಗಿ ಬೇರೆ ರೋಗಾಣುಗಳೊಂದಿಗೆ ಹೋರಾಡಲು ಶರೀರದಲ್ಲಿ ಬೇರೆ ಯಾವ ರೋಗ ನಿರೋಧಕ ಶಕ್ತಿ ಇರುವುದಿಲ್ಲ. ಸುಲಭವಾಗಿ ರೋಗಗಳಿಗೆ ತುತ್ತಾಗಿ ಮರಣ ಹೊಂದುತ್ತಾನೆ.