ಮನೆ ರಾಜಕೀಯ ದೇವೇಗೌಡರಿಗೆ ಮತ ಹಾಕಿದರೆ ತುಮಕೂರಿನ ಜನತೆ ಪಾಪ ಮಾಡಿದಂಗೆ: ಎಸ್ ಬಸವರಾಜು

ದೇವೇಗೌಡರಿಗೆ ಮತ ಹಾಕಿದರೆ ತುಮಕೂರಿನ ಜನತೆ ಪಾಪ ಮಾಡಿದಂಗೆ: ಎಸ್ ಬಸವರಾಜು

0

ತುಮಕೂರು:  ತುಮಕೂರಿನಿಂದ ದೇವೇಗೌಡರನ್ನು ನಿಲ್ಲಿಸಲು ಹೊರಟಿದ್ದಾರಂತೆ. ಯಾರಿಗಾದರೂ ವೋಟ್ ಹಾಕಲಿ.  ದೇವೇಗೌಡರಿಗೆ ವೋಟ್ ಹಾಕಬಾರದು. ದೇವೇಗೌಡರಿಗೆ ವೋಟ್ ಹಾಕಿದರೆ ಜಿಲ್ಲೆಯ ಜನತೆ ಪಾಪ ಮಾಡಿದಂಗೆ ಸಂಸದ ಜಿ. ಎಸ್ ಬಸವರಾಜು ಆಕ್ರೋಶ ಹೊರಹಾಕಿದ್ದಾರೆ.

ನಗರದಲ್ಲಿಂದು ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದವರು ಒಪ್ಪಿ ಮೈತ್ರಿ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ನಾನು ಏನೂ ಕಮೆಂಟ್ ಮಾಡಲ್ಲ. ಜೆಡಿಎಸ್ ನವರು ಐದು ಸೀಟ್ ಕೇಳಿದ್ದಾರಂತೆ. ತುಮಕೂರನ್ನೂ ಜೆಡಿಎಸ್ ನವರು ಕೇಳಿದ್ದಾರಂತೆ. ಜನ ವೋಟ್ ಹಾಕ್ತಾರೋ ಎನೋ ಗೊತ್ತಿಲ್ಲ ಎಂದರು.

ರಕ್ತ ಕೊಟ್ಟರೂ ಕೊಟ್ಟೆನೂ ತುಮಕೂರಿಗೆ ಹೇಮಾವತಿ  ನೀರು ಕೊಡಲ್ಲ ಎಂದಿದ್ದ ದೇವೇಗೌಡರಿಗೆ ಒಮ್ಮೆ ಜನ ಸೋಲಿಸಿದ್ದಾರೆ. ಅವರ ಸ್ವಂತ ನೆಂಟರೂ ಓಟ್ ಹಾಕಲ್ಲ. ಒಬ್ಬ ಗೌಡರೂ ಅವರಿಗೆ ಮತ ಹಾಕಲ್ಲ.  ದೇವೇಗೌಡರು ಎಂದಾದರೂ ಜೀವಮಾನದಲ್ಲಿ ಹೀಲ್ಡ್ ಆಗಿಲ್ಲ. ಹಿಂದೆ ನಮ್ಮ ಜೊತೆ ಮೈತ್ರಿಯಾಗಿ 39 ಸೀಟ್ ಪಡೆದು ಕಾಂಗ್ರೆಸ್ ಜೊತೆ ಸೇರಿ ಸಿಎಂ ಆದ್ರು.  ಹೇಮಾವತಿ ನೀರಿನ ವಿಚಾರದಲ್ಲಿ ದೇವೇಗೌಡರು ತುಮಕೂರಿಗೆ ಎಂದೂ ಕಂಡಿರಿಯದ ಮೋಸ ಮಾಡಿದ್ದಾರೆ. ಎಂದು ಆಕ್ರೋಶ ಹೊರ ಹಾಕಿದರು.

ಕಾಂಗ್ರೆಸ್ ನಿರ್ಲಕ್ಷ್ಯದಿಂದ ಕಾವೇರಿ ನೀರು ತಮಿಳುನಾಡಿಗೆ ಹರಿದಿದೆ

ಕಾಂಗ್ರೆಸ್ ನವರ ನಿರ್ಲಕ್ಷ್ಯ ದಿಂದಲೇ ಕಾವೇರಿ ನೀರು ತಮಿಳುನಾಡಿಗೆ ಹರಿದಿದೆ. ಕಾಂಗ್ರೆಸ್‌ನವರು ತಮಿಳುನಾಡಿನವರನ್ನು ಎದುರು ಹಾಕಿಕೊಳ್ಳಲು ಆಗುತ್ತಿಲ್ಲ. ತಮಿಳುನಾಡಿನ ನೆಂಟಸ್ತನ ಬೇಕಾಗಿದೆ ಎಂದು ಸಂಸದ ಜಿ. ಎಸ್ ಬಸವರಾಜು ಕಿಡಿಕಾರಿದರು.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಚ್ಚುಕಟ್ಟಾಗಿ ಒಳ್ಳೆಯ ಲಾಯರ್‌ ನ ಇಟ್ಟು ವಾದ ಮಾಡಬೇಕಿತ್ತು. ತಜ್ಞರನ್ನು ಕಳುಹಿಸಿ ನೀರಿನ ಲೆಕ್ಕಾಚಾರ ಮಾಡಬೇಕಿತ್ತು.  ಕಾಂಗ್ರೆಸ್ ನವರು ಪ್ರತಿಯೊಂದಕ್ಕೂ ಡೆಲ್ಲಿಯವರಿಗೆ ಕೇಳಬೇಕು. ಹಾಗಾಗಿ ನೀರು ಬಿಟ್ಟಿದೆ. ತಜ್ಞರನ್ನು ಆನ್ ಲೈನಲ್ಲಿ ಭಾಷಣ ಮಾಡಿ ಅಭಿಪ್ರಾಯ ತಗೊಂಡಿದ್ದಾರೆ. ರಾಜ್ಯದ ಜಲಾಶಯಗಳ ಲೆಕ್ಕ ಕೊಟ್ಟು ಮಳೆ ಅಭಾವದ ಬಗ್ಗೆ ಹೇಳಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿ.ಸೋಮಣ್ಣ ನಾನು ಕರೆದಿಲ್ಲ

ವಿ.ಸೋಮಣ್ಣ ಕಾಂಗ್ರೆಸ್ ನಿಂದ ತುಮಕೂರು ಲೋಕಸಭಾ ಅಭ್ಯರ್ಥಿ ಆಗುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಸೋಮಣ್ಣರನ್ನ ನಾನು ಕರೆದಿಲ್ಲ. ಅವರ ಭವಿಷ್ಯಕ್ಕೆ ನಾನು ಅಡ್ಡಿಯಾಗಿಲ್ಲ. ಅಪ್ಪ ನೀನು ಎಲ್ಲಿ ನಿಲ್ತಿಯಾ ಅಲ್ಲಿ ಸಪೋರ್ಟ್ ಮಾಡ್ತಿವಿ ಅಂದಿದ್ದೀವಿ ಎಂದು ಸ್ಪಷ್ಟಪಡಿಸಿದರು.

ಪಾರ್ಟಿಯೊಳಗೆ ಇದ್ದು ಕೆಲಸ ಮಾಡು ಅಂದಿದ್ದೇನೆ. ಹಿಂದಿನ ಬಾರಿ‌ ನಾನು ಗೆಲ್ಲಲ್ಲು ವಿ.ಸೋಮಣ್ಣರೇ ಕಾರಣ. ನನ್ನತ್ರ ದುಡ್ಡೇ‌ ಇರಲಿಲ್ಲ, ಸೋಮಣ್ಣರೇ ದುಡ್ಡು ಕೊಟ್ಟಿದ್ದು ಎಂದು ಹೇಳಿದರು.